Subscribe to Updates
Get the latest creative news from FooBar about art, design and business.
- ನೀಟ್ ಹಗರಣ ವಿರುದ್ಧದ ಒಂದು ತಿಂಗಳ ಐತಿಹಾಸಿಕ ಹೋರಾಟಕ್ಕೆ ಸಂದ ಜಯ: ತುಮಕೂರಿನಲ್ಲಿ AIDSO, AIMSS ವಿಜಯೋತ್ಸವ!
- ಮಾಶಾಸನ ಸ್ಥಗಿತ ಖಂಡನೆ: ಸರ್ಕಾರ ದಿವಾಳಿ ಹಂತ ತಲುಪಿದೆ: ಕೆ.ಎಂ. ತಿಮ್ಮರಾಯಪ್ಪ ಆರೋಪ
- ಮಕ್ಕಳು ದುಶ್ಚಟಗಳಿಂದ ದೂರವಿರಿ: ಅಬಕಾರಿ ಉಪ ಅಧೀಕ್ಷಕ ದೀಪಕ್ ಎಸ್. ಕರೆ
- ಸರಗೂರು: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರ್ಥಪೂರ್ಣ ವಿಶ್ವ ಜನಸಂಖ್ಯಾ ದಿನಾಚರಣೆ
- ಸರಗೂರು: ದಲಿತ ಸಂಘರ್ಷ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ; ಸಂಘಟನೆ ಬಲವರ್ಧನೆಗೆ ಕರೆ
- ಹಾದನೂರು ಸರ್ಕಾರಿ ಶಾಲೆಗೆ ‘ಗಿಫ್ಟ್ ಎ ಡ್ರೀಮ್ಸ್ ಫೌಂಡೇಷನ್’ ಆಸರೆ: ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ, ಸಮವಸ್ತ್ರ ವಿತರಣೆ
- ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಪತ್ರಿಕಾ ದಿನಾಚರಣೆಗೆ ಅಧಿಕೃತ ಆಹ್ವಾನ
- ಸರಗೂರು: ರಸ್ತೆ ಅಭಿವೃದ್ಧಿಯಿಂದ ಗ್ರಾಮೀಣ ಭಾಗಕ್ಕೆ ಹೊಸ ಚೈತನ್ಯ — ಶಾಸಕರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ
Author: admin
ಇತ್ತೀಚಿನ ದಿನಗಳಲ್ಲಿ ಜಾಲತಾಣದಲ್ಲಿ ಯದ್ವಾತದ್ವಾ ವಿಡಿಯೋ ಹಂಚಿಕೊಳ್ಳುವವರನ್ನು ನೋಡಿದ್ದೇವೆ. ಕೆಲವರು ಸಭ್ಯರಂತೆ, ಇನ್ನೂ ಕೆಲವರು ಅಸಭ್ಯರಂತೆ ವರ್ತಿಸಿ ಜನರಿಂದ ವಿಪರೀತ ಟೀಕೆಗೆ ಒಳಗಾಗುತ್ತಿರುತ್ತಾರೆ. ಆದರೆ ಇಲ್ಲೊಂದು ಜೋಡಿ ಇದೆಲ್ಲ ದಾಖಲೆಯನ್ನು ಮುರಿದು ತಮ್ಮ ಮೊದಲ ರಾತ್ರಿಯ ವಿಡಿಯೋವನ್ನೇ ಅಪ್ ಲೋಡ್ ಮಾಡಿ ಬಿಟ್ಟಿದ್ದಾರೆ. ರಿಲ್ಸ್ ಆಸೆಗೆ ಬಲಿಯಾಗಿದ್ದ ಈ ಇಬ್ಬರು ಜೋಡಿಗಳು ಮದುವೆಯ ದಿನದ ರಾತ್ರಿಯಂದು ಫಸ್ಟ್ ನೈಟ್ ವಿಡಿಯೋ ಮಾಡಿ ರೀಲ್ಸ್ ನಲ್ಲಿ ಹಾಕಿದ್ದಾರೆ. ಇಬ್ಬರೂ ಇತ್ತೀಚೆಗೆ ಮದುವೆಯಾಗಿದ್ದಾರೆ. ಫಸ್ಟ್ ನೈಟ್ ಮುಗಿದ ಬಳಿಕ ಕೊಠಡಿಯ ವಿಡಿಯೋ ಮಾಡಿ ಅದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವರನು ವಧುವನ್ನು ಕೇಳುತ್ತಾನೆ, ಫಸ್ಟ್ ನೈಟ್ ಹೇಗಿತ್ತು..ಅಂತ?, ಇದಕ್ಕೆ ಮದುಮಗಳು ಚೆನ್ನಾಗಿತ್ತು ಅಂತ ಹೇಳುತ್ತಾಳೆ, ಬಳಿಕ ಇಬ್ಬರು ಕೂಡ ಹಾಸಿಗೆಯ ಮೇಲಿದ್ದ ಅಲಂಕಾರವನ್ನು ತೋರಿಸಲು ಮುಂದಾಗುತ್ತಾರೆ. ಈ ವಿಡಿಯೋವನ್ನು ಸುನಂದಾ ರಾಯ್ ಅನ್ನುವ ಮಹಿಳೆ ಹಂಚಿಕೊಂಡಿದ್ದಾರೆ. ಈ ಫಸ್ಟ್ ನೈಟ್ ವಿಡಿಯೋ ವೈರಲ್ ಆಗುತ್ತಿದ್ದು ಅನೇಕ ಜನರು ಛೀ..ಥೂ ಅಂತ ಉಗಿಯುತ್ತಿದ್ದಾರೆ. ನಿಮಗೆ…
ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರು ಬಾಡಿಗೆ ಮನೆಯನ್ನೇ ಆಶ್ರಯಿಸಿಕೊಂಡಿರುತ್ತಾರೆ. ಒಂದು ಮನೆ ಹುಡುಕಿ ವಾಸ ಮಾಡುತ್ತ ದಿನ ಕಳೆಯುತ್ತಿರುತ್ತಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ಮನೆ ಮಾಲೀಕರ ಕಿರಿ ಕಿರಿ ವಿಪರೀತವಾಗಿ ಹೋಗುತ್ತದೆ. ಹಾಗಿದ್ದರೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಬಾಡಿಗೆದಾರರ ಹಕ್ಕುಗಳು ಏನು? ಅನಗತ್ಯ ಮೇಂಟೆನೆನ್ಸ್ ಚಾರ್ಜ್ ಮತ್ತು ಸೊಸೈಟಿ ಫೀ ನಿಮಗೂ ವಿಧಿಸಿದ್ದರೆ, ನೀವು ಅದನ್ನು ಪ್ರತಿರೋಧಿಸಬೇಕು. ನಿಮ್ಮ ಒಟ್ಟು ಬಾಡಿಗೆಗೆ ಹೋಲಿಸಿದರೆ 50% ಕ್ಕಿಂತ ಹೆಚ್ಚು ಹಣವನ್ನು ಮೇಂಟೆನೆನ್ಸ್ ಗೆ ಅಂತ ವಿಧಿಸಿದ್ದರೆ ಅದು ಅಕ್ರಮ. ಬಾಡಿಗೆದಾರರಿಂದ ಮೇಂಟೆನೆನ್ಸ್ ಗೆ ಅಂತ ಪಡೆದ ಹಣದಿಂದ ಮಾಲೀಕರು ಲಾಭ ಮಾಡಿಕೊಳ್ಳುವಂತಿಲ್ಲ. ಯಾವುದೇ ಶುಲ್ಕವನ್ನು ಕಟ್ಟಿ ಎಂದು ಮಾಲೀಕರು ಬಾಡಿಗೆದಾರರಿಗೆ ಹೇಳುವಂತಿಲ್ಲ. ಮಾಲೀಕರು ಬಾಡಿಗೆ ಹೆಚ್ಚಳ ಮಾಡಬೇಕು ಎಂದಾದರೆ, ಬಾಡಿಗೆದಾರರಿಗೆ 3 ತಿಂಗಳು ಮೊದಲೇ ಸೂಚನೆ ನೀಡಿದ ನಂತರವೇ ಏರಿಕೆ ಮಾಡಬಹುದು. ಒಂದು ವರ್ಷಕ್ಕೂ ಹೆಚ್ಚು ಕಾಲದವರೆಗೆ ಬಾಡಿಗೆಗೆ ವಾಸಿಸುತ್ತೀರಿ ಎಂದಾದರೆ ಬಾಡಿಗೆ ಕರಾರನ್ನು ನೋಂದಣಿ ಮಾಡಿಕೊಳ್ಳಬೇಕು. ನೀವು…
ಡೆಂಗ್ಯೂ ಬಹಳ ಅಪಾಯಕಾರಿ ರೋಗವಾಗಿದೆ. ಡೆಂಗ್ಯೂ ಸಮಸ್ಯೆ ರಕ್ತಸ್ರಾವದ ಅಪಾಯವಿದೆ ಮತ್ತು ರೋಗಿಯು ಸಹ ಸಾಯಬಹುದು.ಡೆಂಗಿ ಜ್ವರದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕುರಿತು ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಡಂಗಿ ಜ್ವರ ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಡೆಂಗಿ ಜ್ವರವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಸೊಳ್ಳೆ ಕಚ್ಚಿದ 5-7 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ರೋಗ ಲಕ್ಷಣಗಳು: * ಇದ್ದಕ್ಕಿದಂತೆ ವಿಪರೀತ ಜ್ವರ, ಕಣ್ಣಿನ ಗುಡ್ಡೆಗಳ ಹಿಂಭಾಗದಲ್ಲಿ ನೋವು. *ತೀವ್ರ ತಲೆನೋವು, ಮೈಕೈ & ಕೀಲು ನೋವು, ವಾಕರಿಕೆ ವಾಂತಿ, ಇವುಗಳ ಜೊತೆಗೆ ತೀವ್ರ ಹೊಟ್ಟೆ ನೋವು * ಬಾಯಿ, ಮೂಗು & ವಸಡುಗಳಲ್ಲಿ ರಕ್ತಸ್ರಾವದ ಗುರುತುಗಳು * ಚರ್ಮದ ಮೇಲೆ ಅಲ್ಲಲ್ಲಿ ಕೆಂಪಾದ ಗಂಧೆಗಳು / ರಕ್ತಸ್ರಾವದ ಗುರುತುಗಳು ಕಪ್ಪು ಬಣ್ಣದ ಮಲ ವಿಸರ್ಜನೆ * ವಿಪರೀತ ಬಾಯಾರಿಕೆ * ತಣ್ಣನೆಯ ಬಿಳಿಚಿದ ಚರ್ಮ * ಜ್ಞಾನ…
ಒಂದು ತಿಂಗಳ ಮೊದಲು ಮಧ್ಯಪ್ರದೇಶದ ಗ್ವಾಲಿಯರ್ ಬಳಿಯ ತೇಕನಾಪುರದಲ್ಲಿರುವ ಬಿಎಸ್ಎಫ್ ಅಕಾಡೆಮಿಯಿಂದ ನಾಪತ್ತೆಯಾಗಿರುವ ಇಬ್ಬರು ಮಹಿಳಾ ಪೊಲೀಸರಿಗಾಗಿ ಹಲವು ಏಜೆನ್ಸಿಗಳು ಶೋಧ ಕಾರ್ಯಾಚರಣೆ ಮುಂದುವರಿಸಿವೆ. ಅಂತರರಾಷ್ಟ್ರೀಯ ಗಡಿಗಳಲ್ಲಿರುವ ಬಿಎಸ್ಎಫ್ ಘಟಕಗಳಿಗೆ ಕೂಡಾ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಆದರೂ ಪತ್ತೆಯಾಗಿಲ್ಲ. ಜಬಲ್ಪುರದ ಆಕಾಂಕ್ಷಾ ನಿಖಾರ್ ಮತ್ತು ಬಂಗಾಳದ ಮುರ್ಷಿದಾಬಾಧ್ನ ಶಹನಾ ಖಾಟೂನ್ ಎಂಬವರು 2021ರಿಂದ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಇವರು 2024ರ ಜೂನ್ 6ರಂದು ಕಣ್ಮರೆಯಾಗಿದ್ದರು ಎನ್ನಲಾಗಿದೆ. ಈ ಇಬ್ಬರ ಫೋನ್ ಗಳ ಜಾಡು ಹಿಡಿದಾಗ ಸಂಶಯಾಸ್ಪದ ಚಟುವಟಿಕೆಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದು, ತನಿಖೆ ನಡೆಯುತ್ತಿದೆ. ಇವರ ಫೋನ್ ಬಳಕೆ ಸ್ಥಳಗಳು ದೆಹಲಿ, ಹೌರಾ ಮತ್ತು ಬೆಹ್ರಾಂಪುರವನ್ನು ತೋರಿಸುತ್ತಿವೆ. ಫೋನ್ ದಾಖಲೆಗಳನ್ನು ಮತ್ತು ಹಲವು ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ವಿಶ್ಲೇಷಿಸುತ್ತಿದ್ದು, ವಿವಿಧ ರಾಜ್ಯಗಳಿಗೆ ಇವರು ಪ್ರಯಾಣ ಕೈಗೊಳ್ಳಲು ಏನು ಕಾರಣ ಎಂಬ ಅಂಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ತಿಪಟೂರು: ಜಗತ್ತಿನಾದ್ಯಂತ ರೋಟರಿಸಂಸ್ಥೆ ಹಲವಾರು ಸಮಾಜಸೇವೆ ಮಾಡುವ ಮೂಲಕ ಸಮಾಜದ ಏಳಿಗೆಗೆ ಕೈ ಜೋಡಿಸಿದೆ, ಸೇವಾ ಮನೋಭಾವ ಹೊಂದಿರುವವರಿಗೆ ಉತ್ತಮ ವೇದಿಕೆಯಾಗಿದೆ ಎಂದು ನೂತನ ರೋಟರಿ ಅಧ್ಯಕ್ಷ ಗವಿಯಣ್ಣ ತಿಳಿಸಿದರು. ನಗರದ ಶ್ರೀಗುರು ಕನ್ವೆಷನ್ ಹಾಲ್ ನಲ್ಲಿ ಆಯೋಜಿಸಿದ ರೋಟರಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾಪಾಲಕರಾದ ಎನ್.ಎಸ್.ಮಹದೇವ ಪ್ರಸಾದ್ ನೂತನ ಅಧ್ಯಕ್ಷರಿಗೆ ಕಾಲರ್ ಅರ್ಪಿಸುವ ಮೂಲಕ ಪದಗ್ರಹಣ ನೆರವೇರಿಸಿದರು ನೂತನ ಅಧ್ಯಕ್ಷರಾದ ಅಧಿಕಾರ ಸ್ವೀಕರಿಸಿದ ಗವಿಯಣ್ಣ ಮಾತನಾಡಿ, ರೋಟರಿ ಸಂಸ್ಥೆ ಜಗತ್ತಿನಾದ್ಯಂತ ಸಮಾಜ ಸೇವೆ ಮಾಡುವ ಮೂಲಕ ಸೇವಾಮನೋಭಾವ ಉಳ್ಳವರಿಗೆ ಉತ್ತಮ ವೇದಿಕೆ ನೀಡಿದೆ, ಅತ್ಯಂತ ಬಡ ಕುಟುಂಬದಲ್ಲಿ ಬೆಳೆದ ನಾನು ರೋಟರಿಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸವಮಾಡುವ ಅವಕಾಶ ಕಲ್ಪಸಿರುವುದಕ್ಕೆ ಹೆಮ್ಮೆಎನ್ನಿಸುತ್ತಿದೆ. ರೋಟರಿ ಸಂಸ್ಥೆ ಸಮಾಜಮುಖಿಯಾಗಿ ಮಾನವೀಯ ನೆಲಗಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ನಾವು ಸಂಪಾದಿಸಿದ ಗಳಿಕೆಯಲ್ಲಿ ಸಮಾಜಕ್ಕೆ ವಿನಿಯೋಗಿಸುವ ಮೂಲಕ ಸೇವೆ ಮಾಡುವ ಅವಕಾಶ ದೊರೆಯುತ್ತದೆ, ತಿಪಟೂರು ರೋಟರಿ ಸಂಸ್ಥೆ, ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಜೊತೆಗೆ, ಬಡವರ…
ತುಮಕೂರು: ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಚಿರತೆಯೊಂದು ಭೀತಿಯ ವಾತಾವರಣ ನಿರ್ಮಾಣ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ವಗರಗೆರೆ ಗ್ರಾಮದಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ ಮೇಕೆ, ರಾತ್ರಿ ಸಾಕು ನಾಯಿ ಹೊತ್ತೊಯ್ದ ಚಿರತೆ ಸಂಜೆಯಾಗುತ್ತಿದ್ದಂತೆ ಗ್ರಾಮದಲ್ಲಿ ಹೊರಗಿ ಬಂದು ಓಡಾಡ ದಂತಹ ಭಯದ ವಾತಾವರಣ ನಿರ್ಮಾಣವಾಗಿದೆ. ರಾಜಣ್ಣ ಎಂಬುವರಿಗೆ ಸೇರಿದ ಮೇಕೆಯಾಗಿದ್ದು ಒಂದೇ ದಿನ ಎರಡು ಬಾರಿ ಚಿರತೆ ದಾಳಿ ನಡೆಸಿದ್ದು ಗ್ರಾಮಸ್ಥರು ಹೆದರಿ ಹೋಗಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರ ಒತ್ತಾಯ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ತುಮಕೂರು: ಜಿಲ್ಲೆಯಲ್ಲಿ ಈವರೆಗೂ 182 ಡೆಂಗ್ಯೂ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಎಲ್ಲ ಜನವಸತಿ ಪ್ರದೇಶಗಳಲ್ಲಿ ವಾರಕ್ಕೆರಡು ಬಾರಿ ಫಾಗಿಂಗ್, ಚರಂಡಿಗಳ ಸ್ವಚ್ಛತೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪತ್ರಕರ್ತರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಡೆಂಗ್ಯೂ ಪ್ರಕರಣಗಳು ಜೂನ್ ಮಾಹೆಯಿಂದ ಸೆಪ್ಟೆಂಬರ್ ಮಾಹೆಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುವುದರಿಂದ ಮಹಾನಗರ ಪಾಲಿಕೆ, ಆರೋಗ್ಯ, ಶಿಕ್ಷಣ ಇಲಾಖೆಗಳು ಸೇರಿದಂತೆ ಮತ್ತಿತರ ಇಲಾಖೆಗಳ ಸಹಭಾಗಿತ್ವದಲ್ಲಿ ಈಗಾಗಲೇ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಈವರೆಗೆ ಸುಮಾರು 5700 ಡೆಂಗ್ಯು ಪ್ರಕರಣಗಳು ವರದಿಯಾಗಿದ್ದು, ಸಾವುಗಳು ಸಂಭವಿಸಿವೆ. ಇದರಿಂದ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗುತ್ತಿದೆ. ಜಿಲ್ಲೆಯಲ್ಲಿ ಡೆಂಗ್ಯೂ–ಚಿಕುಗುನ್ಯಾದಿದ ಯಾವುದೇ ಸಾವು-ನೋವು ಸಂಭವಿಸಿಲ್ಲವಾದರೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ…
ಬೆಂಗಳೂರಿನ ಆಟೋ ಚಾಲಕರಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದೆ. ಬೆಂಗಳೂರು ನಗರದಲ್ಲಿ ಆಟೋಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಹೊಸ ಆಟೋ ಪರ್ಮಿಟ್ ಪಡೆಯಲು ಸರ್ಕಾರ ಷರತ್ತುಗಳನ್ನು ಸಹ ನಿಗದಿ ಮಾಡಿದೆ. ಸರ್ಕಾರ ಹೊಸ ಆಟೋ ಪರ್ಮಿಟ್ ಪಡೆಯುವ ಸಂಖ್ಯೆಯನ್ನು 1.55 ಲಕ್ಷದಿಂದ 2.55ಕ್ಕೆ ಏರಿಕೆ ಮಾಡಿದೆ. ಮುಂದಿನ 5 ವರ್ಷಗಳಿಗೆ ಇದು ಅನ್ವಯವಾಗಲಿದೆ ಎಂದು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಜನಸಂಖ್ಯೆ ಹೆಚ್ಚಾದಂತೆ ನಗರದಲ್ಲಿ ಹೊಸ ಆಟೋ ಪರ್ಮಿಟ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಆದರೆ ಇದಕ್ಕೆ ಷರತ್ತುಗಳು ಅನ್ವಯ ಎಂದು ಸ್ಪಷ್ಟಪಡಿಸಲಾಗಿದೆ. ಹಸಿರು ಆಟೋ ರಿಕ್ಷಾಗಳಿಗೆ ಮಾತ್ರ ಪರ್ಮಿಟ್ ನೀಡಬೇಕು. ಬಿಎಸ್–6 ಇಂಜಿನ್ ಹೊಂದಿರುವ ಪ್ರಮಾಣೀಕೃತ ಎಲ್ ಪಿಜಿ/ ಸಿಎನ್ ಜಿ/ ಎಲೆಕ್ಟ್ರಿಕ್ ಕಿಟ್ ಮತ್ತು ಡಿಜಿಟರ್ ದರದ ಮೀಟರ್‌ಗಳನ್ನು ಆಟೋಗಳು ಹೊಂದಿರಬೇಕು. ಈಗಾಗಲೇ ಆಟೋ ರಿಕ್ಷಾ ಚಾಲನೆ ಪರ್ಮಿಟ್ ಹೊಂದಿರುವ ಯಾವುದೇ ಚಾಲಕರಿಗೆ ಹೊಸದಾಗಿ ಪರ್ಮಿಟ್ ನೀಡಬಾರದು. ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಸರಿಯಾದ ದಾಖಲೆಗಳನ್ನು ಪರಿಶೀಲನೆ ಮಾಡಬೇಕು.…
ತುಮಕೂರು: ಜಿಲ್ಲೆಯ ತಿಪಟೂರು ಟೌನ್ ವ್ಯಾಪ್ತಿಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಪುಟ್ಟ ಮಕ್ಕಳನ್ನು ಕೂಲಿ ಕಾರ್ಮಿಕರಂತೆ ಬಳಸಿಕೊಂಡು ಕೆಲಸ ಮಾಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾರೆ ಗುದ್ದಲಿಯಂತಹ ಉಪಕರಣಗಳಲ್ಲಿ ಹಿಡಿದುಕೊಂಡು ಮಕ್ಕಳು ಕೂಲಿ ಕಾರ್ಮಿಕರಂತೆ ಕೆಲಸ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಪುಟ್ಟ ಮಕ್ಕಳನ್ನು ಬಳಸಿಕೊಂಡು ವಸತಿ ನಿಲಯದ ಆವರಣದಲ್ಲಿ ಕೆಲಸ ಮಾಡಿಸುತ್ತಿರುವವರು ಯಾರು ಎನ್ನು ಪ್ರಶ್ನೆಗಳು ಕೇಳಿ ಬಂದಿವೆ. ಜೊತೆಗೆ ತಾಲೂಕು ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಯಾಕೆ ಗಮನ ಹರಿಸಿಲ್ಲ ಎನ್ನುವ ಪ್ರಶ್ನೆಗಳು ಕೂಡ ಕೇಳಿ ಬಂದಿವೆ. ಘಟನೆಯ ಮಾಹಿತಿ ತಿಳಿದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ತಿಪ್ಪೇಸ್ವಾಮಿಯವರು ತಕ್ಷಣವೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಸದ್ಯ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡು ತಪ್ಪಿತಸ್ಥರ ಮೇಲೆ ಸುಮೊಟೊ ಕೇಸ್ ದಾಖಲಿಸಿ ತನಿಖೆ ಮಾಡಲಾಗುವುದು ಎಂದು ತಿಪ್ಪೇಸ್ವಾಮಿ…
ರಾಜ್ಯದಲ್ಲಿ ಒಂದು ಕಡೆ ಡೆಂಘಿ ಕಾಟ. ಇನ್ನೊಂದೆಡೆ ಝೀಕಾ ವೈರಸ್ ಆತಂಕ. ಈ ಎಲ್ಲಾ ಕಂಟಕಗಳ ನಡುವೆ ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿಯಿಂದ ಜನ ಕಂಗಾಲಾಗಿದ್ದಾರೆ ಬಾಗಲಕೋಟೆಯ ಎಸ್ ಪಿ ಅಮರನಾಥ ರೆಡ್ಡಿ ಗುಪ್ತ ಮಾಹಿತಿ ಸಂಗ್ರಹಿಸಿದ್ದು, ಜಿಲ್ಲೆಯಲ್ಲಿ ಬರೋಬ್ಬರಿ 384 ಜನ ನಕಲಿ ವೈದ್ಯರಿರುವ ಮಾಹಿತಿ ದೊರಕಿದೆ. ಗರ್ಭಪಾತ ದಂಧೆ ಜಾಡು ಹಿಡಿದ ಪೊಲೀಸರು ನಿರಂತರ ಪರಿಶೀಲನೆ ನಡೆಸಿದ್ದು, ಈ ವೇಳೆ 384 ಜನ ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಇವರೆಲ್ಲರೂ ಕೇವಲ ಎಸ್ ಎಸ್ ಎಲ್ ಸಿ, ಪಿಯುಸಿ, ಬಿಎ, ಬಿಕಾಮ್, ಟಿಸಿಹೆಚ್, ಐಟಿಐ ಓದಿ ಡಾಕ್ಟರ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ ಮಾಹಿತಿ ಸಂಗ್ರಹದ ವೇಳೆ ಸ್ಫೋಟಕ ವಿಚಾರಗಳು ಹೊರ ಬಂದಿದ್ದು, ಈ ಹಿಂದೆ ಗರ್ಭಪಾತ ಮಾಡಿಸಿ ಮಹಿಳೆಯ ಸಾವಿಗೆ ಕಾರಣಕರ್ತಳಾದ ವೈದ್ಯೆ ಕವಿತಾ ಬಾಡನವರ ಕೇವಲ ದ್ವಿತೀಯ ಪಿಯುಸಿ ಓದಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಕವಿತಾ ಗರ್ಭಪಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಆಕೆಯನ್ನು ಬಂಧಿಸಿದ್ದರು.…