Author: admin

ತುಮಕೂರು:   ಅನ್ನ, ಅಕ್ಷರ, ವಸತಿ ಉಚಿತವಾಗಿ ಕಲ್ಪಿಸುವ ಮೂಲಕ ಮಕ್ಕಳಿಗೆ  ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ  ತ್ರಿವಿಧ ದಾಸೋಹದ ಕ್ಷೇತ್ರವಾಗಿರುವ  ಸಿದ್ದಗಂಗಾ ಮಠದಲ್ಲಿರುವ ಸ್ಮೃತಿ ವನ  ಪ್ರಸ್ತುತ ಪ್ರವಾಸಿಗರು ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿಯವರ ಭಕ್ತ ಸಮೂಹದ ಕೇಂದ್ರಬಿಂದುವಾಗಿ  ಗೋಚರಿಸುತ್ತಿದೆ. ಹೌದು, ಶತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಆದರ್ಶ ಜೀವನದ ಕುರಿತ ಸಂಪೂರ್ಣ ಚರಿತ್ರೆಯನ್ನು ಮನಮುಟ್ಟುವಂತೆ ಶಿಲ್ಪಕಲಾ ಕೃತಿಗಳ ಮೂಲಕ ಅನಾವರಣಗೊಳಿಸಲಾಗಿದೆ. ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟಿನಿಂದ ಹಿಡಿದು ಸಮಾಜದ ಅನನ್ಯ ಸೇವೆ ಸಲ್ಲಿಸುವಂತಹ   ಅನೇಕ ಸಂಗತಿಗಳನ್ನು ಕಲಾಕೃತಿಗಳ ಮೂಲಕ ಕಟ್ಟಿಕೊಡಲಾಗಿದೆ. ಶ್ರೀ ಶಿವಕುಮಾರ  ಸ್ವಾಮೀಜಿಯವರ ಬಾಲ್ಯಾವಸ್ಥೆ, ಪ್ರೌಢಾವಸ್ಥೆ, ದೀಕ್ಷೆ ಪಡೆದ ಕ್ಷಣ ಹಾಗೂ  ಸಿದ್ದಗಂಗಾ ಮಠಕ್ಕೆ ಸ್ವಾಮೀಜಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣಗಳು ವ್ಯವಸ್ಥಿತವಾಗಿ ಕಲಾಕೃತಿಗಳ ಮೂಲಕ ಮೂಡಿ ಬಂದಿದೆ. ಶ್ರೀ ಶಿವಕುಮಾರ ಸ್ವಾಮೀಜಿಯವರು  ಮಠದಲ್ಲಿ ಪ್ರಾರಂಭದ ವೇಳೆ ಸೌದೆಗಳನ್ನು ಸ್ವತಃ ಒಡೆದು ಮಕ್ಕಳಿಗೆ ಶಿಕ್ಷಣದ ಜೊತೆಗೆ ಕಾಯಕದ ಮಹತ್ವವನ್ನು ಕೂಡ ಸಾರಿರುವುದನ್ನು ಇಲ್ಲಿನ ಕಲಾಕೃತಿಗಳಲ್ಲಿ ನಾವು ಕಾಣಬಹುದಾಗಿದೆ. ಇದಲ್ಲದೆ ಅಂದಿನ ರಾಷ್ಟ್ರಪತಿ…

Read More

ಯಾವುದೇ ಮಾಹಿತಿ ಹಾಗೂ ಮನರಂಜನೆಗಾಗಿ ಮೊದಲು ಯೂಟ್ಯೂಬ್‌ ಅನ್ನು ಓಪನ್‌ ಮಾಡಲಾಗುತ್ತೆವೆ. ಹ್ಯಾಕರ್ಸ್‌ಗಳು ವಿಡಿಯೋ ಮೂಲಕ ನಿಮ್ಮನ್ನು ಎಂತಹ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಗೊತ್ತಾ!? ಹ್ಯಾಕರ್ಸ್‌ಗಳ ಕುತಂತ್ರ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ. ಹ್ಯಾಕರ್ಸ್‌  ಯೂಟ್ಯೂಬ್‌ ಬಳಕೆದಾರರ ಪಾಸ್‌ ವರ್ಡ್‌ ಗಳು, ಕ್ರೆಡಿಟ್ ಕಾರ್ಡ್ ಮಾಹಿತಿ, ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು ಇನ್ನಿತರೆ ಗೌಪ್ಯ ಡೇಟಾವನ್ನು ಈ ಮೂಲಕ ಸುಲಭವಾಗಿ ಕದಿಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಎಐ ಆಧಾರಿತ ವಿಡಿಯೋ ಮೂಲಕ ಖಾಸಗಿ ಮಾಹಿತಿ ಕದಿಯುವ ವಿಡಾರ್‌, ರೆಡ್‌ಲೈನ್‌ ಹಾಗೂ ರಕೂನ್‌ನಂತಹ ಮಾಲ್‌ವೇರ್‌ಗಳಿಗೆ ಈ ವಿಡಿಯೋಗಳು ಲಿಂಕ್‌ ಆಗಿದ್ದು, ಈ ಪ್ರಕ್ರಿಯೆ ನವೆಂಬರ್ 2022 ರಿಂದ, ತಿಂಗಳಿನಿಂದ ತಿಂಗಳಿಗೆ 200-300% ಏರಿಕೆಯಾಗಿದೆ ಎಂದು ಕ್ಲೌಡ್‌ಸೆಕ್ ಎಚ್ಚರಿಕೆ ನೀಡಿದೆ. ಫೋಟೋಶಾಪ್, ಪ್ರೀಮಿಯರ್ ಪ್ರೊ, ಆಟೋಡೆಸ್ಕ್ 3ds ಮ್ಯಾಕ್ಸ್‌ ಸೇರಿದಂತೆ ಇನ್ನಿತರೆ ಕ್ರ್ಯಾಕ್ಡ್ ವರ್ಸನ್‌ ಅನ್ನು ಡೌನ್‌ಲೋಡ್‌ ಮಾಡುವುದು ಹೇಗೆ ಎಂದು ಹೇಳಿಕೊಡುವ ವಿಡಿಯೋಗಳು ಇವಾಗಿರಲಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More

‘ನಾನು ಎಲ್ಲೇ ಹೋದರು ಜನರು ನನ್ನ ಮದುವೆ ಯಾವಾಗ ಮದುವೆ ಯಾವಾಗ ಎಂದು ಕೇಳುತ್ತಲೇ ಇರುತ್ತಾರೆ. ಮದುವೆ ಮಾಡಿಕೊಳ್ಳುವುದಕ್ಕೆ ತುಂಬಾ ಸಮಯವಿದೆ. ನಾನು ಮೊದಲು ಕೆಲಸ ಮಾಡಬೇಕು. ಮದುವೆ ಅನ್ನೋದು ಒಂದು ಸುಂದರ ಅನುಭವ ಸುಮ್ಮನೆ ಯಾರ್ಯಾರನ್ನೋ ಮದುವೆ ಮಾಡಿಕೊಳ್ಳಲು ಆಗುವುದಿಲ್ಲ. ದಯವಿಟ್ಟು ನನ್ನ ಮದುವೆ ಬಗ್ಗೆ ಮಾತ್ರ ಕೇಳಬೇಡಿ. ಎಷ್ಟು ಸಲ ಹೇಳಿದ್ದರೂ ಅಭಿಮಾನಿಗಳು ಅದೇ ಹೇಳುತ್ತಾರೆ’ ‘ಜೀವನದಲ್ಲಿ ನನಗೆ ಇರುವುದು ಒಂದೇ ಭಯ ನನ್ನನ್ನು ಯಾರಾದ್ರೂ ಬಿಟ್ಟು ಹೋಗುತ್ತಾರೆ ಅಂತ. ನನಗೆ ಆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಖಂಡಿತ ಇಲ್ಲ. ದಯವಿಟ್ಟು ಇಂತಹ ವಿಚಾರಗಳನ್ನು ಕೇಳಬೇಡಿ’ ಎನ್ನುತ್ತಲೇ ಅನು ಭಾವುಕರಾಗಿದ್ದಾರೆ. ‘ಮದುವೆ ಆಗಬೇಕು ಎಂದು ಮದುವೆ ಬಗ್ಗೆ ನನ್ನ ತಾಯಿ ಪದೇ ಪದೇ ಹೇಳುತ್ತಲೇ ಇರುತ್ತಾರೆ. ಮನೆಯಲ್ಲಿ ಏನೇ ನಡೆದರೂ ಮೊದಲು ನೀನು ಮದುವೆ ಆಗು ಎನ್ನುತ್ತಾರೆ. ನೀನು ಮದುವೆ ಮಾಡಿಕೋ ಎಲ್ಲಾ ಸರಿ ಹೋಗುತ್ತೆ ಎನ್ನುತ್ತಾರೆ. ಹೀಗೆಲ್ಲಾ ಹೇಳ್ತಾರೆ ಅಂತ ಮದುವೆ ಮಾಡಿಕೊಳ್ಳಲು ಆಗಲ್ಲ. ಇಲ್ಲಿ ಜನರು…

Read More

ಸರ್ಕಾರವು NEET ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಕೆಲವು ತರಬೇತಿ ಕಾರ್ಯಕ್ರಮಗಳನ್ನು (ಕೋಚಿಂಗ್ ಸೆಂಟರ್‌ಗಳು) ಒದಗಿಸುತ್ತಿದೆ. ಇವು ಸಾಮಾನ್ಯವಾಗಿ ಉಚಿತ ಅಥವಾ ಕಡಿಮೆ ಶುಲ್ಕದಲ್ಲಿ ಲಭ್ಯವಿರುತ್ತವೆ. ಹೆಚ್ಚಿನ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ಈ ತರಬೇತಿಗಳನ್ನು ಆಯೋಜಿಸುತ್ತವೆ. ಇಲ್ಲಿವೆ ಕೆಲವು ಪ್ರಮುಖ ಸ್ಕೀಮುಗಳು ಮತ್ತು ಕಾರ್ಯಕ್ರಮಗಳು: 1. ಸಂತ್ಯಾಕ್ಷರ ತರಬೇತಿ (Super 30): ಅನೇಕ ರಾಜ್ಯ ಸರ್ಕಾರಗಳು “Super 30” ಮಾದರಿಯನ್ನು ಅನುಸರಿಸಿ, ನಿರ್ದಿಷ್ಟ ಸಂಖ್ಯೆಯ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ NEET ಕೋಚಿಂಗ್ ತರಬೇತಿಗಳನ್ನು ಒದಗಿಸುತ್ತವೆ. 2. ಆರ್ ಟಿ ಈ. (RTE)ಸೇವೆಗಳು: ಕೆಲ ರಾಜ್ಯಗಳು RTE (Right to Education) ಆಧಾರದ ಮೇಲೆ ಆರ್ಥಿಕವಾಗಿ ಹಿಂದುಳಿದ ಮತ್ತು ಎಸ್‌ಸಿ/ಎಸ್‌ಟಿ/ಓಬಿಸಿ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಅಥವಾ ಕಡಿಮೆ ಶುಲ್ಕದಲ್ಲಿ ತರಬೇತಿಗಳನ್ನು ಒದಗಿಸುತ್ತವೆ. 3. ನವೋದಯ ವಿದ್ಯಾಲಯ ಸಮಿತಿ (NVS): ನವೋದಯ ವಿದ್ಯಾಲಯ ಸಮಿತಿಯು NEET ತಯಾರಿಗಾಗಿ ವಿಶೇಷ ತರಬೇತಿಗಳನ್ನು ತನ್ನ ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. 4.…

Read More

ತುಟಿಗಳನ್ನು ಹೆಚ್ಚು ಆಕರ್ಷಕವಾಗಿಸಲು ಲಿಪ್ ಸ್ಟಿಕ್ ಬಳಸುತ್ತಿದ್ದಾರೆ.. ಅದರಿಂದ ಭವಿಷ್ಯದಲ್ಲಿ ದೊಡ್ಡ ಅಪಾಯವನ್ನು ಎದುರಿಸಲಿದ್ದಾರೆ. ಲಿಪ್ ಸ್ಟಿಕ್‌ನಿಂದ  ಹಲವು ಆರೋಗ್ಯ ಸಮಸ್ಯೆಗಳೂ ಬರಬಹುದು ಎನ್ನುತ್ತಾರೆ ತಜ್ಞರು. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ನ ವೆಬ್ಸೈಟ್ನಲ್ಲಿನ ಅಧ್ಯಯನದ ಪ್ರಕಾರ, ಲಿಪ್ಸ್ಟಿಕ್ನಲ್ಲಿ ಬಣ್ಣವನ್ನು ತಯಾರಿಸಲು ಮ್ಯಾಂಗನೀಸ್, ಸೀಸ ಮತ್ತು ಕ್ಯಾಡ್ಮಿಯಂನಂತಹ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇವುಗಳನ್ನು ಒಳಗೊಂಡಿರುವ ಲಿಪ್ ಸ್ಟಿಕ್ ಬಳಸುವುದರಿಂದ ದೇಹದಲ್ಲಿ ಅಲರ್ಜಿ ಉಂಟಾಗಬಹುದು. ಲಿಪ್ಸ್ಟಿಕ್ ತಯಾರಿಕೆಯಲ್ಲಿ ಬಳಸುವ ಸೀಸವು ಗರ್ಭಧಾರಣೆಗೆ ಅಪಾಯಕಾರಿ. ಇದು ಗರ್ಭಿಣಿ ಮಹಿಳೆ ಮತ್ತು ಅವಳ ಭ್ರೂಣಕ್ಕೆ ಹಾನಿ ಮಾಡುತ್ತದೆ. ಲಿಪ್ ಸ್ಟಿಕ್ ತುಟಿಗಳ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತದೆ ಮತ್ತು ರಕ್ತದಲ್ಲಿ ಸೀಸದ ಮಟ್ಟವನ್ನು ಹೆಚ್ಚಿಸುತ್ತದೆ. ಲಿಪ್ ಸ್ಟಿಕ್ ನಲ್ಲಿರುವ ರಾಸಾಯನಿಕಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಲಿಪ್ ಸ್ಟಿಕ್ ಗೆ ಸೇರಿಸುವ ಪೆಟ್ರೋಕೆಮಿಕಲ್ ಬುದ್ಧಿವಂತಿಕೆ, ಸಂತಾನೋತ್ಪತ್ತಿ ವ್ಯವಸ್ಥೆ ಮತ್ತು ದೇಹದ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಲಿಪ್ ಸ್ಟಿಕ್ ಗಳನ್ನು ತುಟಿಗೆ ಹಚ್ಚುವುದರಿಂದ ತುಟಿಗಳು ಕಪ್ಪಾಗುತ್ತದೆಯಂತೆ. ಯಾಕೆಂದರೆ ಅದರಲ್ಲಿರುವ…

Read More

ಲೋಕಸಭಾ ಚುನಾವಣೆಯ ಗೆಲುವಿನ ನಂತರ ಮೊದಲ ಬಾರಿಗೆ ‘ಮನ್ ಕಿ ಬಾತ್’ ಕಾರ್ಯಕ್ರಮದ 111 ನೇ ಕಂತಿನಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಾವೆಲ್ಲರೂ ಫೆಬ್ರವರಿಯಿಂದ ಕಾಯುತ್ತಿದ್ದ ದಿನ ಇಂದು ಬಂದಿದೆ. ‘ಮನ್ ಕಿ ಬಾತ್’ ಮೂಲಕ ನಾನು ಮತ್ತೊಮ್ಮೆ ನಿಮ್ಮ ನಡುವೆ, ನನ್ನ ಕುಟುಂಬ ಸದಸ್ಯರ ನಡುವೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಇಂದಿನಿಂದ ಮತ್ತೊಮ್ಮೆ, ತಮ್ಮ ಕೆಲಸದ ಮೂಲಕ ಸಮಾಜ ಮತ್ತು ದೇಶದಲ್ಲಿ ಬದಲಾವಣೆಗಳನ್ನು ತರುತ್ತಿರುವ ಅಂತಹ ದೇಶವಾಸಿಗಳ ಬಗ್ಗೆ ನಾವು ‘ಮನ್ ಕಿ ಬಾತ್’ ನಲ್ಲಿ ಚರ್ಚಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು. ನಾವು ನಮ್ಮ ಶ್ರೀಮಂತ ಸಂಸ್ಕೃತಿ, ಭವ್ಯ ಇತಿಹಾಸ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಪ್ರಯತ್ನಗಳ ಬಗ್ಗೆ ಚರ್ಚಿಸುತ್ತೇವೆ. ಸ್ನೇಹಿತರೇ, ಫೆಬ್ರವರಿಯಿಂದ ಇಲ್ಲಿಯವರೆಗೆ, ತಿಂಗಳ ಕೊನೆಯ ಭಾನುವಾರ ಸಮೀಪಿಸಿದಾಗಲೆಲ್ಲಾ, ನಿಮ್ಮೊಂದಿಗೆ ಈ ಸಂವಹನದ ಕೊರತೆಯನ್ನು ನಾನು ಅನುಭವಿಸಿದೆ.ಆದರೆ ಈ ತಿಂಗಳುಗಳಲ್ಲಿ ನೀವು ನನಗೆ ಲಕ್ಷಾಂತರ ಸಂದೇಶಗಳನ್ನು…

Read More

ದರ್ಶನ್ ಖೈದಿ ನಂಬರ್ 6106 ಸ್ಟಿಕ್ಕರ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಇದರ ಬೆನ್ನಲ್ಲೇ ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ ಎದುರಾಗಿದ್ದು, ರೂಲ್ಸ್‌ ಬ್ರೇಕ್‌ ಮಾಡಿದರೆ ಕೇಸ್‌ ಬೀಳುತ್ತೆ ಎಂಬ ಎಚ್ಚರಿಕೆಯನ್ನು ಬೆಂಗಳೂರು ಟ್ರಾಫಿಕ್‌ ಪೊಲೀಸರು ನೀಡಿದ್ದಾರೆ. ದರ್ಶನ್‌ಗೆ ಜೈಲಿನಲ್ಲಿ ಖೈದಿ ನಂಬರ್ 6106 ಅನ್ನು ನೀಡಲಾಗಿದೆ. ಈ ನಂಬರ್‌ ಅನ್ನೇ ಸ್ಟಿಕರ್‌ ಮಾಡಿಕೊಂಡಿರುವ ಫ್ಯಾನ್ಸ್ ತಮ್ಮ ವಾಹನಗಳಿಗೆ ಅಂಟಿಸಿಕೊಳ್ಳುತ್ತಿದ್ದಾರೆ. ಇದೀಗ ನಂಬರ್ ಪ್ಲೇಟ್ ಮರೆಮಾಚಿ ಸ್ಟಿಕ್ಕರ್ ಅಂಟಿಸಿದವರಿಗೆ ಸಂಕಷ್ಟ ಎದುರಾಗಿದೆ. ವಾಹನಗಳ ನಂಬರ್ ಪ್ಲೇಟ್ ಮರೆಮಾಚುವಂತಿಲ್ಲ. ನಂಬರ್‌ ಪ್ಲೇಟ್ ಇರುವ ಕಡೆ ಸ್ಟಿಕ್ಕರ್‌ಗಳನ್ನು ಅಂಟಿಸುವಂತಿಲ್ಲ. ಈ ರೀತಿ ಮಾಡಿದರೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಂತೆ ಆಗುತ್ತದೆ. ಖೈದಿ ನಂಬರ್ ಸ್ಟಿಕ್ಕರ್ ಅಂಟಿಸಿ ನಂಬರ್ ಪ್ಲೇಟ್ ಮರೆ ಮಾಚಿರುವವರ ವಿರುದ್ಧ ಕೇಸ್ ದಾಖಲಿಸಲು ಟ್ರಾಫಿಕ್‌ ಪೊಲೀಸರು ಮುಂದಾಗಿದ್ದಾರೆ. ಡಿಫೆಕ್ಟಿವ್ ನಂಬರ್ ಪ್ಲೇಟ್ ಅಡಿ ಕೇಸ್ ದಾಖಲಾಗುತ್ತದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…

Read More

14 ವರ್ಷಗಳ ನಂತರ ಭಾರತ ತಂಡಕ್ಕೆ ಮತ್ತೊಮ್ಮೆ ಐಸಿಸಿ ಟಿ20 ವಿಶ್ವಕಪ್ ಸಿಕ್ಕಂತಾಗಿದೆ. ಹಾಗಾದ್ರೆ ಈಗ ಕಪ್ ಗೆದ್ದಿರುವ ಭಾರತ ತಂಡಕ್ಕೆ ಸಿಕ್ಕ ಬಹುಮಾನದ ಹಣ ಎಷ್ಟು ಕೋಟಿ? ಬಹುಮಾನದ ಹಣದಲ್ಲಿ ಯಾವ ಯಾವ ಆಟಗಾರರಿಗೆ ಎಷ್ಟು ಕೋಟಿ ರೂಪಾಯಿ ಹಣ ಹಂಚಿಕೆ ಆಗಲಿದೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ. ಭಾರತ ತಂಡಕ್ಕೆ ಒಟ್ಟಾರೆ 20 ಕೋಟಿ 40 ಲಕ್ಷ ರೂಪಾಯಿಗು ಹೆಚ್ಚು ಹಣ ಬಹುಮಾನದ ರೂಪದಲ್ಲಿ ಸಿಕ್ಕಿದೆ. ಫೈನಲ್‌ ಪಂದ್ಯದಲ್ಲಿ ಸೋತ ದಕ್ಷಿಣ ಆಫ್ರಿಕಾಗೆ 10 ಕೋಟಿ 68 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಇನ್ನು ಭಾರತ ತಂಡಕ್ಕೆ ಈಗ ಸಿಕ್ಕಿರುವ 20 ಕೋಟಿ 42 ಲಕ್ಷ ರೂಪಾಯಿ ಹಣದಲ್ಲಿ ತಂಡದ ಪ್ರತಿಯೊಬ್ಬ ಆಟಗಾರ, ಕೋಚ್, ಸಹಾಯಕ ಸಿಬ್ಬಂದಿ ಸೇರಿದಂತೆ ತಂಡದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಇಷ್ಟು ಅಂತಾ ಹಣ ಸಿಗಲಿದೆ. ಇದು ಕೇವಲ ಆ ತಂಡಕ್ಕೆ ಸಿಗುವ ಹಣವಾಗಿದ್ದರೆ, ಮ್ಯಾನ್ ಆಫ್ ದಿ ಸೀರಿಸ್, ಅತಿಹೆಚ್ಚು ವಿಕೆಟ್ ತೆಗೆದ…

Read More

ತುಳು ಭಾಷೆಗೆ ಜಾಗತಿಕವಾಗಿ ಸ್ಥಾನ ಮಾನ ದೊರಕಲು ಪ್ರಯತ್ನಗಳು ನಡೆಯುತ್ತಿದ್ದು ಅದರ ಭಾಗವಾಗಿ ಗೂಗಲ್ ಟ್ರಾನ್ಸೇಲಟರ್ ನಲ್ಲಿ ಇತರ ಭಾಷೆಗಳಿಂದ ತುಳು ಭಾಷೆಯ ಅರ್ಥಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಗೂಗಲ್ ಟ್ರಾನ್ಸೇಲಟರ್ ನಲ್ಲಿ ತುಳು ಸೇರ್ಪಡೆಗೊಂಡಿರುವುರಿಂದ ತುಳುನಾಡಿಗೆ ಬರುವ ಪ್ರವಾಸಿಗರಿಗೆ ತುಳುವರೊಂದಿಗೆ ಮಾತನಾಡಲು ಅನುಕೂಲವಾಗಲಿದೆ. ಗೂಗಲ್ ಟ್ರಾನ್ಸ್‌ಲೇಟರ್‌ ಪಟ್ಟಿಯಲ್ಲಿ ತುಳು ಭಾಷೆಗೂ ಮಾನ್ಯತೆ ಲಭಿಸಿದ್ದು, ಇದು ತುಳು ಭಾಷಾ ಪ್ರೇಮಿಗಳಲ್ಲಿ ಸಂತಸವನ್ನು ತಂದಿದೆ. ಇನ್ಮುಂದೆ ತುಳು ಭಾಷಿಗರು ಇಂಗ್ಲಿಷ್ ಅಥವಾ ಬೇರೆ ಯಾವುದೇ ಪದಗಳನ್ನು ಗೂಗಲ್ ಅನುವಾದದಲ್ಲಿ ನೇರವಾಗಿ ತುಳಿವಿನಲ್ಲಿಯೇ ಅರ್ಥ ಮಾಡಿಕೊಳ್ಳಬಹುದು. ಇದಲ್ಲದೆ, ಇದು ಅನ್ಯ ಭಾಷಿಕರಿಗೂ ತುಳು ಪದಗಳನ್ನು (ಭಾಷೆ) ಅರ್ಥ ಮಾಡಿಕೊಳ್ಳುವುದಕ್ಕೆ ಅನುಕೂಲವಾಗಿದೆ. ಕೆಲವು ಸಂದರ್ಭದಲ್ಲಿ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವುದು ಸಾಮಾನ್ಯ ವಿಚಾರ. ಇಂತಹ ಸಂದರ್ಭಗಳಲ್ಲಿ ಅಲ್ಲೇ ಇರುವ ಫೀಡ್ ಬ್ಯಾಕ್ ಕಾಲಮ್ ನಲ್ಲಿ ಸರಿಯಾದ ಶಬ್ದವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದರೆ ಗೂಗಲ್ ಅದನ್ನು ಮುಂದಕ್ಕೆ ಸರಿ ಮಾಡಿಕೊಳ್ಳುವುದು. ಈ ಅಂಶವನ್ನು ತುಳುವರು ಸಮರ್ಪಕವಾಗಿ ಬಳಸಿಕೊಂಡರೆ ತುಳುವರಿಗೆ ಹಾಗೂ ತುಳುವೇತರರಿಗೂ…

Read More

ಬೆಂಗಳೂರು: ಎಲ್ಲಾ ಸ್ವಾಮೀಜಿಗಳಿಗೂ ಕೈ ಮುಗಿಯುತ್ತೇನೆ, ನಮ್ಮ ರಾಜಕಾರಣದ ಸುದ್ದಿಗೆ ನೀವು ಬರಲು ಹೋಗಬೇಡಿ ಎಂದು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ಸಿಎಂ, ಡಿಸಿಎಂ ಬದಲಾವಣೆ ವಿಚಾರವಾಗಿ ಲಿಂಗಾಯತ ಸ್ವಾಮೀಜಿಗಳು ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಪದೇ, ಪದೇ ಸ್ವಾಮೀಜಿಗಳ ಮಧ್ಯ ಪ್ರವೇಶದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ಪಕ್ಷದ ಹಿತ ದೃಷ್ಟಿಯಿಂದ ಹೇಗೆ ಕೆಲಸ ಮಾಡಬೇಕು ಎನ್ನುವ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾನು, ಸಿದ್ದರಾಮಯ್ಯ ತೀರ್ಮಾನಕ್ಕೆ ಬಂದಿದ್ದೇವೆ. ಈ ವಿಚಾರವಾಗಿ ಯಾವುದೇ ಸಚಿವರು, ಶಾಸಕರು, ಸ್ವಾಮೀಜಿಗಳು ಮಾತನಾಡುವ ಅವಶ್ಯಕತೆ ಇಲ್ಲ ಎಂದು ಡಿಕೆಶಿ ಹೇಳಿದರು. ಹೈಕಮಾಂಡ್ ಬಳಿ ಡಿಸಿಎಂ, ಸಿಎಂ ಬದಲಾವಣೆ ಬಗ್ಗೆ ಚರ್ಚೆಯಾಯಿತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, “ಡಿಸಿಎಂ, ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಬಳಿ ಚರ್ಚೆಯಾಗಿಲ್ಲ. ಸ್ವಾಮೀಜಿಗಳು ಅಭಿಮಾನಪೂರ್ವಕವಾಗಿ ಮಾತನಾಡಿದ್ದಾರೆ. ಸ್ವಾಮೀಜಿಗಳ ಆಶೀರ್ವಾದ ಇದ್ದರೆ ಸಾಕು. ಅವರು ಒಳಗಿನಿಂದಲೇ ಹರಸಿದರೆ ಸಾಕು. ನಾನು ಸಿಎಂ ಆಗಲು…

Read More