Subscribe to Updates
Get the latest creative news from FooBar about art, design and business.
- ಮಕ್ಕಳು ದುಶ್ಚಟಗಳಿಂದ ದೂರವಿರಿ: ಅಬಕಾರಿ ಉಪ ಅಧೀಕ್ಷಕ ದೀಪಕ್ ಎಸ್. ಕರೆ
- ಸರಗೂರು: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರ್ಥಪೂರ್ಣ ವಿಶ್ವ ಜನಸಂಖ್ಯಾ ದಿನಾಚರಣೆ
- ಸರಗೂರು: ದಲಿತ ಸಂಘರ್ಷ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ; ಸಂಘಟನೆ ಬಲವರ್ಧನೆಗೆ ಕರೆ
- ಹಾದನೂರು ಸರ್ಕಾರಿ ಶಾಲೆಗೆ ‘ಗಿಫ್ಟ್ ಎ ಡ್ರೀಮ್ಸ್ ಫೌಂಡೇಷನ್’ ಆಸರೆ: ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ, ಸಮವಸ್ತ್ರ ವಿತರಣೆ
- ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಪತ್ರಿಕಾ ದಿನಾಚರಣೆಗೆ ಅಧಿಕೃತ ಆಹ್ವಾನ
- ಸರಗೂರು: ರಸ್ತೆ ಅಭಿವೃದ್ಧಿಯಿಂದ ಗ್ರಾಮೀಣ ಭಾಗಕ್ಕೆ ಹೊಸ ಚೈತನ್ಯ — ಶಾಸಕರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ
- ಬೀದರ್: ಮಳೆ ಅಭಾವ; ವಲಸೆ ತಡೆಗೆ ‘ವಿಬಿ-ಜಿ ರಾಮ್ ಜಿ’ ಅಡಿ ಕೆಲಸ ನೀಡಲು ಸಚಿವ ಈಶ್ವರ ಖಂಡ್ರೆ ಸೂಚನೆ
- ಸರಗೂರು: ಧಾರ್ಮಿಕ ಕ್ಷೇತ್ರದ ಸಮೀಪ ಬಾರ್ ತೆರವಿಗೆ ಆಗ್ರಹಿಸಿ ತಾಲೂಕು ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆ
Author: admin
ಸ್ವಂತ ಮಗಳ ಮೇಲೆಯೇ ಆರು ವರ್ಷಗಳಿಂದ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿ ಮಾಡಿದ್ದ ವ್ಯಕ್ತಿಗೆ 101 ವರ್ಷಗಳ ಕಾಲ ಕೋರ್ಟ್ ಜೈಲು ಶಿಕ್ಷೆ ನೀಡಿದೆ. ಕೇರಳದ ಮಲಪ್ಪುರಂನ ಕೋರ್ಟ್ ಇಂತಹದ್ದೊಂದು ಮಹತ್ವದ ತೀರ್ಪು ನೀಡಿದೆ. ಹೆಚ್. ಮುಹಮ್ಮದ್ ಎಂಬಾತನೇ 101 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ. ಈತ ತನ್ನ ಮಗಳನ್ನು 10ನೇ ವರ್ಷದಿಂದ 16ನೇ ವರ್ಷದವರೆಗೆ ನಿರಂತರವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಇದರಿಂದಾಗಿ ಆಕೆ ಗರ್ಭಿಣಿ ಕೂಡಾ ಆಗಿದ್ದಳು. ಮಗಳನ್ನು ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಈ ವಿಷಯ ಬಯಲಾಗಿತ್ತು. ವಿಚಾರಣೆ ವೇಳೆ ಆರೋಪಿ ಮಹಮದ್, ತನ್ನ ಕೃತ್ಯವನ್ನು ಸಮರ್ಥನೆ ಮಾಡಿಕೊಂಡಿದ್ದ. ಎಲ್ಲಾ ತಂದೆಯರೂ ತಮ್ಮ ಹೆಣ್ಣುಮಕ್ಕಳಿಗೆ ಹೀಗೆಯೇ ಮಾಡುತ್ತಾರೆ ಎಂದು ಹೇಳಿದ್ದ. ತನ್ನ ಕೃತ್ಯಕ್ಕೆ ಸ್ವಲ್ಪವೂ ಪಾಪ ಪ್ರಜ್ಞೆ ಇಲ್ಲದ ಮಹಮದ್ ಗೆ ಕೋರ್ಟ್ ಕಠಿಣ ಶಿಕ್ಷೆ ನೀಡಿದ್ದು, ಜೀವಂತ ಇರುವ ತನಕವೂ ಆತ ಜೈಲಿನಲ್ಲಿ ಕೊಳೆಯುವಂತಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ಕೇರಳದ ಕೋಝಿಕ್ಕೋಡ್ ನ ಕೊಟೊಂಪುಝ ನಿವಾಸಿ ಅಬ್ದುಲ್ ರಹೀಮ್ ಎಂಬಾತನಿಗೆ, ತನ್ನ ಪ್ರಾಯೋಜಕರ ಅಂಗವಿಕಲ ಮಗನನ್ನು ಕೊಲೆ ಮಾಡಿದ ಆರೋಪದ ಹಿನ್ನೆಲೆ ಸೌದಿ ಅರೇಬಿಯಾದಲ್ಲಿ ಜೈಲಿನಲ್ಲಿ ವಿಧಿಸಲಾಗಿದ್ದ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ. ಹೌದು, ಈ ಸಂಬಂಧ ರಿಯಾದ್ ಕ್ರಿಮಿನಲ್ ನ್ಯಾಯಾಲಯ ಜುಲೈ 2 ರಂದು ಮರಣದಂಡನೆ ರದ್ದುಗೊಳಿಸಿ ಆದೇಶ ಹೊರಡಿಸಿದೆ. ರಾಯಭಾರಿ ಕಚೇರಿಯ ಅಧಿಕಾರಿಗಳು ರಹೀಮ್ ಕುಟುಂಬದ ಪರ ವಕೀಲ ಸಿದ್ದಿಕ್ ತುವ್ವೂರ್ ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯದ ವರ್ಚುವಲ್ ಸಿಸ್ಟಮ್ ಮೂಲಕ ನ್ಯಾಯಾಲಯವು ರಹೀಮ್ ಅವರನ್ನು ಭೇಟಿ ಮಾಡಿದ ನಂತರ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ನ್ಯಾಯಾಲಯವು ಮರಣದಂಡನೆಯನ್ನು ರದ್ದುಗೊಳಿಸುವ ಆದೇಶಕ್ಕೆ ಸಹಿ ಹಾಕಿತು. ಸದ್ಯ ರಾಯಭಾರಿ ಕಚೇರಿ ಮೂಲಕ ನ್ಯಾಯಾಲಯದಲ್ಲಿ ಠೇವಣಿ ಇಟ್ಟಿದ್ದ ಒಂದೂವರೆ ಕೋಟಿ ರಿಯಾಲ್ ನ ಚೆಕ್ ನ್ನು ಕೊಲೆಯಾದ ಸೌದಿ ಬಾಲಕನ ಕುಟುಂಬದ ಪವರ್ ಆಫ್ ಅಟಾರ್ನಿಗೆ ನ್ಯಾಯಾಲಯ ಹಸ್ತಾಂತರಿಸಿದೆ. ಅಬ್ದುಲ್ ರಹೀಮ್ ಕೊಲೆ ಮಾಡಿದ್ದಕ್ಕಾಗಿ 18 ವರ್ಷಗಳಿಂದ ಜೈಲಿನಲ್ಲಿದ್ದು, ಈಗಾಗಲೇ ರಹೀಮ್ ಬಿಡುಗಡೆಗಾಗಿ ಸಂಗ್ರಹಿಸಿದ 47 ಕೋಟಿಗೂ…
ದಿವಂಗತ ನಟ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯಿಂದಾಗಿ ಇದುವರೆಗೆ ಹತ್ತು ಮಂದಿಯ ಪ್ರಾಣ ಉಳಿದಿದೆ.. ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ 45 ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿ ಮಾಡಲಾಗಿದ್ದು, ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.. ಜೀವ ರಕ್ಷಕವಾಗಿರುವ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಈಗ ಲಭ್ಯವಿದ್ದು, ಗೋಲ್ಡನ್ ಅವರ್ ನಲ್ಲಿ 10 ಜನರಿಗೆ ಈ ಚುಚ್ಚು ಮದ್ದು ನೀಡಿ ವೈದ್ಯರು ಜೀವ ಉಳಿಸಿದ್ದಾರೆ. 71 ತಾಲೂಕು ಆಸ್ಪತ್ರೆಗಳೂ ಸೇರಿದಂತೆ ಒಟ್ಟು 86 ಸರಕಾರಿ ಆಸ್ಪತ್ರೆಗಳನ್ನು ಈ ಯೋಜನೆಯಲ್ಲಿ ಸ್ಪೋಕ್ ಕೇಂದ್ರಗಳನ್ನಾಗಿ ಮಾಡಲಾಗಿದೆ.. ಇನ್ನು ಜಯದೇವ ಹಾಗೂ ಇತರ 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹಬ್ ಕೇಂದ್ರಗಳನ್ನಾಗಿ ಮಾಡಲಾಗಿದೆ. ಈ ಆಸ್ಪತ್ರೆಗಳಿಗೆ ಹೃದಯಾಘಾತವಾದ ತಕ್ಷಣ ಕರೆದುಕೊಂಡು ಬಂದರೆ, 6 ನಿಮಿಷದೊಳಗೆ ಎಐ ತಂತ್ರಜ್ಞಾನದ ಮೂಲಕ ರೋಗಿಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲಾಗುತ್ತದೆ.. ತೀವ್ರ ಹೃದಯಾಘಾತವಾಗುವ ಮೂನ್ಸೂಚನೆ ದೊರೆತರೆ ಅವರಿಗೆ ಈ ಚಿಕಿತ್ಸೆ ನೀಡಲಾಗುತ್ತದೆ.. ಈ ಟೆನೆಕ್ಟೆಪ್ಲೇಸ್ ಚುಚ್ಚುಮದ್ದಿನ ಬೆಲೆ 25 ಸಾವಿರ ರೂಪಾಯಿ ಆಗಿದ್ದು,…
ವೈರಸ್ ಸಾಮಾನ್ಯಕ್ಕಿಂತ ಹೆಚ್ಚಿನ ದೇಹದ ಉಷ್ಣತೆಯನ್ನು ಉಂಟುಮಾಡುತ್ತದೆ, ಇದನ್ನು ವೈರಲ್ ಜ್ವರ ಎಂದು ಕರೆಯಲಾಗುತ್ತದೆ. ವೈರಲ್ ಸೋಂಕು ಉಂಟಾದಾಗ ನಮ್ಮ ದೇಹಕ್ಕೆ ಅದರ ವಿರುದ್ಧ ಹೋರಾಡಲು ಸಾಧ್ಯವಾಗದಿದ್ದಾಗ ಜ್ವರ ಹೆಚ್ಚಾಗುತ್ತದೆ. ಕಣ್ಣುಗಳಲ್ಲಿ ಉರಿ, ತಲೆನೋವು, ಹೆಚ್ಚಿನ ಜ್ವರ, ದೇಹ ನೋವು ಮತ್ತು ಕೆಲವೊಮ್ಮೆ ವಾಕರಿಕೆ ಮತ್ತು ವಾಂತಿ ವೈರಲ್ ಫೀವರ್ ನಿಂದ ಉಂಟಾಗುತ್ತದೆ. ಆಹಾರ ಮತ್ತು ಪಾನೀಯಗಳು ಮಾರಣಾಂತಿಕ ವೈರಸ್‌ಗಳಿಂದ ಕಲುಷಿತವಾಗಬಹುದು. ಕಲುಷಿತ ಆಹಾರವನ್ನು ಸೇವಿಸುವುದರಿಂದ ನೊರೊವೈರಸ್ ಮತ್ತು ಎಂಟ್ರೊವೈರಸ್ನಂತಹ ವೈರಲ್ ಸೋಂಕುಗಳಿಗೆ ಕಾರಣವಾಗಬಹುದು. ಸೋಂಕಿತ ವ್ಯಕ್ತಿಯು ಸೀನುವಿಕೆ , ಉಸಿರಾಟ ಮತ್ತು ಮೇಲ್ಮೈಗಳನ್ನು ಸ್ಪರ್ಶಿಸುವ ಮೂಲಕ ವೈರಲ್ ಸೋಂಕನ್ನು ಹರಡಬಹುದು . ಮಕ್ಕಳು ಮತ್ತು ಹಿರಿಯರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ವೈರಲ್ ಜ್ವರ ಸಾಮಾನ್ಯವಾಗಿದೆ. ಸಾಮಾನ್ಯವಾಗಿ ವೈರಲ್ ಜ್ವರ 3–4 ದಿನದಲ್ಲಿ ಕಡಿಮೆಯಾಗುವುದು, ಆದರೆ ಡೆಂಗ್ಯೂ ನಂತಹ ಕೆಲವೊಂದು ವೈರಲ್ ಸೋಂಕು ಉಂಟಾದರೆ ತುಂಬಾ ದಿನ ಜ್ವರ ಇರುತ್ತದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…
ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಇಸ್ಪೀಟ್ ಆಡುವಾಗ ಪೊಲೀಸರು ಎಂಟ್ರಿ ಕೊಟ್ಟಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳಲು ತೆಪ್ಪದ ಮೂಲಕ ಪರಾರಿಯಾಗಲು ಯತ್ನಿಸಿದ ವೇಳೆ ಈ ವೇಳೆ ತೆಪ್ಪ ಮಗುಚಿ ಇಬ್ಬರು ಸಾವನ್ನಪ್ಪಿರುವ ಘಟನೆ ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದಲ್ಲಿ ನಡೆದಿದೆ. ನಿನ್ನೆ ಸಂಜೆ ಪೊಲೀಸರು ಇಸ್ಪೀಡ್ ಆಡುತ್ತಿದ್ದವರನ್ನು ಹಿಡಿಯಲು ಬಂದಿದ್ದರು. ಇದನ್ನು ತಿಳಿಯುತ್ತಲೇ ಎಂಟು ಮಂದಿ ಇಸ್ಪೀಟ್ ಆಟಗಾರರು ತೆಪ್ಪದಲ್ಲಿ ಕೃಷ್ಣಾ ನದಿ ದಾಟಲು ಹೋಗಿದ್ದಾರೆ. ಆತುರದಲ್ಲಿ ತೆಪ್ಪ ನಡೆಸುವಾಗ ಅದು ಮಗುಚಿಬಿದ್ದಿದೆ. ಈ ವೇಳೆ ನಾಲ್ಕು ಜನರು ನೀರಿನಲ್ಲಿ ಸಿಲುಕಿದ್ದರು. ಅವರನ್ನು ಮೀನುಗಾರರು ಹಾಗೂ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇಬ್ಬರು ಸಾವನ್ನಪ್ಪಿದ್ದಾರೆ. ಪುಂಡಲೀಕ ಯಂಕಂಚಿ (35), ಮಹಮ್ಮದ್ ತೈಹದ್ ಚೌಧರಿ(45) ಮೃತಪಟ್ಟವರಾಗಿದ್ದಾರೆ. ಸಚಿನ್ ಕಟಬರ್, ಫಾರೂಕ್ ಅಮದ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ನಾಲ್ಕು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಪಡೆಯುವುದಕ್ಕೆ ನಡೆಯಲಿರುವ ನೀಟ್ –ಪಿಜಿ ಪರೀಕ್ಷೆ ಜುಲೈ ತಿಂಗಳಲ್ಲಿ 25 ರಿಂದ ಜುಲೈ 27 ರವರೆಗೆ ನಡೆಯಲಿದ್ದು, ಮುಖ್ಯವಾಗಿ ಪ್ರಶ್ನೆ ಪತ್ರಿಕೆಗಳು ಸೋರಿಕೆ ತಡೆಗಟ್ಟುವುದಕ್ಕಾಗಿ ಪರೀಕ್ಷೆ ನಡೆಯುವುದಕ್ಕೂ 2 ಗಂಟೆಗಳ ಮುನ್ನ ಪ್ರಶ್ನೆ ಪರೀಕ್ಷೆಯನ್ನು ಸಿದ್ಧಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಈಗಾಗಲೇ ಜೂನ್ 23 ಕ್ಕೆ ನಿಗದಿಯಾಗಿದ್ದ NEET-PG ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ ಪರೀಕ್ಷೆ ಆರಂಭದ ಕೆಲವು ಗಂಟೆ ಮುಂಚೆ ಪರೀಕ್ಷೆ ರದ್ದು ಮಾಡಲಾಗಿತ್ತು. ಇದರಿಂದ ಹಲವು ರೀತಿಯ ಪ್ರತಿಭಟನೆ ನಡೆದಿದ್ದು, ನಂತರ ನೀಟ್–ಪಿಜಿ ಪರೀಕ್ಷೆಯ ದಿಢೀರ್ ರದ್ದು ಮಾಡಿದ್ದರಿಂದ ತೊಂದರೆಯಾಗಿರುವ ಬಗ್ಗೆ, ವಿದ್ಯಾರ್ಥಿಗಳ ಹಿತರಕ್ಷಣೆಯ ದೃಷ್ಟಿಯಿಂದಲೇ ಪರೀಕ್ಷೆ ರದ್ದು ಮಾಡಲಾಗಿತ್ತು ಎಂದು ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು. ಇದೀಗ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ NEET-PG ಪರೀಕ್ಷೆಯು ಜುಲೈ ತಿಂಗಳಲ್ಲಿ ನಡೆಯಲಿದೆ ಎಂದು ಗೃಹ ಸಚಿವಾಲಯವು ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಮಾಧ್ಯಮ ಮೂಲಗಳಿಗೆ ತಿಳಿಸಿವೆ. ಕಳೆದ ತಿಂಗಳ ನೀಟ್-ಪಿಜಿ ಪರೀಕ್ಷೆಯ ದಿಢೀರ್…
18ನೇ ಲೋಕಸಭೆಯ ಮೊದಲ ಅಧಿವೇಶನ ಭಾರೀ ಕಾವೇರಿದೆ. ಹಲವು ಮಹತ್ವದ ಚರ್ಚೆಗಳು ಚರ್ಚಿತವಾಗುವ ಜೊತೆಗೆ ಕೋಲಾಹಲ, ಗದ್ದಲಗಳಿಗೂ ಸಾಕ್ಷಿಯಾಗಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ, ಪ್ರಧಾನಿ ಮೋದಿ ವಿರುದ್ಧ ರೊಚ್ಚಿಗೆದ್ದಿದ್ದು, ಪ್ರತಿಭಟನೆ ನಡೆಸುತ್ತಿವೆ. ಹೀಗೆ ವಿಪಕ್ಷಗಳು ಸಂಸತ್ತಿನೊಳಗೆ ಪ್ರತಿಭಟಿಸುವಾಗ ಅಪರೂಪದ ಪ್ರಸಂಗವೊಂದು ನಡೆದಿದೆ. ನರೇಂದ್ರ ಮೋದಿ ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡುವಾಗ ವಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದವು. ಈ ವೇಳೆ ನರೇಂದ್ರ ಮೋದಿಯವರು ತಮ್ಮ ಮುಂದೆಯೇ ನಿಂತು ತನ್ನ ವಿರುದ್ಧ ಕಿರುಚಿ ಕಿರುಚಿ ಪ್ರತಿಭಟಿಸುತ್ತಿದ್ದ ಸಂಸದರಿಗೆ ಕುಡಿಯಲು ನೀರು ನೀಡಿದಂತ ಘಟನೆ ನಡೆದಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದ ವೇಳೆ ಸದನದ ಬಾವಿಗಿಳಿದು ಕಿರುಚಿ ಬೊಬ್ಬೆ ಹೊಡೆದು ತಮ್ಮ ವಿರುದ್ಧವೇ ಪ್ರತಿಭಟನೆ ಮಾಡುತ್ತಿದ್ದ ವಿಪಕ್ಷಗಳ ನಾಯಕರಿಗೆ ಮೋದಿ ಕುಡಿಯಲು ನೀರು ನೀಡಿದರು. ಒಬ್ಬರು ನೀರು ನಿರಾಕರಿಸಿದರೆ, ಮತ್ತೊಬ್ಬರು ನೀರು ಕುಡಿದು ದಾಹ ತೀರಿಸಿಕೊಂಡರು. ನಮ್ಮತುಮಕೂರಿನ ಕ್ಷಣ…
ಕೋಲಾರ: SSLC ಮುಗಿಸಿ ಪ್ರಥಮ ಪಿಯುಸಿ(1st PUC) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿ ಕಾಲೇಜಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಕೋಲಾರದಲ್ಲಿ ನಡೆದಿದೆ. ಕೋಲಾರ ಹೊರ ವಲಯದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಕಾಲೇಜಿನಲ್ಲಿ ಶೌಚಾಲಯಕ್ಕೆಂದು ಹೋಗಿದ್ದಾಳೆ. ಈ ವೇಳೆ ಆಕೆ ಶೌಚಾಲಯದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ಕಾಲೇಜು ಉಪನ್ಯಾಸಕರು, ಸಹಪಾಠಿಗಳು ದಂಗಾಗಿದ್ದಾರೆ. ಸದ್ಯ ವಿದ್ಯಾರ್ಥಿಯನ್ನು ಸಹ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಕೋಲಾರ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಇದಕ್ಕೆ ಕಾರಣನಾದ ವ್ಯಕ್ತಿಯ ಹುಡುಕಾಟ ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ಸತ್ಸಂಗದ ದುರಂತ ಇಡೀ ದೇಶವನ್ನನೇ ಬೆಚ್ಚಿಬೀಳಿಸಿದೆ. ಸಾಗರೋಪಾದಿಯಲ್ಲಿ ನೆರೆದಿದ್ದ ಜನರ ನಡುವೆ ಬರೀ ಕಾಲ್ತುಳಿತಕ್ಕೆ 100ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಸತ್ಸಂಗ ಎಂಬುದು ಬೋಲೆ ಬಾಬ ಅವರು ನೀಡುವ ಧರ್ಮೋಪದೇಶ ಕಾರ್ಯಕ್ರಮ. ಆರಂಭದಲ್ಲಿ ಈ ಸತ್ಸಂಗದಲ್ಲಿ ಕೇವಲ 50 ಮಂದಿಗೆ ಮಾತ್ರ ಅನುಮತಿ ಕೋರಿದ್ದರು. ಆದರೆ, ಬರ ಬರುತ್ತಾ ಈ ಬಾಬನ ಸತ್ಸಂಗಕ್ಕೆ 50 ಸಾವಿರಕ್ಕೂ ಹೆಚ್ಚು ಜನ ಸೇರುತ್ತಿದ್ದರು. ಬಾಬಾ ಮೂಲತಃ ಕಾಸ್ ಗಂಜ್ ಜಿಲ್ಲೆಯ ಪಟಿಯಾಲಿಯ ಬಹದ್ದೂರ್‌ನಗರದವರು, ಅವರ ಹೆಸರು ಸಕರ್ ವಿಶ್ವ ಹರಿ. ಇವರು ಬಾಬಾ ಆಗುವುದಕ್ಕೂ ಮೊದಲು ಪೊಲೀಸ್ ಗುಪ್ತಚರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ, ಅವರು ಕೆಲಸವನ್ನು ತೊರೆದು ಕಥೆಗಾರರಾಗುವ ಮೂಲಕ ಭಕ್ತರ ಸೇವೆ ಪ್ರಾರಂಭಿಸಿದರು. ಕರೋನಾ ಸಮಯದಲ್ಲಿ, ಭೋಲೆ ಬಾಬಾ ಅವರ ಸತ್ಸಂಗ ಕಾರ್ಯಕ್ರಮವು ವಿವಾದಕ್ಕೆ ಒಳಗಾಗಿತ್ತು. ಆಗ ಅವರು ತಮ್ಮ ಸತ್ಸಂಗದಲ್ಲಿ ಕೇವಲ 50 ಮಂದಿಗೆ ಮಾತ್ರ ಅನುಮತಿ ಕೋರಿದ್ದರು. ಆದರೆ, ಬರ ಬರುತ್ತಾ…
ಚೆನ್ನೈ: ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಒಂದು ಸ್ಥಾನವನ್ನೂ ಗೆಲ್ಲಲು ಬಿಜೆಪಿ ವಿಫಲವಾದ ಬೆನ್ನಲ್ಲೇ ಒಂದು ತಿಂಗಳ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದರ ಬೆನ್ನಲ್ಲೇ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರಿಗೆ ಲಂಡನ್ ನಲ್ಲಿ ಫೆಲೋಶಿಪ್ ದೊರೆತಿದ್ದು, ಅವರು ಸದ್ಯದಲ್ಲೇ ಬ್ರಿಟನ್ ಗೆ ತೆರಳಲಿದ್ದಾರೆ. ಚೆವೆನಿಂಗ್ ಗುರುಕುಲ್ ಫೆಲೋಶಿಪ್ ಫಾರ್ ಲೀಡರ್ ಶಿಪ್ ಆ್ಯಂಡ್ ಎಕ್ಸಲೆನ್ಸ್’ ಕಾರ್ಯಕ್ರಮಕ್ಕೆ ಅವರು ಆಯ್ಕೆಯಾಗಿದ್ದು, ಮೂರು ತಿಂಗಳು ಲಂಡನ್ ನಲ್ಲೇ ನೆಲೆಸಲಿದ್ದಾರೆ. ಈ ಕುರಿತು ಬಿಜೆಪಿ ಹೈಕಮಾಂಡ್ ಜತೆಯೂ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA