Author: admin

ಸಿನಿಮಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಘಟನೆ ಸ್ಫೋಟಕ ಮಾಹಿತಿಗಳು ಒಂದೊಂದಾಗಿ ಬಯಲಾಗುತ್ತಿದೆ. ಇದೀಗ ಭಾರತದ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಿತ್ರಗಳ ಮೂಲಕ ಹೆಸರು ಮಾಡಿರುವ ನಟಿ ಸಾಯಿ ತಮ್ಹಂಕರ್ ಕಾಸ್ಟಿಂಗ್ ಕೌಚ್ ಘಟನೆ ಬಿಚ್ಚಿಟ್ಟಿದ್ದಾರೆ. ಮರಾಠಿ ಚಿತ್ರಗಳಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಸಾಯಿ ತಮ್ಹಂಕರ್ ತಮ್ಮ ಸಿನಿ ಕರಿಯರ್‌ ನಲ್ಲಿ ನಡೆದ ಘಟನೆ ಹೇಳಿದ್ದಾರೆ. ಒಂದು ದಿನ ನನಗೆ ಫೋನ್ ಕರೆ ಬಂದಿತ್ತು. ನಿರ್ದೇಶಕ, ನಿರ್ಮಾಪಕರ ಜೊತೆಗೆ ಗುರುತಿಸಿಕೊಂಡಿದ್ದ ಆ ವ್ಯಕ್ತಿ, ಸಿನಿಮಾ ಕುರಿತು ಮಾತನಾಡಲು ಫೋನ್ ಮಾಡಿದ್ದರು. ಒಂದು ಉತ್ತಮ ಚಿತ್ರವಿದೆ. ನೀವೇ ನಾಯಕಿ ಎಂದು ನಿರ್ಮಾಪಕರು, ನಿರ್ದೇಶಕರು ಒಪ್ಪಿದ್ದಾರೆ. ಈ ಪಾತ್ರ ನೀವು ಮಾಡಿದರೆ ಮಾತ್ರ ತುಂಬಾ ಉತ್ತಮ ಎಂದಿದ್ದಾರೆ. ಈ ಚಿತ್ರಕ್ಕೆ ನೀವು ನಾಯಕಿ, ಆದರೆ ನೀವು ನಿರ್ಮಾಪಕ ಹಾಗೂ ನಿರ್ದೇಶಕರ ಜೊತೆ ಮಲಗಬೇಕು. ನೀವಾಗಿರುವ ಕಾರಣ ನಾನು ಹೀರೋ ಜೊತೆ ಮಲಗಿ ಎಂದು ಹೇಳಲ್ಲ. ಸಾಮಾನ್ಯವಾಗಿ ಹೀರೋ ಜೊತೆಗೂ ಮಲಬೇಕು. ಆದರೆ ನೀವು ನಿರ್ಮಾಪಕ…

Read More

ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್(Bengaluru Metro Rail Corporation Limited)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 7 ಅಸಿಸ್ಟೆಂಟ್​ ಎಂಜಿನಿಯರ್, ಅಸಿಸ್ಟೆಂಟ್​ ಮ್ಯಾನೇಜರ್​​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅರ್ಜಿ ಸಲ್ಲಿಸಬಹುದು. ಹುದ್ದೆಯ ಮಾಹಿತಿ: ಎಕ್ಸಿಕ್ಯೂಟಿವ್​ ಎಂಜಿನಿಯರ್ (ಸಿವಿಲ್)-1 ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್)- 4 ಅಸಿಸ್ಟೆಂಟ್ ಎಂಜಿನಿಯರ್(E&M)-1 ಅಸಿಸ್ಟೆಂಟ್​ ಮ್ಯಾನೇಜರ್ (ಮಾರ್ಕೆಟಿಂಗ್​)-1 ವಿದ್ಯಾರ್ಹತೆ: ಎಕ್ಸಿಕ್ಯೂಟಿವ್​ ಎಂಜಿನಿಯರ್ (ಸಿವಿಲ್)-ಸಿವಿಲ್ ಎಂಜಿನಿಯರಿಂಗ್​ನಲ್ಲಿ ಸ್ನಾತಕೋತ್ತರ ಪದವಿ, ಬಿಇ/ಬಿ.ಟೆಕ್​ ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್)- ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್​ ಅಸಿಸ್ಟೆಂಟ್ ಎಂಜಿನಿಯರ್(E&M)- ಎಲೆಕ್ಟ್ರಿಕಲ್ ಎಂಜಿನಿಯರಿಂಗ್​ ಬಿಇ/ಬಿ.ಟೆಕ್​ ಅಸಿಸ್ಟೆಂಟ್​ ಮ್ಯಾನೇಜರ್ (ಮಾರ್ಕೆಟಿಂಗ್​)- ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್, ಬಿ.ಆರ್ಕ್​, ಎಂಬಿಎ ವಯೋಮಿತಿ: ಎಕ್ಸಿಕ್ಯೂಟಿವ್​ ಎಂಜಿನಿಯರ್ (ಸಿವಿಲ್)- 45 ವರ್ಷ ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್)- 40 ವರ್ಷ ಅಸಿಸ್ಟೆಂಟ್ ಎಂಜಿನಿಯರ್(E&M)-40 ವರ್ಷ ಅಸಿಸ್ಟೆಂಟ್​ ಮ್ಯಾನೇಜರ್ (ಮಾರ್ಕೆಟಿಂಗ್​)- 40 ವರ್ಷ ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ವೇತನ: ಎಕ್ಸಿಕ್ಯೂಟಿವ್​ ಎಂಜಿನಿಯರ್ (ಸಿವಿಲ್)- ಮಾಸಿಕ ₹…

Read More

ಕನ್ನಡ ನಟ ಗೊಲ್ಡನ್ ಸ್ಟಾರ್ ಗಣೇಶ್ ಈ ವರ್ಷವೂ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ವರ್ಷ ಹುಟ್ಟುಹಬ್ಬ ಆಚರಿಸದೆ ಇರಲು ಕಾರಣವನ್ನೂ ಗಣೇಶ್ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ” ನನ್ನ ಆತ್ಮೀಯ ಅಭಿಮಾನಿಗಳೇ, ಜುಲೈ 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯನಿಲ್ಲ.ಆದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ” ಎಂದು ಗೋಲ್ಡನ್ ಸ್ಟಾರ್ ಗಣೇಶ್ ಟ್ವೀಟ್ ಮಾಡಿದ್ದಾರೆ. “ಹೀಗಾಗಿ ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ. ಮುಂದಿನ ವರ್ಷ ಖಂಡಿತ ಒಟ್ಟಿಗೇ ಹುಟ್ಟುಹಬ್ಬ ಆಚರಿಸೋಣ. ಅನಾನುಕೂಲಕ್ಕೆ ಕ್ಷಮೆಯಿರಲಿ. ಎಂದಿನ ತಮ್ಮ ಅಭಿಮಾನದ ನಿರೀಕ್ಷೆಯೊಂದಿಗೆ, ನಿಮ್ಮವ ಗಣೇಶ್” ಎಂದು ಟ್ವೀಟ್ ಮಾಡಿದ್ದಾರೆ. 2019ರಲ್ಲಿ ನಟ ಗಣೇಶ್ ಅವರು ತನ್ನ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಕೆಲವು ವಾರಗಳ ಹಿಂದೆ ತಂದೆ ಅಗಲಿದ ಕಾರಣ ಹುಟ್ಟುಹಬ್ಬ ಕ್ಯಾನ್ಸಲ್ ಮಾಡಿಕೊಂಡಿದ್ದರು. 2021ರಲ್ಲೂ ಕೊರೊನಾದಿಂದ ಜಗತ್ತು ನೋವಿನಲ್ಲಿರುವ ಕಾರಣದಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ನನ್ನ ಆತ್ಮೀಯ…

Read More

ಹತ್ಯೆ ಆರೋಪ ದರ್ಶನ್ ಮೇಲೆ ಬಂದ ದಿನದಿಂದ ಚಿತ್ರರಂಗದ ಯಾರೊಬ್ಬರೂ ತುಟಿ ಬಿಚ್ಚಿರಲಿಲ್ಲ. ಇದೀಗ ಒಬ್ಬೊಬ್ಬರೆ ಬಂದು ದರ್ಶನ್ ಪರ ಮಾತನಾಡುತ್ತಿದ್ದಾರೆ. ಇದೀಗ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ನಟ ದರ್ಶನ್ ನನ್ನ ಮಗು. ಮಗು ಆ ತಪ್ಪು ಮಾಡಿದ್ರೆ ತಂದೆ ಎಷ್ಟು ನೋವು ತಿಂತಾನೋ ಅಷ್ಟೇ ನೋವು ನಾನೂ ತಿಂತಿದ್ದೀನಿ. ಆ ಮಗು ಕೂಡ ಅಷ್ಟೆ ನೋವು ತಿಂತಿರುತ್ತೆ ಅಂತ ಹಂಸಲೇಖ ದರ್ಶನ್ ಪರ ಕನಿಕರದ ಮಾತುಗಳನ್ನಾಡಿದ್ದಾರೆ. ದರ್ಶನ್ ನಿಂದ ಕನ್ನಡ ಚಿತ್ರರಂಗ ಎಷ್ಟು ಕೀರ್ತಿ ಪಡೆದಿತ್ತು, ಎಷ್ಟು ಪ್ರಶಸ್ತಿ ಪಡೆದುಕೊಂಡಿತ್ತು. ಮೇಲಿದ್ದವರು ಕೆಳಗೆ ಬೀಳಲೇ ಬೇಕು ಎಂಬಂತಹ ಮಾತಿದೆ. ಆದ್ರೆ ಹಾಗಾಗೋದು ಬೇಡ. ಕೆಳಗೆ ಬಿದ್ದರೂ ಮೇಲೆಳಲು ಸಾಧ್ಯವಿದೆ ಅಂತ ಹಂಸಲೇಖ ಅಭಿಪ್ರಾಯ ಪಟ್ಟಿದ್ದಾರೆ. ಸಿನಿಮಾ ಕಲಾವಿದರು ಸಿಟ್ಟು ಹಾಗೂ ಕೋಪವನ್ನು ಜೀವನದಲ್ಲಿ ರೂಢಿಸಿಕೊಳ್ಳಬಾರದು ಎಂದು ಹಂಸಲೇಖ ಸಲಹೆ ನೀಡಿದ್ದಾರೆ. “ನಾವು ಯೋಚನೆ ಮಾಡಬೇಕು. ಅದರಲ್ಲೂ ನಾನು ಸಿನಿಮಾ ಕಲಾವಿದರು. ನಾನು ಸಿಟ್ಟನ್ನು…

Read More

ಕೊರಟಗೆರೆ: ತಾಲ್ಲೂಕಿನ ತುಂಬಾಡಿ ಮತ್ತು ಸಂಕೇನಹಳ್ಳಿ ಗ್ರಾಮಗಳಲ್ಲಿ ಕೆಪಿಟಿಸಿಎಲ್ ವತಿಯಿಂದ ನಿರ್ಮಾಣವಾಗಿರುವ 66/11 ಕೆವಿ ವಿದ್ಯುತ್ ಉಪಕೇಂದ್ರಗಳ ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಮಾತನಾಡಿದರು. ಗುಣಮಟ್ಟದ ವಿದ್ಯುತ್ಛಕ್ತಿ ಸಿಗುತ್ತಿರಲಿಲ್ಲ. ಈ ಭಾಗದ ರೈತರು ವಿದ್ಯುತ್ ಸಮಸ್ಯೆಯ ಕುರಿತು ಅನೇಕ ಸಲ ಮನವರಿಕೆ ಮಾಡಿದ್ದರು. ತುಂಬಾಡಿ ಮತ್ತು ಸಂಕರೆನಹಳ್ಳಿಗಳಲ್ಲಿ ಎರಡು ಕಡೆ ವಿದ್ಯುತ್ ಉಪಸ್ಥಾವರಗಳನ್ನು ನಿರ್ಮಿಸಲಾಗಿದೆ ಎಂದರು. ಪ್ರಪಂಚದ ಭೂಪಟದಲ್ಲಿ ಎರಡನೇ ಅತಿದೊಡ್ಡ ಸೋಲಾರ್ ಪಾರ್ಕ್ ಪಾವಗಡದಲ್ಲಿ ಸ್ಥಾಪನೆಯಾಗಿದೆ. ಮೂರು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಅವರು ಹೇಳಿದರು. 7 ರಿಂದ 8 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಸಮಸ್ಯೆಯಾಗುತ್ತಿತ್ತು. ಹೊರ ರಾಜ್ಯದಿಂದ ಖರೀದಿಸಲಾಗುತ್ತಿತ್ತು. ಪ್ರಸ್ತುತ ಕರ್ನಾಟಕದಲ್ಲಿ 32 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ನಮ್ಮ ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಪ್ರತಿ ಬಾರಿಯು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ವಿದ್ಯುತ್ ಉತ್ಪಾದನೆಗೆ ಹೆಚ್ಚು ಒತ್ತು ನೀಡಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಕುಸುಮ್…

Read More

ಬೆಂಗಳೂರು : ದೇಶದಲ್ಲಿ ಜಾರಿಯಾಗಿರುವ ಮೂರು ಹೊಸ ಅಪರಾಧ ಕಾನೂನುಗಳ ಪರಿಣಾಮದ ಬಗ್ಗೆ ಈಗಲೇ ಹೇಳಲು ಬರುವುದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ದಾಖಲಾಗುವ ಪ್ರಕರಣಗಳಿಗೆ ಹೊಸ ಕಾನೂನುಗಳು ಅನ್ವಯವಾಗಲಿವೆ. ಹೊಸ ಕಾಯ್ದೆಗಳ ಸಕ್ಸಸ್ ಅಥವಾ ಫೇಲ್ಯೂರ್ ಈಗಲೇ ಗೊತ್ತಾಗುವುದಿಲ್ಲ. ಪ್ರಕರಣಗಳು ದಾಖಲಾದ ಬಳಿಕ ಕೋರ್ಟ್‌ನಲ್ಲಿ ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು. ಇಡೀ ದೇಶದಲ್ಲಿ ಜಾರಿ ಮಾಡಿರುವುದರಿಂದ ಎಲ್ಲ ಕಡೆ ಈ ಬಗ್ಗೆ ಪ್ರತಿಕ್ರಿಯೆ ಬರಬೇಕು. ಸರ್ಕಾರ ಕೆಲ ಪರಿಷ್ಕರಣೆ ಮಾಡಬಹುದು ಎಂದು ಹೇಳಿದರು. ಹೊಸ ಕಾನೂನುಗಳ ಬಗ್ಗೆ ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಪೊಲೀಸರಿಗಾಗಿ ಹೊಸದಾಗಿ ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ. ಪೊಲೀಸರಿಗೆ ಹೊಂದಿಕೆ ಆಗೋವರೆಗೂ ಈ ಆ್ಯಪ್ ನೋಡಿಕೊಂಡು ಕೆಲಸ ಮಾಡಲು ಸಹಾಯವಾಗಲಿದೆ ಎಂದರು. ಕಾನ್ ಸ್ಟೇಬಲ್ ಗಳ ಅಂತರ ಜಿಲ್ಲಾ ವರ್ಗಾವಣೆಗೆ ನಿಯಮಗಳನ್ನು ರೂಪಿಸಲಾಗುತ್ತಿದೆ. ಈವರೆಗೆ ನಿಯಮಗಳಿರಲಿಲ್ಲ.…

Read More

ಬೀದರ್: ಪ್ರತ್ಯೇಕ ಪ್ರಕರಣಗಳಲ್ಲಿ  ಬೀದರ್ ಜಿಲ್ಲಾ ಪೊಲೀಸರು  12 ಲಕ್ಷಕ್ಕೂ ಅಧಿಕ ಮೌಲ್ಯದ ಪಡಿತರ ಅಕ್ಕಿ, ಪೌಷ್ಠಿಕ ಆಹಾರ, ವಾಹನ ಹಾಗೂ ಪಡಿತರ ಸಾಗಾಟ ಮಾಡುತ್ತಿದ್ದ 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಹಿರಿಯ ಅಧಿಕಾರಿಗಳ  ಮಾರ್ಗದರ್ಶನದಂತೆ, ಭಾಲ್ಕಿ ನಗರದ ನ್ಯೂ ಮಾಸುಮಪಾಷಾ ಕಾಲೋನಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಪಡಿತರ ಅಕ್ಕಿಯನ್ನು ಭಾಲ್ಕಿ ನಗರ ಪೊಲೀಸ್ ಠಾಣೆಯ ರಾಜಕುಮಾರ, ಪಿ.ಎಸ್.ಐ, ಸಿಬ್ಬಂದಿ ವಿಕ್ರಮ, ನಿಂಗಣ್ಣಾ, ದಿಲೀಪ, ರಾಜೇಂದ್ರಕುಮಾರ, ಆಹಾರ ನಿರೀಕ್ಷಕರು ಭಾಲ್ಕಿ ಇವರ ಸಮಕ್ಷಮ ದಾಳಿ ಮಾಡಿ 13,600 ರೂಪಾಯಿ ಮೌಲ್ಯದ  4 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಯಿತು. ಅಸ್ಟೂರ ರಿಂಗ್ ರೋಡ್ ಹತ್ತಿರ ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ವಾಹನದ ಮೇಲೆ ಬೀದರ ನಗರ ಪೊಲೀಸ್ ಠಾಣೆ ಪಿ.ಎಸ್.ಐ  ಪ್ರಭಾಕರ ಪಾಟೀಲ್, ಪಿ.ಎಸ್.ಐ ಸಿಬ್ಬಂದಿ ರಮೇಶ, ಗುರುನಾಥ, ಅರುಣಕುಮಾರ, ಆಹಾರ ನಿರೀಕ್ಷಕರು, ಬೀದರ್ ಇವರ ಸಮಕ್ಷಮದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ 26 ಕ್ವಿಂಟಾಲ್ ಅಕ್ಕಿ, ಗೂಡ್ಸ್ ವಾಹನ ವಶಪಡಿಸಿಕೊಳ್ಳಲಾಯಿತು. ಕಮಠಾಣಾ ಈದಗಾ ಹತ್ತಿರ…

Read More

ಶ್ರೀನಗರ: ಅಕ್ರಮ ಮಸೀದಿಯನ್ನು ಕೆಡವಲು ಅಧಿಕಾರಿಗಳು ಜೆಸಿಬಿಗಳನ್ನು ತಂದ ಬೆನ್ನಲ್ಲೇ ಪೊಲೀಸರ ಮೇಲೆ ಜನಸಮೂಹ ದಾಳಿ ಮತ್ತು ಕಲ್ಲು ತೂರಾಟ ಜಮ್ಮುವಿನ ಕಥುವಾದಲ್ಲಿ ನಡೆದಿದೆ. ಪೊಲೀಸ್ ಮತ್ತು ಅಧಿಕಾರಿಗಳ ತಂಡವು ಕಥುವಾದಲ್ಲಿನ ಕಲ್ಯಾಣಪುರ ಪಾದ್ರಿಯ ಸರ್ಕಾರಿ ಭೂಮಿಯಲ್ಲಿ ನಡೆಯುತ್ತಿರುವ ಅಕ್ರಮ ಕಟ್ಟಡಗಳನ್ನು ತೆಗೆದುಹಾಕಲು ಹೋದರು. ಈ ಸಂದರ್ಭದಲ್ಲಿ ಜನರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಘಟನೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮಹಿಳಾ ಪೊಲೀಸ್ ಸೇರಿದಂತೆ ಕನಿಷ್ಠ ಐವರು ಪೊಲೀಸರು ಗಾಯಗೊಂಡಿದ್ದಾರೆ. ಜಿಲ್ಲಾಧಿಕಾರಿ ರಾಕೇಶ್ ಮಿನ್ಹಾಸ್ ಮಾತನಾಡಿ, ಅಕ್ರಮ ನಿವಾಸಿಗಳು ತಮಗೆ ಕಳುಹಿಸಲಾದ ಹಲವು ನೋಟಿಸ್ ಗಳನ್ನು ನಿರ್ಲಕ್ಷಿಸಿದ ನಂತರ ಅತಿಕ್ರಮಣ ವಿರೋಧಿ ಅಭಿಯಾನವನ್ನು ಪ್ರಾರಂಭಿಸಲಾಯಿತು ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA

Read More

ಅಮರನಾಥ ಯಾತ್ರೆ ಶನಿವಾರದಿಂದ ಆರಂಭಗೊಂಡಿದ್ದು, ಮೊದಲ ದಿನವೇ 13 ಸಾವಿರ ಮಂದಿ ಯಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದಿದ್ದಾರೆ. ದೇಶ ವಿದೇಶಗಳಿಂದ ಭಕ್ತಾದಿಗಳು ಆಗಮಿಸುತ್ತಿರುವ ಅಮರನಾಥ ಯಾತ್ರೆಯಲ್ಲಿ ವಿಶಿಷ್ಟ ಭಕ್ತನೊಬ್ಬನ ಯಾತ್ರೆ ಎಲ್ಲರ ಗಮನ ಸೆಳೆದಿದೆ. ಇವರ ಹೆಸರು ಆನಂದ್ ಸಿಂಗ್. ರಾಜಸ್ಥಾನದ ಮೂಲದ ಇವರು 2002 ರಲ್ಲಿ ಅಪಘಾತವೊಂದರಲ್ಲಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರು. ಆದರೆ ಶಿವನ ಭಕ್ತರಾಗಿರುವ ಇವರು ಈ ಬಾರಿ ಹನ್ನೆರಡನೇ ಬಾರಿಗೆ ಅಮರನಾಥ ಯಾತ್ರೆಗೆ ಸಜ್ಜಾಗಿದ್ದಾರೆ. ಕಳೆದ 15 ವರ್ಷಗಳಲ್ಲಿ ಕೇವಲ ಮೂರು ಬಾರಿ ಇವರು ಅಮರನಾಥ ಯಾತ್ರೆಯಲ್ಲಿ ಪಾಲ್ಗೊಂಡಿಲ್ಲ. ಎರಡೂ ಕಾಲುಗಳು ಇಲ್ಲದಿದ್ರೂ ಸಹ ತಮ್ಮ ಕೈಗಳಿಗೆ ಗವಸು ಧರಿಸಿ ತೆವಳುತ್ತಲೇ ಸಾಗುವ ಇವರ ದೈವ ಭಕ್ತಿ ನೂರಾರು ಜನರ ಕಣ್ಣು ತೇವವಾಗಿಸಿದೆ. ಮೊದಲ ಮೂರು ನಾಲ್ಕು ವರ್ಷಗಳ ಇಡೀ ಪರ್ವತ ಚಾರಣವನ್ನು ಕೈಗಳಲ್ಲೇ ಮಾಡಿದೆ. ಈಗ ಡೋಲಿಯಲ್ಲಿ ಸಾಗುತ್ತಿದ್ದೇನೆ ಎಂದು ಆನಂದ್ ಸಿಂಗ್ ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…

Read More

ಜನರಲ್ ಉಪೇಂದ್ರ ದ್ವಿವೇದಿ ಅವರು ದೇಶದ 30ನೇ ಸೇನಾಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಚೀನಾ, ಪಾಕಿಸ್ತಾನ್ ಗಡಿ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿರುವ ಅವರು ಎಲ್.ಎ.ಸಿ. ಸೇರಿದಂತೆ ಹಲವೆಡೆ ಭಾರತ ಸವಾಲು ಎದುರಿಸುತ್ತಿರುವ ವೇಳೆ ಅಧಿಕಾರ ವಹಿಸಿಕೊಂಡಿರುವುದು ಮಹತ್ವ ಪಡೆದುಕೊಂಡಿದೆ. ಈ ಮೊದಲು ಅಧಿಕಾರದಲ್ಲಿದ್ದ ಮನೋಜ್ ಪಾಂಡೆ ಅವರು 4 ದಶಕಗಳ ಸೇವೆ ಬಳಿಕ ನಿವೃತ್ತರಾಗಿದ್ದು, ಅವರ ಸ್ಥಾನವನ್ನು ದ್ವಿವೇದಿ ಅಲಂಕರಿಸಿದ್ದಾರೆ. ಫೆ.19ರಿಂದ ಅವರು ಸೇನೆಯ ಉಪ ಮುಖ್ಯಸ್ಥರಾಗಿದ್ದರು. ಅದಕ್ಕೂ ಮುನ್ನ 2 ವರ್ಷ ಕಾಲ ಉತ್ತರ ಕಮಾಂಡ್ ನ ಮುಖ್ಯಸ್ಥರಾಗಿದ್ದರು. ಇನ್ನು ನೌಕಾಪಡೆಯ ಹಾಲಿ ಮುಖ್ಯಸ್ಥ ಅಡ್ಡಿರಲ್ ದಿನೇಶ್ ತ್ರಿಪಾಠಿ ಅವರು ಉಪೇಂದ್ರ ದ್ವಿವೇದಿ ಅವರ ಕ್ಲಾಸ್‌ಮೇಟ್ ಆಗಿದ್ದಾರೆ ಎನ್ನುವುದು ಮತ್ತೊಂದು ವಿಶೇಷ. 1970ರಲ್ಲಿ ಇಬ್ಬರೂ ಮಧ್ಯಪ್ರದೇಶದ ರೇವಾದ ಸೈನಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಚಾನೆಲ್…

Read More