Subscribe to Updates
Get the latest creative news from FooBar about art, design and business.
- ಕುಣಿಗಲ್: ಗ್ರಾಮ ದೇವತೆ ಜಾತ್ರಾ ಮಹೋತ್ಸವದ ಜಮಾ–ಖರ್ಚು ವಿವರ ಘೋಷಣೆ
- ಬೀದರ್ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಭಾಲ್ಕಿ ವಕೀಲರ ಸಂಘ ಆಗ್ರಹ
- ಬಡವರಿಗೆ ಮಾಡುವ ಸಹಾಯ ದೇವರಿಗೆ ಸಾಲ ಕೊಟ್ಟಂತೆ: ಇಮ್ಯಾನುವೆಲ್ ದರ್ಬಾರೆ
- ನೀಟ್ ಹಗರಣ ವಿರುದ್ಧದ ಒಂದು ತಿಂಗಳ ಐತಿಹಾಸಿಕ ಹೋರಾಟಕ್ಕೆ ಸಂದ ಜಯ: ತುಮಕೂರಿನಲ್ಲಿ AIDSO, AIMSS ವಿಜಯೋತ್ಸವ!
- ಮಾಶಾಸನ ಸ್ಥಗಿತ ಖಂಡನೆ: ಸರ್ಕಾರ ದಿವಾಳಿ ಹಂತ ತಲುಪಿದೆ: ಕೆ.ಎಂ. ತಿಮ್ಮರಾಯಪ್ಪ ಆರೋಪ
- ಮಕ್ಕಳು ದುಶ್ಚಟಗಳಿಂದ ದೂರವಿರಿ: ಅಬಕಾರಿ ಉಪ ಅಧೀಕ್ಷಕ ದೀಪಕ್ ಎಸ್. ಕರೆ
- ಸರಗೂರು: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರ್ಥಪೂರ್ಣ ವಿಶ್ವ ಜನಸಂಖ್ಯಾ ದಿನಾಚರಣೆ
- ಸರಗೂರು: ದಲಿತ ಸಂಘರ್ಷ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ; ಸಂಘಟನೆ ಬಲವರ್ಧನೆಗೆ ಕರೆ
Author: admin
ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಾಸ್ಕೋ ತಲುಪಿದ್ದು, ರಷ್ಯಾ ಮತ್ತು ನಂತರ ಆಸ್ಟ್ರಿಯಾದ ಎರಡು ದಿನಗಳ ರಾಜ್ಯ ಪ್ರವಾಸವನ್ನು ಪ್ರಾರಂಭಿಸಿದ್ದಾರೆ. ಮಾಸ್ಕೋದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ರಷ್ಯಾದವರು ಭಾರತೀಯ ನೃತ್ಯಗಳನ್ನು ಪ್ರದರ್ಶಿಸಿ ಮೋದಿಯವರಿಗೆ ಸ್ವಾಗತ ಕೋರಿದ್ದಾರೆ. ಮೋದಿಯನ್ನು ರಷ್ಯಾದ 1ನೇ ಉಪಪ್ರಧಾನಿ (1ನೇ ಡಿಪಿಎಂ) ಡೆನಿಸ್ ಮಂಟುರೋವ್ ಬರಮಾಡಿಕೊಂಡರು. 1ನೇ ಡಿಪಿಎಂ ಮಂಟುರೊವ್ ಕೂಡ ಇದೇ ಕಾರಿನಲ್ಲಿ ಪ್ರಧಾನಿ ಮೋದಿಯವರೊಂದಿಗೆ ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ತೆರಳಲಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ನಾನು ರಷ್ಯಾ ಮತ್ತು ಆಸ್ಟ್ರಿಯಾದಲ್ಲಿ ಇರುತ್ತೇನೆ. ಭಾರತದ ಸ್ನೇಹಿತರಾದ ಈ ರಾಷ್ಟ್ರಗಳೊಂದಿಗೆ ಬಾಂಧವ್ಯವನ್ನು ಗಾಢಗೊಳಿಸಲು ಈ ಭೇಟಿಗಳು ಅದ್ಭುತ ಅವಕಾಶವಾಗಿದೆ. ಈ ದೇಶಗಳಲ್ಲಿ ವಾಸಿಸುವ ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಲು ನಾನು ಎದುರು ನೋಡುತ್ತಿದ್ದೇನೆ ”ಎಂದು ಪ್ರಧಾನಿಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಐದು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಮೊದಲ ರಷ್ಯಾ ಭೇಟಿ ಇದಾಗಿದೆ. ಅವರು 2019 ರಲ್ಲಿ ರಷ್ಯಾದ ನಗರವಾದ ವ್ಲಾಡಿವೋಸ್ಟಾಕ್‌ನಲ್ಲಿ ಆರ್ಥಿಕ ಶೃಂಗಸಭೆಯಲ್ಲಿ…
ಶಿಗ್ಗಾವಿ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ, ಮುಂಬರುವ ಶಿಗ್ಗಾವಿ ಮತಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿಯವರು ಸ್ಪರ್ಧಿಸಬೇಕೆಂದು ನಿರ್ಣಯಿಸಲಾಗಿದೆ. ಶಿಗ್ಗಾವಿ ಪಟ್ಟಣದಲ್ಲಿನ ಪಕ್ಷದ ಕಛೇರಿಯಲ್ಲಿ ನಡೆದ ಈ ಸಭೆಯಲ್ಲಿ, ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡ ಕಾರ್ಯನಿರ್ವಾಹಕ ಸಮಿತಿಯು ಈ ವಿಚಾರವಾಗಿ ವಿಸ್ತೃತವಾಗಿ ಚರ್ಚೆ ನಡೆಸಿತು. ನಂತರ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಲಿಂಗೇಗೌಡ ಎಸ್. ಎಚ್. ಅವರು ಈ ವಿಚಾರವಾಗಿ ನಿರ್ಣಯ ಮಂಡಿಸಿದರು. ಈ ನಿರ್ಣಯವನ್ನು ಪಕ್ಷದ ರಾಜ್ಯ ಕಾರ್ಯದರ್ಶಿ ಸೋಮಸುಂದರ್ ಎಸ್. ಕೆ. ಮತ್ತು ಹಾವೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಕಾಡಶೆಟ್ಟಿಹಳ್ಳಿ ಅವರುಗಳು ಅನುಮೋದಿಸಿದರು. ಈ ನಿರ್ಣಯವನ್ನು ಸಭೆಯು ಒಕ್ಕೊರಲಿನಿಂದ ಅಂಗೀಕರಿಸಿತು. ಹಾಗೆಯೆ, ಕೆ.ಆರ್.ಎಸ್. ಪಕ್ಷದ ಸಂಸ್ಥಾಪನಾ ದಿನದಂದು ನಡೆಸುವ ವಾರ್ಷಿಕ ಅಧಿವೇಶನವನ್ನು ಈ ಬಾರಿ ಶಿಗ್ಗಾವಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಈ ಅಧಿವೇಶನವು ಆಗಸ್ಟ್ 10, 2024 ರಂದು ನಡೆಯಲಿದೆ.…
ಭೂತಾರಾಧನೆ ತುಳುನಾಡಿನ ಆರಾಧನೆಗಳಲ್ಲಿ ಪ್ರಮುಖವಾದದ್ದು, ಇದನ್ನು ‘ದೈವಾರಾಧನೆ’ ಎಂದೂ ಕರೆಯುತ್ತಾರೆ ಎಂದೂ ಕರೆಯುತ್ತಾರೆ. ದಕ್ಷಿಣ ಕನ್ನಡ, ಉಡುಪಿ, ಕೇರಳ ರಾಜ್ಯದ ಉತ್ತರ ಜಿಲ್ಲೆಗಳಲ್ಲಿ ವಿಶೇಷವಾಗಿ ಕಂಡುಬರುವ ಒಂದು ರೀತಿಯ ಆರಾಧಾನೆ. ತುಳುನಾಡ ಸಾಂಸ್ಕೃತಿಕ ಪದಕೋಶದಲ್ಲಿ ಸಾಮಾಜಿಕ ಬದುಕಿನಲ್ಲಿ ಮುಖ್ಯವಾಗಿ ತಿಳಿಯುವ ಪದ ಭೂತ. ಭೂತ+ಆರಾಧನೆ=ಭೂತಾರಾಧನೆ. ಭೂತವನ್ನು ನಂಬಿದವರಿಗೆ ಜಯ ಕೊಡುತ್ತದೆ, ನಂಬದವನಿಗೆ ಅಪಜಯವಾಗುತ್ತದೆ(ಭೂತೊ ನಂಬಿನಕ್ಲೆಗ್ ಇಂಬು ಕೊರ್ಪುಂಡು ನಂಬಂದ್‍ನಕ್ಲೆಗ್ ಅಂಬು ಕೊರ್ಪುಂಡು) ಎಂಬ ನಂಬಿಕೆಯಿದೆ. ತುಳುವಿನ ಅಂಬು’ ಎಂಬ ಪದಕ್ಕೆ ಶಿಕ್ಷೆ ಎಂಬ ಅರ್ಥವಿರುವುದರಿಂದ ಶಿಕ್ಷೆ ಆಗದೆ ರಕ್ಷೆಗಾಗಿ ಭೂತವನ್ನು ನಂಬಿದರೆ ತಮಗೆ ಏನಾದರೂ ಒಳಿತಾಗಬಹುದೆಂದು ತುಳುನಾಡಿನ ಜನರು ನಂಬಿದ್ದಾರೆ. ಭೂತಾರಾಧನೆ ಎಂಬ ಪದ ಆರಾಧನಾ ಪರಂಪರೆಯಿಂದ ಹುಟ್ಟಿದ ಪದವಲ್ಲ. ಅದು ತೌಳವ ಸಂಸ್ಕೃತಿಯನ್ನು ಒಟ್ಟಾಗಿ ಸೂಚಿಸುವ ಪದ. ಭೂತನೆಲೆಯ ಸ್ಥಳವನ್ನು ಭೂತಸ್ಥಾನ, ಭೂತಸಾನ ಎಂದು ಕರೆಯುತ್ತಾರೆ. ಭೂತಸ್ಥಾನಕ್ಕೆ ಅಲೆಡೆ, ಗರಡಿ, ಕಟ್ಟೆ, ತಾನೊ, ಚಾವಡಿ ಎಂಬ ಹೆಸರುಗಳೂ ಇವೆ. ಕೋಲ ಎಂದರೆ ಅಲಂಕಾರ ಎಂದರ್ಥ. ಭೂತ ವೇಷಧಾರಿಗೆ ತೊಡಿಸುವ ವಿಶೇಷ ವೇಷ ಪರಿಕರಗಳ ಬೆಡಗಿನಿಂದಾಗಿ ಸಂಬಂಧಪಟ್ಟ ಉತ್ಸವಕ್ಕೂ ಅದೇ ಹೆಸರು…
ನಟ ದರ್ಶನ್ ಕನ್ನಡದ ಸ್ಟಾರ್ ನಟ. ಕೋಟಿ ಕೋಟಿ ಸಂಭಾವನೆ ಪಡೆಯುವ ಈ ನಟನ ಸಹೋದರ ದಿನಕರ್ ತೂಗುದೀಪ ಇನ್ನೂ ಬಾಡಿಗೆ ಮನೆಯಲ್ಲಿಯೇ ವಾಸವಿದ್ದಾರೆ. ಈ ನಡುವೆ ದರ್ಶನ್ ಗೆಳತಿ ಪವಿತ್ರಾ ಗೌಡ ಮೂರಂತಸ್ತಿನ ಸ್ವಂತ ಐಶಾರಾಮಿ ಬಂಗಲೆಯಲ್ಲಿದ್ದಾರೆ. ಈ ಎರಡು ವಿಚಾರ ನಟ ದರ್ಶನ್ ಜೈಲಿಗೆ ಹೋದ ಬಳಿಕ ಚರ್ಚೆಯ ಮುನ್ನೆಲೆಗೆ ಬಂದಿವೆ. ಸಹೋದರನಿಗೆ ಒಂದು ಮನೆ ಕಟ್ಟಿಸಿಕೊಡದ ದರ್ಶನ್, ಪವಿತ್ರಾ ಗೌಡಗೆ ಮೂರಂತಸ್ತಿನ ಬಂಗಲೆ ಕಟ್ಟಿಸಿಕೊಟ್ಟಿದ್ದಾರೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ. ನಟ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಅವರು ಸಾರಥಿ ಚಿತ್ರದ ಮೂಲಕ ಕನ್ನಡ ಸಿನಿಪ್ರೇಮಿಗಳ ಮನಸ್ಸಿಗೆ ಬಹಳಷ್ಟು ಹತ್ತಿರವಾದರು. ನಿರ್ದೇಶಕ ದಿನಕರ್ ಇನ್ನೂ ಬಾಡಿಗೆ ಮನೆಯಲ್ಲಿ ಇದ್ದಾರೆ. ಕನ್ನಡದ ಸೂಪರ್ ಸ್ಟಾರ್ ದರ್ಶನ್ ತಮ್ಮನಾಗಿದ್ದರೂ ಯಾಕೆ ಅವರಿನ್ನೂ ಹಾಗೆ ಇದ್ದಾರೆ ಎಂಬುದಕ್ಕೆ ಸ್ವತಃ ದಿನಕರ್ ಅವರು ಉತ್ತರ ಕೊಟ್ಟಿದ್ದಾರೆ. ದಿನಕರ್ ಅಮ್ಮ ಮೀನಾ ಅವರು ನೀನು ನಿನ್ನ ಸ್ವಂತ ದುಡಿಮೆಯ ಹಣದಿಂದ ಏನಾದರೂ ಮಾಡು. ಮನೆ ಕಟ್ಟುವುದಿರಲಿ,…
ಪಾವಗಡ: ಪ್ರಸ್ತುತ ದಿನಗಳಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮುಂದಿನ ಪೀಳಿಗೆಯ ಬಗ್ಗೆ ಯೋಚಿಸದೆ ಮರಗಳನ್ನು ಕಡಿಯುತ್ತಿದ್ದು, ಇದರಿಂದ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪಾವಗಡ ತಾಲ್ಲೂಕಿನ ಅರಸೀಕೆರೆ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ರೇಣುಕಾರಾಜ್ ಹೇಳಿದರು. ಪರಿಸರ ಯುವಮಿತ್ರ ಬಳಗದ ಹೆಸರಿನಲ್ಲಿ ಐತಿಹಾಸಿಕ ಸ್ಥಳವಾದ ನಿಡಿಗಲ್ಲು ದುರ್ಗದಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಬೀಜ ಉತ್ಪಾದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಸಹಕರಿಸಿ, ಅರಣ್ಯ ಬೆಳೆಸಲು ಶ್ರಮಿಸಬೇಕು ಎಂದು ಕೋರಿದರು. ಶಾಲಾ ವಿದ್ಯಾರ್ಥಿಗಳು, ಯುವಮಿತ್ರ ಬಳಗದ ಸದಸ್ಯರಾದ ವಿನಯ್ಕುಮಾರ್, ಭೂತೇಗೌಡ, ವಿದ್ಯಾಶಂಕರಗೌಡ, ತ್ರಿಶೂಲ್ ಗೌಡ, ಮಹೇಶ್, ಶ್ರೀನಿವಾಸುಲು, ಗುಜ್ಜರಿ, ದಿನೇಶ್, ಆರ್.ಟಿ.ಗೌಡ, ರೂಪಿತ್ ಮತ್ತು ಹೇಮಂತ್ ಅವರನ್ನು ಶಾಲಾ ಸಿಬ್ಬಂದಿ ಅಭಿನಂದಿಸಿದರು. ವರದಿ : ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್…
ತಿಪಟೂರು: ತಾಲೂಕಿನ ಹೆಡಗರಹಳ್ಳಿ ಗ್ರಾಮದ ಮಹಾನವಮಿ ಮಂಟಪದಲ್ಲಿ ನವಜಾತ ಶಿಶು ಪತ್ತೆಯಾದ ಘಟನೆ ನಡೆದಿದೆ. ಗ್ರಾಮದ ನಿವಾಸಿ ಆಶಾ ಕಾರ್ಯಕರ್ತೆ ಕಲಾವತಿ ವಾಕಿಂಗ್ ಮಾಡುವ ಸಂದರ್ಭದಲ್ಲಿ ಅಳುವಿನ ಶಬ್ದ ಕೇಳಿದ್ದು, ಸಮೀಪ ಹೋಗಿ ನೋಡಿದ ವೇಳೆ ಮಂಟಪದ ಬಳಿ ಸುಮಾರು ಎರಡರಿಂದ ಮೂರು ತಿಂಗಳ ನವಜಾತ ಶಿಶು ಕಂಡು ಬಂದಿದೆ. ಕಲಾವತಿ ಅವರು ತಕ್ಷಣವೇ ನೊಣವಿನಕೆರೆ ಪೊಲೀಸ್ ಠಾಣೆಗೆ ಕರೆ ಮಾಡಿ 108 ಆಂಬುಲೆನ್ಸ್ ಕರೆ ಮಾಡಿ ನಂತರ ಸಿಬ್ಬಂದಿಗೆ ತಿಳಿಸಿದ್ದಾರೆ. ಬಳಿಕ ನೊಣವಿನಕೆರೆ ಪಿಎಸ್ ಐ ಅಭಿಷೇಕ್ ಅವರ ಸಹಕಾರದೊಂದಿಗೆ 108 ಆಂಬುಲೆನ್ಸ್ ಸಿಬ್ಬಂದಿಗಳಾದ ಚಾಲಕ ಚಿದಾನಂದ ಹಾಗೂ ಸಹಾಯಕಿ ಧನಲಕ್ಷ್ಮಿ ಸ್ಥಳಕ್ಕೆ ಆಗಮಿಸಿ ನವಜಾತ ಶಿಶುವನ್ನು ಆಂಬುಲೆನ್ಸ್ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ತಿಪಟೂರುಗೆ ದಾಖಲು ಮಾಡಿದ್ದಾರೆ. ಮಗು ಆರೋಗ್ಯವಾಗಿದ್ದು ಸುಮಾರು 4.5 ಕೆ.ಜಿ. ತೂಕವಿದೆ ಸಾರ್ವಜನಿಕ ಆಸ್ಪತ್ರೆ ಮಕ್ಕಳ ತಜ್ಞೆ ಶೀರಿಷ ಮಗುವಿನ ಆರೋಗ್ಯ ತಪಾಸಣೆಯನ್ನು ಮಾದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…
ತುಮಕೂರು: ಮಾಣಿಕ್ಯ ಮ್ಯಾನ್ ಪವರ್ ಅಕಾಡೆಮಿ ವತಿಯಿಂದ ತುಮಕೂರಿನ ಹೆಸರಾಂತ ಕಂಪೆನಿಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡಲು ಯುವಕರು ಮತ್ತು ಯುವತಿಯರು ಬೇಕಾಗಿದ್ದು, ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಉದ್ಯೋಗದ ವಿವರ ಈ ಕೆಳಗಿನಂತಿದೆ: * ಲೋಡಿಂಗ್ ಮತ್ತು ಆನ್ಲೋಡಿಂಗ್ ಕೆಲಸ ಮಾಡುವವರು ಬೇಕಾಗಿದ್ದಾರೆ * ವಿದ್ಯಾರ್ಹತೆ : SSLC, PUC, ITI, Bsc. ( ಪಾಸ್/ ಫೇಲ್ ) * ನೇರ ಸಂದರ್ಶನ ಇರುತ್ತದೆ. * ESI & PF ಸೌಲಭ್ಯ ಇರುತ್ತದೆ. ಉದ್ಯೋಗಾಸಕ್ತರು ಹೆಚ್ಚಿನ ಮಾಹಿತಿಗಳಿಗಾಗಿ ಈ ಕೂಡಲೇ ಫೋನ್ +91 97431 03968(ನವೀನ್ ಜಿ.ಎಲ್.) ಅವರನ್ನು ಸಂಪರ್ಕಿಸಬಹುದಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಬೆಂಗಳೂರು: ಪ್ರೆಸ್ ಕ್ಲಬ್ ನ 2024-25ನೆ ಸಾಲಿನ ಕಾರ್ಯಕಾರಿ ಸಮಿತಿಗೆ ರವಿವಾರ ನಡೆದ ಚುನಾವಣೆಯಲ್ಲಿ ಆರ್.ಶ್ರೀಧರ್ ಅವರು ಎರಡನೆ ಬಾರಿಗೆ ಅಧ್ಯಕ್ಷರಾಗಿದ್ದು, ನೂತನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶಿವಕುಮಾರ್ ಬೆಳ್ಳಿತಟ್ಟೆ ಅವರು ಆಯ್ಕೆಯಾಗಿದ್ದಾರೆ. ಒಟ್ಟು 1,040 ಮತಗಳ ಪೈಕಿ 767 ಮತಗಳು ಚಲಾವಣೆಯಾಗಿದ್ದು, ಅಧ್ಯಕ್ಷ ಶ್ರೀಧರ್ ಆರ್.-404 ಮತಗಳು ಪಡೆದರು. ಉಪಾಧ್ಯಕ್ಷ ವಿ.ಎನ್.ಮೋಹನ್ ಕುಮಾರ್-417, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ-336, ಖಜಾಂಚಿ ಜಿ.ಗಣೇಶ್-556, ಕಾರ್ಯದರ್ಶಿ-ಜಿ.ವೈ.ಮಂಜುನಾಥ್-288, ಜಂಟಿ ಕಾರ್ಯದರ್ಶಿ ಬಿ.ಎನ್.ಧರಣೀಶ್ 195, ಮಹಿಳಾ ಸ್ಥಾನ- ಮಿನಿ ತೇಜಸ್ವಿ ಮತಗಳು-491 ಮತಗಳನ್ನು ಪಡೆದರು. ಅದೇ ರೀತಿ, ಸಮಿತಿ ಸದಸ್ಯರಾಗಿ ಶಿವಣ್ಣ-234, ಶರಣಬಸಪ್ಪ-258, ಯಾಸೀರ್ ಮುಸ್ತಾಕ್-259, ಎಂ.ಅಲೀಂ-272, ರೋಹಿಣಿ ಅಡಿಗ-306, ಮಂಜುನಾಥ್-281 ಮತಗಳನ್ನು ಪಡೆದರು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಮಲೆನಾಡು ಎಂದರೆ ಕಣ್ಮುಂದೆ ಬರುವುದು ಸೌಂದರ್ಯ, ಬೆಟ್ಟ-ಗುಡ್ಡಗಳ ಸಾಲು. ಬಾನಿಗೆ ಮುತ್ತಿಕ್ಕುವ ಮಂಜಿನ ರಾಶಿ. ನಿರಂತರ ಮಳೆಗೆ ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆ ಚಾರ್ಮಾಡಿ ಘಾಟಿಯ ಸೊಬಗನ್ನು ಇಮ್ಮಡಿಗೊಳಿಸಿದೆ. ಇಳೆಗೆ ಹಸಿರ ಹೊದಿಕೆ, ಮುಗಿಲೆತ್ತರದ ಬೆಟ್ಟಗುಡ್ಡಗಳು, ರಸ್ತೆಯ ಉದ್ದಕ್ಕೂ ದಟ್ಟ ಮಂಜಿನ ಕಣ್ಣಾಮುಚ್ಚಾಲೆ ಆಟ. ಹಸಿರ ವನಸಿರಿಯ ನಡುವೆ ಸಾಗುವ ಬೆಳ್ಮುಗಿಲ ಸಾಲು. ಆಗೊಮ್ಮೆ, ಈಗೊಮ್ಮೆ ಇಣುಕುವ ಸೂರ್ಯ ರಶ್ಮಿಗೆ ನಾಚಿ ನೀರಾಗುವ ಮಂಜು. ಘಾಟಿಯಲ್ಲಿ ಜಲಧಾರೆಯ ಜಲಪಾತದ ಸೊಬಗು ಇವುಗಳು ಮಲೆನಾಡಿನಲ್ಲಿ ಈಗ ದೃಶ್ಯ ಕಾವ್ಯವೇ ಮೇಳೈಸಿರುವುದು ಕಂಡು ಬರುತ್ತದೆ. ಪ್ರಕೃತಿಯ ತವರು ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯಲ್ಲಂತೂ ನಿಸರ್ಗದ ಸೊಬಗು ಅನಾವರಣ ಗೊಂಡಿದೆ. ಬೆಟ್ಟದ ಮೇಲಿಂದ ಝುಳುಝಳು ನೀನಾದದೊಂದಿಗೆ ಹರಿದು ಬರುತ್ತಿರುವ ಜಲಪಾತಗಳು ಹೊಸ ಲೋಕವನ್ನೇ ಸೃಷ್ಠಿಸಿವೆ. ಇಲ್ಲಿ ಉಗಮಗೊಂಡಿರುವ ಜಲಪಾತಗಳಿಗೆ ಜೀವಕಳೆ ಬಂದಿದ್ದು,ಝುಳು ಝುಳು ನೀನಾದದೊಂದಿಗೆ ಹಾಲ್ನೊರೆಯಂತೆ ಹರಿದು ಬರುತ್ತಿರುವ ಜಲಪಾತವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಇಲ್ಲಿ ಸೃಷ್ಟಿಯಾಗಿರುವ ದೃಶ್ಯಕಾವ್ಯವನ್ನು ವರ್ಣಿಸಲಸದಳ ಹಾಗಾಗಿ ಈ ದೃಶ್ಯವನ್ನು…
ನಿತ್ಯಾನಂದ ಸೃಷ್ಟಿರುವ ಕೈಲಾಸ ದೇಶ ಎಲ್ಲಿದೆ ಅನ್ನೋ ಕುತೂಹಲಕ್ಕೆ ಉತ್ತರ ಸಿಗುವ ದಿನ ದೂರವಿಲ್ಲ. ಈ ಬಾರಿ ಗುರು ಪೂರ್ಣಿಮೆ ದಿನ ನಿತ್ಯಾನಂದ ತಮ್ಮ ಕೈಲಾಸ ದೇಶದ ವಿಳಾಸ ಬಹಿರಂಗಪಡಿಸಲಿದ್ದಾರೆ. ಅತ್ಯಾಚಾರ ಪ್ರಕರಣ ಸಂಬಂಧ 2019ರಲ್ಲಿ ನಿತ್ಯಾನಂದ ಬಿಡದಿ ಆಶ್ರಮದಿಂದ ಪರಾರಿಯಾಗಿದ್ದ.ನಂತರ ಕೈಲಾಸ ಸೃಷ್ಟಿಸಿರುವ ನಿತ್ಯಾನಂದನ ಕೈಲಾಸ ದೇಶ ಎಲ್ಲಿದೆ ಅನ್ನೋ ಪ್ರಶ್ನೆಗಳಿಗೆ ಮಾತ್ರ ಉತ್ತರವೇ ಇರಲಿಲ್ಲ. ನಿತ್ಯಾನಂದ ಹೇಳುವ ಪ್ರಕಾರ ಕೈಲಾಸ ದೇಶ ನಿಜವಾಗಿಯೂ ಅಸ್ತಿತ್ವದಲ್ಲಿ ಇದೆಯಾ ಅನ್ನೋ ಅನುಮಾನಗಳು ಇವೆ. ಈ ಅನುಮಾನ, ಕುತೂಹಲದ ನಡುವೆ ಇದೀಗ ಸ್ವತಃ ನಿತ್ಯಾನಂದ ಕೈಲಾಸ ದೇಶದ ವಿಳಾಸ ಬಹಿರಂಗ ಮಾಡುವುದಾಗಿ ಹೇಳಿದ್ದಾನೆ. ಗರು ಪೂರ್ಣಿಮೆ ದಿನ(ಜುಲೈ 21) ಸೌರ್ವಭೌಮ ದೇಶವಾದ ಕೈಲಾಸದ ವಿಳಾಸ ಬಹಿರಂಗಪಡಿಸುತ್ತಿದೆ. ಕೈಲಾಸ ದೇಶ ನಿಜಕ್ಕೂ ಇದೆಯಾ? ಅನ್ನೋ ಪ್ರಶ್ನೆ, ವದಂತಿಗಳನ್ನು ನೀವು ಕೇಳಿರುತ್ತೀರಿ. ಈ ಗುರು ಪೂರ್ಣಿಮೆ ದಿನ ಕೈಲಾಸ ಜಗತ್ತಿಗೆ ತನ್ನ ಬಾಗಿಲು ತೆರೆಯುತ್ತಿದೆ. ಕೈಲಾಸ ಹಿಂದುಗಳ ದೇಶ. ಅಪ್ಪಟ ಹಿಂದುಗಳು ಕೈಲಾಸದ ದೇಶದ ಪ್ರಜೆಯಾಗಲು…