Subscribe to Updates
Get the latest creative news from FooBar about art, design and business.
- ಬೆಳೆ ನಷ್ಟ ತಪ್ಪಿಸಲು ಫಸಲ್ ಬಿಮಾ ತಪ್ಪದೇ ನೋಂದಾಯಿಸಿ: ರೈತರಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ
- ತುಮಕೂರು: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
- ಹಡಪದ ಅಪ್ಪಣ್ಣರ ತತ್ವಾದರ್ಶಗಳು ಸಮಾಜಕ್ಕೆ ದಾರಿದೀಪ: ತಹಶೀಲ್ದಾರ್ ಮೋಹನಕುಮಾರಿ
- ಸಂತಪೂರ ಗ್ರಾಮ ಪಂಚಾಯತಿಯಲ್ಲಿ ‘ನನ್ನ ಸ್ವತ್ತು ನನ್ನ ಹಕ್ಕು’ ಅಭಿಯಾನಕ್ಕೆ ಚಾಲನೆ
- ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಸಂಕಲ್ಪ: ಕೊರಟಗೆರೆಯಲ್ಲಿ ಪೊಲೀಸ್ ಇಲಾಖೆಯಿಂದ ಬೃಹತ್ ಜಾಗೃತಿ ಅಭಿಯಾನ
- ಕುಣಿಗಲ್: ಗ್ರಾಮ ದೇವತೆ ಜಾತ್ರಾ ಮಹೋತ್ಸವದ ಜಮಾ–ಖರ್ಚು ವಿವರ ಘೋಷಣೆ
- ಬೀದರ್ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಭಾಲ್ಕಿ ವಕೀಲರ ಸಂಘ ಆಗ್ರಹ
- ಬಡವರಿಗೆ ಮಾಡುವ ಸಹಾಯ ದೇವರಿಗೆ ಸಾಲ ಕೊಟ್ಟಂತೆ: ಇಮ್ಯಾನುವೆಲ್ ದರ್ಬಾರೆ
Author: admin
ಇದು ಮಗುವಿನ ಪ್ರತಿರೂಪ ಸಿಲಿಕಾನ್ ಗೊಂಬೆ . ಈ ಮಗು ಪಡೆಯಲು ನವಮಾಸ ಕಾಯಬೇಕಿಲ್ಲ. ಜೀವಂತ ಶಿಶು ಹಾಗೂ ಸಿಲಿಕಾನ್ ಶಿಶುವಿನಲ್ಲಿ ಕೊಂಚವೂ ವ್ಯತ್ಯಾಸ ವಿಲ್ಲದಂತೆ ಸಿಲಿಕಾನ್ ಶಿಶುವೊಂದನ್ನು ಫ್ಲೋರಿಡಾ ಮೂಲದ ಮಹಿಳೆ ತಯಾರಿಸುತ್ತಿದ್ದಾರೆ. ಶಿಶುಗಳನ್ನು ಹೋಲುವ ಹೈಪರ್ ರಿಯಲಿಸ್ಟಿಕ್ ಗೊಂಬೆ ತಯಾರಿಸುವ ಡ್ರೀಮ್ ಶೈರ್ ಎಂಬ ಸಂಸ್ಥೆಯ CEO ಆಗಿರುವ ಮಾಮಾ ಕೋಲಿ ನವಜಾತ ಶಿಶುಗಳ ಪ್ರತಿರೂಪವನ್ನು ತಯಾರಿಸುತ್ತಾರೆ. ಗರ್ಭಪಾತದಿಂದ ಬಳಲುತ್ತಿರುವ ಮಹಿಳೆಯರಿಗೆ, ಮಗುವನ್ನು ಕಳೆದುಕೊಂಡಿದ್ದರೆ ಅಥವಾ ಮಾನಸಿಕ ಆರೋಗ್ಯ ಅಸ್ವಸ್ಥತೆಗಳೊಂದಿಗೆ ಹೋರಾಡುತ್ತಿರುವ ಮಹಿಳೆಯರು ಗುಣಮುಖರಾಗುವ ಪ್ರಯಾಣದಲ್ಲಿ ಸಿಲಿಕಾನ್ ಶಿಶು ಸಹಾಯಕಾರಿ ಎನ್ನುತ್ತಾರೆ ಮಾಮಾ. ಮಾಮಾ 2020 ರಲ್ಲಿ ತನ್ನ ಗೊಂಬೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಪುಟ್ಟ ಸಿಲಿಕೋನ್ ಗೊಂಬೆಗಳ ಬೆಲೆ $45 (ಸುಮಾರು ರೂ. 4,000) ದಿಂದ ಪ್ರಾರಂಭಿಸಿ ದೊಡ್ಡ ಗೊಂಬೆಗಳ ಬೆಲೆ $1,500 (ಅಂದಾಜು ರೂ. 1,25,000) ಆಗಿದೆ. View this post on Instagram A post shared by Mama Coly…
ಈ ದೇಶವು ಒಂದು ವಿಚಿತ್ರ ಸಂಪ್ರದಾಯವನ್ನು ಹೊಂದಿದೆ. ಈ ದೇಶದಲ್ಲಿ ಪುರುಷರು ಎರಡು ಬಾರಿ ಮದುವೆಯಾಗಬೇಕು. ಇಷ್ಟು ಮಾತ್ರವಲ್ಲದೆ, ಹಾಗೆ ಮಾಡಲು ನಿರಾಕರಿಸುವವರಿಗೆ ಶಿಕ್ಷೆ ಸಹ ಆಗುತ್ತೆ. ಭಾರತದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ, ಒಬ್ಬ ಪುರುಷನು ಒಂದು ಮದುವೆಯಾದ ನಂತರ ಇನ್ನೊಬ್ಬರನ್ನು ಮದುವೆಯಾದರೆ, ಅವನಿಗೆ ಶಿಕ್ಷೆಯಾಗುತ್ತದೆ. ಆದರೆ ಈ ದೇಶದಲ್ಲಿ ಪುರುಷರು ಬಲವಂತವಾಗಿ ಮರುಮದುವೆಯಾಗುತ್ತಾರೆ. ಆಫ್ರಿಕನ್ ದೇಶವಾದ ಎರಿಟ್ರಿಯಾದಲ್ಲಿ, ಎಲ್ಲಾ ಪುರುಷರು ಎರಡು ಬಾರಿ ಮದುವೆಯಾಗುವಂತೆ ಕಡ್ಡಾಯಗೊಳಿಸಲಾಗಿದೆ. ಇಲ್ಲದಿದ್ದಲ್ಲಿ ಜೈಲು ಪಾಲಾಗಬಹುದು. ಇದಕ್ಕಾಗಿ ಇಲ್ಲಿನ ಸರ್ಕಾರ ಕಾನೂನು ಕೂಡ ಮಾಡಿದೆ. ಇದನ್ನು ತಡೆಯಲು ಪ್ರಯತ್ನಿಸುವವರಿಗೆ ಸಹ ಜೀವಾವಧಿ ಶಿಕ್ಷೆ ವಿಧಿಸಬಹುದು. ಇನ್ನು ಮೊದಲ ಹೆಂಡತಿ ಎರಡನೇ ಮದುವೆಗೆ ವಿರೋಧಿಸಿದರೆ ಅವಳಿಗೂ ಶಿಕ್ಷೆಯಾಗುತ್ತದೆ. ಎರಿಟ್ರಿಯಾದಲ್ಲಿ ಪುರುಷರ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಈ ವಿಚಿತ್ರ ಕಾನೂನನ್ನು ಜಾರಿಗೊಳಿಸಲಾಗಿದೆ. ಆದ್ರೆ ಇಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಎರಡು ಪಟ್ಟು ಹೆಚ್ಚು. ಅದಕ್ಕಾಗಿಯೇ ಇಲ್ಲಿ ಪುರುಷರನ್ನು ಎರಡು ಬಾರಿ ಮದುವೆಯಾಗಲು ಒತ್ತಾಯಿಸಲಾಗುತ್ತದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…
ದರ್ಶನ್ ನಟನೆಯ ” ಶಾಸ್ತ್ರಿ ‘ ಚಿತ್ರವನ್ನು ರೀ ರಿಲೀಸ್ ಮಾಡಲು ತಯಾರಿ ನಡೆದಿದ್ದು, ಜು.12ರಂದು ಬಿಡುಗಡೆಯಾಗಲಿದೆ. ವಿತರಕ ವಿ.ಎಂ.ಶಂಕರ್ ಎನ್ನುವವರು ರಿಲೀಸ್ ಮಾಡುತಿದ್ದಾರೆ. ದರ್ಶನ್ ನಟನೆಯ ಈ ಚಿತ್ರ 2005ರಲ್ಲಿ ತೆರೆಕಂಡಿತ್ತು. ಅಣಜಿ ನಾಗರಾಜ್ ನಿರ್ಮಾಣದ ಈ ಚಿತ್ರವನ್ನು ಪಿ.ಎನ್.ಸತ್ಯ ನಿರ್ದೇಶನ ಮಾಡಿದ್ದು, ಮಾಸ್ ಅಭಿಮಾನಿಗಳನ್ನು ರಂಜಿಸುವಲ್ಲಿ ಈ ಚಿತ್ರ ಯಶಸ್ಸು ಕಂಡಿತ್ತು. ದರ್ಶನ್ ಜೈಲಿಗೆ ಹೋಗುವ ಆರು ತಿಂಗಳ ಮುಂಚೆಯೇ ಈ ಸಿನಿಮಾವನ್ನು ಮರುಬಿಡುಗಡೆ ಮಾಡಲು ಪ್ಲಾನ್ ನಡೆದಿತ್ತಂತೆ. ಅದರಂತೆ ಈಗ ರಿಲೀಸ್ ಮಾಡುತ್ತಿದ್ದಾರೆ. ಸದ್ಯ ದರ್ಶನ್ ಜೈಲಿನಲ್ಲಿರುವುದರಿಂದ ಅಭಿಮಾನಿಗಳು ಈ ಸಿನಿಮಾಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕು. ರೀ-ರಿಲೀಸ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿತರಕರು, ದರ್ಶನ್ ಅವರ ಸದ್ಯದ ಪರಿಸ್ಥಿತಿಗೂ ಸಿನಿಮಾ ರಿ ರಿಲೀಸ್ ಮಾಡುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಂಕರ್ ನಿರ್ದೇಶನದ ಕಮಲ್ ಹಾಸನ್ ಅವರ ಇಂಡಿಯನ್ 2 ಹೊರತುಪಡಿಸಿ ಈ ವಾರ ಯಾವುದೇ ಹೊಸ ಕನ್ನಡ ಚಲನಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಶಾಸ್ತ್ರಿ…
ಮುಂಬೈ: ಮದುವೆ ಅಂದರೆ ಶಾಸ್ತ್ರ, ಸಂಪ್ರದಾಯ ಹಾಗೂ ಜೊತೆಜೊತೆಗೆ ಆಯಾ ಟ್ರೆಂಡ್ ಗೆ ತಕ್ಕ ಹಾಗೆ ಸಂಭ್ರಮ, ಸಂತೋಷ ಇತ್ಯಾದಿ ಇತ್ಯಾದಿ. ಭಾರತದ ಟಾಪ್ ಕಂಪನಿಯ ಒಡೆಯ ಎನಿಸಿಕೊಂಡಿರುವ ಮುಕೇಶ್ ಅಂಬಾನಿ- ನೀತಾ ಅಂಬಾನಿ ದಂಪತಿಯ ಕಿರಿ ಮಗ ಅನಂತ್- ರಾಧಿಕಾ ಮದುವೆಗೆ ಮುಂಚಿನ ಶಾಸ್ತ್ರ- ಸಂಪ್ರದಾಯದ ಆಚರಣೆಗಳು ನಿತ್ಯವೂ ಸೋಷಿಯಲ್ ಮೀಡಿಯಾ, ಮೈಕ್ರೋಬ್ಲಾಗಿಂಗ್ ಸೈಟ್ ಗಳಲ್ಲಿ ವೈರಲ್ ಆಗುತ್ತಿವೆ. ಜುಲೈ ಹನ್ನೆರಡನೇ ತಾರೀಕು ಮದುವೆ. ಅದಕ್ಕೂ ಮುಂಚೆ ಹಾಗೂ ನಂತರದಲ್ಲಿ ಹಲವು ಕಾರ್ಯಕ್ರಮಗಳ ವೇಳಾಪಟ್ಟಿ ಸಿದ್ಧವಾಗಿದ್ದು, ಇದೀಗ ಮುಂಬೈನಲ್ಲಿ ನಡೆದ ಅರಿಶಿಣದ ಶಾಸ್ತ್ರ (ಉತ್ತರ ಭಾರತದಲ್ಲಿ ಹಳದಿ ಕಾರ್ಯಕ್ರಮ ಅಂತಾರೆ) ಸಾಂಪ್ರದಾಯಿಕವಾಗಿಯೂ ಅದೇ ವೇಳೆ ಅದ್ಧೂರಿಯಾಗಿಯೂ ಮುಗಿದಿದೆ. ಅದಕ್ಕೂ ಮುಂಚೆ ಸಂಗೀತ್ ಕಾರ್ಯಕ್ರಮ, ವರನ ತಾಯಿ ಮನೆಯ ತವರಿನವರಿಂದ ನಡೆಯುವ ಕಾರ್ಯಕ್ರಮ ಹಾಗೂ ಆರಂಭದಲ್ಲಿ ಸಾಮೂಹಿಕ ವಿವಾಹ ಸಮಾರಂಭ, ದಾನ- ಧರ್ಮ ಇತ್ಯಾದಿಗಳು ನಡೆದವು. ಅರಿಶಿಣದ ಶಾಸ್ತ್ರ ನಡೆದದ್ದು ಮುಂಬೈ ಅಷ್ಟೇ ಅಲ್ಲ, ಜಗತ್ತಿನಲ್ಲಿಯೇ ಹೆಸರಾದ ಆಂಟಿಲಿಯಾ ಮನೆಯಲ್ಲಿ. ಸಲ್ಮಾನ್…
ಮಹಿಳೆಯೊಬ್ಬಳು ಬರೋಬ್ಬರಿ 50 ಜನರನ್ನು ಮದುವೆಯಾಗಿ ವಂಚಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಸಂಧ್ಯಾ (30) ಎಂಬ ಮಹಿಳೆಯು ಹಣದಾಸೆಗೆ ಬರೋಬ್ಬರಿ 50 ಜನರನ್ನು ವಿವಾಹವಾಗಿ ವಂಚಿಸಿದ್ದಾಳೆ. ಇಲ್ಲಿನ ತಿರುಪುರದಲ್ಲಿನ 35 ವರ್ಷದ ಅವಿವಾಹಿತ ಯುವಕನೊಬ್ಬ ಆನ್ ಲೈನ್ ಪ್ಲಾಟ್ ಫಾರ್ಮ್ ʼದಿ ತಮಿಳು ವೇʼ ನಲ್ಲಿ ಪರಿಚಯವಾದ ಸಂಧ್ಯಾ ಎಂಬ ಮಹಿಳೆಯನ್ನು ಕೆಲ ಸಮಯದ ಹಿಂದೆ ಮದುವೆಯಾಗಿದ್ದನು. ಮದುವೆಯಾದ ಕೆಲ ದಿನಗಳ ಬಳಿಕ ಆಕೆಯ ವರ್ತನೆಯಲ್ಲಿ ತೀರಾ ಬದಲಾವಣೆ ಕಂಡು ಬಂದಿದ್ದು, ನಂತರ ಆತ ಸಂಧ್ಯಾಳ ಆಧಾರ್ ಕಾರ್ಡ್ ಪರಿಶೀಲಿಸಿದ್ದಾರೆ. ಆಧಾರ್ ಕಾರ್ಡ್ ದಾಖಲೆಯಲ್ಲಿ ಸಂಧ್ಯಾಳ ಪತಿಯ ಹೆಸರು ಬೇರೆಯೇ ಇದೆ. ತನಗೆ ವಂಚನೆ ಮಾಡಿದ್ದಾಳೆ ಎಂದು ತಿಳಿದ ಈ ಯುವಕ ಸೀದಾ ಹೋಗಿ ತಾರಾಪುರಂ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾನೆ. ಪೊಲೀಸರು ಸಂಧ್ಯಾಳನ್ನು ವಿಚಾರಣೆ ಒಳಪಡಿಸಿದಾಗ ಆಕೆಯ ವಂಚನೆಗಳು ಬಯಲಾಗಿವೆ. 10 ವರ್ಷಗಳ ಹಿಂದೆಯೇ ಮದುವೆಯಾಗಿದ್ದ ಈಕೆಗೆ ಒಂದು ಮಗು ಕೂಡಾ ಇದೆ. ನಂತರ ತನ್ನ ಮೊದಲ ಪತಿಯಿಂದ ಬೇರ್ಟಟ್ಟು…
ಕುದ್ಮಲ್ ರಂಗರಾವ್ ಸ್ಮಾರಕಕ್ಕೆ ದಕ್ಷಿಣಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಂಜೀತ್ ರೈ ಮೇನಾಲ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಪ್ರವಾಸಿ ಸ್ಮಾರಕ ಆಗುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಕುದ್ಮಲ್ ರಂಗರಾವ್ ಪ್ರಗತಿಗೆ ವಿದ್ಯೆಯೇ ಮೂಲ ಎಂದು ನಂಬಿದ್ದರು. ಡಿ.ಸಿ.ಎಂ. ಎಂಬ ಸಂಸ್ಥೆಯನ್ನು ಸ್ಥಾಪಿಸಿ ಮಂಗಳೂರಿನ ಕಂಕನಾಡಿ, ಮೂಲ್ಕಿ, ಬೋಳೂರು, ಉಡುಪಿ, ಬನ್ನಂಜೆ, ನೇಜಾರು, ಅತ್ತಾವರ, ಬಾಬುಗುಡ್ಡೆ, ದಡ್ಡಲ್ ಕಾಡುಗಳಲ್ಲಿ ಉಚಿತ ಶಾಲೆಗಳನ್ನು ತೆರೆದರು. ಆ ಶಾಲೆಗಳನ್ನು ‘ಪಂಚಮ ಶಾಲೆ’ಗಳೆಂದು ಕರೆಯುತಿದ್ದರು ಎಂದು ತಿಳಿಸಿದರು. ದಲಿತರಿಗೆ ವೃತ್ತಿಪರ ಶಿಕ್ಷಣ ನೀಡಲು ಶೇಡಿಗುಡ್ಡೆ ಎಂಬಲ್ಲಿ ಕೈಗಾರಿಕಾ ತರಬೇತಿ ಶಾಲೆ ಪ್ರಾರಂಭಿಸಿದರು. ತಾವು ಸ್ಥಾಪಿಸಿದ ಡಿ.ಸಿ.ಎಂ. ಮಿಶನ್ ಶಾಲೆಗಳಲ್ಲಿ ಮತ್ತು ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಬಡಗಿ, ನೇಯ್ಕೆ ತೋಟಗಾರಿಕೆ, ಕಸೂತಿ, ರೇಷ್ಮೆ ಹುಳು ಸಾಕಾಣಿಕೆ ಇತ್ಯಾದಿ ವೃತ್ತಿಗಳನ್ನು ಅವಲಂಬಿಸಲು ಅಗತ್ಯವಾದ ತರಬೇತಿಯನ್ನು ದಲಿತರಿಗೆ ಕೊಡಿಸಿದರು; ಸ್ವಾವಲಂಬಿ ಜೀವನಕ್ಕೆ ದಾರಿ ತೋರಿದರು ಎಂದರು. ಅನ್ಯರ ಅನ್ನಕ್ಕಿಂತ ಆತ್ಮಗೌರವದ…
ಉತ್ತರಾಖಂಡ ಸರ್ಕಾರವು ಪರವಾನಗಿ ನಿಷೇಧಗೊಳಿಸಿರುವ ತನ್ನ 14 ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿರುವುದಾಗಿ ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆ ಮಂಗಳವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಪತಂಜಲಿಯ 14 ಉತ್ಪನ್ನಗಳ ದಕ್ಷತೆ ಬಗ್ಗೆ ಸುಳ್ಳು ಜಾಹೀರಾತು ನೀಡಿ ಮಾರಾಟ ಮಾಡುತ್ತಿದ್ದ ಕಾರಣ ಅವುಗಳ ಪರವಾನಗಿಯನ್ನು ಉತ್ತರಾಖಂಡ ಸರ್ಕಾರ ರದ್ದುಪಡಿಸಿತ್ತು. ಈ ಉತ್ಪನ್ನಗಳ ಬಗ್ಗೆ ಜಾಹೀರಾತು ಪ್ರಸಾರವಾಗುತ್ತಿಲ್ಲ, ಮಾರಾಟ ಮಾಡುತ್ತಿಲ್ಲ ಎಂಬುದನ್ನು ಖಾತರಿ ಪಡಿಸಿಕೊಂಡು 2 ವಾರದ ಒಳಗೆ ಅಫಿಡವಿಟ್ ಸಲ್ಲಿಸುವಂತೆ ಪತಂಜಲಿ ಸಂಸ್ಥೆಗೆ ಸುಪ್ರೀಂ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಪೀಠದ ಮುಂದೆ ಪತಂಜಲಿ ಸಂಸ್ಥೆ ಅಫಿಡವಿಟ್ ಸಲ್ಲಿಸಿದೆ. ಈ ವೇಳೆ ಸಂಸ್ಥೆಯ 5,606 ಫ್ರಾಂಚೈಸಿಗಳಿಗೂ ನಿಷೇಧಿತ ಉತ್ಪನ್ನಗಳನ್ನು ಮಾರಾಟ ಮಾಡದಂತೆ ನಿರ್ದೇಶಿಸಿದೆ ಹಾಗೂ ಮಾಧ್ಯಮಗಳಿಗೂ ಈ ಉತ್ಪನ್ನಗಳಿಗೆ ಸಂಬಂಧಿಸಿದ ಜಾಹೀರಾತು ಪ್ರದರ್ಶಿಸದಂತೆ ತಿಳಿಸಿರುವುದಾಗಿ ಹೇಳಿದೆ ಎಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…
ತುಮಕೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಡೆಂಗ್ಯೂ ಪ್ರಕರಣಗಳ ಕುರಿತು ಹೆಲ್ತ್ ಬುಲೇಟ್ ಬಿಡುಗಡೆ ಮಾಡಲಾಗಿದ್ದು ತುಮಕೂರು ಜಿಲ್ಲೆಯಲ್ಲಿ ಈವರೆಗೆ 190 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ 89 ಸಂಶಯಾತ್ಮಕ ರೋಗಿಗಳ ರಕ್ತ ಪರೀಕ್ಷೆ ನಡೆಸಲಾಗಿದೆ. 18 ಹೊಸ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಸಕ್ರಿಯ ಡೆಂಗ್ಯೂ ರೋಗಿ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮೂವರು ಸೊಂಕಿತರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ, ಆರು ಮಂದಿ ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಸರ್ಟಿಫೈಡ್ ಡಯಾಬಿಟಿಕ್ ಎಜುಕೇಟರ್(Certified Diabetic Educator) ಹುದ್ದೆ ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜುಲೈ 10, 2024 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತರು ಆಫ್ಲೈನ್ ಮೂಲಕ ಅಪ್ಲೈ ಮಾಡಬೇಕು. ಬೆಂಗಳೂರಿನಲ್ಲಿ (Bengaluru) ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ hal-india.co.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಶೈಕ್ಷಣಿಕ ಅರ್ಹತೆ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು. ವಯೋಮಿತಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ…
ನಿಮ್ಮ ಮಗಳನ್ನು ಶಾಲೆಗೆ ಕಳಿಸಿದರೇ ಅವಳು ವೇಶ್ಯೆಯಾಗುತ್ತಾಳೆ ಎಂದು ಪಾಕಿಸ್ತಾನಿ ಯೂಟ್ಯೂಬರ್ ಹಸನ್ ಇಕ್ಬಾಲ್ ಚಿಶ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ. ಪಾಕಿಸ್ತಾನಿ ಯೂಟ್ಯೂಬರ್ ಚಿಶ್ತಿ, ಬಾಲಕಿಯ ಶಿಕ್ಷಣವನ್ನು ಖಂಡಿಸುವ ಹಾಡನ್ನು ಬಿಡುಗಡೆ ಮಾಡಿದ್ದಾನೆ. ಈ ವಿಡಿಯೋದಲ್ಲಿ, ಹೆಣ್ಣುಮಕ್ಕಳು ಶಾಲೆಯಲ್ಲಿ ನೃತ್ಯ ಮಾಡುತ್ತಾರೆ, ಇದನ್ನು ಇಸ್ಲಾಂನಿಂದ ಒಪ್ಪಿಕೊಳ್ಳಲಾಗುವುದಿಲ್ಲ. ನಿಮ್ಮ ಮಗಳನ್ನು ಶಾಲೆಯಿಂದ ತೆಗೆದು ಹಾಕಿ, ಮನೆಗಳಲ್ಲಿ ಇರಿಸಿಕೊಳ್ಳಿ ಎಂದು ಹೇಳಿದ್ದಾರೆ. ಶಾಲೆಗೆ ಹೋಗುವ ಹೆಣ್ಣುಮಕ್ಕಳು ತಮ್ಮ ಪವಿತ್ರತೆ ಮತ್ತು ಗೌರವವನ್ನು ಕಳೆದುಕೊಳ್ಳುತ್ತಾರೆ. ನೀವು ಗೌರವವನ್ನು ಕಳೆದುಕೊಳ್ಳಲು ಬಯಸಿದರೆ ಅಥವಾ ಅವಳನ್ನು ವೇಶ್ಯೆಯನ್ನಾಗಿ ಮಾಡಲು ಬಯಸಿದರೆ ಅವಳನ್ನು ಶಾಲೆಗೆ ಕಳುಹಿಸಿ ಎಂದು ಹಾಡಿನ ಸಾಹಿತ್ಯದಲ್ಲಿದೆ. ಒಟ್ಟಾಯಾಗಿ ಪಾಕಿಸ್ತಾನಿ ಗಾಯಕನ ಹಾಡು ತಾಲಿಬಾನ್ ಸಿದ್ಧಾಂತದೊಂದಿಗೆ ಪ್ರತಿಧ್ವನಿಸಿದೆ ಮತ್ತು ಮನೆಗಳಿಗೆ ಸೀಮಿತಗೊಳಿಸುವ ಮೂಲಕ ಹೆಣ್ಣುಮಕ್ಕಳ ಶಿಕ್ಷಣವನ್ನು ನಿರ್ಬಂಧಿಸುವಂತೆ ಒತ್ತಾಯಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ…