Subscribe to Updates
Get the latest creative news from FooBar about art, design and business.
- ನೀಟ್ ಹಗರಣ ವಿರುದ್ಧದ ಒಂದು ತಿಂಗಳ ಐತಿಹಾಸಿಕ ಹೋರಾಟಕ್ಕೆ ಸಂದ ಜಯ: ತುಮಕೂರಿನಲ್ಲಿ AIDSO, AIMSS ವಿಜಯೋತ್ಸವ!
- ಮಾಶಾಸನ ಸ್ಥಗಿತ ಖಂಡನೆ: ಸರ್ಕಾರ ದಿವಾಳಿ ಹಂತ ತಲುಪಿದೆ: ಕೆ.ಎಂ. ತಿಮ್ಮರಾಯಪ್ಪ ಆರೋಪ
- ಮಕ್ಕಳು ದುಶ್ಚಟಗಳಿಂದ ದೂರವಿರಿ: ಅಬಕಾರಿ ಉಪ ಅಧೀಕ್ಷಕ ದೀಪಕ್ ಎಸ್. ಕರೆ
- ಸರಗೂರು: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರ್ಥಪೂರ್ಣ ವಿಶ್ವ ಜನಸಂಖ್ಯಾ ದಿನಾಚರಣೆ
- ಸರಗೂರು: ದಲಿತ ಸಂಘರ್ಷ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ; ಸಂಘಟನೆ ಬಲವರ್ಧನೆಗೆ ಕರೆ
- ಹಾದನೂರು ಸರ್ಕಾರಿ ಶಾಲೆಗೆ ‘ಗಿಫ್ಟ್ ಎ ಡ್ರೀಮ್ಸ್ ಫೌಂಡೇಷನ್’ ಆಸರೆ: ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ, ಸಮವಸ್ತ್ರ ವಿತರಣೆ
- ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಪತ್ರಿಕಾ ದಿನಾಚರಣೆಗೆ ಅಧಿಕೃತ ಆಹ್ವಾನ
- ಸರಗೂರು: ರಸ್ತೆ ಅಭಿವೃದ್ಧಿಯಿಂದ ಗ್ರಾಮೀಣ ಭಾಗಕ್ಕೆ ಹೊಸ ಚೈತನ್ಯ — ಶಾಸಕರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ
Author: admin
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ಲ್ಲಿರೋ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಮತ್ತೆ ಬಾಯ್ಲರ್ ಸ್ಫೋಟಗೊಂಡಿದ್ದು ಭಾರೀ ಅನಾಹುತ ಒಂದು ತಪ್ಪಿದೆ. ಅದೃಷ್ಟವಶಾತ್ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ನಸುಕಿನ ಜಾವ ಟೀ ಕುಡಿಯಲು 15 ಕಾರ್ಮಿಕರು ತೆರಳಿದ್ದ ವೇಳೆ ಬಾಯ್ಲರ್ ಬ್ಲಾಸ್ಟ್ ಆಗಿದೆ. ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಪಾರಾಗಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಮಾಹಿತಿ ಪ್ರಕಾರ, ಮುಂದಿನ ಅವಧಿಗೆ ಕಬ್ಬು ನುರಿಸಲು ಕಾರ್ಖಾನೆ ಸಿದ್ದತೆ ಮಾಡುವ ವೇಳೆ ಬಾಯ್ಲರ್ ಬ್ಲಾಸ್ಟ್ ಆಗಿದೆ. ಈ ಹಿಂದೆ 2023 ರ ಮಾರ್ಚ್ 4 ರಂದು ಕೂಡ ಬಾಯ್ಲರ್ ಬ್ಲಾಸ್ಟ್ ಆಗಿತ್ತು. ಈ ವೇಳೆ ಓರ್ವ ಕಾರ್ಮಿಕ ಮೃತಪಟ್ಟು ಇತರೇ ನಾಲ್ವರು ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದವು. ಇದೀಗ ಪದೇ ಪದೇ ಬಾಯ್ಲರ್ ಬ್ಲಾಸ್ಟ್ ಆಗಲು, ಕಳಪೆ ಬಾಯ್ಲರ್ ನಿರ್ಮಾಣವೇ ಅವಘಢಕ್ಕೆ ಕಾರಣವೆಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಈ ಹಿನ್ನೆಲೆ ಕಾರ್ಖಾನೆ ಬಾಯ್ಲರ್ ಸ್ಫೋಟ ಪ್ರಕರಣದ ತನಿಖೆಯ ಜೊತೆಗೆ ಯೋಜನೆ ಕಳಪೆತನ ಹಾಗೂ ಅರ್ಥಿಕ…
ಉತ್ತರಪ್ರದೇಶದ ಜೌನಪುರ್ ಕಾನ್ವೆಂಟ್ ಶಾಲೆಯಲ್ಲಿ ಪ್ರಿನ್ಸಿಪಾಲ್ ಹಾಗೂ ಶಿಕ್ಷಕಿಯ ನಡುವಿನ ಅನೈತಿಕ ಚಟುವಟಿಕೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರತಿಷ್ಠಿತ ಕಾನ್ವೆಂಟ್ ಶಾಲೆಯಲ್ಲಿ ಈ ಘಟನೆ ನಡೆದಿದು, ಪ್ರಿನ್ಸಿಪಾಲ್ ಹಾಗೂ ಟೀಚರ್ ನಡುವೆ ಸಲುಗೆ, ಆತ್ಮೀಯತೆ ಹಲವು ದಿನಗಳಿಂದ ಇತ್ತೆನ್ನಲಾಗಿದೆ. ಹಾಗಾಗಿ ಟೀಚರ್ ಪದೇ ಪದೇ ಟೀಚರ್ ಪ್ರಿನ್ಸಿಪಾಲ್ ಕೊಠಡಿಗೆ ಹೋಗುತ್ತಿದ್ದರೆನ್ನಲಾಗಿದೆ. ಈ ಶಾಲಾ ಶಿಕ್ಷಕಿಗೆ ಶಾಲೆಯ ಕೆಲ ಜವಾಬ್ದಾರಿಗಳನ್ನು ನೀಡಲಾಗಿದ್ದು, ಇದರ ಹಿಂದೆ ಕೂಡಾ ಪ್ರಿನ್ಸಿಪಾಲ್ ಕೈವಾಡ ಇತ್ತೆನ್ನಲಾಗಿದೆ. ಬಹಳ ಗೌಪ್ಯವಾಗಿ ನಡೆಯುತ್ತಿದ್ದ ಇವರ ರೊಮ್ಯಾನ್ಸ್ ಕಡೆಗೆ ಅದೇನೋ ಆಗಿ ಹೊರಗಡೆ ಬಂದಿದೆ. ಇದು ಶಾಲೆಯ ಶಿಕ್ಷಕ– ಶಿಕ್ಷಕಿಯರಿಗೆ ಗೊತ್ತಾಗಿ, ಕೊನೆಗೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಇದೀಗ ಶಾಲಾ ಸಮಯದಲ್ಲಿ ನಡೆದ ಇವರಿಬ್ಬರ 7 ನಿಮಿಷದ ರೊಮ್ಯಾನ್ಸ್ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದನ್ನು ಕಂಡ ವಿದ್ಯಾರ್ಥಿಗಳ ಪೋಷಕರಿಗೆ ತೀವ್ರ ಮುಜುಗರವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ಸ್ಪೇನ್ ನ ಮಾರ್ಬೆಲ್ಲಾದಲ್ಲಿ ಪ್ರವಾಸಿ ತಾಣದ ಬೀಚ್ ಗಳ ಶುಚಿತ್ವ ಕಾಪಾಡಲು ಈ ಹೊಸ ನಿಮಯ ಜಾರಿಗೆ ತರಲಾಗಿದ್ದು ಸಮುದ್ರದಲ್ಲಿ ಆಟವಾಡುತ್ತಾ, ಬೀಚ್ ಬದಿಯಲ್ಲಿ, ಅಥವಾ ಸಮುದ್ರಕ್ಕೆ ಮೂತ್ರ ವಿಸರ್ಜನೆ ಮಾಡಿದರೆ ಬರೋಬ್ಬರಿ 67,000 ರೂಪಾಯಿ ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲ, 2ನೇ ಬಾರಿ ಈ ತಪ್ಪು ಮಾಡಿದರೆ 1 ಲಕ್ಷ ರೂಪಾಯಿ ದಂಡ ಕೂಡ ಬೀಳುತ್ತೆ! ಅಂದಹಾಗೆ ಸುಂದರ ಬೀಚ್ ಗಳನ್ನು ಹೊಂದಿರುವ ಈ ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಕಿಕ್ಕಿರಿದು ತುಂಬುತ್ತಾರೆ. ವೀಕೆಂಡ್ ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಪ್ರವಾಸಿಗರು ತುಂಬುತ್ತಾರೆ. ಆದರೆ ಬೀಚ್ ನಲ್ಲಿ ಆಟವಾಡುತ್ತಾ ಕಾಲಕಳೆಯುವ ಪ್ರವಾಸಿಗರು, ಸಮುದ್ರ ನೀರಿನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ನೀರಿನ ಶುಚಿತ್ವ, ಹೈಜೀನ್ ಸಮಸ್ಯೆಯಾಗುತ್ತಿದೆ. ಹಲವರು ಪ್ರವಾಸಿಗರು ಈ ಕುರಿತು ದೂರು ನೀಡಿದ್ದಾರೆ. ಹೀಗಾಗಿ ಮಾರ್ಬೆಲ್ಲಾ ನಗರ ಕಠಿಣ ನಿಯಮ ಜಾರಿಗೊಳಿಸಿದ್ದು ಸ್ಥಳೀಯ ಕೋಸ್ಟಲ್ ಸಿಬ್ಬಂದಿಗೆ ಅಧಿಕಾರ ನೀಡಲಾಗಿದೆ. ಆದರೆ ಈ ನಿಯಮ ಜಾರಿಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕಿಕ್ಕಿರಿದು…
ಗುಜರಾತ್ ಪೊಲೀಸರು ಇತ್ತೀಚೆಗೆ ವಾಪಿ ಎಂಬಲ್ಲಿ ನಡೆದ 1 ಲಕ್ಷ ರೂಪಾಯಿಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ರೋಹಿತ್ ಕನುಭಾಯಿ ಸೋಲಂಕಿ ಎಂಬ ಕಳ್ಳನನ್ನು ಬಂಧಿಸಿದ್ದರು. ಬಳಿಕ ಕಳ್ಳನ ಹಿನ್ನೆಲೆ ಕೇಳಿ ಪೊಲೀಸರೇ ಅಚ್ಚರಿಗೊಂಡಿದ್ದಾರೆ. ಪೊಲೀಸರು ರೋಹಿತ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ರೋಹಿತ್ ಇದುವರೆಗೆ 19 ದರೋಡೆಗಳನ್ನು ಮಾಡಿದ್ದಾನೆ. ಐಷಾರಾಮಿ ಜೀವನಶೈಲಿಯನ್ನು ಹೊಂದಿದ್ದಾನೆ. ಇದಲ್ಲದೆ ಈತ ಮುಂಬೈನ ಮುಂಬ್ರಾ ಪ್ರದೇಶದಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅದ್ದೂರಿ ಫ್ಲಾಟ್ ನಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಈತ ದುಬಾರಿ ಆಡಿ ಕಾರನ್ನು ಓಡಿಸುತ್ತಿದ್ದ ಎನ್ನಲಾಗಿದೆ. ತೆಲಂಗಾಣದಲ್ಲಿ ಎರಡು, ಆಂಧ್ರಪ್ರದೇಶದಲ್ಲಿ ಎರಡು, ಮಧ್ಯಪ್ರದೇಶದಲ್ಲಿ ಎರಡು ಮತ್ತು ಮಹಾರಾಷ್ಟ್ರದಲ್ಲಿ ಒಂದು ಕಳ್ಳತನ ಮಾಡಿದ್ದಾನೆ. ಇದರ ಜೊತೆಗೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಲಂಚ ನೀಡಿ ಇನ್ನೂ ಆರು ಕಳ್ಳತನ ಮಾಡಿರುವುದಾಗಿ ಈತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕಳ್ಳತನ ಮಾಡಲು ಈತ ಐಷಾರಾಮಿ ಹೋಟೆಲ್ ಗಳಲ್ಲಿ ತಂಗುತ್ತಿದ್ದ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ. ಹಗಲಿನಲ್ಲಿ ಹೋಟೆಲ್ ಕ್ಯಾಬ್ ಗಳನ್ನು ಬುಕ್…
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂ ಸೀನ್ ಫಿಂಗರ್ ಪ್ರಿಂಟ್ ಜೊತೆ ಹತ್ತಕ್ಕೂ ಹೆಚ್ಚು ಆರೋಪಿಗಳ ಫಿಂಗರ್ ಪ್ರಿಂಟ್ ಹೋಲಿಕೆಯಾಗಿದೆ ಎಂದು ವರದಿ ತಿಳಿಸಿದೆ. ವಿಧಿ ವಿಜ್ಞಾನ ಪರೀಕ್ಷೆಯಲ್ಲಿ (FSL) ದರ್ಶನ್, ಪವಿತ್ರಾ ಗೌಡ ಸೇರಿ ಹತ್ತು ಜನರ ಫಿಂಗರ್ ಪ್ರಿಂಟ್ ಹೋಲಿಕೆಯಾಗಿದೆ ಎನ್ನಲಾಗಿದೆ. ಕ್ರೈಂ ಸೀನ್, ಮೃತದೇಹ ಬಿಸಾಕಿದ ಜಾಗ, ಮೃತದೇಹ ಸಾಗಾಟ ಮಾಡಿದ ವಾಹನ, ಶವ ಇಟ್ಟಿದ್ದ ಸೆಕ್ಯೂರಿಟಿ ಗಾರ್ಡ್ ಕೊಠಡಿ, ಮೃತನ ಬಟ್ಟೆಗಳು, ಹಲ್ಲೆ ಮಾಡಲು ಬಳಸಿದ ವಸ್ತುಗಳು, ಸಾಗಾಟ ಮಾಡಿದ ಕಾರ್, ಆರೋಪಿಗಳ ಬಟ್ಟೆಗಳ ಮೇಲಿನ ಫಿಂಗರ್ ಪ್ರಿಂಟ್ ಗಳನ್ನು ಸಂಗ್ರಹ ಮಾಡಲಾಗಿತ್ತು. ಆರೋಪಿಗಳ ಬಂಧನದ ಬಳಿಕ ಎಲ್ಲರ ಫಿಂಗರ್ ಪ್ರಿಂಟ್ ಪಡೆದು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಫಿಂಗರ್ ಪ್ರಿಂಟ್ ಹೋಲಿಕೆಯಾಗಿದ್ದು ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಪ್ರಮುಖ ಸಾಕ್ಷ್ಯವಾಗಲಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…
ಕಳೆದ ಕೆಲ ಸಮಯದ ಹಿಂದೆ ಸಾವನ್ನಪ್ಪಿದ್ದಾಳೆ ಎಂದು ಇಂಟರ್ ನೆಟ್ ನಲ್ಲಿ ಸುದ್ದಿಯಾಗಿದ್ದ ನಟಿ ಪೂನಂ ಪಾಂಡೆ ಮತ್ತೆ ಟ್ರೆಂಡ್ ನಲ್ಲಿದ್ದಾರೆ. ಆದರೆ ಈ ಬಾರಿ ಕತ್ತಲೆ ಬೆಳಕಿನಲ್ಲಿ ಬೆತ್ತಲಾಗೋ ಫೋಟೋಗಳನ್ನು ಶೇರ್ ಮಾಡುವ ಮೂಲಕ ಮತ್ತೆ ಟ್ರೆಂಡ್ ಆಗಿದ್ದಾರೆ. ಕೆಲವು ತಿಂಗಳ ಹಿಂದೆ ಗರ್ಭ ಕಂಠಕ ಕ್ಯಾನ್ಸರ್ ನಿಂದ ಸಾವನ್ನಪ್ಪಿರುವುದಾಗಿ ಇಡೀ ದೇಶವನ್ನೇ ನಂಬಿಸಿದ ನಟಿ ಇದೀಗ ಅಭಿಮಾನಿಗಳಿಗೆ ಕಚಗುಳಿ ಇಡುವ ಮೂಲಕ ಮತ್ತೆ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗುತ್ತಿದ್ದಾಳೆ. ಹೌದು, ಪೂನಂ ಪಾಂಡೆ ಇದೀಗ ಬೆತ್ತಲಾಗಿದ್ದಾರೆ. ಪೂನಂ ಆಕೆ ತನ್ನ ಸೌಂದರ್ಯ ಪ್ರದರ್ಶಿಸಲು ನಗ್ನತೆಯನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡಿದ್ದಾಳೆ. ಇದೀಗ ನಟಿ ಪೂನಂ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ನಗ್ನ ಫೋಟೋಗಳನ್ನು ಹಂಚಿಕೊಂಡಿದ್ದಾಳೆ. ಆದರೆ ಕತ್ತಲು ಹಾಗೂ ಬೆಳಕಿನ ನಡುವಿನ ಈ ಫೋಟೋದಲ್ಲಿ ಅಷ್ಟೇ ಕುತೂಹಲವನ್ನೂ ಹಿಡಿದಿಟ್ಟಿದ್ದಾಳೆ. ಸದ್ಯ ಆಕೆಯ ಸಂಪೂರ್ಣ ನಗ್ನ ಫೋಟೋಗಳು ಇದೀಗ ಭಾರಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಹಾಟ್ ಅವತಾರಗಳನ್ನು ಪ್ರದರ್ಶಿಸುವ ಫೋಟೋಗಳನ್ನು…
ಮುಡಾ ಹಗರಣ ಚರ್ಚೆ ರಾಜ್ಯದಲ್ಲಿ ಜೋರಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದಲ್ಲಿ ಸುಮಾರು 5000 ಕೋಟಿ ರೂಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಹೇಳಲಾಗಿದ್ದು ಈ ವಿಚಾರವಾಗಿ ಘಟಾನುಘಟಿಗಳ ಹೆಸರು ಕೇಳಿಬಂದಿದೆ. ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಗಿಬಿದ್ದ ಬೆನ್ನಲ್ಲೇ ಇದರ ತನಿಖೆಗಾಗಿ ಸರ್ಕಾರ ಸಮಿತಿಯನ್ನೂ ರಚಿಸಿ 15 ದಿನಗಳೊಳಗೆ ವರದಿ ನೀಡುವಂತೆ ಆದೇಶ ನೀಡಿದೆ. ಅಷ್ಟೇ ಅಲ್ಲ ಮುಡಾ ಹಗರಣ ವಿಚಾರವು ಇದೀಗ ಗೂಗಲ್ ನಲ್ಲಿ ಸಹ ಟ್ರೆಂಡ್ ಆಗಿದೆ. ಕರ್ನಾಟಕದಲ್ಲಿ ಇದು ಶೇಕಡಾ 100ರಷ್ಟು ಅಂತಾರ್ಜಾಲ ಬಳಕೆದಾರರು ಸರ್ಚ್ ಕೊಟ್ಟಿದ್ದರೆ, ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲೂ ಶೇಕಡಾ 30ರಷ್ಚು ನೆಟ್ಟಿಗರು ಈ ಬಗ್ಗೆ ಜಾಲಾಡಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. 50-50 ಅನುಪಾತದಡಿ ಸರಿಯಾಗಿ ಹಂಚಿಕೆ ಮಾಡದೆ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದ್ದು ಅಂದಾಜು 5 ಸಾವಿರ ಕೋಟಿಯಷ್ಟು ಭಾರೀ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ. 50-50 ಅನುಪಾತ…
ಸುಪ್ರೀಂ ಕೋರ್ಟ್ ಇಂದು ನೀಟ್ ಪ್ರಕರಣಗಳ ವಿಚಾರಣೆ ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಸುಮಾರು ಮೂವತ್ತು ಅರ್ಜಿಗಳನ್ನು ಒಟ್ಟಿಗೆ ಪರಿಗಣಿಸುತ್ತದೆ. ನೀಟ್ ಪರೀಕ್ಷೆಯನ್ನು ಮರು ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಮೂಲಕ ತಿಳಿಸಿದೆ. ಅವ್ಯವಹಾರದ ಪ್ರತ್ಯೇಕ ಘಟನೆಗಳು ನಡೆದಿವೆ ಎಂಬ ಕಾರಣಕ್ಕೆ ಪರೀಕ್ಷೆಯ ಒಟ್ಟಾರೆ ಪಾರದರ್ಶಕತೆಯನ್ನು ಪ್ರಶ್ನಿಸುವುದು ಸೂಕ್ತವಲ್ಲ ಎಂದು ಎನ್‌ಟಿಎ ಸುಪ್ರೀಂ ಕೋರ್ಟ್‌ನಲ್ಲಿ ಸ್ಪಷ್ಟಪಡಿಸಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನೀಟ್ ವಿಷಯದಲ್ಲಿ ಎದ್ದಿರುವ ಆರೋಪಗಳ ಬಗ್ಗೆ ಮುಂದಿನ ಕ್ರಮ ಏನು ಎಂಬುದನ್ನು ನಿರ್ಧರಿಸಲಿದೆ. ಪಾಟ್ನಾ ಮತ್ತು ಗೋಧ್ರಾದಲ್ಲಿ ಮಾತ್ರ ಅಕ್ರಮಗಳು ನಡೆದಿವೆ ಮತ್ತು ಪ್ರತ್ಯೇಕ ಸಮಸ್ಯೆಗಳಿಂದ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುವುದಿಲ್ಲ ಎಂದು ಎನ್‌ಟಿಎ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಗೋದ್ರಾದಲ್ಲಿ ಉಪ ಅಧೀಕ್ಷಕ ತುಷಾರ್ ಭಟ್ಟಿ ಅವರ ನೆರವಿನಿಂದ ಅಕ್ರಮ ನಡೆದಿದ್ದು, ದೇಶದ ಇತರ ಭಾಗಗಳಲ್ಲಿ ಸೋಗು ಹಾಕಿರುವ ಆರೋಪ ಕೇಳಿಬಂದಿದೆ. ಪಾರದರ್ಶಕತೆ ಕಾಪಾಡಲು ಪರೀಕ್ಷೆ ನಡೆಸಲಾಗಿದೆ. ಘಟನೆಯ ಕುರಿತು ಸಿಬಿಐ…
ಮುಂಬೈ: ಭಾನುವಾರ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ರೈಲು ಸೇವೆಯನ್ನು ರದ್ದುಗೊಳಿಸಲಾಗಿದ್ದು, ವಿಮಾನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಭಾರೀ ಮಳೆಯಿಂದಾಗಿ ಮುಂಬೈನ ಪ್ರಮುಖ ರಸ್ತೆಗಳು, ರೈಲು ಮಾರ್ಗಗಳು ನೀರು ತುಂಬಿಕೊಂಡಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಹವಾಮಾನ ವೈಪರಿತ್ಯದಿಂದ ವಿಮಾನ ಸಂಚಾರದಲ್ಲೂ ವ್ಯತ್ಯಯಗೊಂಡಿದ್ದು, ಜನರು ಪರದಾಡುವಂತಾಗಿದೆ. ಹವಾಮಾನ ಇಲಾಖೆ ಪ್ರಕಾರ ಜುಲೈ 8ರಂದು ಇಡೀ ದಿನ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮುಂಬೈನಲ್ಲಿ ನಿನ್ನೆ ಒಂದೇ ದಿನ ದಾಖಲೆಯ 300 ಮಿ.ಮೀ. ಮಳೆಯಾಗಿದೆ. ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳೆಲ್ಲಾ ಕೆರೆಯಂತಾಗಿದ್ದು, ಹಲವಾರು ಬಡಾವಣೆಗಳ ತಗ್ಗುಪ್ರದೇಶಗಳಲ್ಲಿ ಮನೆಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಭಾರೀ ಮಳೆಯಿಂದಾಗಿ ರೈಲು ಮಾರ್ಗಳಲ್ಲಿ ನೀರು ತುಂಬಿದೆ. ಕೆಲವು ಕಡೆ ಮಣ್ಣು ಕುಸಿದಿದ್ದು, ಮರವೊಂದು ಹಳಿಗಳ ಮೇಲೆ ಬಿದ್ದಿದೆ. ಇದರಿಂದ ರೈಲು ಸೇವೆ ಅಪಾಯಕಾರಿ ಎಂಬ ಕಾರಣಕ್ಕೆ ಕೆಲವು ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಕಾಸರ ಮತ್ತು ಟಿಟ್ವಾಲಾ ನಡುವಿನ ರೈಲು ಸಂಚಾರ ತಾತ್ಕಾಲಿಕವಾಗಿ…
ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೊದಲ ಕಂತಿನ ಹಣ ಪಡೆದ ಮಹಿಳೆಯರು, ತಮ್ಮ ಗಂಡಂದಿರನ್ನು ಬಿಟ್ಟು, ತಮ್ಮ ತಮ್ಮ ಪ್ರೇಮಿಗಳ ಜೊತೆ ಊರಿನಿಂದ ಪರಾರಿಯಾಗಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯ ಗ್ರಾಮವೊಂದರಲ್ಲಿ ಇಂಥದ್ದೊಂದು ವಿಲಕ್ಷಣ ಘಟನೆ ನಡೆದಿವೆ. ಬರೋಬ್ಬರಿ 11 ಮಹಿಳೆಯರು ತಮ್ಮ ಗಂಡನನ್ನು ಬಿಟ್ಟು, ಪ್ರೇಮಿಗಳ ಜೊತೆ ಊರು ಬಿಟ್ಟು ಓಡಿ ಹೋಗಿರೆ ಎನ್ನಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಮೊದಲ ಕಂತಿನ ಹಣ ಪಡೆದ ತಕ್ಷಣ 11 ಮಹಿಳೆಯರು ತಮ್ಮ ಪತಿಯನ್ನು ತೊರೆದು ಪ್ರೇಮಿಗಳೊಂದಿಗೆ ಓಡಿಹೋಗಿದ್ದಾರಂತೆ. ಮಹಾರಾಜ್ ಗಂಜ್ ನ ನಿಚ್ಲಾಲ್ ಬ್ಲಾಕ್ ಪ್ರದೇಶದ ಒಟ್ಟು 108 ಗ್ರಾಮಗಳಲ್ಲಿ 2023–24ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ 2,350 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಎರಡು ಸಾವಿರಕ್ಕೂ ಹೆಚ್ಚು ಫಲಾನುಭವಿಗಳ ಮನೆಗಳೂ ಪೂರ್ಣಗೊಂಡಿವೆ. ಇದರ ಅಡಿಯಲ್ಲಿ 11 ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಮೊದಲ ಕಂತಿನ ಹಣವಾಗಿ 40 ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಅತ್ತ…