Subscribe to Updates
Get the latest creative news from FooBar about art, design and business.
- ಕುಣಿಗಲ್: ಗ್ರಾಮ ದೇವತೆ ಜಾತ್ರಾ ಮಹೋತ್ಸವದ ಜಮಾ–ಖರ್ಚು ವಿವರ ಘೋಷಣೆ
- ಬೀದರ್ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಭಾಲ್ಕಿ ವಕೀಲರ ಸಂಘ ಆಗ್ರಹ
- ಬಡವರಿಗೆ ಮಾಡುವ ಸಹಾಯ ದೇವರಿಗೆ ಸಾಲ ಕೊಟ್ಟಂತೆ: ಇಮ್ಯಾನುವೆಲ್ ದರ್ಬಾರೆ
- ನೀಟ್ ಹಗರಣ ವಿರುದ್ಧದ ಒಂದು ತಿಂಗಳ ಐತಿಹಾಸಿಕ ಹೋರಾಟಕ್ಕೆ ಸಂದ ಜಯ: ತುಮಕೂರಿನಲ್ಲಿ AIDSO, AIMSS ವಿಜಯೋತ್ಸವ!
- ಮಾಶಾಸನ ಸ್ಥಗಿತ ಖಂಡನೆ: ಸರ್ಕಾರ ದಿವಾಳಿ ಹಂತ ತಲುಪಿದೆ: ಕೆ.ಎಂ. ತಿಮ್ಮರಾಯಪ್ಪ ಆರೋಪ
- ಮಕ್ಕಳು ದುಶ್ಚಟಗಳಿಂದ ದೂರವಿರಿ: ಅಬಕಾರಿ ಉಪ ಅಧೀಕ್ಷಕ ದೀಪಕ್ ಎಸ್. ಕರೆ
- ಸರಗೂರು: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರ್ಥಪೂರ್ಣ ವಿಶ್ವ ಜನಸಂಖ್ಯಾ ದಿನಾಚರಣೆ
- ಸರಗೂರು: ದಲಿತ ಸಂಘರ್ಷ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ; ಸಂಘಟನೆ ಬಲವರ್ಧನೆಗೆ ಕರೆ
Author: admin
ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ಬಿಜೆಪಿ ಶಾಸಕ ವಿಶ್ವನಾಥ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಲು ಹಾಕಲಾಗಿದ್ದ ಫ್ಲೆಕ್ಸ್ ತಲೆ ಮೇಲೆ ಬಿದ್ದು ವಯೋವೃದ್ಧರೊಬ್ಬರು ಕೋಮಾ ಸ್ಥಿತಿಗೆ ಜಾರಿರುವ ಘಟನೆ ವರದಿಯಾಗಿದೆ. ಗಾಯಗೊಂಡ ವೃದ್ಧನನ್ನು ರಾಜಾನುಕುಂಟೆ ನಿವಾಸಿ ಭಕ್ತ ವತ್ಸಲಾ(70) ಎಂದು ಗುರುತಿಸಲಾಗಿದೆ. ಜು.6ರ ಶನಿವಾರ ಘಟನೆ ನಡೆದಿದ್ದು, ತನ್ನ ಮೊಮ್ಮಗನನ್ನು ಶಾಲೆಯಿಂದ ಕರೆದುಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದಾಗ ಕಂಬಕ್ಕೆ ಕಟ್ಟಲಾಗಿದ್ದ ಫ್ಲೆಕ್ಸ್ ಕಳಚಿ ಭಕ್ತ ವತ್ಸಲಾ ಅವರ ತಲೆ ಮೇಲೆ ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿತ್ತು. ಇದೀಗ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಯೋವೃದ್ಧ ಭಕ್ತ ವತ್ಸಲಾ ಅವರು ಕೋಮಾ ಸ್ಥಿತಿಗೆ ಜಾರಿರುವುದಾಗಿ ಎಂದು ತಿಳಿದುಬಂದಿದೆ. ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ, ಫ್ಲೆಕ್ಸ್ ಬಿದ್ದ ಸ್ಥಳ ಸಿಂಗನಾಯಕನಹಳ್ಳಿ ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ…
ಮೆದುಳು ತಿನ್ನುವ ಅಮೀಬಾ ಸೋಂಕಿನ ಪ್ರಕರಣಗಳು ಕೇರಳದಲ್ಲಿ ಹೆಚ್ಚಾಗುತ್ತಿದ್ದು ಭಾರಿ ಆತಂಕ ಮೂಡಿಸಿದೆ, ಕೇರಳದಲ್ಲಿ ಈವರೆಗೆ ನಾಲ್ಕು ಮಕ್ಕಳು ಈ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಕೇರಳದಲ್ಲಿ ಅಮೀಬಾ ಸೋಂಕು ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕಟ್ಟೆಚ್ಚರವಹಿಸುವಂತೆ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಅಮೀಬಾ ಸೋಂಕು ಲಕ್ಷಣ ಕಂಡು ಬಂದರೆ ಕೂಡಲೇ ಮಾಹಿತಿಗೆ ಸೂಚಿಸಲಾಗಿದೆ. ಕಲುಷಿತ ನೀರಿನಲ್ಲಿರುವ ಪರಾವಲಂಬಿಯಲ್ಲದ ಅಮೀಬಾ ಎಂಬ ಬ್ಯಾಕ್ಟೀರಿಯಾದಿಂದ ಈ ಸೋಂಕು ಹರಡುತ್ತದೆ. ಮೂಗಿನ ಮೂಲಕ ನಮ್ಮ ಶರೀರ ಸೇರುವ ಸೂಕ್ಷ್ಮಾಣು ಜೀವಿ, ಮೆದುಳಿನ ಅಂಗಾಂಶಕ್ಕೆ ಭಾರೀ ಹಾನಿ ಉಂಟುಮಾಡುತ್ತದೆ. ಇದರಿಂದ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಸೋಂಕು ಹರಡುವ ಆತಂಕದ ಹಿನ್ನೆಲೆ ಗಡಿ ಭಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕಲುಷಿತ ನೀರಿನಲ್ಲಿ ಈಜಾಡಿದವರಲ್ಲಿ ಸೋಂಕು ಕಂಡು ಬರುತ್ತಿದೆ. ಹೀಗಾಗಿ ಮಳೆ ನೀರು ನಿಂತ ಹೊಂಡಗಳಲ್ಲಿ, ಕಲುಷಿತ ನೀರಿನಲ್ಲಿ ಈಜಾಡದಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆ ಕೇರಳ ಮುಖ್ಯಮಂತ್ರಿ…
ಅಸ್ಸಾಂನಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಭೀಕರ ಪ್ರವಾಹದಲ್ಲಿ ದೇಶದ ಪ್ರಮುಖ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಪ್ರವಾಹದಲ್ಲಿ ಮುಳುಗಡೆಯಾಗಿದೆ. 132ಕ್ಕೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿವೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿನ ಪ್ರವಾಹದಲ್ಲಿ ಕನಿಷ್ಠ 132 ಕಾಡು ಪ್ರಾಣಿಗಳು ಸಾವನ್ನಪ್ಪಿದ್ದು, 96 ಪ್ರಾಣಿಗಳನ್ನು ರಕ್ಷಿಸಲಾಗಿದೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸತ್ತ ಪ್ರಾಣಿಗಳಲ್ಲಿ ಆರು ಘೇಂಡಾಮೃಗಗಳು, 117 ಜಿಂಕೆಗಳು ಸೇರಿವೆ ಎನ್ನಲಾಗಿದೆ. ಚಿಕಿತ್ಸೆಯ ಸಮಯದಲ್ಲಿ ಒಟ್ಟು 25 ಪ್ರಾಣಿಗಳು ಸಾವನ್ನಪ್ಪಿವೆ ಮತ್ತು ಇವುಗಳಲ್ಲಿ 17 ಹಂದಿ ಮತ್ತು ಉಳಿದಂತೆ ಜಿಂಕೆಗಳು, ಜೌಗು ಜಿಂಕೆ, ಮಕಾಕ್ ಮತ್ತು ಓಟರ್ ನಾಯಿ ಸೇರಿವೆ ಎನ್ನಲಾಗಿದೆ. ಅರಣ್ಯಾಧಿಕಾರಿಗಳು 85 ಹಂದಿ, ಎರಡು ಖಡ್ಗಮೃಗ, ಕಡವೆ ಮತ್ತು ಗೂಬೆ ಮತ್ತು ಜೌಗು ಜಿಂಕೆ, ಮೊಲ, ಮಕಾಕ್, ಓಟರ್, ಆನೆ ಮತ್ತು ಕಾಡಿನ ಬೆಕ್ಕುಗಳನ್ನು ರಕ್ಷಿಸಿದ್ದಾರೆ. 2017 ರಲ್ಲಿ ಸಂಭವಿಸಿದ ಪ್ರವಾಹದಲ್ಲಿ 350 ಕ್ಕೂ ಹೆಚ್ಚು ವನ್ಯಜೀವಿಗಳು ಸಾವನ್ನಪ್ಪಿದ್ದವು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ರೈಲು ಹತ್ತುವ ವೇಳೆ ರೈಲಿನಿಂದ ಕೆಳಗೆ ಬಿದ್ದ ಮಹಿಳೆಯ ಕಾಲಿನ ಮೇಲೆ ರೈಲು ಹರಿದ ಪರಿಣಾಮ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಘಟನೆ ಮುಂಬೈನ ಬೇಲಾಪುರ ನಿಲ್ದಾಣದಲ್ಲಿ ನೆನ್ನೆ ನಡೆದಿದೆ. ಮಳೆಯಿಂದಾಗಿ ಕೆಲವೊಂದು ಕಡೆಗಳಲ್ಲಿ ರೈಲು ಹಳಿಗಳು ಜಲಾವೃತಗೊಂಡಿದೆ ಮತ್ತು ಜಾರುತ್ತಿವೆ. ಇದರಿಂದಾಗಿ ಕೆಲವೊಂದು ರೈಲುಗಳ ಸಂಚಾರ ಸ್ಥಗಿತಗೊಂಡಿದೆ, ಇಲ್ಲೊಬ್ಬರು ಮಹಿಳೆ ಮುಂಬೈನ ಬೇಲಾಪುರ ನಿಲ್ದಾಣದಿಂದ ಥಾಣೆಗೆ ಹೋಗಲು ಬೆಳಿಗ್ಗೆ ರೈಲ್ವೆ ಪ್ಲಾಟ್ ಫಾರ್ಮ್ ಗೆ ಬಂದಿದ್ದಾರೆ ಈ ವೇಳೆ ಹೆಚ್ಚಿನ ಜನಸಂದಣಿ ಇದ್ದ ಪರಿಣಾಮ ಮಹಿಳೆ ರೈಲು ಹತ್ತುವ ವೇಳೆ ಮಹಿಳೆ ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬಿದ್ದಿದ್ದಾರೆ. ಅಷ್ಟೋತ್ತಿಗಾಗಲೇ ರೈಲು ಹೊರಟಿದೆ ಇದನ್ನು ಗಮನಿಸಿದ ಅಲ್ಲಿದ್ದ ಭದ್ರತಾ ಸಿಬಂದಿ ಕೂಡಲೇ ಸೂಚನೆ ನೀಡಿ ರೈಲನ್ನು ನಿಲ್ಲಿಸಿದ್ದಾರೆ. ಕೂಡಲೇ ರೈಲಿನ ಕೆಳಗೆ ಹೋಗಿ ಮಹಿಳೆಯನ್ನು ಹೊರಗೆಳೆದಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ರೈಲಿನ ಒಂದು ಬೋಗಿ ಆಕೆಯ ಕಾಲಿನ ಮೇಲೆ ಹರಿದು ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಮ್ಮತುಮಕೂರಿನ…
ದಾವಣಗೆರೆ: ಮಾಜಿ ಸಚಿವ, ಬಿಜೆಪಿ ನಾಯಕ ಬಿ.ಸಿ.ಪಾಟೀಲ್ ಅವರ ಅಳಿಯ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಿನೊಳಗೆ ವಿಷದ ಬಾಟಲಿಯೊಂದಿಗೆ ಆತನ ಶವ ಪತ್ತೆಯಾಗಿದೆ. ಪ್ರತಾಪ್ ಅವರು ಬಿ.ಸಿ.ಪಾಟೀಲ್ ಅವರ ಹಿರಿಯ ಪುತ್ರಿ ಸೌಮ್ಯ ಅವರನ್ನು ವಿವಾಹವಾಗಿದ್ದರು. ದಾವಣಗೆರೆ ಜಿಲ್ಲೆಯ ಅರಕೆರೆ ಅರಣ್ಯದ ಬಳಿ ನಿಲ್ಲಿಸಿದ್ದ ಕಾರಿನೊಳಗೆ ಶವ ಪತ್ತೆಯಾಗಿದೆ. ಪೊಲೀಸರ ಪ್ರಕಾರ, ಸೋಮವಾರ ಮಧ್ಯಾಹ್ನ 3.30 ರ ನಂತರ ಪ್ರತಾಪ್ ತನ್ನ ಕುಟುಂಬಕ್ಕೆ ಕರೆ ಮಾಡಿ ವಿಷ ಸೇವಿಸಿರುವುದಾಗಿ ತಿಳಿಸಿದ್ದಾನೆ. ಪೊಲೀಸರು ಎಚ್ಚೆತ್ತು ಅವರನ್ನು ಹೊನ್ನಾಳಿ ತಾಲೂಕಿನ ಆಸ್ಪತ್ರೆಗೆ ಕರೆದೊಯ್ದರು. ನಂತರ ಅವರನ್ನು ಶಿವಮೊಗ್ಗದ ಮೆಕ್‌ಗನ್ ಆಸ್ಪತ್ರೆಗೆ ವರ್ಗಾಯಿಸಲಾಯಿತು, ಅಲ್ಲಿ ಅವರು ನಿಧನರಾದರು. ವಿಷ ಸೇವಿಸಿ ಕುಟುಂಬಸ್ಥರಿಗೆ ಮಾಹಿತಿ ನೀಡಿ ಚನ್ನಗಿರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಚನ್ನಗಿರಿ ಆಸ್ಪತ್ರೆಯ ವೈದ್ಯರು ಶಿವಮೊಗ್ಗದ ಮೆಕ್‌ಗನ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ. ಅವನು ಸತ್ತನೆಂದು ಘೋಷಿಸಲಾಯಿತು.” ನಾವು ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ.…
ಪ್ರತಿ ವರ್ಷ ಕೋಟ್ಯಂತರ ಭಕ್ತರು ಭೂವೈಕುಂಠ ತಿರುಮಲಕ್ಕೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಶ್ರೀ ವೆಂಕಟೇಶ್ವರ ಸ್ವಾಮಿಯ ಪುಣ್ಯಕ್ಷೇತ್ರ ತಿರುಮಲದಲ್ಲಿ ಮಹಿಳೆಯರು ಹೂ ಮುಡಿಯಬಾರದು ಎಂಬ ನಿಯಮವಿದೆ ಗೊತ್ತಾ? ಶ್ರೀಹರಿಯನ್ನು ಹೂವಿನ ಪ್ರೇಮಿ ಎಂದೂ ಕರೆಯುವುದುಂಟು. ಪುರಾಣಗಳಲ್ಲಿ ತಿರುಮಲವನ್ನು ಹೂವಿನ ಮಂಟಪ ಎಂದೇ ಹೆಸರಿಸಲಾಗಿದೆ. ತಿರುಮಲ ಹೂವಿನ ಮಂಟಪವಾಗಿರುವುದರಿಂದ ಶ್ರೀಹರಿಯು ಹೂವಿನ ಅಲಂಕಾರ ಪ್ರಿಯನಾಗಿರುವುದರಿಂದ ನಿತ್ಯವೂ ಭಗವಂತನಿಗೆ ಟನ್ ಗಟ್ಟಲೆ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ. ಬ್ರಹ್ಮೋತ್ಸವದ ಸಂದರ್ಭದಲ್ಲಿ ಗೋವಿಂದ ನೂರಾರು ಅಲಂಕಾರಗಳಲ್ಲಿ ಭಕ್ತರನ್ನು ಪುಳಕಿತಗೊಳಿಸುತ್ತಾನೆ. ತಿರುಮಲದಲ್ಲಿ ಅರಳುವ ಪ್ರತಿಯೊಂದು ಹೂವು ಶ್ರೀ ಮನ್ನಾರಾಯಣನಿಗೆ ಸಮರ್ಪಿತವಾಗಿದೆ ಎಂದು ಜನರು ಮತ್ತು ಭಕ್ತರು ನಂಬುತ್ತಾರೆ. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಭಗವಂತನ ದರ್ಶನಕ್ಕೆ ಬರುವ ಯಾವುದೇ ಭಕ್ತರಾಗಲಿ ಹೂವುಗಳನ್ನು ಮುಟ್ಟಬಾರದು ಎಂಬ ನಿಯಮ ಆಚರಣೆಯಲ್ಲಿದೆ. ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ Tirumala Tirupati Devasthanam -TTD) ಆಡಳಿತ ಮಂಡಲಿಯು ಇದನ್ನು ಕಡ್ಡಾಯವಾಗಿ ಜಾರಿಗೆ ತಂದಿದೆ. ಈ ಕಾರಣದಿಂದಲೇ ಸ್ವಾಮಿಯ ದರ್ಶನಕ್ಕೆ ಬರುವ…
ಕಾಲೇಜು ಯುವತಿಯರಿಗೆ ಮರ್ಮಾಂಗ ತೋರಿಸಿ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ವಿವಿ ಪುರಂನಲ್ಲಿರುವ ಖಾಸಗಿ ಕಾಲೇಜೊಂದರ ಬಳಿ ಜು. 8ರಂದು ನಿಂತಿದ್ದ ಯುವತಿಯರಿಗೆ ತನ್ನ ಪ್ಯಾಂಟ್ ಜಿಪ್ ತೆಗೆದು ಮರ್ಮಾಂಗ ವನ್ನು ತೋರಿಸಿದ್ದ ಕಾಮುಕ ಅಲ್ಲಿಂದ ಪರಾರಿಯಾಗಿದ್ದ. ಆತನನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ರೆಹಮಾನ್ ಎಂದು ಗುರುತಿಸಲಾಗಿದೆ. ಕಾಲೇಜು ವಿದ್ಯಾರ್ಥಿನಿಯರು ನಿಂತಿದ್ದ ಗುಂಪಿನ ಕಡೆ, ಸ್ಕೂಟರ್ ನಲ್ಲಿ ಬಂದಿದ್ದ ಆತ ವಿದ್ಯಾರ್ಥಿನಿಯರು ಮಾತನಾಡುತ್ತಾ ನಿಂತಿದ್ದಾಗ ಅವರ ಗಮನ ಸೆಳೆಯಲು ವಿಕೃತ ಕುಚೇಷ್ಟೆಗಳನ್ನು ಮಾಡುತ್ತಿದ್ದ. ಕೂಡಲೇ ಗುಂಪಿನಲ್ಲಿದ್ದ ಯುವತಿಯೊಬ್ಬಳು, ಆತನ ವರ್ತನೆಗಳನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಳು. ಇದನ್ನರಿಯದ ಆತ, ತನ್ನ ಕುಚೇಷ್ಟೆಗಳನ್ನು ಮುಂದುವರಿಸಿದ್ದೇ ಅಲ್ಲದೆ, ತನ್ನ ಪ್ಯಾಂಟ್ ಜಿಪ್ ತೆಗೆದು ತೋರಿಸಿಯೇಬಿಟ್ಟಿದ್ದಾನೆ. ಅದೂ ಸಹ ಯುವತಿಯ ಮೊಬೈಲಿನಲ್ಲಿ ರೆಕಾರ್ಡ್ ಆಗಿದೆ. ತನ್ನ ಮರ್ಮಾಂಗವನ್ನು ತೋರಿಸಿದ ಕೂಡಲೇ ಯುವತಿಯರು ರೊಚ್ಚಿಗೆದ್ದಿದ್ದನ್ನು ಗಮನಿಸಿದ ಆತ ತನ್ನ ಸ್ಕೂಟರಿನಲ್ಲಿ ಪರಾರಿಯಾಗಿದ್ದಾನೆ. ಬಳಿಕ ಯುವತಿಯರು ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ, ವಿಡಿಯೋವನ್ನು…
ಕೊರಟಗೆರೆ: ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಕಾರ್ಮಿಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊರಟಗೆರೆ ಪಟ್ಟಣದ ಮುಖ್ಯರಸ್ತೆಯ ಪಕ್ಕದಲ್ಲಿರುವ ಪುಣ್ಯಕೋಟಿ ಫ್ಯಾಕ್ಟರಿಯಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನ ಮಲ್ಲೇಶ್ವರ ಗ್ರಾಮದ ಯೋಗೇಶ್ (25) ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕನಾಗಿದ್ದಾನೆ. ಬಾಯ್ಲರ್ ಸ್ಫೋಟದ ಶಬ್ದ ಸುಮಾರು 1/2 ಕಿಲೋ ಮೀಟರ್ ವ್ಯಾಪ್ತಿಗೆ ಕೇಳಿದ್ದು ಸ್ಫೋಟದ ಶಬ್ದದಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸ್ಟೋಟದಿಂದಾಗಿ ಫ್ಯಾಕ್ಟರಿ ಮಾಲಿಕನ ಮನೆಯ ಗೋಡೆಗಳು ಬಿರುಕು ಬಿದ್ದಿದೆ. ಸ್ಫೋಟದಿಂದ ಸುಟ್ಟು, ಗಾಯಗೊಂಡಿದ್ದ ಕಾರ್ಮಿಕನಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ಲಾಸ್ಟ್ ನಿಂದಾಗಿ ಕಾರ್ಮಿಕನ ದೇಹ ಸುಟ್ಟು ಕಿವಿ-ಮೂಗು-ಬಾಯಿಯಿಂದ ರಕ್ತಸ್ರಾವವಾಗಿದೆ. ಸ್ಥಳೀಯರ ಪ್ರಕಾರ ಸುಮಾರು 15 ವರ್ಷಗಳಿಂದಲೂ ಮನೆಯಲ್ಲೇ ಪುಣ್ಯಕೋಟಿ ಎಂಬ ಹೆಸರಿನಲ್ಲಿ ಅನಧಿಕೃತವಾಗಿ ಫ್ಯಾಕ್ಟರಿ ಮಾಡಿಕೊಂಡು ಕೆಲಸ ಮಾಡಲಾಗುತ್ತಿತ್ತು ಎನ್ನಲಾಗಿದೆ. ಮಸಾಲೆ ಮಜ್ಜಿಗೆ, ಪೇಡ, ಜಾಮೂನ್, ಹಾಲು ಶುದ್ಧೀಕರಣ ಘಟಕ, ಹಾಲು ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ವಿಡಿಯೋ ಮಾಡಲು ತಂದೆ– ಮಗ ಆಕ್ಷೇಪ! ಬಾಯ್ಲರ್ ಸ್ಫೋಟದ…
‘ಗೌರಿ’ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಅವರು ಸುದೀಪ್ ಅವರನ್ನು ಸಂದರ್ಶನ ಮಾಡಿದ್ದಾರೆ. ಇದರಲ್ಲಿ ಹಲವು ರೀತಿಯ ಪ್ರಶ್ನೆಗಳನ್ನು ಅವರು ಸುದೀಪ್ಗೆ ಕೇಳಿದ್ದಾರೆ. ‘ನನ್ನ ನೆಚ್ಚಿನ ಕಲಾವಿದರು ನೀವು, ನಿಮ್ಮ ನೆಚ್ಚಿನ ಕಲಾವಿದರು ಯಾರು?’ ಎಂದು ಕೇಳಿದರು ಸಮರ್ಜಿತ್ ಲಂಕೇಶ್. ಇದಕ್ಕೆ ಸುದೀಪ್ ಅವರು ಉತ್ತರ ನೀಡಿದ್ದಾರೆ. ‘ನನ್ನ ಫೇವರಿಟ್ ಹೀರೋ ವಿಷ್ಣು ಸರ್. ಇದನ್ನು ಸಾಕಷ್ಟು ಬಾರಿ ಹೇಳಿದ್ದೇನೆ. ಜೀವನದಲ್ಲಿ ನಾನು ಇಬ್ಬರಿಗೆ ಮಾತ್ರ ಬಾಸ್ ಎಂದು ಕರೆದಿದ್ದು. ನಮ್ಮ ತಂದೆಗೆ, ಅದನ್ನು ಇವತ್ತಿಗೂ ಕರೆಯುತ್ತೇನೆ. ಹಾಗೂ ವಿಷ್ಣು ಸರ್ ಗೆ. ವಿಷ್ಣು ಅವರ ಪರ್ಸನಾಲಿಟಿ ಸಖತ್ ಇಷ್ಟ. ಅವರ ಗತ್ತು, ಇರೋ ರೀತಿ ಸಖತ್ ಇಷ್ಟ. ಅವರು ಯಾವಾಗಲೂ ನನ್ನ ಫೇವರಿಟ್’ ಎಂದಿದ್ದಾರೆ ಸುದೀಪ್. ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು…
ಆಸ್ಪತ್ರೆಯೊಂದರಲ್ಲಿ ಕಾನೂನು ಬಾಹೀರವಾಗಿ ಚಿತ್ರೀಕರಣ ನಡೆಸಿದ ಸಂಬಂಧ ನಟ ಫಹಾದ್ ಫಾಜಿಲ್ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ. ಪುಷ್ಪಾ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಫಾಹದ್ ಫಾಜಿಲ್ ಒಳ್ಳೆಯ ಕ್ರೇಜ್ ಹುಟ್ಟಿಸಿದ್ದರು. ಈ ನಡುವೆ ಸಿನಿಮಾವೊಂದರ ಶೂಟಿಂಗ್ ಕಾರಣದಿಂದಾಗಿ ನಟನ ವಿರುದ್ಧ ಕೇರಳ ಮಾನವ ಹಕ್ಕುಗಳ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಜತೆಗ ಅವರ ವಿರುದ್ಧ ಸುಮೋಟೋ ಪ್ರಕರಣವೂ ದಾಖಲಾಗಿದೆ. ಮಲಯಾಳಂ ಚಿತ್ರರಂಗದಲ್ಲಿ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳುವ ಫಹಾದ್ ಫಾಜಿಲ್ ಮಲಯಾಳಂ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಗುರುವಾರ ರಾತ್ರಿ ಎರ್ನಾಕುಲಂ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಇದರಿಂದ ಅಲ್ಲಿನ ರೋಗಿಗಳು ಪರದಾಡಿದ್ದಾರೆ ಎಂದು ವರದಿಯಾಗಿದೆ. ತುರ್ತು ಚಿಕಿತ್ಸಾ ಕೊಠಡಿಯಲ್ಲಿ ಸಾಮಾನ್ಯ ರೋಗಿಗಳನ್ನು ಸಹ ಅನುಮತಿಸಲಾಗುವುದಿಲ್ಲ. ಇಂತಹ ಕಡೆ ಶೂಟಿಂಗ್ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇದು ಉನ್ನತ ಅಧಿಕಾರಿಗಳ ಗಮನಕ್ಕೆ ಹೋಗಿ, ಈ ಬಗ್ಗೆ ಎರ್ನಾಕುಲಂ ಜಿಲ್ಲಾ ವೈದ್ಯಾಧಿಕಾರಿ ಬೀನಾ ಕುಮಾರಿ ಘಟನೆಯ ಸಂಪೂರ್ಣ ವರದಿ ನೀಡುವಂತೆ ಆದೇಶಿಸಿದ್ದಾರೆ. ಆದರೆ ಈ ಆರೋಪಗಳನ್ನು…