Author: admin

ಅನಂತ್ ಅಂಬಾನಿ ತಮ್ಮ ಮದುವೆಯ ಕಾರಣದಿಂದ ಕಳೆದ ಒಂದು ವರ್ಷದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರನ್ನು ಇದೇ ತಿಂಗಳ 12ರಂದು ಮುಂಬಯಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (BKC) ಪ್ರಸಿದ್ಧ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ವಿವಾಹವಾಗಲಿದ್ದಾರೆ. ಈ ನಡುವೆ ಇದೀಗ ಅನಂತ್ ಅಂಬಾನಿ ಅವರ ಸಂಗ್ರಹದಲ್ಲಿರುವ ದುಬಾರಿ ವಾಚ್ ಎಲ್ಲರ ಗಮನ ಸೆಳೆಯುತ್ತಿದೆ. ಅನಂತ್ ಅಂಬಾನಿ ಗ್ರ್ಯಾಂಡ್ ಮಾಸ್ಟರ್ ಚೈಮ್ ಸೇರಿದಂತೆ ಪಾಟೆಕ್ ಫಿಲಿಪ್ ಅವರ ಅತ್ಯಂತ ದುಬಾರಿ ಕೈಗಡಿಯಾರಗಳಲ್ಲಿ ಎರಡನ್ನು ಹೊಂದಿದ್ದಾರೆ. ಪಾಟೆಕ್ ನ ಅತ್ಯಂತ ದುಬಾರಿ ಕೈಗಡಿಯಾರ ಇದಾಗಿದೆ. ಇದುವರೆಗೆ ಇದರ ಏಳು ವಾಚ್‌ಗಳನ್ನು ಮಾತ್ರ ಮಾಡಲಾಗಿದೆ. ಇದು ಇತ್ತೀಚೆಗೆ ಹರಾಜಿನಲ್ಲಿ 31 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 2.58 ಬಿಲಿಯನ್ ರೂ.ಗಳಾಗಿದೆ. ಪಾಟೆಕ್ ಫಿಲಿಪ್ ವಾಚ್ ನ ಅತ್ಯಂತ ಅಪರೂಪದ ವಾಚ್ ಇದಾಗಿದ್ದು, ಮಾಣಿಕ್ಯ, ವಜ್ರ ಬಿಳಿ ಚಿನ್ನವನ್ನು ಒಳಗೊಂಡಿದೆ. ಅತ್ಯಂತ ಐಷಾರಾಮಿ ಕೈಗಡಿಯಾರವಾದ ಇದು…

Read More

ಭಾರತದ ಮೊದಲ ಮಾನವ ಮಿಷನ್ ಗಗನಯಾನ ಕಾರ್ಯಾರಂಭಗೊಂಡಾಗ ಪ್ರಧಾನಿ ನರೇಂದ್ರ ಮೋದಿ ಅವರು ಬಾಹ್ಯಾಕಾಶಕ್ಕೆ ಹಾರಬಹುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಅವರು ಹೇಳಿದ್ದಾರೆ. ಪ್ರಸ್ತುತ ರಾಕೆಟ್ ಗಳು ಚಂದ್ರನ ಸುತ್ತಿನ ಪ್ರಯಾಣಕ್ಕೆ ಸಾಕಾಗುವುದಿಲ್ಲ, ಮಾದರಿಗಳನ್ನು ಮರಳಿ ತರಲು ಮತ್ತು ಭವಿಷ್ಯದ ಮಾನವ ಕಾರ್ಯಾಚರಣೆಗಳಿಗೆ ಹೆಚ್ಚಿನ ಪೇಲೋಡ್ ಸಾಮರ್ಥ್ಯದೊಂದಿಗೆ ರಾಕೆಟ್ ಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯ ಎಂದು ಇಸ್ರೋ ಅಧ್ಯಕ್ಷರು ಹೇಳಿದರು. ಗಗನಯಾನ ಮಿಷನ್ನ ಭಾಗವಾಗಿ ಇಸ್ರೋ 3 ದಿನಗಳ ಮಿಷನ್ ಗಾಗಿ ಮೂವರು ಗಗನಯಾತ್ರಿಗಳನ್ನು 400 ಕಿಮೀ ಕಕ್ಷೆಗೆ ಕಳುಹಿಸಲು ಮತ್ತು ಅವರನ್ನು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿಸಲು ಯೋಜಿಸಿದೆ. ಭಾರತದ ಐತಿಹಾಸಿಕ ಚೊಚ್ಚಲ ಮಾನವಸಹಿತ ಬಾಹ್ಯಾಕಾಶ ಕಾರ್ಯಾಚರಣೆಗೆ ಆಯ್ಕೆಯಾದ ನಾಲ್ವರು ಪೈಲಟ್ ಗಳ ಹೆಸರನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು. ಈ ಗಗನಯಾತ್ರಿಗಳೆಂದರೆ — ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್…

Read More

ತುರುವೇಕೆರೆ: ರೈತರ ಎಡಮಟ್ಟೆ ಮುರಿಯುತ್ತದೆಯೋ ಸರಕಾರದ ಲಾಠಿ ಮುರಿಯುತ್ತದೆಯೋ ನೋಡೇ ಬಿಡೋಣ ಎಂದು ಸರ್ಕಾರದ ವಿರುದ್ಧ ಶಾಸಕ ಎಂ.ಟಿ.ಕೃಷ್ಣಪ್ಪ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ತುರುವೇಕೆರೆ ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಎಕ್ಸ್ಪ್ರೆಸ್ ಪ್ರಾರಂಭಿಸುತ್ತೇವೆ ಎಂದು ಹೇಮಾವತಿ ಇಲಾಖೆ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದು ಕಾಮಗಾರಿಯ ಸ್ಥಳಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಕೋರಿದ್ದಾರೆ. ಇದು ಸರ್ಕಾದ ಅಭಿಪ್ರಾಯವಾಗಿದ್ದುಕಾಮಗಾರಿಯನ್ನು ಮಾಡಿಯೇ ತೀರುತ್ತೇವೆ ಎಂಬ ಹಠಕ್ಕೆ ಬಿದ್ದಂತಿದೆ. ಸರ್ಕಾರಕ್ಕೆ ನಾಚಿಕೆಯಾಗಬೇಕು ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು. ಮಾಗಡಿ ಭಾಗದ ಮೂರು ಟಿಎಂಸಿ ನೀರನ್ನು ಅವರು ತೆಗೆದುಕೊಂಡು ಹೋಗಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ ಮೊನ್ನೆ ನಡೆದ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ, ನಾವು ಯಾವುದೇ ಕಾರಣಕ್ಕೂ ಕಾಮಗಾರಿ ನಡೆಯಲು ಬಿಡುವುದಿಲ್ಲ. ಅದರಂತೆ ನಮ್ಮ ಪಾಲಿನ ನೀರನ್ನು ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದೇನೆ ಎಂದರು. ಸರ್ಕಾರ ಹಠಕ್ಕೆ ಬಿದ್ದು ಕೆಲವು ಶಾಸಕರುಗಳಿಗೆ ಅನುಕೂಲ ಮಾಡಿಕೊಡಲು ಈ ನಿರ್ಧಾರವನ್ನು ಮಾಡಿದ್ದಾರೆ.…

Read More

ಪಾವಗಡ: ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಕಳ್ಳರು ಬೆಳ್ಳಿ ಆಭರಣ ಮತ್ತು ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಕುವೆಂಪು ನಗರ ಎರಡನೇ ವಾರ್ಡ್ ನಲ್ಲಿ ನಡೆದಿದೆ. ನಿವೃತ್ತ ಶಿಕ್ಷಕರಾದ ಹುಲಿ ರಾಜು ರವರು ಸಂಬಂಧಿಕರ ಮದುವೆಗಾಗಿ ಕುಟುಂಬ ಸಮೇತರಾಗಿ ಚಳ್ಳಕೆರೆಗೆ ಹೋಗಿದ್ದರು. ಅಂತಹ ಸಮಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಒಂದು ಕೆ.ಜಿ. ಬೆಳ್ಳಿ ಸೇರಿದಂತೆ 30,000 ನಗದು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಪಟ್ಟಣದಲ್ಲಿ ಕಳ್ಳತನ ಹೆಚ್ಚಾಗಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಲಿರಾಜುರವರ ಸಹೋದರ ಮಾತನಾಡಿ, ಕೆಲವು ದಿನಗಳಿಂದ ಕಳ್ಳತನ ಪ್ರಕರಣಗಳು ಜಾಸ್ತಿಯಾಗಿವೆ, ಆದ್ದರಿಂದ ಪುರಸಭೆ ವತಿಯಿಂದ ಬೀದಿ ದೀಪಗಳನ್ನು ಹಾಕಿಸಬೇಕು ಸಿಸಿಟಿವಿಗಳನ್ನು ಅಳವಡಿಸಬೇಕು, ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗುವುದು. ಕಳ್ಳತನ ಪ್ರಕರಣಗಳು ಹೀಗೆಯೇ ಮುಂದುವರೆದರೆ ಪಟ್ಟಣದಲ್ಲಿ ಸಾರ್ವಜನಿಕರು ಜೀವನ ನಡೆಸುವುದು ಕಷ್ಟವಾಗುತ್ತದೆ ಎಂದು ತಿಳಿಸಿದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ…

Read More

ಶ್ರೀಲಂಕಾ: ಪರೀಕ್ಷೆ ಬರೆಯುವಾಗ ಹಿಜಾಬ್ ಧರಿಸಿ ಬಂದಿದ್ದ 70 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆ ಹಿಡಿದಿರುವ ಘಟನೆ ಶ್ರೀಲಂಕಾದಲ್ಲಿ ನಡೆದಿದ್ದು, ಹಿಜಾಬ್ ಧರಿಸದೇ ಪರೀಕ್ಷೆ ಬರೆದವರ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಪರೀಕ್ಷೆ ಆರಂಭವಾದಾಗ ಕೆಲ ಷರತ್ತುಗಳನ್ನು ವಿಧಿಸಲಾಗಿತ್ತು. ಅದರಲ್ಲಿ ಹಿಜಾಬ್ ಧರಿಸಬಾರದು ಎನ್ನುವುದು ಒಂದು. ಷರತ್ತುಗಳನ್ನು ಪಾಲಿಸಿ ಪರೀಕ್ಷೆ ಬರೆದವರ ಫಲಿತಾಂಶ ಪ್ರಕಟಿಸಲಾಗಿದೆ. ವಿಧಿಸಿದ್ದ ಷರತ್ತುಗಳಲ್ಲಿ ಪರೀಕ್ಷೆ ಬರೆಯುವವರು ಪರೀಕ್ಷೆ ಮುಗಿಯುವವರೆಗೆ ಹಿಜಾಬ್ ಧರಿಸಬಾರದು ಎಂದು ತಿಳಿಸಿತ್ತು. ಇದಕ್ಕೆ ಅಲ್ಲಿನ ಪಾರ್ಲಿಮೆಂಟ್ ಕೂಡ ಸಾಥ್ ನೀಡಿದ್ದು, ಇಂತಹ ನಿಯಮ ಜಾರಿಗೆ ಸೈ ಎಂದಿತ್ತು. ಆದರೂ ಈ 70 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆದಿದ್ದರು. ಅವರ ಫಲಿತಾಂಶವನ್ನು ಈಗ ತಡೆಹಿಡಿಯಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತಾಗಿ ವಿವಿಧ ಸಮುದಾಯಗಳ ಸ್ವಾಮೀಜಿಗಳು ತಮ್ಮ ಸಮುದಾಯ ನಾಯಕರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ. ಇದರ ನಡುವೆಯೇ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರೂ ರಾಜಕೀಯ ವಿಚಾರಕ್ಕೆ ಎಂಟ್ರಿಯಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸ್ವಾಮೀಜಿಗಳು ರಾಜಕೀಯ ಮಾಡುವುದಾದರೆ, ಆ ಸ್ವಾಮೀಜಿ ಪಟ್ಟಕ್ಕೂ ಚುನಾವಣೆ ನಡೆಸುವುದು ಒಳಿತಲ್ಲವೇ ಎಂದು ಪ್ರಶ್ನಿಸಿದ್ದಾರೆ. ಗುರು ಕಿರಣ್ ಅವರ ಪೋಸ್ಟ್ ಗೆ ಕೆಲವರು ನಿಮ್ಮ ಪ್ರಶ್ನೆ ಸರಿಯಾಗಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಇನ್ನು ಸ್ವಾಮೀಜಿಗಳು ಗೋಡಂಬಿ ದ್ರಾಕ್ಷಿ ತಿಂದುಕೊಂಡು ಆರಾಮವಾಗಿರಲಿ. ರಾಜಕಾರಣ ವಿಚಾರ ಅವರಿಗೇಕೆ ಎಂದು ಕಮೆಂಟಿಸುತ್ತಿದ್ದಾರೆ. ಈ ಬಗ್ಗೆ ಸ್ವಾಮೀಜಿಗಳು ತಮ್ಮ ಅಭಿಪ್ರಾಯಗಳನ್ನು ಹೇಳಲಿ, ಆದರೆ ಯಾವುದೇ ಒಂದು ಪಕ್ಷಕ್ಕೆ ಅದರದೇ ಆದ ಹೈಕಮಾಂಡ್, ಶಾಸಕರ ಒಮ್ಮತದಿಂದ ಸಿಎಂ ಮಾಡಲಾಗುತ್ತದೆ. ಸ್ವಾಮೀಜಿಗಳು ಹೇಳಿದ ಕೂಡಲೇ ಸಿಎಂ ಬದಲಾವಣೆ ಮಾಡಲಾಗದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ರಾಜ್ಯದ ಕೃಷ್ಣ ಹೆಗಡೆ ಹಾಗೂ ಕಮಲಾ ದಂಪತಿಯ ಪುತ್ರಿ ಡಾ.ಶೃತಿ ಹೆಗಡೆ ಅವರು ಅಮೇರಿಕದಲ್ಲಿ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ. ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಇವರು ಶಿರಸಿ ತಾಲೂಕಿನ ಮುಂಡಿಗೆಸರ ಅಜ್ಜೊರಮನೆ ಕುಟುಂಬದವರು ಎಂದು ತಿಳಿದುಬಂದಿದೆ. ಶೃತಿ ಅವರು 2018ರಲ್ಲಿಯೂ ಮಿಸ್ ಕರ್ನಾಟಕ ರನ್ನರ್ ಅಪ್ ಹಾಗೂ ಮಿಸ್ ಸೌತ್ ಇಂಡಿಯಾ ವಿಜೇತೆಯಾಗಿಯೂ ಗುರುತಿಸಿಕೊಂಡಿದ್ದರು. ಇದೀಗ ವಿಶ್ವ ಸುಂದರಿಯಾಗಿ ಮಿಂಚಿದ್ದಾರೆ. ಭರತನಾಟ್ಯ ಕಲಾವಿದೆಯೂ ಆಗಿರುವ ಇವರು ದುಬೈ, ಮಾಲ್ಡೀವ್ಸ್, ಭೂತಾನ್ ಮುಂತಾದ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಜೂ.6 ರಿಂದ 10 ವರೆಗೆ ಆಯೋಜಿದ್ದ ಈ ಸ್ಪರ್ಧೆಯಲ್ಲಿ ಭಾರತ ಸೇರಿ ಒಟ್ಟು 10 ದೇಶಗಳ ಸುಂದರಿಯರು ಪೈಪೋಟಿಯಲ್ಲಿದ್ದರು. ಎಲ್ಲರನ್ನೂ ಈ ನಮ್ಮ ಕನ್ನಡತಿ ಹಿಂದಿಕ್ಕಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಹಾವೇರಿ : ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಬಳಿ ನಡೆದಿದೆ. ಹರಳಯ್ಯ ನಗರದ ನಿವಾಸಿಗಳಾದ ನಂದನ್ ಶಿವಪ್ಪನವರ(22) ಹಾಗೂ ವೈಭವ ಪಟ್ಟಣ್ಣಶೆಟ್ಟಿ (22) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸುಳ್ಳು ನೆಪ ಹೇಳಿ ಮನೆಯಿಂದ ಹೋಗಿದ್ದ ಇಬ್ಬರು ಸ್ನೇಹಿತರು ರಾತ್ರಿ ಪೂರ್ತಿ ಕುಡಿದು, ಮನೆಗೆ ತೆರಳಿದ್ದಾರೆ. ಈ ವೇಳೆ ರಾಣೇಬೆನ್ನೂರು ನಗರದ ನೇಕಾರ ಕಾಲೋನಿ ಬಳಿ ಬರುವಾಗ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಗಂಭೀರ ಗಾಯಗೊಂಡಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಸದ್ಯ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಮದುವೆಯಾಗಿ ಒಂದು ಮಗುವಿದ್ದರೂ ಇನ್ನೊಂದು ಮಗು ಬೇಕು ಎಂದು ಕೇಳಿದ ಪತಿಗೆ ಇಬ್ಬರು ಪತ್ನಿಯರು ಸೇರಿ ಮತ್ತೊಂದು ಮದುವೆ ಮಾಡಲು ಮುಂದಾಗಿರುವ ಅಚ್ಚರಿಯ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪೆದ್ದಬಯಲು ಗ್ರಾಮದಲ್ಲಿ ನಡೆದಿದೆ. ಪಂಡನ್ನ ಎಂಬ ವ್ಯಕ್ತಿಯೇ ಮೂರನೇ ಮದುವೆಗೆ ಸಜ್ಜಾಗಿರುವ ವ್ಯಕ್ತಿಯಾಗಿದ್ದಾನೆ. ಈ ಮೊದಲು ಮೊದಲ ಹೆಂಡತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಮೊದಲ ಹೆಂಡತಿಯೇ ಮುಂದೆ ನಿಂತು ಗಂಡನಿಗೆ ಎರಡನೇ ಮದುವೆಯನ್ನು 2007ರಲ್ಲಿ ಮಾಡಿಸಿದ್ದಳು. ಅವರಿಗೆ ಒಬ್ಬ ಗಂಡು ಮಗ ಕೂಡಾ ಇದ್ದಾನೆ. ಆದರೂ ಪಂಡನ್ನ ಇನ್ನು ಒಂದು ಮಗು ಬೇಕು ಅಂತ ತನ್ನ ಇಬ್ಬರೂ ಪತ್ನಿಯರನ್ನ ಕೇಳಿದ್ದಾನೆ. ಆಗ ಇಬ್ಬರೂ ಪತ್ನಿಯರು ತನ್ನ ಗಂಡನಿಗೆ ಮೂರನೇ ಮದುವೆ ಮಾಡಲು ನಿರ್ಧಾರ ಮಾಡಿದ್ದಾರೆ. ಪಂಡನ್ನಾ ಪತ್ನಿಯರಾದ ಪಾರ್ವತಮ್ಮ ಮತ್ತು ಅಪ್ಪಲಮ್ಮ ಮೂರನೇ ಮದುವೆಗೆ ಭರ್ಜರಿ ತಯಾರಿಯನ್ನು ನಡೆಸಿ ಪೆದ್ದಬಯಲು ಗ್ರಾಮದಲ್ಲಿ ಬ್ಯಾನರ್ ಗಳನ್ನು ಕಟ್ಟಿಸಿ ಅದ್ದೂರಿ ಮದುವೆ ಮಾಡಿಸಲಾಗಿದೆ. ಇದೇ ತಿಂಗಳ 25 ರಂದು ಪಂಡನ್ನ ಮದುವೆ ವಿಜೃಂಭಣೆಯಿಂದ ನೆರವೇರಿತು.…

Read More

ಕುಮಾರಸ್ವಾಮಿ ರಾಜೀನಾಮೆಯಿಂದಾಗಿ ಚನ್ನಪಟ್ಟಣದಲ್ಲಿ ಉಪಚುನಾವಣೆ ನಡೆಯಲಿದೆ. ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಆದರೂ ಈ ಹೈವೋಲ್ಟೇಜ್ ಕ್ಷೇತ್ರ ಚರ್ಚೆಯಲ್ಲಿದೆ. ಕಾಂಗ್ರೆಸ್ ನಿಂದ ಡಿ.ಕೆ.ಶಿವಕುಮಾರ್ ಸ್ಪರ್ಧೆ ಮಾಡಬಹುದು ಎಂದು ಹೇಳಲಾಗುತ್ತಿರುವುದರಿಂದ ಈ ಕ್ಷೇತ್ರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಜೆಡಿಎಸ್–ಬಿಜೆಪಿ ಮೈತ್ರಿ ಇರುವುದರಿಂದ ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಅನ್ನೋದು ಕೂಡಾ ಕುತೂಹಲ ಮೂಡಿಸಿದೆ. ಜೆಡಿಎಸ್ ಅವರು ಬಿಜೆಪಿಗೆ ಈ ಕ್ಷೇತ್ರ ಬಿಟ್ಟುಕೊಟ್ಟರೆ ಸಿ.ಪಿ.ಯೋಗೇಶ್ವರ್ ಅವರು ಅಭ್ಯರ್ಥಿಯಾಗೋದು ಪಕ್ಕಾ ಎನ್ನಲಾಗುತ್ತಿದೆ. ಒಂದು ವೇಳೆ ಜೆಡಿಎಸ್ ಪಕ್ಷದವರೇ ಅಭ್ಯರ್ಥಿಯಾಗೋದಾದರೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಇನ್ನು ಸಿ.ಪಿ.ಯೋಗೇಶ್ವರ್ ಅವರು ನಿನ್ನೆ ರಾತ್ರಿ ದೆಹಲಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಜೊತೆ ಚರ್ಚೆ ನಡೆಸಿದ್ದಾರೆ. ನೀವು ಸಂಪೂರ್ಣ ಒಪ್ಪಿಗೆ ಕೊಟ್ಟರೆ ಮಾತ್ರ ನಾನು ಅಭ್ಯರ್ಥಿಯಾಗುತ್ತೇನೆ. ಇಲ್ಲದೇ ಇದ್ದರೆ ನಿಖಿಲ್ ಏನಾದರೂ ಅಭ್ಯರ್ಥಿಯಾಗುವುದಿದ್ದರೆ ನಾನೇ ಸಂಪೂರ್ಣ ಬೆಂಬಲ ಕೊಡುತ್ತೇನೆ. ನೀವೇ ಮುಂದೆ ನಿಂತು ಉಪಚುನಾವಣೆ ನಡೆಸಿ. ಆದ್ರೆ ಒಂದು ವಾರದಲ್ಲಿ ಈ ಸ್ಪಷ್ಟತೆ ಕೊಡಿ ಎಂದು ಕುಮಾರಸ್ವಾಮಿಯವರಲ್ಲಿ ಯೋಗೇಶ್ವರ್…

Read More