Subscribe to Updates
Get the latest creative news from FooBar about art, design and business.
- ಮಕ್ಕಳು ದುಶ್ಚಟಗಳಿಂದ ದೂರವಿರಿ: ಅಬಕಾರಿ ಉಪ ಅಧೀಕ್ಷಕ ದೀಪಕ್ ಎಸ್. ಕರೆ
- ಸರಗೂರು: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರ್ಥಪೂರ್ಣ ವಿಶ್ವ ಜನಸಂಖ್ಯಾ ದಿನಾಚರಣೆ
- ಸರಗೂರು: ದಲಿತ ಸಂಘರ್ಷ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ; ಸಂಘಟನೆ ಬಲವರ್ಧನೆಗೆ ಕರೆ
- ಹಾದನೂರು ಸರ್ಕಾರಿ ಶಾಲೆಗೆ ‘ಗಿಫ್ಟ್ ಎ ಡ್ರೀಮ್ಸ್ ಫೌಂಡೇಷನ್’ ಆಸರೆ: ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ, ಸಮವಸ್ತ್ರ ವಿತರಣೆ
- ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಪತ್ರಿಕಾ ದಿನಾಚರಣೆಗೆ ಅಧಿಕೃತ ಆಹ್ವಾನ
- ಸರಗೂರು: ರಸ್ತೆ ಅಭಿವೃದ್ಧಿಯಿಂದ ಗ್ರಾಮೀಣ ಭಾಗಕ್ಕೆ ಹೊಸ ಚೈತನ್ಯ — ಶಾಸಕರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ
- ಬೀದರ್: ಮಳೆ ಅಭಾವ; ವಲಸೆ ತಡೆಗೆ ‘ವಿಬಿ-ಜಿ ರಾಮ್ ಜಿ’ ಅಡಿ ಕೆಲಸ ನೀಡಲು ಸಚಿವ ಈಶ್ವರ ಖಂಡ್ರೆ ಸೂಚನೆ
- ಸರಗೂರು: ಧಾರ್ಮಿಕ ಕ್ಷೇತ್ರದ ಸಮೀಪ ಬಾರ್ ತೆರವಿಗೆ ಆಗ್ರಹಿಸಿ ತಾಲೂಕು ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆ
Author: admin
ವೆಸ್ಟ್ ಇಂಡೀಸ್ ನ ಬಾರ್ಬಡೋಸ್ ಮೈದಾನದಲ್ಲಿ ನಡೆದ ಟಿ 20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ T20 WC-2024ನ್ನು ಭಾರತ ತನ್ನದಾಗಿಸಿಕೊಂಡಿದೆ. ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಸೋಲಿಸಿದೆ. ನಿನ್ನೆ ಬ್ರಿಡ್ಜ್ ಟೌನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತದ ಬ್ಯಾಟಿಂಗ್ ಮಶೀನ್ ವಿರಾಟ್ ಕೊಹ್ಲಿ 76 ರನ್ ಹಾಗೂ ಅಕ್ಷರ್ ಪಟೇಲ್ 47 ರನ್ ಗಳ ನೆರವಿನಿಂದ 176 ರನ್ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಷ್ಟೇ ಶಕ್ತವಾಗಿದ್ದು 7 ರನ್ ಗಳಿಂದ ವಿರೋಚಿತ ಸೋಲು ಕಂಡಿದೆ. ಭಾರತ 20 ಓವರ್‌ಗಳಲ್ಲಿ ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಂದ ದಕ್ಷಿಣ ಆಫ್ರಿಕಾಗೆ ಸಾದಾರಣ ಅನ್ನುವ ಸವಾಲ್ ನೀಡಿತ್ತು. ಈ ಸವಾಲನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಕೊನೆಗೆ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಸಾಧ್ಯವಾಯಿತು. ದಕ್ಷಿಣ ಆಫ್ರಿಕ್ರಾ ಸೋಲೊಪ್ಪಿಕೊಂಡು ಶರಣಾದ…
ತುಮಕೂರು: ಸಿದ್ದಗಂಗಾ ಮಠದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ KSRTC ಬಸ್ ವ್ಯವಸ್ಥೆ ಮಾಡಲಾಗಿದೆ. ಕುಣಿಗಲ್ ಮತ್ತು ಮದ್ದೂರು ಮಾರ್ಗ ವಾಗಿ ಪ್ರತಿ ದಿನ ಮುಂಜಾನೆ 4 ಗಂಟೆಗೆ ಸಿದ್ದಗಂಗಾ ಮಠದಿಂದ ಹೊರಟು ಬೆಳಿಗ್ಗೆ 10ಕ್ಕೆ ಮಹದೇಶ್ವರ ಬೆಟ್ಟ ತಲುಪಲಿದೆ. ಪುನಃ ಮಹದೇಶ್ವರ ಬೆಟ್ಟ ದಿಂದ ಮಧ್ಯಾಹ್ನ 2:30ಕ್ಕೆ ಹೊರಟು ರಾತ್ರಿ 9ಕ್ಕೆ ಸಿದ್ದಗಂಗಾಮಠ ತಲುಪಲಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಭಾರತದಲ್ಲಿ ಸಣ್ಣ ಹಾಗೂ ದೊಡ್ಡ ರೈಲ್ವೆ ಸ್ಟೇಷನ್ ಗಳನ್ನು ಹಿಡಿದು ಒಟ್ಟು 8,300 ಕ್ಕೂ ಅಧಿಕ ಸ್ಟೇಷನ್ ಗಳಿವೆ. ರೈಲಿನಲ್ಲಿ ಪ್ರಯಾಣ ಮಾಡುವಾಗ ಹಲವಾರು ದೊಡ್ಡ ಹಾಗೂ ಚಿಕ್ಕ ರೈಲು ನಿಲ್ದಾಣಗಳು ಬರುತ್ತವೆ, ನೀವು ನೋಡಿರಬಹುದು ದೊಡ್ಡ ರೈಲು ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ನ ರೈಲ್ವೆ ಟ್ರ್ಯಾಕ್ ಗಳನ್ನು ಕಾಂಕ್ರೀಟ್ ಮಾಡಲಾಗಿರುತ್ತದೆ, ಆದರೆ ಸಣ್ಣ ಪುಟ್ಟ ರೈಲು ನಿಲ್ದಾಣಗಳ ಬಳಿ ಇರುವ ರೈಲು ಹಳಿಗಳಿಗೆ ಕಾಂಕ್ರೀಟ್ ಮಾಡಿರುವುದಿಲ್ಲ, ಬದಲಾಗಿ ಕಲ್ಲುಗಳನ್ನು ಸುರಿಯಲಾಗಿರುತ್ತದೆ. ರೈಲು ಕಂಬಿಗಳ ನಡುವೆ ಕಲ್ಲುಗಳನ್ನು ಏಕೆ ಹಾಕಲಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ, ಈ ರೀತಿ ಕಲ್ಲುಗಳನ್ನು ಸುರಿದಿರುವುದನ್ನು ಬೈಲೆಸ್ಟ್ (Ballast On Track) ಅಥವಾ ನಿಲುಭಾರ ಎಂದು ಕರೆಯಲಾಗುತ್ತದೆ. ರೈಲು ಅತ್ಯಂತ ವೇಗವಾಗಿ ರೈಲು ಹಳಿಗಳ ಮೇಲೆ ಬರುವಾಗ ಕಂಬಿಗಳ ಕಂಪನ ಹಾಗೂ ಶಬ್ದವಿರುತ್ತದೆ, ಈ ರೀತಿ ಕಲ್ಲುಗಳನ್ನು ಹಳಿಗಳ ಮಧ್ಯದಲ್ಲಿ ಹಾಕುವದರಿಂದ ಕಂಪನ ಹಾಗೂ ಶಬ್ದವನ್ನು ಕಡಿಮೆಯಾಗುತ್ತದೆ. ಟ್ರ್ಯಾಕ್ ಗಳ ಕೆಳಗೆ ಸಾಕಷ್ಟು ಚಿಕ್ಕ ಕಲ್ಲುಗಳನ್ನು ಸುರಿಯಲಾಗಿರುತ್ತದೆ. ಕಂಬಿಗಳ ಕಂಪನ…
2016 ರ ಜೂನ್ 15 ರಂದು ಧಾರವಾಡದಲ್ಲಿ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶ್ ಗೌಡ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯಾಗಿರೋ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲೆಗೆ ಬರಲು ಅವಕಾಶ ಇಲ್ಲ ಎಂದು ಈ ಹಿಂದೆಯೇ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಕೊಲೆ ಪ್ರಕರಣದಲ್ಲಿ ಆರೋಪಿಯಾದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ಈ ಹಿಂದೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಒಂದು ವೇಳೆ ಧಾರವಾಡಕ್ಕೆ ತೆರಳಿದರೆ ಜಾಮೀನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿತ್ತು. ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಕಂಡರೂ ಶಾಸಕನಿಗೆ ಧಾರವಾಡ ಜಿಲ್ಲೆ ಪ್ರವೇಶದ ಮೇಲಿರುವ ನಿರ್ಬಂಧ ತೆರವು ಮಾಡಿಲ್ಲ. ಈಗ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಪ್ರವೇಶ ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾ ಮಾಡಿದೆ. ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶ ಆರೋಪಗಳಿರುವ ಹಿನ್ನೆಲೆಯಲ್ಲಿ ಮತ್ತೆ ಜಿಲ್ಲೆಯ ಪ್ರವೇಶವನ್ನು ನ್ಯಾಯಾಲಯ…
ಪುತ್ತೂರು: ಮೊದಲ ಸೀಸನ್’ನ ಯಶಸ್ವಿ ಪಯಣದೊಂದಿಗೆ, ಸಾವಿರಾರು ಸಂತೃಪ್ತ ಗ್ರಾಹಕರನ್ನು ಪಡೆದ “ಬ್ರೈಟ್ ಭಾರತ್” ಸಂಸ್ಥೆ ಇದೀಗ ಈ ಭಾಗದಲ್ಲಿ ಪ್ರಪ್ರಥಮ ಬಾರಿಗೆ, ಆರು ಸುಸಜ್ಜಿತ ಮನೆಯೊಂದಿಗೆ ನಾಲ್ಕು ಐಶಾರಾಮಿ ಕಾರು, ನಾಲ್ಕು ಸುಸಜ್ಜಿತ ಜಾಗ, ಚಿನ್ನ, ಡೈಮಂಡ್’ಗಳನ್ನು ಬಹುಮಾನವಾಗಿ ನೀಡುವ ಮತ್ತೊಂದು ಹೊಸ ಯೋಜನೆಯನ್ನು ಬಿಡುಗಡೆಗೊಳಿಸಿದೆ. ಸೇರಿದ ಯಾವ ಗ್ರಾಹಕರಿಗೂ ನಷ್ಟವಿಲ್ಲದ ರೀತಿಯಲ್ಲಿ, ಪ್ರತೀ ತಿಂಗಳು ಕೂಡ ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳಿರುವ ವಿಭಿನ್ನ ಯೋಜನೆ ಇದಾಗಿದ್ದು. ಬಡವರ ಸ್ವಂತ ಮನೆಯ ಕನಸನ್ನು ಬ್ರೈಟ್ ಭಾರತ್‌ನ ಈ ಯೋಜನೆ ನನಸು ಮಾಡಲಿದೆ. ಬ್ರೈಟ್ ಭಾರತ್ ಸದಸ್ಯರಾಗುವುದು ಹೇಗೆ!? ಬ್ರೈಟ್ ಭಾರತ್ ಸದಸ್ಯರಾಗಲು ನಿಮ್ಮ ಹೆಸರು, ಸ್ಥಳ, ಮೊಬೈಲ್ ನಂಬರ್, ಇಷ್ಟು ಮಾಹಿತಿಯನ್ನು 91 86185 14684ಈ ನಂಬರ್‌ಗೆ ವಾಟ್ಸಪ್ ಮಾಡಬಹುದು ಅಥವಾ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಬ್ರೈಟ್ ಭಾರತ್ ಯೋಜನೆಯ ಬಗ್ಗೆ ಮಾಹಿತಿ ವಿಶೇಷವಾಗಿ ಇದೊಂದು ಉಳಿತಾಯ ಯೋಜನೆಯಾಗಿದ್ದು, ಪ್ರತಿ ತಿಂಗಳ ತಮ್ಮ ಉಳಿತಾಯದ ಸಾವಿರ ರೂಪಾಯಿಯನ್ನು ಇಪ್ಪತ್ತು ತಿಂಗಳು…
ಕಣ್ಣೂರು: ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆಯಾದ ಪರಿಣಾಮ ನರ್ಸಿಂಗ್ ಕಾಲೇಜಿನ ಎಂಟು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ರಾಮಪುರಂನಲ್ಲಿ ನಡೆದಿದೆ. ಶುಕ್ರವಾರ ಸಂಜೆ ಕರ್ನಾಟಕದಿಂದ ಎರ್ನಾಕುಲಂಗೆ ತೆರಳುತ್ತಿದ್ದಾಗ ಟ್ಯಾಂಕರ್ ಲಾರಿಯಿಂದ ಹೈಡ್ರೋಕ್ಲೋರಿಕ್ ಆಯಸಿಡ್ ಸೋರಿಕೆಯಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸೋರಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಯತ್ನಿಸಿದರಾದರೂ. ಸಂಪೂರ್ಣ ತಡೆ ಸಾಧ್ಯವಾಗಿಲ್ಲ. ಗ್ಯಾಸ್ ಸೋರಿಕೆಯ ಪರಿಣಾಮ ಇಲ್ಲಿನ ಸಮೀಪದ ಕಾಲೇಜು ವಿದ್ಯಾರ್ಥಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಮತ್ತು ಪಳಯಾಂಗಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಟ್ಯಾಂಕರ್ ನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಗ್ಯಾಸ್ ಅನ್ನು ಮತ್ತೊಂದು ಟ್ಯಾಂಕರ್‌ಗೆ ವರ್ಗಾಯಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಬಳ್ಳಾರಿ: ವಾಲ್ಮೀಕಿ ನಿಗಮದ ಹಗರಣದ ಹಿನ್ನಲೆ ಶ್ರೀರಾಮುಲು ಧರಣಿ ನಡೆಸುತ್ತಿದ್ದು, ಡಿಸಿ ಕಚೇರಿ ಮುಂದೆ ಧರಣಿ ನಡೆಯುತ್ತಿರುವ ಧರಣಿ ಶನಿವಾರ ಬೆಳಿಗ್ಗೆಯೂ ಮುಂದುವರೆದಿದೆ. ವಾಲ್ಮೀಕಿ ನಿಗಮದಲ್ಲಿ ಸರಕಾರವು ಪಾತ್ರ ಇರುವುದರಿಂದ ಸಿಎಂ ರಾಜೀನಾಮೆಗೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಕೂಡಲೇ ಬಂಧಿಸಬೇಕು, ಹಗರಣದ ಪ್ರತಿ ಪೈಸೆಯು ರಿಕವರಿ ಮಾಡಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ರಾಜ್ಯ ಸರಕಾರ ಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜಕುಮಾರ್ ಅಣ್ಣಾವ್ರು ಅವರನ್ನು ಹೊರತುಪಡಿಸಿದರೆ ಅತಿ ಹೆಚ್ಚು ಅಭಿಮಾನಿಗಳ ಬಳಗವನ್ನು ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಕರಣವೊಂದರಲ್ಲಿ ಸಿಲುಕಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಹಿನ್ನಲೆಯಲ್ಲಿ ಜುಲೈ ತಿಂಗಳ 19 ರಂದು ಬಿಡುಗಡೆ ಆಗಬೇಕಿದ್ದ ಬಹು ನಿರೀಕ್ಷಿತ ಅಡವಿ ಚಿತ್ರದ ಬಿಡುಗಡೆಯನ್ನು ತಾತ್ಕಾಲಿಕ ವಾಗಿ ಮುಂದೂಡಲಾಗಿದೆ ಅವರ ಹುಟ್ಟುಹಬ್ಬ ಕೂಡ ಆಚರಿಸಿಕೊಳ್ಳುವುದಿಲ್ಲ ಎಂದು ನಿರ್ದೇಶಕ ನಿರ್ಮಾಪಕ ಟೈಗರ್ ನಾಗ್ ತಿಳಿಸಿದ್ದಾರೆ. ಪರಭಾಷೆ ಗಳಲ್ಲಿ ನಟಿಸದೆ ಕೇವಲ ಕನ್ನಡ ಚಿತ್ರಗಳಲ್ಲಿ ನಟಿಸುತ್ತಾ ಪ್ರತಿಭೆ ಮತ್ತು ಸ್ವ ಪ್ರಯತ್ನದಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ, ಕನ್ನಡ ಚಿತ್ರಗಳಿಗೆ ಪ್ಯಾಮಿಲಿ ಆಡಿಯನ್ಸ್ ಗಳನ್ನೂ ಥಿಯೇಟರ್ ಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಗಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಗುರುತನ್ನು ಮೂಡಿಸುತ್ತಿದ್ದ ದರ್ಶನ್ ಅವರು, ಈಗ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದು ಆವರು ತಪ್ಪು ಮಾಡಿದ್ದರೆ ಖಂಡಿತಾ ಶಿಕ್ಷೆಯಾಗಲಿ ಯಾಕೆ ಅಂದ್ರೆ ನಮ್ಮ ದೇಶದ ಸಂವಿಧಾನದ ಮುಂದೆ ಯಾರು ದೊಡ್ಡವರಲ್ಲ, ಅವರು ತಪ್ಪು ಮಾಡದೆ…
ಕೊಡಗಿನಲ್ಲಿ ಹೊಸ ಟ್ರೆಂಡ್ ಆಗಿ ಪ್ರವಾಸಿಗರನ್ನು ಸೆಳೆಯಲು ಹಲವು ಪ್ರದೇಶಗಳಲ್ಲಿ ಗಾಜಿನ ಸೇತುವೆಗಳನ್ನೂ ನಿರ್ಮಿಸಲಾಗುತ್ತಿದೆ. ಕೆ ನಿಡುಗಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸುಮಾರು 200 ಮೀಟರ್ ಉದ್ದದ ಗಾಜಿನ ಸೇತುವೆಯು ವಿಶಾಲವಾದ ಹಸಿರು ಮತ್ತು ಪರ್ವತಗಳ ಮಧ್ಯ ನಿರ್ಮಿಸಲಾಗಿದೆ. ಈ ಗಾಜಿನ ಸೇತುವೆಯು ಪ್ರಧಾನ ಪ್ರವಾಸಿ ತಾಣವಾದ ಅಬ್ಬೆ ಜಲಪಾತದ ದಾರಿಯಲ್ಲಿದೆ. ಈ ಸೇತುವೆಯನ್ನು ನಿರ್ಮಿಸಲು ಖಾಸಗಿಯವರು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದರೂ, ಸೇತುವೆಯ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ಹೀಗಾಗಿ ಅದು ಈಗ ದುರ್ಬಲ ಸ್ಥಿತಿಯಲ್ಲಿದೆ. ಜೌಗು ಪ್ರದೇಶದಲ್ಲಿರುವ ಈ ಗಾಜಿನ ಸೇತುವೆಯ ಕೆಳಗಿನ ಸಡಿಲವಾದ ಮಣ್ಣು ಕ್ರಮೇಣ ಕೆಳಕ್ಕೆ ಜಾರುತ್ತಿರುವುದರಿಂದ ಅಪಾಯದ ಸ್ಥಿತಿ ಎದುರಾಗಿದೆ. ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಗ್ಲಾಸ್ ಬ್ರಿಡ್ಜ್ ಅನ್ನು ಸೂಕ್ತ ಅನುಮತಿ ಇಲ್ಲದ ಕಾರಣ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಬಂದ್ ಮಾಡಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಅತೀ ಉದ್ದ ಮತ್ತು ಎತ್ತರದ…
ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ. ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ನೀಡಲಾಗಿದೆ. ಈ ಕುರಿತು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಾಹಿತಿ ನೀಡಿದೆ. ಗ್ರಾಮ ಪಂಚಾಯತಿಗಳಲ್ಲಿ ಖಾಲಿಯಾಗಿರುವ ಕರವಸೂಲಿಗಾರರರು, ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರ್, ವಾಟರ್ ಆಪರೇಟರ್ ಹಾಗೂ ಸ್ವಚ್ಛತಾಗಾರರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗೆ ಒಂದು ಸಿಬ್ಬಂದಿಯನ್ನು ಸರ್ಕಾರದ ಅಧಿಸೂಚನೆ ಸಂ:ಗ್ರಾಅಪ 886 ಗ್ರಾಪಂಕಾ 2016 ದಿನಾಂಕ 29-06-2020 ರಲ್ಲಿ ಸೂಚಿಸಿರುವಂತೆ ನಿಯಮಾನುಸಾರ ನೇಮಕಾತಿ ಮಾಡಿಕೊಳ್ಳಲು ಎಲ್ಲಾ ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಕುರಿತು ಆಯಾ ಜಿಲ್ಲೆಯ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಆಯಾ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹುದ್ದೆಯ ಹೆಸರು: ಕರವಸೂಲಿಗಾರರು / ಬಿಲ್ ಕಲೆಕ್ಟರ್ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು ವಾಟರ್ ಆಪರೇಟರ್ ಸ್ವಚ್ಛತಾಗಾರರು ಶೈಕ್ಷಣಿಕ ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಪಾಸ್ ಜತೆಗೆ ಕಂಪ್ಯೂಟರ್ ಜ್ಞಾನ…