Subscribe to Updates
Get the latest creative news from FooBar about art, design and business.
- ಚಿಕ್ಕನಾಯಕನಹಳ್ಳಿ: ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಆನ್ ಲೈನ್ ಅರ್ಜಿ ಆಹ್ವಾನ
- ಮೇ 31ರಂದು ವಿವಿಧ ಸಂಘ–ಸಂಸ್ಥೆಗಳ ಒಕ್ಕೂಟದಿಂದ ಪ್ಲಾಸ್ಟಿಕ್ ಮುಕ್ತ ಸ್ವಚ್ಛತಾ ಆಂದೋಲನ
- ತಿಪಟೂರು: ಜೂನ್ 1ರಿಂದ ಉಚಿತ ಯೋಗಾಸನ ಪ್ರಾಣಾಯಾಮ ಧ್ಯಾನ ಶಿಬಿರ
- ತುಮಕೂರು: ವಾಟರ್ ಟ್ಯಾಂಕ್ ನೊಳಕ್ಕೆ ಬಿದ್ದು ಮೂವರು ಮಕ್ಕಳು ಸಾವು, ಬೈಕ್ ಡಿಕ್ಕಿ ವ್ಯಕ್ತಿ ಸಾವು, ಆಟೋ ಚಾಲಕ ಸಾವು
- ಮಕ್ಕಳಿಗೆ ಮೊಬೈಲ್ ಬಳಕೆ, ಪರಿಣಾಮ ಕುರಿತು ಕಿರುಚಿತ್ರ ಪ್ರದರ್ಶನ
- ತುರುವೇಕೆರೆ: ಜೂ. 4ರಂದು ಉಚಿತ ಯೋಗ, ಪ್ರಾಣಾಯಾಮ ತರಗತಿಗಳ ಉದ್ಘಾಟನೆ
- ಪೌಷ್ಟಿಕ ಆಹಾರ ಪೂರೈಕೆಯಲ್ಲಿ ನಿರ್ಲಕ್ಷ್ಯ: ಅಧಿಕಾರಿಗಳಿಗೆ ನೋಟಿಸ್ ನೀಡಲು ಜಿಲ್ಲಾಧಿಕಾರಿ ಸೂಚನೆ
- ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿ: ಕುಣಿಗಲ್ ತಾ.ಪಂ. ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ
Author: admin
ಜಗತ್ತಿನೆಲ್ಲೆಡೆ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದಾರೆ. ಹಬ್ಬದಂದು ಪ್ರಾಣಿಗಳನ್ನು ಬಲಿ ಕೊಡುವ ಸಂಪ್ರದಾಯವಿದೆ. ಆದರೆ ಇದನ್ನೇ ಬಂಡವಾಳವನ್ನಾಗಿಸಿ ಕೆಲವು ಕಿಡಿಗೇಡಿಗಳು ಕೋಮು, ದ್ವೇಷವನ್ನು ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಬಕ್ರೀದ್ ವೇಳೆ ಪ್ರಾಣಿಗಳನ್ನು ಬಲಿಕೊಡಲಾಗುವುದು. ಕುರುಬಾನಿ ಎಂದು ಕರೆಯಲ್ಪಡುವ ಈ ಸಂಪ್ರದಾಯವನ್ನು ಬಹುತೇಕ ಮುಸ್ಲಿಂ ಸಮುದಾಯದವರು ಆಚರಿಸುತ್ತಾರೆ. ಹೀಗೆ ಬಕ್ರೀದ್‌ಗೆ ಬಲಿ ಕೊಡಲು ತಂದಿದ್ದ ಕುರಿಯ ದೇಹದ ಮೇಲೆ ರಾಮ್ ಎಂದು ಬರೆಯುವ ಮೂಲಕ ಕೋಮು ಸೌಹಾರ್ದತೆಯನ್ನು ಕೆಣಕಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನಲ್ಲಿ ಬಕ್ರೀದ್‌ಗೆ ಬಲಿ ನೀಡಲು ತಂದಿದ್ದ ಬಿಳಿ ಬಣ್ಣದ ಕುರಿಯ ಮೈ ಮೇಲೆ ರಾಮ್ ಎಂದು ಹಿಂದಿ ಭಾಷೆಯಲ್ಲಿ ಬರೆಯಲಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಬೇಗ ವೈರಲ್ ಆಗಿದೆ. ಆ ಕೂಡಲೇ ಸ್ಥಳಕ್ಕೆ ಹಿಂದೂ ಸಂಘಟನೆಯವರು ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮ ಹಿಂದೂಗಳ ಆರಾಧ್ಯ ದೈವ ಆಗಿದ್ದು, ಬಲಿಕೊಡಲು ತಂದ ಕುರಿಯ ಮೇಲೆ ರಾಮನ ನಾಮ ನೋಡಿದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಪೊಲೀಸರಿಗೆ…
ತೆಲಂಗಾಣ ಬಿಜೆಪಿ ಫೈರ್ ಬ್ರಾಂಡ್ ಶಾಸಕ ರಾಜಾಸಿಂಗ್ ರನ್ನು ತೆಲಂಗಾಣ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಬಕ್ರೀದ್ ನಿಮಿತ್ತ ಮೇದಕ್ ನಲ್ಲಿ ಗೋವುಗಳನ್ನು ರವಾನೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ಮೇರೆಗೆ ಬಿಜೆಪಿ ಮತ್ತು ಗೋಸಂರಕ್ಷಕದಳದ ಕಾರ್ಯಕರ್ತರು ದಾಳಿ ನಡೆಸಿದ್ದರು. ಈ ವೇಳೆ ಎರಡೂ ಸಮುದಾಯಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಎರಡೂ ಸಮುದಾಯದ 45ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಅಂತೆಯೇ ಪೊಲೀಸರು ಮೇದಕ್ ಪಟ್ಟಣ ಮತ್ತು ಮಂಡಲದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಐಜಿ ತಿಳಿಸಿದ್ದಾರೆ. ಮೂಲಗಳ ಪ್ರಕಾರ ಮೇದಕ್ ಜಿಲ್ಲೆಯಲ್ಲಿ ನಡೆದ ಗಲಭೆ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಶಾಸಕ ರಾಜಾಸಿಂಗ್‌ರನ್ನು ಮೊದಲೇ ಬಂಧಿಸಲಾಗಿದೆ. ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಮಿಯಾಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರು ತಿಳಿಸಿರುವಂತೆ ಗುಂಪುಘರ್ಷಣೆಯಾಗಿರುವ ಘರ್ಷಣೆ ಪೀಡಿತ ಮೇದಕ್ ಜಿಲ್ಲೆಗೆ ರಾಜಾಸಿಂಗ್ ಪ್ರಯಾಣ ಬೆಳೆಸಿದ್ದರು. ರಾಜಾಸಿಂಗ್ ಅಲ್ಲಿಗೆ ಹೋದರೆ…
ಸಾಮಾನ್ಯವಾಗಿ ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಆಂಜನೇಯಸ್ವಾಮಿ ನಿಂತಿರುತ್ತಾನೆ ಇಲ್ಲ ಕುಳಿತಿರುತ್ತಾನೆ. ಈ ಪ್ರದೇಶದಲ್ಲಿರುವ ಆಂಜನೇಯಸ್ವಾಮಿ ಮಲಗಿದ ಭಂಗಿಯಲ್ಲಿ ಇದ್ದಾನೆ. ಇಲ್ಲಿಯ ಆಂಜನೇಯ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ? ಇದರ ವಿಶೇಷತೆ ಏನು? ಇಂದಿಗೂ ಮಕ್ಕಳಿಲ್ಲದವರು ಇಲ್ಲಿ ಬಂದು ಹರಕೆ ಹೊರುತ್ತಾರೆ ಅಪರೂಪದಲ್ಲಿ ಅಪರೂಪ ಆಂಜನೇಯ ಭಂಗಿ. ಈ ದೇವಸ್ಥಾನವು ಅಷ್ಟೇ ವಿಶೇಷತೇಗಳಿಂದ ಕುಡಿದೆ. ಈ ಪಡೆ ಹನುಮಾನ್ ಬಲ ಪಾದದ ಕೆಳಗೆ ಐರಾವಣ ಪ್ರತಿಮೆ ಇದೆ.ಹನುಮಾನ್ ಈತನ ಕೆಟ್ಟ ಕಾರ್ಯ ಮತ್ತು ಗುಣಗಳನ್ನು ಮೆಟ್ಟಿ ನಿಂತಿರುವ ಸಂಕೇತವಾಗಿದೆ.ಹಾಗೆ ಎಡ ಕಾಲದ ಬಳಿ ಇಚ್ಚಾಶಕ್ತಿ ದೇವಿ ಕಾಮದೇವಿ ಪ್ರತಿಮೆಯಿದೆ. ಒಬ್ಬ ವ್ಯಾಪಾರಿ ಈ ಮೂರ್ತಿಯನ್ನು ತನ್ನ ಊರಲ್ಲಿ ಸ್ಥಾಪಿಸಲು ದೋಣಿಯಲ್ಲಿ ತೆಗೆದುಕೊಂಡು ಹೋಗುತ್ತಿರುವಾಗ ದೋಣಿ ಪ್ರಯಾಗದ ಬಳಿಬಂದು ಮುಳುಗಿದಂತೆ. ಮೇಲೆತ್ತಲು ವ್ಯಾಪಾರಿ ಎಷ್ಟೇ ಪ್ರಯತ್ನಿಸಿದರೂ ಆಗಲಿಲ್ಲವಂತೆ. ಕೊನೆಗೆ ಆ ವ್ಯಾಪಾರಿ ಆಂಜನೇಯನಿಗೆ ಇಲ್ಲಿ ನೆಲೆಸಲು ಮನಸಿಗೆ ಎಂದು ತಿಳಿದು ಅಲ್ಲಿಯೇ ಬಿಟ್ಟರಂತೆ. ಆಂಜನೇಯಸ್ವಾಮಿ ಪ್ರಯಾಗದ…
ಈಗಾಗಲೇ ಆನ್ ಲೈನ್ ನಲ್ಲಿ ಹಲವರು ಹಲವು ರೀತಿಯಲ್ಲಿ ವಂಚನೆಗೊಳಗಾಗಿದ್ದಾರೆ. ಆದರೆ ಅರಣ್ಯ ಇಲಾಖೆಗೆ ವಂಚಿಸಿ ಪ್ರವಾಸಿಗರ ಹಣ ದೋಚಿದ ಪ್ರಕರಣ ಬೆಳಕಿಗೆ ಬಂದಿದ್ದು, ನಾಗರಹೊಳೆ ನ್ಯಾಷನಲ್ ಪಾರ್ಕ್ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತಯಾರಿಸಿ ಹಣ ದೋಚುತ್ತಿರುವುದು ಬೆಳಕಿಗೆ ಬಂದಿದೆ. ನಾಗರಹೊಳೆ ನ್ಯಾಷನಲ್ ಪಾರ್ಕ್ ಹೆಸರಿನಲ್ಲಿ ನಕಲಿ ವೆಬ್ ಸೈಟ್ ನ್ನು ಕಳೆದ ಜನವರಿಯಲ್ಲಿಯೇ ವಂಚಕರು ತೆರೆದಿದ್ದರಾದರೂ ಅದು ಬೆಳಕಿಗೆ ಬರಲು ಆರು ತಿಂಗಳೇ ಬೇಕಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿಯೇ ಇರಲಿಲ್ಲ. ಇದೀಗ ಬೆಳಕಿಗೆ ಬರುತ್ತಿದ್ದಂತೆಯೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಪ್ರವಾಸಿಗರು ಆನ್ ಲೈನ್ ನಲ್ಲಿ ಬುಕಿಂಗ್ ಮಾಡುವ ಮುನ್ನ ಇಲಾಖೆಯ ಅಧಿಕೃತ ವೆಬ್ ಸೈಟಾ ಎಂಬುದನ್ನು ಖಾತರಿ ಮಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದೆ. ಈ ಹಿಂದೆ ಜನವರಿಯಲ್ಲಿ ನಕಲಿ ವೆಬ್ ಸೈಟ್ ಮೂಲಕ ಇಲ್ಲಿಗೆ ಬುಕಿಂಗ್ ಮಾಡಿಕೊಂಡು ಪ್ರವಾಸಿಗರಿಗೆ ಸಾವಿರಾರು ರೂಪಾಯಿ ವಂಚನೆ ಮಾಡಲಾಗಿತ್ತು. ಬುಕಿಂಗ್ ಮಾಡಿದ ಪ್ರವಾಸಿಗರು ಸಫಾರಿ ಕೇಂದ್ರಕ್ಕೆ ಬಂದಾಗ ನಕಲಿ ಬುಕಿಂಗ್ ವಂಚನೆ…
ಮಣಿಪುರ ಮುಖ್ಯಮಂತ್ರಿ ಬಂಗಲೆಯ ಸಮೀಪ ಅಗ್ನಿ ಅವಘಡ ಸಂಭವಿಸಿರುವ ಬಗ್ಗೆ ಶನಿವಾರ ವರದಿಯಾಗಿದೆ. ಮಣಿಪುರ ರಾಜಧಾನಿ ಇಂಫಾಲದಲ್ಲಿರುವ ವಿಧಾನಸಭಾ ಕಟ್ಟಡದ ಪಕ್ಕದಲ್ಲೇ ಇರುವ ಕಟ್ಟಡವೊಂದರಲ್ಲಿ ಶನಿವಾರ ಭಾರೀ ಬೆಂಕಿ ಕಾಣಿಸಿದೆ. ಮುಖ್ಯಮಂತ್ರಿ ಮನೆಯ ಸಮೀಪದಲ್ಲೇ ಈ ಅವಘಡ ಸಂಭವಿಸಿದೆ. ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ಅಧಿಕೃತ ನಿವಾಸದ ಬಳಿಯಿರುವ ಮಣಿಪುರ ಸಚಿವಾಲಯದ ಸಂಕೀರ್ಣದಲ್ಲಿರುವ ಕಟ್ಟಡದಲ್ಲಿ ಶನಿವಾರ ಸಂಜೆ ಭಾರೀ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿಯನ್ನು ನಂದಿಸಲು ಕನಿಷ್ಠ ಮೂರು ಅಗ್ನಿಶಾಮಕಗಳನ್ನು ಬಳಸಲಾಯಿತು. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಉಗ್ರರ ಕೈವಾಡವನ್ನು ಶಂಕಿಸಲಾಗಿದೆ. STORY | Major fire breaks out near Manipur CM’s bungalow READ: https://t.co/YYzrooXlSV VIDEO: (Full video available on PTI Videos – https://t.co/n147TvqRQz) pic.twitter.com/BOapiMRse3 — Press Trust of India (@PTI_News) June 15, 2024 ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…
ದರ್ಶನ್ ಆಂಡ್ ಗ್ಯಾಂಗ್ ಕ್ರೂರವಾಗಿ ಕೊಲೆ ಮಾಡಿರುವ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಪರ ವಾದ ಮಾಡಲು ವಿಶೇಷ ಅಭಿಯೋಜಕರನ್ನಾಗಿ (SPP) ದಕ್ಷ ಹಿರಿಯ ವಕೀಲರೊಬ್ಬರನ್ನು ರಾಜ್ಯ ಸರ್ಕಾರವೇ ನೇಮಕ ಮಾಡಿದೆ. ಭೀಕರವಾಗಿ ದರ್ಶನ್ ಆಂಡ್ ಗ್ಯಾಂಗ್ ನಿಂದ ಕೊಲೆಯಾಗಿದ ರೇಣುಕಾಸ್ವಾಮಿಗೆ ನ್ಯಾಯ ಒದಗಿಸಲು ವಿಶೇಷ ಅಭಿಯೋಜಕರನ್ನಾಗಿ ಪಿ.ಪ್ರಸನ್ನ ಕುಮಾರ್ ಅವರನ್ನು ನಿಯೋಜನೆ ಮಾಡಲಾಗಿದೆ. ಹತ್ಯೆಗೀಡಾದ ರೇಣುಕಾಸ್ವಾಮಿ ಪರ ನೇಮಕವಾದ ಈ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಸಾಮಾನ್ಯ ವಕೀಲರೇನೂ ಅಲ್ಲ. ಪ್ರಸ್ತುತವಾಗಿ ಕೇಂದ್ರೀಯ ತನಿಖಾ ದಳ (CBI), ಜಾರಿ ನಿರ್ದೇಶನಾಲಯ (ED) ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಹಿಸಿಕೊಂಡಿದ್ದ ಕೆಲವು ಘಟನೆಗಳಲ್ಲಿ ವಿಶೇಷ ಅಭಿಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ರೇಣುಕಾಸ್ವಾಮಿ ಕೊಲೆ ಕೇಸಿಗೆ SPP ಆಗಿ ಸರ್ಕಾರ ನೇಮಕವಾಗಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್…
ಅಶ್ವಿನ್ ವೈಷ್ಣವ್ ಅವರು ರೈಲ್ವೇ ಸಚಿವರಾಗಿ ಅಧಿಕಾರವಹಿಸಿಕೊಂಡ ಬಳಿಕ ರೈಲ್ವೇ ಇಲಾಖೆ ಅಧಿಕಾರಿಗಳ ಜೊತೆ ಉನ್ನತ ಸಭೆ ನಡೆಸಿದ್ದು, ಮಹತ್ವದ ಹೇಳಿಕೆ ನೀಡಿದ್ದಾರೆ. ಇನ್ನು ಭಾರತೀಯ ರೈಲ್ವೇಯಲ್ಲಿ ಮಹತ್ತರ ಬದಲಾವಣೆ ತರಲಾಗುತ್ತಿದೆ. ಪ್ರಮುಖವಾಗಿ 2032ರ ವೇಳೆಗೆ ಭಾರತೀಯ ರೈಲ್ವೇ ಸಂಪೂರ್ಣ ಬದಲಾಗಲಿದೆ. ಟಿಕೆಟ್ ಬುಕಿಂಗ್, ಟಿಕೆಟ್ ಕನ್ ಫರ್ಮ್ ಸುಲಭ. ರೈಲು ಪ್ರಯಾಣ ಆರಾಮದಾಯಕವಾಗಲಿದೆ. ಕಿಕ್ಕಿರಿದು ತುಂಬಿದ ರೈಲುಗಳು ಇರುವುದಿಲ್ಲ. ಕಾರಣ ರೈಲು ಸಂಖ್ಯೆ, ಸೇವೆ ಹೆಚ್ಚಿಸಲಾಗುತ್ತಿದೆ. ರೈಲು ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 40 ಮಿಲಿಯನ್ ಪ್ರಯಾಣಿಕರು ಕೇವಲ ಬೇಸಿಗೆಯಲ್ಲಿ ಪ್ರಯಾಣಿಸಿದ್ದಾರೆ ಎಂದು ವೈಷ್ಣವ್ ಹೇಳಿದ್ದಾರೆ. ಪ್ರಯಾಣಿಕರು ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ರೈಲುಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತಿದೆ. ಭಾರತದ ಮೂಲೆ ಮೂಲೆಗೆ ರೈಲು ಸೇವೆಗಳನ್ನು ನೀಡಲಾಗುತ್ತದೆ. ಯಾವುದೇ ವೈಟಿಂಗ್ ಲಿಸ್ಟ್ ಗೆ ಕಾಯದೇ ಸೀಟುಗಳನ್ನು ರಿಸರ್ವ್ ಮಾಡಲು ಸಾಧ್ಯವಿದೆ. 2032ರ ವೇಳೆಗೆ ಭಾರತೀಯ ರೈಲ್ವೇ ಸಂಪೂರ್ಣ ಬದಲಾಗಲಿದೆ. ಆಧುನಿಕತೆ ಪಡೆದುಕೊಳ್ಳಲಿದೆ ಎಂದಿದ್ದಾರೆ. ನಮ್ಮತುಮಕೂರಿನ…
ಅನೇಕ ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಅವುಗಳಿಗೆ ಸಂಬಂಧಿಸಿದ ವಿವಿಧ ಆಹಾರಗಳೂ ಇವೆ. ಅವರು ತಮ್ಮ ರುಚಿಗೆ ಅನುಗುಣವಾಗಿ ತಿನ್ನುತ್ತಾರೆ. ಭಾರತದಲ್ಲಿ ಅನೇಕ ರೀತಿಯ ಆಹಾರ ಪಾಕಪದ್ಧತಿಗಳಿವೆ. ಕೆಲ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿ ವಿವಿಧ ಸಮಸ್ಯೆಗಳು ಉಂಟಾಗುತ್ತಿರುವುದನ್ನು ಗಮನಿಸಿದ ಎಫ್ ಎಸ್ ಎಸ್ ಎಐ ಈ ಆಹಾರಗಳನ್ನು ನಿಷೇಧಿಸಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಸಂಘ (ಎಫ್ ಎಸ್ ಎಸ್ ಎಐ) ಭಾರತದಲ್ಲಿ ಕೆಲವು ರೀತಿಯ ಆಹಾರಗಳನ್ನು ನಿಷೇಧಿಸಿದೆ. ಎಫ್ ಎಸ್ ಎಸ್ ಎಐ ಭಾರತದಲ್ಲಿ ಆನುವಂಶಿಕವಾಗಿ ಮಾರ್ಪಡಿಸಿದ ಆಹಾರಗಳನ್ನು ನಿಷೇಧಿಸಿದೆ. ಪೊಟ್ಯಾಸಿಯಮ್ ಬ್ರೋಮೇಟ್ ಹೊಂದಿರುವ ಆಹಾರಗಳನ್ನು ಎಫ್ ಎಸ್ ಎಸ್ ಎಐ 2016 ರಲ್ಲಿ ನಿಷೇಧಿಸಿತು. ಮಿಶ್ರ ಆಹಾರವನ್ನು ಸೇವಿಸುವುದು ಇದಕ್ಕೆ ಕಾರಣ. ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗಿದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಪೊಟ್ಯಾಸಿಯಮ್ ಬ್ರೋಮೇಟ್ ಬೆರೆಸಿದ ಬ್ರೆಡ್ ತಿನ್ನುವುದು. ಥೈರಾಯ್ಡ್ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಹೀಗಾಗಿ ಇವುಗಳನ್ನು ನಿಷೇಧಿಸಲಾಗಿದೆ ಚೈನೀಸ್ ಹಾಲು: ಚೀನಾದ ಹಾಲಿನ ಉತ್ಪನ್ನಗಳಲ್ಲಿ ಪ್ರೋಟೀನ್…
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದಲ್ಲೇ ಜನರು ಕಲುಷಿತ ನೀರು ಕುಡಿದು ಮೃತಪಟ್ಟಿದ್ದಾರೆ. ಟ್ಯಾಂಕರ್ ಗಳನ್ನು ಸ್ವಚ್ಛಗೊಳಿಸಲು ಸರಕಾರದ ಬಳಿ ಹಣವಿಲ್ಲ. ಜನರಿಗೆ ಶುದ್ಧ ಕುಡಿಯುವ ನೀರು ನೀಡುವ ಯೋಗ್ಯತೆ ಕೂಡ ಈ ಸರಕಾರಕ್ಕಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಗಿನಡಿ ಅವರ ಕ್ಷೇತ್ರ ವರುಣದಲ್ಲಿ ಕಲುಷಿತ ನೀರನ್ನು ಜನರು ಸೇವಿಸಿ ಸಾವಿಗೀಡಾಗಿದ್ದಾರೆ. ಅಂದರೆ ಮುಖ್ಯಮಂತ್ರಿಗಳಿಗೆ ಕುಡಿಯುವ ನೀರು ನೀಡುವ ಯೋಗ್ಯತೆ ಇಲ್ಲ ಎಂದು ಟೀಕಿಸಿದರು. ಈಗ ತುಮಕೂರಿನಲ್ಲೂ ಕಲುಷಿತ ನೀರು ಸೇವಿಸಿ ಆರು ಜನರ ಸಾವಾಗಿದೆ. ಇದಕ್ಕೆ ಜಿಲ್ಲಾಧಿಕಾರಿಯನ್ನು ಕೇಳಿದರೆ ಮೂತ್ರಪಿಂಡ ಸಮಸ್ಯೆ ಎನ್ನುತ್ತಾರೆ. ಆರೋಗ್ಯ ಸಮಸ್ಯೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಅದನ್ನೆ ಸಬೂಬು ಮಾಡಬಾರದು. ಈ ಕುರಿತು ವರದಿ ಕೇಳಿದ್ದೇನೆ. ಕೊಪ್ಪಳದಲ್ಲಿಯೂ ಜನರು ಕಲುಷಿತ ನೀರು ಸೇವಿಸಿ ಆಸ್ಪತ್ರೆ ಸೇರಿದ್ದಾರೆ. ಶಾಸಕರು ಅನುದಾನ ಕೇಳಿದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಾಯಿ ಮುಚ್ಚಿಕೊಂಡು ಸುಮ್ಮನಿರಿ ಎಂದಿದ್ದಾರೆ.…
ರಾಜ್ಯದಲ್ಲಿ ಗ್ಯಾರೆಂಟಿ, ಗ್ಯಾರೆಂಟಿ ಎಂದು ಬಾಯಿ ಬಡಿದುಕೊಳ್ಳೋ ಕಾಂಗ್ರೆಸ್ ಸರಕಾರ ಈಗ ತೈಲ ಬೆಲೆ ಏರಿಸುವ ಮೂಲಕ ಜನರ ಕೈಗೆ ಅಕ್ಷರಶಃ ಚೊಂಬು ಕೊಟ್ಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆ ಬಗ್ಗೆ ಉದ್ದುದ್ದ ಭಾಷಣ ಬಿಗಿದು, ಕೇಂದ್ರ ಸರಕಾರದತ್ತ ಬೊಟ್ಟು ಮಾಡಿ ಜನರ ದಿಕ್ಕು ತಪ್ಪಿಸುತ್ತ ಬಂದಿರುವ ರಾಜ್ಯ ಕಾಂಗ್ರೆಸ್ ಸರಕಾರ ಈಗ ರಾಜ್ಯದ ಜನಸಾಮಾನ್ಯರಿಗೆ ತಾನೇ ಬೆಲೆ ಏರಿಕೆ ಬಿಸಿ ತಟ್ಟಿಸಿದೆ ಎಂದು ಕಿಡಿಕಾರಿದರು. ಕೇಂದ್ರ ಸರಕಾರ ಇಂಧನ ಬೆಲೆ ಕಡಿಮೆ ಮಾಡಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿ ಜನರಿಗೆ ಹೊರೆ ಮಾಡಿದೆ. ಕಾಂಗ್ರೆಸ್ ಸರಕಾರ ರಾಜ್ಯಕ್ಕೆ ಭ್ರಷ್ಟಾಚಾರ, ದುರಾಡಳಿತ, ರೈತರ ಆತ್ಮಹತ್ಯೆ, ಹಗರಣಗಳ ಭಾಗ್ಯಗಳನ್ನು ನೀಡಿದೆಯೇ ಹೊರತು ಜನರ ಪಾಲಿಗೆ ಭಾಗ್ಯಶಾಲಿಯಾಗಿ ಉಳಿದಿಲ್ಲ ಎಂದು ಅವರು ಟೀಕಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಾಗಿನಿಂದ ಅಭಿವೃದ್ಧಿ ಕಾರ್ಯಗಳನ್ನೆ ಕೈಗೊಂಡಿಲ್ಲ. ಈಗ ನೇರವಾಗಿ…