Subscribe to Updates
Get the latest creative news from FooBar about art, design and business.
- ಬೆಳೆ ನಷ್ಟ ತಪ್ಪಿಸಲು ಫಸಲ್ ಬಿಮಾ ತಪ್ಪದೇ ನೋಂದಾಯಿಸಿ: ರೈತರಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ
- ತುಮಕೂರು: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
- ಹಡಪದ ಅಪ್ಪಣ್ಣರ ತತ್ವಾದರ್ಶಗಳು ಸಮಾಜಕ್ಕೆ ದಾರಿದೀಪ: ತಹಶೀಲ್ದಾರ್ ಮೋಹನಕುಮಾರಿ
- ಸಂತಪೂರ ಗ್ರಾಮ ಪಂಚಾಯತಿಯಲ್ಲಿ ‘ನನ್ನ ಸ್ವತ್ತು ನನ್ನ ಹಕ್ಕು’ ಅಭಿಯಾನಕ್ಕೆ ಚಾಲನೆ
- ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಸಂಕಲ್ಪ: ಕೊರಟಗೆರೆಯಲ್ಲಿ ಪೊಲೀಸ್ ಇಲಾಖೆಯಿಂದ ಬೃಹತ್ ಜಾಗೃತಿ ಅಭಿಯಾನ
- ಕುಣಿಗಲ್: ಗ್ರಾಮ ದೇವತೆ ಜಾತ್ರಾ ಮಹೋತ್ಸವದ ಜಮಾ–ಖರ್ಚು ವಿವರ ಘೋಷಣೆ
- ಬೀದರ್ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಭಾಲ್ಕಿ ವಕೀಲರ ಸಂಘ ಆಗ್ರಹ
- ಬಡವರಿಗೆ ಮಾಡುವ ಸಹಾಯ ದೇವರಿಗೆ ಸಾಲ ಕೊಟ್ಟಂತೆ: ಇಮ್ಯಾನುವೆಲ್ ದರ್ಬಾರೆ
Author: admin
ಅಪ್ರಾಪ್ತೆ ಮೇಲೆ ಅಪ್ರಾಪ್ತರೇ ಗ್ಯಾಂಗ್ ರೇಪ್ ನಡೆಸಿರುವ ಘಟನೆ ಆಂಧ್ರಪ್ರದೇಶದಲ್ಲಿ ವರದಿಯಾಗಿದ್ದು, ಜನರನ್ನು ಬೆಚ್ಚಿಬಿಳಿಸಿದೆ. 8 ವರ್ಷದ ಶಾಲಾ ಬಾಲಕಿಯ ಮೇಲೆ 12 ಮತ್ತು 13 ವರ್ಷದ ಮೂವರು ಹಿರಿಯ ಸಹಪಾಠಿಗಳು ಸಾಮೂಹಿಕ ಅತ್ಯಾಚಾರ ಎಸಗಿ ನಂತರ ಹತ್ಯೆಗೈದಿರುವ ಘಟನೆ ನಂದ್ಯಾಲ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ಶವವನ್ನು ನೀರಾವರಿ ಕಾಲುವೆಯಲ್ಲಿ ಬಿಸಾಡಿರುವುದಾಗಿ ಮೂವರು ಅಪ್ರಾಪ್ತರು ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ. ಆಂಧ್ರದ ರಾಜಧಾನಿ ಅಮರಾವತಿಯಿಂದ 300 ಕಿಮೀ ದೂರದಲ್ಲಿರುವ ಮುಚ್ಚುಮರ್ರಿಯಲ್ಲಿ ಈ ಘಟನೆ ನಡೆದಿದೆ. ದುರದೃಷ್ಟವಶಾತ್ ಬಾಲಕಿಯ ಶವ ಇನ್ನೂ ಪತ್ತೆಯಾಗಿಲ್ಲ. 3ನೇ ತರಗತಿ ವಿದ್ಯಾರ್ಥಿನಿ ಭಾನುವಾರದಿಂದ ನಾಪತ್ತೆಯಾಗಿದ್ದಳು. ಆಕೆಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಾಲಕಿ ಮುಚ್ಚುಮರ್ರಿ ಪಾರ್ಕ್‌ನಲ್ಲಿ ಆಟವಾಡುತ್ತಿದ್ದಳು, ಆದರೆ ಮನೆಗೆ ಹಿಂತಿರುಗಲಿಲ್ಲ ಎಂದು ತಂದೆ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಹುಡುಕಾಟ ಆರಂಭಿಸಿ ಸ್ಥಳೀಯ ನಿವಾಸಿಗಳನ್ನು ವಿಚಾರಿಸಿದರೂ ಆಕೆ ಪತ್ತೆಯಾಗಿರಲಿಲ್ಲ. ಬಾಲಕಿ ಪಾರ್ಕ್‌ನಲ್ಲಿ ಆಟವಾಡುತ್ತಿದ್ದುದನ್ನು ನೋಡಿ, ಮೂವರು ಸೇರಿಕೊಂಡು ಮುಚ್ಚುಮರ್ರಿ ಅಣೆಕಟ್ಟಿನ ಏಕಾಂತ ಪ್ರದೇಶಕ್ಕೆ ಕರೆದೊಯ್ದು…
ಕರ್ನಾಟಕ ಬಿಜೆಪಿ ವಿರುದ್ದ ಬಿಜೆಪಿ ಹೈಕಮಾಂಡ್ ಸಿಡಿದೆದ್ದಿದೆ. ಕೇಂದ್ರ ನಾಯಕರು ಗುಟುರು ಹಾಕಿದ್ದಕ್ಕೆ ಇದೀಗ ರಾಜ್ಯದ ಬಿಜೆಪಿ ನಾಯಕರು ಗಡ ಗಡ ನಡುಗಿದ್ದಾರೆ. ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರ ಉದಾಸೀನದ ನಡೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಎರಡು ಅತೀ ದೊಡ್ಡ ಭ್ರಷ್ಟಾಚಾರ ಪ್ರಕರಣಗಳು ಸದ್ದು ಮಾಡುತ್ತಿದೆ. ಆದರೆ ಬಿಜೆಪಿ ನಾಯಕರು ನಾಮಕಾವಸ್ತೆಗೆ ಕಾಂಗ್ರೆಸ್ ವಿರುದ್ಧ ಆಗೊಂದು ಈಗೊಂದು ಹೋರಾಟ ಮಾಡುತ್ತಿದ್ದಾರೆ ಎಂದು ಕೇಂದ್ರ ನಾಯಕರು ಸಿಡಿದೆದ್ದಿದ್ದಾರೆ. ರಾಜ್ಯದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ. ಮತ್ತೊಂದೆಡೆ ಮುಡಾದಲ್ಲಿ (MUDA) ನಿವೇಶನಗಳ ಅಕ್ರಮ ಹಂಚಿಕೆಯಿಂದ 5 ಸಾವಿರ ಕೋಟಿ ರೂ.ನಷ್ಟು ದೊಡ್ಡ ಹಗರಣ ನಡೆದಿದೆ. ಎರಡು ಪ್ರಬಲ ಅಸ್ತ್ರಗಳು ಸಿಕ್ಕಿದ್ದರೂ ಪ್ರತಿಪಕ್ಷ ಬಿಜೆಪಿ ನಾಮಕಾವಸ್ಥೆಗೆ ಪ್ರತಿಭಟನೆಗಿಳಿದಿದೆ. ಬರೀ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆಗೋಂದು ಈಗೊಂದು ಮಾತ್ರ ಪ್ರತಿಭಟನೆ ಮಾಡುತ್ತಿದೆ ಎಂದು ಬಿಜೆಪಿ ಹೈಕಮಾಂಡ್ ಸಿಡಿಮಿಡಿಗೊಂಡಿದೆ. ಕಳೆದ ಸಲ ರಾಜ್ಯದಲ್ಲಿ ಬಿಜೆಪಿ…
ಚಿತ್ರದುರ್ಗದ ಮುರುಘಾ ಮಠದಲ್ಲಿ ಕಳ್ಳರ ಕೈಚಳಕ ತೋರಿದ್ದು, ಮುರುಘಾಶ್ರೀ ಬೆಳ್ಳಿ ಪ್ರತಿಮೆ ಕಳ್ಳತನವಾಗಿದೆ. ಸುಮಾರು 20 ಲಕ್ಷ ಮೌಲ್ಯದ ಬೆಳ್ಳಿ ಪ್ರತಿಮೆಯು 2021 ರಲ್ಲಿ ಮುರುಘಾಶ್ರೀಗೆ ಅವರ ಭಕ್ತರು ಉಡುಗೊರೆಯಾಗಿ ನೀಡಿದ್ದರು. ಪೋಕ್ಸೋ ಕೇಸಲ್ಲಿ ಮುರುಘಾಶ್ರೀ ನ್ಯಾಯಾಂಗ ಬಂಧನದಲ್ಲಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಮುರುಘಾ ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ಅವರನ್ನು ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಿಸಿದೆ ಇದರ ಬೆನ್ನಲ್ಲೇ ಕಳೆದ ಜೂನ್ 26 ರಂದು ಮುರುಘಾ ಮಠದಲ್ಲಿನ ಸಭಾಂಗಣದಲ್ಲಿದ್ದ ಮುರುಘಾಶ್ರೀ ಬೆಳ್ಳಿ ಪ್ರತಿಮೆ ಕಳ್ಳತನವಾಗಿದೆ. ಆದರೆ ಈ ಪ್ರದೇಶಕ್ಕೆ ಯಾರಿಗೂ ಪ್ರವೇಶ ಇಲ್ಲದ ಹಿನ್ನೆಲೆಯಲ್ಲಿ ಯಾರು ಸಹ ಈ ಪ್ರತಿಮೆಯತ್ತ ಗಮನಿಸಿರಲಿಲ್ಲ. ಹೀಗಾಗಿ ಪ್ರಕರಣ ತಡವಾಗಿ ಮಠದ ಆಡಳಿತ ಸಮಿತಿ ಗಮನಕ್ಕೆ ಬಂದಿದೆ. ಈ ಕೃತ್ಯದಿಂದಾಗಿ ಇದ್ದ ಮೂವರಲ್ಲಿ ಕದ್ದವರು ಯಾರೆಂಬ ಪ್ರಶ್ನೆ ಮಠದ ಭಕ್ತರಲ್ಲಿ ಮೂಡಿದೆ. ಕಳ್ಳತನದ ಬಗ್ಗೆ ಹಲವು ಅನುಮಾನ ಮೂಡಿದ್ದು, ಮಠದ ಆಡಳಿತ ಸಮಿತಿ ಸದಸ್ಯರಾದ ಬಸವಕುಮಾರ ಶ್ರೀಗಳಿಗೆ ಉಸ್ತುವಾರಿ ಶ್ರೀಗಳಾಗಿದ್ದ ಬಸವಪ್ರಭು ಶ್ರೀಗಳು…
ತಮಿಳುನಾಡಿಗೆ ಜುಲೈ 31ರವರೆಗೆ ಬಿಳಿಗುಂಡ್ಲು ಜಲಾಶಯದಿಂದ ಪ್ರತಿ ದಿನ 1 ಟಿಎಂಸಿ ಅಡಿ (11,500 ಕ್ಯೂಸೆಕ್) ನೀರನ್ನು ಹರಿಸುವಂತೆ ಕಾವೇರಿ ಜಲ ನಿರ್ವಹಣಾ ಸಮಿತಿ (ಸಿಡಬ್ಲ್ಯು ಆರ್ ಸಿ) ಗುರುವಾರ ಕರ್ನಾಟಕ ಸರಕಾರಕ್ಕೆ ಸೂಚಿಸಿದೆ. ಆದರೆ ಕರ್ನಾಟಕವು ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದು, ತನ್ನ ಜಲಾಶಯಗಳಲ್ಲಿ ನೀರಿನ ಹರಿವಿನ ಕೊರತೆಯಿರುವುದರಿಂದ, ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವುದನ್ನು ಜುಲೈ 25ರವರೆಗೆ ಮುಂದೂಡುವಂತೆ ಸಿಡಬ್ಲ್ಯುಸಿಯನ್ನು ಕೋರಿದೆ. ಗುರುವಾರ ದಿಲ್ಲಿಯಲ್ಲಿ ಸಭೆ ನಡೆಸಿದ ಸಿಡಬ್ಲ್ಯುಆರ್‌ಸಿ, ಜುಲೈ 12ರಿಂದ ಜುಲೈ 31ರವರೆಗೆ ಬಿಳಿಗುಂಡ್ಲುವಿನಲ್ಲಿ ಸಂಚಿತ ನೀರಿನ ಹರಿವು 1 ಟಿಎಂಸಿ ಅಡಿ ಇರುವಂತೆ ಕರ್ನಾಟಕವು ಖಾತರಿಪಡಿಸಿಕೊಳ್ಳಬೇಕು ಎಂದು ತಿಳಿಸಿದೆ. ಕಳೆದ ಸಾಲಿನಲ್ಲಿ ಕರ್ನಾಟಕವು ಸರಿಯಾಗಿ ನೀರು ಹರಿಸಿಲ್ಲ. ಆದರೆ ಈ ಬಾರಿ ಮುಂಗಾರು ಸಾಮಾನ್ಯವಾಗಿದೆ. ಕಾವೇರಿ ಕಣಿವೆಯ ಅಣೆಕಟ್ಟುಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಹೀಗಾಗಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಬೇಕೆಂದು ತಮಿಳುನಾಡಿನ ಅಧಿಕಾರಿಗಳು ಸಿಡಬ್ಲ್ಯು ಆರ್‌ಸಿಯನ್ನು ಆಗ್ರಹಿಸಿದ್ದರು. ಇದಕ್ಕೆ ಪ್ರತಿಯಾಗಿ ಕರ್ನಾಟಕ ಕೂಡಾ ರಾಜ್ಯದಲ್ಲಿ ಮುಂಗಾರು ಸಾಮಾನ್ಯವಾಗಿಲ್ಲ.…
ಗದಗ: ಡೆಂಗ್ಯೂಗೆ 11 ವರ್ಷದ ಬಾಲಕಿಯೊಬ್ಬಳು ಬಲಿಯಾಗಿರುವ ಘಟನೆ ಗದಗದ ರೋಣ ಪಟ್ಟಣದಲ್ಲಿ ನಡೆದಿದೆ. ಸಾವನ್ನಪ್ಪಿದ ಬಾಲಕಿಯನ್ನು ರೋಣ ಪಟ್ಟಣದ ಆಶ್ರಯ ಕಾಲೋನಿಯ ನಿವಾಸಿ ಪ್ರಾರ್ಥನಾ ಸಾಂತಪ್ಪ ಗಂಟಿನವರ ಎಂದು ಗುರುತಿಸಲಾಗಿದೆ. ಬಾಲಕಿಯು ಕಳೆದ ಒಂದು ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಳು.ನಾಲ್ಕು ದಿನಗಳ ಹಿಂದೆ ರೋಣ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಂತರ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನಲೆಯಲ್ಲಿ, ಗದಗ ಜಿಲ್ಲಾಸ್ಪತ್ರೆಗೆ ಬಾಲಕಿಯನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಇಬ್ಬರೂ ಸೋತಿದ್ದೇವೆ: ಅಪರ್ಣಾ ಬಗ್ಗೆ ಕೊನೆಯ ಕ್ಷಣದಲ್ಲಿ ಪತಿ ಬರೆದ ಭಾವುಕ ಸಾಲುಗಳು
ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡಿ ಕನ್ನಡಿಗರ ಮನ ಗೆದ್ದಿರುವಂತ ಅಪರ್ಣಾ ಅವರು ಇಹಲೋಕ ತ್ಯಜಿಸಿದ್ದಾರೆ. ಎರಡು ವರ್ಷದಿಂದ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕೆಲವು ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜುಲೈ 11 ರಂದು ನಿಧನ ಹೊಂದಿದ್ದಾರೆ. ಅಪರ್ಣಾ ಅವರ ವೈಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಅದರ ಕುರಿತು ಮಾಹಿತಿ ಇಲ್ಲಿದೆ. ಸಿನಿಮಾ ಪತ್ರಕರ್ತರೊಬ್ಬರ ಪುತ್ರಿ ಅಪರ್ಣಾ ಆಗಿದ್ದಾರೆ. ನಿರೂಪಕಿಯಾಗಿ ಕೆಲಸ ಮಾಡಿ ಗುರುತಿಸಿಕೊಂಡಿದ್ದ ಅಪರ್ಣಾ ಅವರ ಪತಿಯ ಹೆಸರು ನಾಗರಾಜ್ ವಸ್ತಾರೆ. ಅಪರ್ಣಾ ಅವರು ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಜನಿಸಿದ್ದು, ನಂತರ 1984 ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ನೀಡುತ್ತಾರೆ. ಇವರು 1989 ರಲ್ಲಿ ನಿರೂಪಕಿಯಾಗಿ ಕಿರುತೆರೆಗೆ ಕಾಲಿಡುತ್ತಾರೆ. ಅಪರ್ಣಾ ಅವರಿಗೆ ನಾಗರಾಜ್ ವಸ್ತಾರೆ ಅವರೇ ಪ್ರಪಂಚವಾಗಿದ್ದರು. ಏಕೆಂದರೆ ಈ ದಂಪತಿಗಳಿಗೆ ಮಕ್ಕಳಿರಲಿಲ್ಲ. ತಮ್ಮ ಖಾಸಗಿ ವಿಚಾರದ ಕುರಿತು ಅಪರ್ಣಾ ಅವರು ಎಲ್ಲಿಯೂ ಹೇಳಿರಲಿಲ್ಲ. ಅಪರ್ಣಾ…
ಐಸಿಸಿ ಟಿ20 ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂಪಾಯಿಗಳ ನಗದು ಬಹುಮಾನ ಘೋಷಿಸಿತ್ತು. ಅದರಂತೆ ಪ್ರತೀ ಆಟಗಾರನಿಗೆ ತಲಾ 5 ಕೋಟಿ ರೂಪಾಯಿ, ರಾಹುಲ್ ದ್ರಾವಿಡ್ ಸೇರಿದಂತೆ ಕೋಚಿಂಗ್ ಸ್ಟಾಫ್’ಗ 2.50 ಕೋಟಿ ರೂಪಾಯಿ ಹಾಗೂ ಸಪೋರ್ಟಿಂಗ್ ಸ್ಟಾಫ್’ಗೆ ತಲಾ 2 ಕೋಟಿ ರೂಪಾಯಿ ನಗದು ಬಹುಮಾನವನ್ನು ನೀಡಲಾಗಿದೆ. ಆದರೆ ಮುಂಬೈ ಮೂಲದ ಭಾರತ ತಂಡದ ಸಹಾಯಕ ಸಿಬ್ಬಂದಿಯೊಬ್ಬರು ಹೇಳಿರುವ ಪ್ರಕಾರ, ”ಸಪೋರ್ಟಿಂಗ್ ಸ್ಟಾಫ್’ಗೆ 2 ಕೋಟಿ ರೂಪಾಯಿಗಳನ್ನು ನೀಡಲು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಿಂದೇಟು ಹಾಕಿದ್ದರಂತೆ. ಆ ವಿಚಾರ ಗೊತ್ತಾಗುತ್ತಿದ್ದಂತೆ ಜಯ್ ಶಾ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ , ತಮ್ಮ ಪಾಲಿಗೆ ಬರಲಿದ್ದ 5 ಕೋಟಿ ರೂಪಾಯಿಗಳನ್ನು ಸಹಾಯಕ ಸಿಬ್ಬಂದಿಗೆ ನೀಡಲು ಮುಂದಾಗಿದ್ದರು. ಬಿಸಿಸಿಐ ಮುಂದೆ ಸಿಬ್ಬಂದಿ ವರ್ಗದವರಿಗೆ ಉತ್ತಮ ಪ್ರತಿಫಲ ಸಿಗಬೇಕೆಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಟ್ಟು ಹಿಡಿದಿದ್ದರು ಎಂದು ತಿಳಿದು ಬಂದಿದೆ. ಅದರ ಫಲವಾಗಿ…
ನಟಿ, ನಿರೂಪಕಿ ಅಪರ್ಣಾ ವಸ್ತಾರೆ (ಜು.11) ರಂದು ನಿಧನರಾಗಿದ್ದಾರೆ. ಅಪರ್ಣಾ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಬನಶಂಕರಿಯ ಸ್ವಗೃಹದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ನಿರೂಪಣೆಯಷ್ಟೇ ಅಲ್ಲದೇ ಮಸಣದ ಹೂವು, ಇನ್ಸ್ ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲೂ ಅಪರ್ಣಾ ನಟಿಸಿದ್ದನ್ನು ಸ್ಮರಿಸಬಹುದು. ನಮ್ಮ ಮೆಟ್ರೋ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಧ್ವನಿ ನೀಡಿದ್ದ ಅಪರ್ಣಾ, ಮೂಡಲ ಮನೆ, ಮುಕ್ತ ಮುಕ್ತ ಮೊದಲಾದ ಧಾರಾವಾಹಿಗಳಲ್ಲೂ ನಟಿಸಿದ್ದರು. ದೀಪಾವಳಿ ಕಾರ್ಯಕ್ರಮದಲ್ಲಿ ಸತತ 8 ಗಂಟೆಗಳ ಕಾಲ ನಿರೂಪಣೆ ಮಾಡಿದ್ದ ಅಪರ್ಣಾ, 2013 ರಲ್ಲಿ ಬಿಗ್ ಬಾಸ್ ಶೋ ನಲ್ಲಿಯೂ ಭಾಗವಹಿಸಿದ್ದರು. 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ನಂತರ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಅಪರ್ಣ ಕಾರ್ಯ ನಿರ್ವಹಿಸಿದ್ದರು. ತಮ್ಮ ಭಾಷಾ ಸ್ಪಷ್ಟನೆಯಿಂದ, ಉಚ್ಚಾರಣೆಯಿಂದ ಕನ್ನಡದ ಸೊಬಗು ಹೆಚ್ಚಿಸಿದ, ಕನ್ನಡಿಗರ ಹೆಮ್ಮೆಯ ನಿರೂಪಕಿ, ಅಪ್ಪಟ ಕನ್ನಡತಿ, ಕನ್ನಡವನ್ನೇ ತನ್ನ ಉಸಿರಾಗಿಸಿಕೊಂಡಿದ್ದಂತಹ, ಆಂಗ್ಲ ಭಾಷೆಯಿಂದ…
ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ(51) ಅವರು ಬೆಂಗಳೂರಿನ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ನಿಧನರಾಗಿದ್ದಾರೆ. ಹಲವು ತಿಂಗಳುಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ(ಜು.11) ನಿಧನರಾಗಿದ್ದು, ಅವರ ಅಗಲಿಕೆಗೆ ಚಿತ್ರರಂಗದ ನಟ–ನಟಿಯರು, ರಾಜಕೀಯ ಗಣ್ಯರು ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ದೃಢಪಟ್ಟಿತ್ತು. ಇದೇ ಫೆಬ್ರುವರಿ ಬಳಿಕ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದ ಅಪರ್ಣಾ ಮಜಾ ಟಾಕೀಸ್ ವರು ಪಾತ್ರದಿಂದ ಜನರ ಅಪಾರ ಮೆಚ್ಚುಗೆ ಗಳಿಸಿದ್ದರು. ಅಲ್ಲದೇ ಅನೇಕ ಕಾರ್ಯಕ್ರಮಗಳ ನಿರೂಪಣೆ ಮಾಡುತ್ತಿದ್ದ ಅಪರ್ಣಾ ಅವರ ಕನ್ನಡಕ್ಕೆ ಮನಸೋಲದವರಿಲ್ಲ. ಅಪರ್ಣಾ 2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಹಾಗೇ ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ‘ಮಜಾ ಟಾಕೀಸ್’ನಲ್ಲಿ ನಟಿಸಿ, ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ಇದರಲ್ಲಿ ವರಲಕ್ಷ್ಮಿ ಪಾತ್ರದಲ್ಲಿ ಮಿಂಚಿದ್ದರು. ಇವರು ಧ್ವನಿಯನ್ನು ಬಸ್ ನಿಲ್ಧಾಣ ಹಾಗೂ ಮೆಟ್ರೋ…
ವಿಶ್ವದ ಶ್ರೀಮಂತ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಜೀವನ ಶೈಲಿ ಎಷ್ಟು ದುಬಾರಿ ಎಂದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಮುಕೇಶ್ ಅಂಬಾನಿ ಮುಂಬೈನಲ್ಲಿರುವ ತಮ್ಮ ಐಷಾರಾಮಿ ಮನೆ ಆಂಟಿಲಿಯಾದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಅಂದಾಜು 15,000ಕೋಟಿ ರೂ.ಗಳ , 27 ಅಂತಸ್ತಿನ ಆಯಂಟಿಲಿಯಾ ಹೆಸರಿನ ಈ ಅರಮನೆ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ಹಾಗಾದರೆ ಈ ಭವ್ಯ ಅರಮನೆಯ ತಿಂಗಳೊಂದರ ವಿದ್ಯುತ್ ಬಿಲ್ ಎಷ್ಟಿರಬಹುದು? 2010ರಲ್ಲಿ ಆಯಂಟಿಲಿಯಾದ ಮೊದಲ ತಿಂಗಳ ವಾಸದ ವಿದ್ಯುತ್ ಬಿಲ್ಲೇ ಬರೋಬ್ಬರಿ 70 ಲಕ್ಷ ರೂಪಾಯಿಗಳು. ಆ ನಂತರದಲ್ಲೂ ಹೆಚ್ಚೂ ಕಡಿಮೆ 70 ಲಕ್ಷದಿಂದ 1 ಕೋಟಿವರೆಗೆ 1 ತಿಂಗಳ ವಿದ್ಯುತ್ ಬಿಲ್ ಬರುತ್ತದೆ. ವರದಿಯ ಪ್ರಕಾರ, ಮುಖೇಶ್ ಅಂಬಾನಿ ಅವರ ಐಷಾರಾಮಿ ಆಯಂಟಿಲಿಯಾ ತಿಂಗಳಿಗೆ ಸುಮಾರು 6,37,240 ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ. ಈ ಮನೆಯ ಒಳಾಂಗಣಗಳಷ್ಟೇ ಅಲ್ಲ, ಆರು ಮಹಡಿಗಳಲ್ಲಿ ಹರಡಿರುವ ಕಾರ್ ಪಾರ್ಕಿಂಗ್…