Subscribe to Updates
Get the latest creative news from FooBar about art, design and business.
- ಬೆಳೆ ನಷ್ಟ ತಪ್ಪಿಸಲು ಫಸಲ್ ಬಿಮಾ ತಪ್ಪದೇ ನೋಂದಾಯಿಸಿ: ರೈತರಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ
- ತುಮಕೂರು: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
- ಹಡಪದ ಅಪ್ಪಣ್ಣರ ತತ್ವಾದರ್ಶಗಳು ಸಮಾಜಕ್ಕೆ ದಾರಿದೀಪ: ತಹಶೀಲ್ದಾರ್ ಮೋಹನಕುಮಾರಿ
- ಸಂತಪೂರ ಗ್ರಾಮ ಪಂಚಾಯತಿಯಲ್ಲಿ ‘ನನ್ನ ಸ್ವತ್ತು ನನ್ನ ಹಕ್ಕು’ ಅಭಿಯಾನಕ್ಕೆ ಚಾಲನೆ
- ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಸಂಕಲ್ಪ: ಕೊರಟಗೆರೆಯಲ್ಲಿ ಪೊಲೀಸ್ ಇಲಾಖೆಯಿಂದ ಬೃಹತ್ ಜಾಗೃತಿ ಅಭಿಯಾನ
- ಕುಣಿಗಲ್: ಗ್ರಾಮ ದೇವತೆ ಜಾತ್ರಾ ಮಹೋತ್ಸವದ ಜಮಾ–ಖರ್ಚು ವಿವರ ಘೋಷಣೆ
- ಬೀದರ್ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಭಾಲ್ಕಿ ವಕೀಲರ ಸಂಘ ಆಗ್ರಹ
- ಬಡವರಿಗೆ ಮಾಡುವ ಸಹಾಯ ದೇವರಿಗೆ ಸಾಲ ಕೊಟ್ಟಂತೆ: ಇಮ್ಯಾನುವೆಲ್ ದರ್ಬಾರೆ
Author: admin
ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕದಾದ್ಯಂತ 11 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲಿಸಿದ್ದಾರೆ. 11 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ. 56 ಕಡೆಗಳಲ್ಲಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ. ಕಲಬುರಗಿ, ಧಾರವಾಡ, ಚಿತ್ರದುರ್ಗ, ಬೆಳಗಾವಿ, ಮಂಡ್ಯ, ದಾವಣಗೆರೆ, ಕೋಲಾರ, ಮೈಸೂರು, ಹಾಸನ ಹಾಗೂ ಚಿತ್ರದುರ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 9 ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. 11 ಪ್ರಕರಣಗಳಲ್ಲಿ 9 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ ಲೋಕಾಯುಕ್ತ ಅಧಿಕಾರಿಗಳು. 100 ಅಧಿಕಾರಿಗಳ ತಂಡ ರಾಜ್ಯದ 56 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಕೋಲಾರದ ತಹಶೀಲ್ದಾರ್ ವಿಜಯಣ್ಣ, ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್ ಎಂ.ರವೀಂದ್ರ, ಜಲ ಸಂಪನ್ಮೂಲ ಇಲಾಖೆಯ ಮೈಸೂರು ಸೂಪರಿಂಟೆಂಡಿಂಗ್ ಎಂಜಿನಿಯರ್ ಮಹೇಶ್ ಕೆ., ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಕೆ.ಜಿ. ಜಗದೀಶ್, ಧಾರವಾಡ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ…
ಇಂಧನ ಇಲಾಖೆಯಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗೆ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಲೈನ್‌ಮೆನ್‌ಗಳ ಹುದ್ದೆಗೆ ರಾಜ್ಯಾದ್ಯಂತ ಒಂದೇ ದಿನ ನೇಮಕ ಪ್ರಕ್ರಿಯೆ ನಡೆಯಲಿದ್ದು, ಪಾರದರ್ಶಕತೆಗೆ ಒತ್ತು ನೀಡಲಾಗುತ್ತದೆ ಎಂದರು. ವೈಟಿಪಿಎಸ್ ಹುದ್ದೆಗಳನ್ನು ಭರ್ತಿ ಮಾಡುವಾವಾಗ ಸ್ಥಳೀಯರಿಗೆ ಆದ್ಯತೆ ನೀಡಬೇಕು ಮತ್ತು 371 ಜೆ ಅನ್ವಯ ಮೀಸಲು ನೀಡಬೇಕು. ಆದರೆ ನುರಿತ ಕೆಲಸಗಾರರು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸ್ಥಳೀಯರ ನೇಮಕ ಆಗುತ್ತಿಲ್ಲ ಎಂಬ ಮಾತು ಕೇಳಿಬಂದಿದೆ. ಆದ್ದರಿಂದ ಎಷ್ಟು ಜನ ಬೇಕು ಅಂತ ನಿರ್ಧರಿಸಿ, ಅವರಿಗೆ ಕೆಪಿಸಿಎಲ್‌ನಿಂದ ಅಗತ್ಯ ತರಬೇತಿ ಕೊಡಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು ನಮ್ಮ ರಾಜ್ಯದ ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಜತೆಗೆ, ಆ ಉದ್ಯೋಗಕ್ಕೆ ಪೂರಕವಾದ ಕೌಶಲ್ಯ ತರಬೇತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಅವರು ತಿಳಿಸಿದರು. ಈಗಾಗಲೇ 1000 ಸಹಾಯಕ…
ಜಿಲ್ಲಾಡಳಿತವು ನಿಷೇಧಿತ ಜಾಗ ಎಂದು ಘೋಷಿಸಿದ್ದ ಜಲಪಾತವೊಂದರಲ್ಲಿ ಮೋಜು ಮಸ್ತಿ ಮಾಡಲೆಂದು ಹೋಗಿದ್ದ ಯುವಕರನ್ನು ಪೊಲೀಸರು ಕೇವಲ ಚಡ್ಡಿಯಲ್ಲೇ ಓಡಿಸಿದ ಘಟನೆಯೊಂದು ನಡೆದಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಫಾಲ್ಸ್ ಬಳಿ ಈ ಘಟನೆ ನಡೆದಿದೆ. ಈ ಜಾಗದಲ್ಲಿ ನೀರು ಇಳಿಯುತ್ತಿರುವಲ್ಲಿ ಬಂಡೆ ಹತ್ತಿ ಹುಚ್ಚಾಟ ಮೆರೆಯುತ್ತಿದ್ದ ಪ್ರವಾಸಿಗರಿಗೆ ಬಿಸಿ ಮುಟ್ಟಿಸಿದ ಬಣಕಲ್ ಗಸ್ತು ಪೊಲೀಸರು. ಯುವಕರ ಬಟ್ಟೆಗಳನ್ನು ತಂದಿದ್ದು, ವಾಹನಕ್ಕೆ ತುಂಬಿದ ಪೊಲೀಸರು ಅವರ ಹಿಂದೆನೇ ಚಡ್ಡಿಯಲ್ಲೇ ಓಡಿ ಬಂದ ಯುವಕರು ಪ್ಲೀಸ್ ಸರ್, ಇನ್ನೊಂದು ಸಲ ಈ ರೀತಿ ಮಾಡುವುದಿಲ್ಲ, ದಯವಿಟ್ಟು ಬಟ್ಟೆ ಕೊಡಿ ಎಂದು ಓಡೋಡಿ ಬಂದಿದ್ದಾರೆ. ನಂತರ ಪೊಲೀಸರೊಂದಿಗೆ ಪ್ರವಾಸಿ ಯುವಕರು ತಮ್ಮ ಬಟ್ಟೆ ಕೊಡುವಂತೆ ವಾಗ್ವಾದಕ್ಕಿಳಿದಿದ್ದಾರೆ. ನಂತರ ಪೊಲೀಸರು ಯುವಕರಿಗೆ ಎಚ್ಚರಿಕೆ ಕೊಟ್ಟಿದ್ದು, ಅವರ ಮಾತನ್ನು ಒಪ್ಪಿದ ಯುವಕರು ತಮ್ಮ ಬಟ್ಟೆಗಳನ್ನು ಪಡೆದು ಹೋಗಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…
ಕರ್ನಾಟಕದಲ್ಲಿ ಸರ್ಕಾರ ರಚಿಸಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಮೂರು ಗುಂಪುಗಳಾಗಿ ಒಡೆದು ಹೋಗಿದೆ. ಅದಕ್ಕೆ ಸದ್ಯದಲ್ಲಿ ಉಳಿಗಾಲವಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ. ಕಾಂಗ್ರೆಸ್ನಲ್ಲಿ ಮೂರು ಗುಂಪುಗಳಾಗಿವೆ. ಒಬ್ಬೊಬ್ಬರದು ಒಂದೊಂದು ಗುಂಪು. ಪರಮೇಶ್ವರದ್ದು ದಲಿತರ ಗುಂಪು. ಸಿದ್ದರಾಮಯ್ಯನವರದು ಹಿಂದುಳಿದವರ ಗುಂಪು. ಡಿಕೆಶಿಯದ್ದು ಗೌಡರ ಗುಂಪಾಗಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಹೇಳಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಆಡಳಿತದ ಮೇಲೆ ಹಿಡಿತ ತಪ್ಪಿದೆ. ಪಕ್ಷದ ಹೈಕಮಾಂಡಿಗೂ ತಮ್ಮದೇ ಶಾಸಕರು, ಮುಖಂಡರನ್ನು ನಿಯಂತ್ರಣದಲ್ಲಿಡಲಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪರಮೇಶ್ವರ್ ಮನೆಯಲ್ಲಿ ದಲಿತರ ಸಭೆ ಮಾಡುತ್ತಾರೆ. ಸಿದ್ದರಾಮಯ್ಯ ಪರವಾಗಿ ಹಿಂದುಳಿದವರ ಸಭೆ ಆಯ್ತು. ಸಿದ್ದರಾಮಯ್ಯ ಪರವಾಗಿ ಡಿನ್ನರ್ ಸಭೆ ಆಗಿತ್ತು. ಆದರೆ ಯಾರೂ ಎಚ್.ಕೆ. ಪಾಟೀಲರನ್ನು ಕರೆದಿರಲಿಲ್ಲ. ಅವರೊಬ್ಬ ಪ್ರತಿಷ್ಠಿತ ರಾಜಕಾರಣಿ. ಸಿಎಂ ಆಗಲಿಕ್ಕೆ ಡಿಕೆಶಿ ಎಲ್ಲ ಕಡೆ ಓಡಾಡುತ್ತಿದ್ದಾರೆ. ಕುಮಾರಸ್ವಾಮಿ ಕಡೆ ಕೂಡ ಹೋಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾಜಿ…
ಮಹಾರಾಷ್ಟ್ರ: ರೈಲು ನಿಲ್ದಾಣವೊಂದರಲ್ಲಿ ತಂದೆ-ಮಗ ಇಬ್ಬರು ಅಳುತ್ತಾ, ಕಣ್ಣೀರು ಒರೆಸುತ್ತಾ, ಕೈ ಕೈ ಹಿಡಿದು ಹೋಗಿ ಸೀದಾ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಭಯಾನಕ ದೃಶ್ಯವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಇದು ನೋಡುಗರನ್ನು ಒಮ್ಮೆಲೆ ಬೆಚ್ಚಿಬೀಳಿಸುತ್ತದೆ. ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ಬಯಾಂದ್ರ ರೈಲು ನಿಲ್ದಾಣದಲ್ಲಿ ಬೆಳಗ್ಗೆ 9.30ರ ವೇಳೆಗೆ ಈ ಘಟನೆ ಸಂಭವಿಸಿದ್ದು, ವಸೈ ನಿವಾಸಿಯಾದ 60 ವರ್ಷದ ಹರೀಶ್ ಮೆಹ್ತಾ ಹಾಗೂ 35 ವರ್ಷದ ಪುತ್ರ ಜಯ್ ಮೆಹ್ತಾ ಅವರು ಕೈ ಕೈ ಗಟ್ಟಿಯಾಗಿ ಹಿಡಿದುಕೊಂಡು ರೈಲಿಗೆ ತಲೆಯೊಡ್ಡಿದವರಾಗಿದ್ದಾರೆ. ಇವರು ಪ್ಲಾಟ್ ಫಾರ್ಮ್ ಮೂಲಕ ನಡೆದುಕೊಂಡು ಸಾಗುವಾಗ ಒಂದು ರೈಲು ಪಕ್ಕದಿಂದಲೇ ಸಾಗಿದೆ. ಆದರೆ ಪ್ಲಾಟ್‌ಫಾರ್ಮ್ ಬಳಿಕ ರೈಲು ಹಳಿಗಳ ಮೇಲೆ ನಡೆದುಕೊಂಡು ಸಾಗುವಾಗ ವಿರುದ್ದ ದಿಕ್ಕಿನಿಂದ ರೈಲು ಬಂದಿದೆ. ಇಬ್ಬರು ಕೈ ಕೈ ಹಿಡಿದುಕೊಂಡಿದ್ದಾರೆ. ತಕ್ಷಣವೇ ರೈಲು ಬರುತ್ತಿರುವ ಹಳಿಯತ್ತ ತೆರಳಿದ್ದಾರೆ. ಬಳಿಕ ರೈಲಿನ ಹಳಿಯಲ್ಲಿ ತಲೆ ಇಟ್ಟು ಮಲಗಿದ್ದಾರೆ. ಅಷ್ಟೊತ್ತಿಗೆ ರೈಲು ಇವರಿಬ್ಬರ ಮೇಲಿನಿಂದ…
ಆಹಾರ ನಾಗರಿಕ ಸರಬರಾಜು ಇಲಾಖೆ ಒಂದು ವರ್ಷದ ಬಳಿಕ ಬಿಪಿಎಲ್ ಫಲಾನುಭವಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಅದೇನೆಂದರೆ ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಇಲಾಖೆ ಅನುಮತಿಯನ್ನು ನೀಡಿದೆ. ನಾಗರಿಕ ವೆಬ್‌ಸೈಟ್ ahara.kar.nic.in ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರ ಜೊತೆಗೆ ಮೊಬೈಲ್, ಕಂಪ್ಯೂಟ್, ಸೇವಾಸಿಂಧು ಪೋರ್ಟಲ್‌ನಲ್ಲಿ ಕೂಡಾ ಅರ್ಜಿಯನ್ನು ಸಲ್ಲಿಸಬಹುದು ಎಂದು ಇಲಾಖೆ ತಿಳಿಸಿದೆ. ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನಿಗದಿಪಡಿಸಲಾಗಿದೆ. ಇದರಲ್ಲಿ ಬಿಪಿಎಲ್, ತುರ್ತು ಆರೋಗ್ಯ ಸಂಬಂಧ ಬಿಪಿಎಲ್ ಕಾರ್ಡ್, ಎಪಿಎಲ್ ಅರ್ಜಿ ಸಲ್ಲಿಕೆ ಕೂಡಾ ಸೇರಿದೆ. ಜೊತೆಗೆ ರೇಷನ್ ಕಾರ್ಡ್ ತಿದ್ದುಪಡಿಗೂ ಅವಕಾಶ ನೀಡಲಾಗಿದೆ. ಇದೀಗ ಫಲಾನುಭವಿಗಳು ರೇಷನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಒಂದು ವರ್ಷದ ಬಳಿಕ ಅನುಮತಿ ನೀಡಿರುವುದರಿಂದ ಬೆಂಗಳೂರು ಒನ್ ಸೆಂಟರ್‌ಗೆ ಬರುತ್ತಿದ್ದು, ಅರ್ಜಿ ಸಲ್ಲಿಸಲು ಪರದಾಡುತ್ತಿದ್ದು, ವೆಬ್‌ಸೈಟ್ ಓಪನ್ ಆಗುತ್ತಿದ್ದರೂ ಅರ್ಜಿ ರವಾನೆ ಆಗುತ್ತಿಲ್ಲ.ಇದಕ್ಕೆ ಪರ್ಮಿಷನ್ ಕೊಟ್ಟು ಆಹಾರ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು…
ಉತ್ತರ ಪ್ರದೇಶ: ಬಯಲು ಶೌಚಕ್ಕಾಗಿ ಬುಧ್ವಾ ಅರಣ್ಯದ ಬಳಿಯ ಗಂಡಕ್ ಕಾಲುವೆಯ ದಡದಲ್ಲಿ ಕುಳಿತಿದ್ದ ವೃದ್ಧನ ಮೇಲೆ ಮೊಸಳೆಯೊಂದು ದಾಳಿ ಮಾಡಿದೆ. ಬಯಲು ಶೌಚದ ವೇಳೆ ಮೊಸಳೆ ದಾಳಿಯಿಂದ ತನ್ನ ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ವ್ಯಕ್ತಿ ಎದ್ದು ನಿಂತಾಗ ಮೊಸಳೆ ಅವನ ಖಾಸಗಿ ಅಂಗವನ್ನು ಕಚ್ಚಿ ಎಳೆದಿದ್ದರಿಂದ ಆ ಭಾಗ ಕಾಲುವೆಯಲ್ಲಿ ತೇಲಿ ಹೋಗಿದೆ ಎನ್ನಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವೃದ್ಧನನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಉತ್ತರ ಪ್ರದೇಶದ ಕುಶಿನಗರದ ಬುಧ್ವಾ ಅರಣ್ಯದ ಬಳಿಯ ಗಂಡಕ್ ಕಾಲುವೆಯ ದಡದಲ್ಲಿ ಈ ಘಟನೆ ನಡೆದಿದೆ. 60 ವರ್ಷದ ವ್ಯಕ್ತಿ ಶೌಚಕ್ಕಾಗಿ ಬುಧ್ವಾ ಅರಣ್ಯದ ಬಳಿಯ ಗಂಡಕ್ ಕಾಲುವೆಯ ದಡದಲ್ಲಿ ಕುಳಿತಿದ್ದಾಗ ಮೊಸಳೆ ನೀರಿನಿಂದ ಹೊರ ಬಂದು ದಾಳಿ ಮಾಡಿದೆ. ಘಟನೆಯ ಬಳಿಕ ವ್ಯಕ್ತಿಯ ಕಿರುಚಾಟವನ್ನು ಕೇಳಿದ ಗ್ರಾಮಸ್ಥರು ಸಹಾಯಕ್ಕೆ ಬಂದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ. ನಮ್ಮತುಮಕೂರಿನ…
ಟೀಂ ಇಂಡಿಯಾದ ನಿರ್ಗಮಿತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಮ್ಮ ನಿರ್ಧಾರದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 2024ರ ಟಿ20 ವಿಶ್ವಕಪ್ ಟೂರ್ನಿ ಗೆದ್ದ ಹಿನ್ನೆಲೆಯಲ್ಲಿ ಬಿಸಿಸಿಐ ನೀಡಿದ ಬಹುಮಾನ ಮೊತ್ತದಲ್ಲಿ 2.5 ಕೋಟಿ ರೂಪಾಯಿಯನ್ನು ಹಿಂದಿರುಗಿಸಿ, ಮಾದರಿಯಾಗಿದ್ದಾರೆ. ಸಹಾಯ ಕೋಚ್ ಸಿಬ್ಬಂದಿಯಂತೆ ತಾವೂ 2.5 ಕೋಟಿ ರೂ.ಗಳನ್ನು ಮಾತ್ರ ಪಡೆಯಲಿದ್ದು, ಉಳಿದ ಹಣವನ್ನು ಹಿಂತಿರುಗಿಸಿ ಸಮಾನತೆ ಮೆರೆದಿದ್ದಾರೆ. ಕನ್ನಡಿಗ ರಾಹುಲ್ ದ್ರಾವಿಡ್ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಟಿ20 ವಿಶ್ವಕಪ್ ಕಪ್ ಗೆದ್ದಬೆನ್ನಲೇ ಬಿಸಿಸಿಐ (BCCI) ಘೋಷಿಸಿದ್ದ 125 ಕೋಟಿ ರೂ. ನಗದು ಬಹುಮಾನದಲ್ಲಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಕುಮಾರ್ ಹಾಗೂ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಸೇರಿದಂತೆ ಕೋಚಿಂಗ್ ಸಿಬ್ಬಂದಿಗೆ ತಲಾ 2.5 ಕೋಟಿ ರೂ. ಬಹುಮಾನ ಸಿಗಲಿದೆ. ಆದ್ರೆ ಮುಖ್ಯಕೋಚ್ ರಾಹುಲ್ ದ್ರಾವಿಡ್ ಅವರಿಗೆ 5 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಆದ್ರೆ ರಾಹುಲ್ ದ್ರಾವಿಡ್ 2.5 ಕೋಟಿ ರೂ. ಹೆಚ್ಚುವರಿ…
ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಭವಾನಿ ರೇವಣ್ಣಗೆ ಜುಲೈ 10ರಂದು ನೋಟಿಸ್ ಜಾರಿ ಮಾಡಿದೆ, ಹೀಗಾಗಿ ಮತ್ತೊಮ್ಮೆ ಭವಾನಿ ರೇವಣ್ಣಗೆ ಬಂಧನ ಭೀತಿ ಎದುರಾಗಿದೆ. ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ವಿಡಿಯೋದಲ್ಲಿನ ಸಂತ್ರಸ್ತೆಯನ್ನು ಅಪಹರಿಸಲಾಗಿದೆ ಎಂದು ಮೈಸೂರಿನ ಕೆ.ಆರ್. ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೆಚ್.ಡಿ.ರೇವಣ್ಣ, ಭವಾನಿ ರೇವಣ್ಣ ಮತ್ತು ಭವಾನಿ ರೇವಣ್ಣನ ಸಂಬಂಧಿ ಬಾಬು ಈ ಸಂತ್ರಸ್ತೆಯನ್ನು ಅಪಹರಿಸಿದ್ದಾರೆ ಎನ್ನಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಈಗಾಗಲೆ ಆರೋಪಿ ಬಾಬುನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭವಾನಿ ರೇವಣ್ಣ ಅವರೂ ಕೂಡ ಎಸ್ ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಬೇಕು. ಈ ಸಂಬಂಧ ಎಸ್ ಐಟಿ ಭವಾನಿ ರೇವಣ್ಣ ಅವರಿಗೆ ಎರಡೆರಡು ನೋಟಿಸ್ ಕೊಟ್ಟಿತ್ತು. ನೋಟಿಸ್ ನೀಡುತ್ತಿದ್ದಂತೆ ಭವಾನಿ ರೇವಣ್ಣ ಅವರು ವಿಚಾರಣಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ನೀರಿಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಹೀಗಾಗಿ ಭವಾನಿ ರೇವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಭವಾನಿ ರೇವಣ್ಣ…
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಇನ್ನು ದರ್ಶನ್ ಗೆ ನೀಡಿರುವ ವಿಚಾರಣಾಧೀನ ಕೈದಿ ನಂಬರ್ 6106 ಅನ್ನು ವಾಹನಗಳಲ್ಲಿ, ಬಟ್ಟೆಗಳಲ್ಲಿ ಅಭಿಮಾನಿಗಳು ಹಾಕಿಕೊಂಡು ಸುದ್ದಿಯಾಗಿದ್ದಾರೆ. ಈ ನಡುವೆ ಹೇರ್ ಕಟಿಂಗ್ ಶಾಪ್ ವೊಂದಲ್ಲಿ ಯುವಕನೊಬ್ಬ ತಲೆಯಲ್ಲಿ ದರ್ಶನ್ ನ ಕೈದಿ ನಂಬರ್ ಬರೆಸಿಕೊಂಡು ವಿಡಿಯೋ ಮಾಡಿಸಿದ್ದಾನೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಈ ಮೂಲಕ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಮತ್ತೊಂದೆಡೆ ಪತ್ನಿ ವಿಯಲಕ್ಷ್ಮಿ ಮತ್ತು ಕುಟುಂಬಸ್ಥರು ಜೈಲು ಸೇರಿರುವ ದರ್ಶನ್ ಅವರನ್ನು ಹೊರತರಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ದರ್ಶನ್ ಕೈದಿ ನಂಬರ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂಥವರ ಮೇಲೆ ಹಲವು ಕಡೆಗಳಲ್ಲಿ ಕ್ರಮ ಕೈಗೊಂಡಿದ್ದಾರೆ. ವಾಹನಗಳಿಗೆ ಹಾಕಿಸಿದ್ದ ಕೈದಿ ನಂಬರ್ ಗಳನ್ನು ತೆಗೆಸಿದ್ದಾರೆ. ಈ ನಡುವೆಯೇ ಕೆಲವರು ದರ್ಶನ್ ಗೆ ನೀಡಿರುವ ವಿಚಾರಣಾಧೀನ ಕೈದಿ ನಂಬರ್ 6106 ಅಚ್ಚೆ ಹಾಕಿಸಿಕೊಳ್ಳುವುದು, ಮಕ್ಕಳ ಬಟ್ಟೆಗಳ ಮೇಲೆ ಬರೆಸುವುದು, ವಾಹನಗಳ…