Author: admin

ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆಯಾಗಿ ಉರ್ಸುಲಾ ವೊನ್ ಡೆರ್ ಲೆಯೆನ್ ಅವರು ಮತ್ತೆ ಐದು ವರ್ಷಗಳ ಅವಧಿಗೆ ಮರುನೇಮಕಗೊಡಿದ್ದಾರೆ. ಯುರೋಪಿಯನ್ ಮಂಡಳಿಯ ಸಭಾಧ್ಯಕ್ಷರಾಗಿ ಪೋರ್ಚುಗಲ್ ನ ಆ್ಯಂಟೊನಿಯೊ ಕೊಸ್ಟಾ ಹಾಗೂ ಯುರೋಪ್ ವಿದೇಶಾಂಗ ನೀತಿಯ ಮುಖ್ಯಸ್ಥರಾಗಿ ಎಸ್ತೊನಿಯಾದ ಕಜಾ ಕಲ್ಲಾಸ್ ಅವರು ಆಯ್ಕೆಯಾಗಿದ್ದಾರೆ. ಬ್ರುಸೆಲ್ಸ್ನಲ್ಲಿ ಶುಕ್ರವಾರ ನಡೆದ ಯುರೋಪ್ ಒಕ್ಕೂಟದ ಶೃಂಗಸಭೆಯಲ್ಲಿ ನಡೆದ ಈ ನೇಮಕಾತಿಗಳಿಗೆ 27 ರಾಷ್ಟ್ರಗಳ ಯುರೋಪ್ ನಾಯಕರು ತಮ್ಮ ಅಂಕಿತ ಹಾಕಿದ್ದಾರೆ. ಯುರೋಪ್ ಒಕ್ಕೂಟದ ಅಧ್ಯಕ್ಷೆಯಾಗಿ ಪುನಾರಾಯ್ಕೆಗೊಂಡ ವೊನ್ ಡೆರ್ ಲೆಯೆನ್ ಆನಂತರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ತನ್ನನ್ನು ಎರಡನೆ ಅವಧಿಗೆ ಒಕ್ಕೂಟದ ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ‘‘ನನಗೆ ದೊರೆತ ಗೌರವಕ್ಕೆ ಅಭಾರಿಯಾಗಿದ್ದೇನೆ ಹಾಗೂ ಈ ಕ್ಷಣವನ್ನು ಹಂಚಿಕೊಳ್ಳಲು ನಾನು ಸಂತಸಪಡುತ್ತೇನೆ’’ ಎಂದವರು ಹೇಳಿದರು. ಯುರೋಪ್ ಒಕ್ಕೂಟದ ಭದ್ರತೆ ಹಾಗೂ ವಿದೇಶಾಂಗ ನೀತಿಯ ಮುಖ್ಯಸ್ಥರಾಗಿ ನೇಮಕಗೊಂಡ ಕಾಜಾ ಕಲ್ಲಾಸ್ ಅವರು ಮಾತನಾಡಿ ಯುರೋಪ್ನಲ್ಲಿ ಯುದ್ಧ ನಡೆಯುತ್ತಿದೆ. ಜಾಗತಿಕವಾಗಿ ಅಸ್ಥಿರತೆ ಬೆಳೆಯುತ್ತಿದೆ. ಯುರೋಪಿನ ಏಕತೆಗಾಗಿ ಶ್ರಮಿಸುವುದು ಖಂಡಿತವಾಗಿಯೂ…

Read More

ಹೈಕೋರ್ಟ್ ನಿಂದ ಕನ್ನಡದ ಖಾಸಗಿ ಸುದ್ದಿ ವಾಹಿನಿ ಪವರ್ ಟಿವಿಯನ್ನು ಬಂದ್ ಮಾಡುವಂತೆ ಆದೇಶ ಮಾಡಿದ ಬೆನ್ನಲ್ಲೇ ಮಾಲೀಕ ರಾಕೇಶ್ ಶೆಟ್ಟಿ ವಿರುದ್ಧ ರೌಡಿ ಶೀಟರ್ ಓಪನ್ ಮಾಡುವಂತೆ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣನವರ ಆಗ್ರಹಿಸಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಪ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, Power Tv ಚಾನೆಲ್ ನ ಮುಖ್ಯಸ್ಥ ಎಂದು ಹೇಳಿಕೊಂಡಿದ್ದ ರಾಕೇಶ ಶೆಟ್ಟಿ ಎಂಬ ವ್ಯಕ್ತಿ ದೃಶ್ಯಮಾಧ್ಯಮ ದುರುಪಯೋಗಪಡಿಸಿಕೊಂಡು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದು ಮಾತ್ರವಲ್ಲದೆ, ಪರವಾನಿಗೆ ಇಲ್ಲದೇ ಒಂದು satellite ಚಾನೆಲ್ ನಡೆಸುತ್ತಿದ್ದ ಕಾರಣ ದಿನಾಂಕ: 25-06-2024 ರಂದು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ Power Tv ಪ್ರಸಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ ಎಂದಿದ್ದಾರೆ. ರಾಕೇಶ್ ಶೆಟ್ಟಿ ಪತ್ರಿಕೋದ್ಯಮವನ್ನು ಕೇವಲ ತನ್ನ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಂಡು ಅನೇಕ ಕಾನೂನು ಬಾಹಿರ, ಬ್ಲಾಕ್ ಮೇಲ್, ವಸೂಲಿ ಧಂಧೆಗೆ ಬಳಸಿಕೊಂಡ ರಾಕೇಶ್ ಶೆಟ್ಟಿಯ ಮೇಲೆ ತಕ್ಷಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈತನನ್ನು ಬಂಧಿಸಿ ಸೂಕ್ತ…

Read More

ಮಹಾರಾಷ್ಟ್ರ ಸರ್ಕಾರವು ತನ್ನ ಬಜೆಟ್ ನಲ್ಲಿ ರಾಜ್ಯದ ಜನರಿಗೆ ಹಲವು ಬಂಪರ್ ಘೋಷಣೆ ಮಾಡಿದೆ. ಇದರಲ್ಲಿ ಮುಖ್ಯವಾಗಿ ಪ್ರತೀ ಮನೆಗೂ ವರ್ಷಕ್ಕೆ 3 ಉಚಿತ ಸಿಲಿಂಡರ್ ಕೊಡುವುದಾಗಿ ಹೇಳಿದೆ. ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಭಾರೀ ಹಿನ್ನಡೆ ಕಂಡಿದ್ದ ಎನ್ ಡಿಎ ಮೈತ್ರಿಕೂಟ ಸರ್ಕಾರ ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಜನಪ್ರಿಯ ಸ್ಕೀಮ್ ಗಳಿಗೆ ಶರಣಾಗಿದೆ. ಇದರಲ್ಲಿ ಹಲವು ಉಚಿತ ಕೊಡುಗೆಗಳನ್ನು ನೀಡಿದ್ದಾರೆ. ಕರ್ನಾಟಕದ ಗೃಹಲಕ್ಷ್ಮೀ ಯೋಜನೆ ಮಾದರಿಯಲ್ಲಿ ಮಹಾರಾಷ್ಟ್ರದಲ್ಲೂ ಮಹಿಳೆಯರಿಗೆ ಸರ್ಕಾರ ಮಾಸಿಕ ಸಹಾಯಧನ ಒದಗಿಸಲು ಘೋಷಿಸಿದೆ. 21 ವರ್ಷದಿಂದ 60 ವರ್ಷದವರೆಗಿನ ವಯಸ್ಸಿನ ಮಹಿಳೆಯರಿಗೆ ಮಾಸಿಕವಾಗಿ 1,500 ರೂ ನೀಡುವುದಾಗಿ ಸರ್ಕಾರ ಘೋಷಿಸಿದೆ. ಮಹಾರಾಷ್ಟ್ರದ ಹತ್ತಿ ಮತ್ತು ಸೋಯಾಬೀನ್ ಬೆಳೆಗಳಿಗೆ ಪ್ರತೀ ಹೆಕ್ಟೇರ್ ಗೆ 5,000 ರೂ. ಬೋನಸ್ ಹಣವನ್ನು ರೈತರಿಗೆ ನೀಡಲಾಗುತ್ತದೆ. ಹಾಲು ಉತ್ಪಾದಕ ರೈತರಿಗೆ ಜುಲೈ 1ರ ಬಳಿಕ ಪ್ರತೀ ಲೀಟರ್ ಹಾಲಿಗೆ 5 ರೂ ಹೆಚ್ಚುವರಿ ಬೋನಸ್ ಕೊಡಲಾಗುತ್ತದೆ. ಪ್ರಾಣಿಗಳ ದಾಳಿಯಿಂದ ಮೃತ ಪಡುವ…

Read More

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ರದ್ದುಪಡಿಸಬೇಕು ಮತ್ತು 12 ನೇ ತರಗತಿಯ ಅಂಕಗಳ ಆಧಾರದ ಮೇಲೆ ರಾಜ್ಯ ಸರ್ಕಾರಗಳು ವೈದ್ಯಕೀಯ ಪ್ರವೇಶವನ್ನು ನಡೆಸುವ ಹಿಂದಿನ ವ್ಯವಸ್ಥೆ ಮರುಸ್ಥಾಪಿಸಬೇಕು ಎಂದು ತಮಿಳುನಾಡು ವಿಧಾನಸಭೆಯು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಸರ್ವಾನುಮತದಿಂದ ಅಂಗೀಕರಿಸಿದೆ. NEET -UG 2024 ಪರೀಕ್ಷೆಯಲ್ಲಿ ಪೇಪರ್ ಸೋರಿಕೆ ಮತ್ತು NEET-PG 2024 ಪರೀಕ್ಷೆ ಹಠಾತ್ ಮುಂದೂಡಿದ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ವಿಧಾನಸಭೆಯಲ್ಲಿ ಈ ನಿರ್ಣಯ ಮಂಡಿಸಿದರು. ಮನಿತನೇಯ ಮಕ್ಕಳ್ ಕಚ್ಚಿ, ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ, ತಮಿಳಗ ವೆಟ್ರಿ ಕಳಗಂ, ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸೇರಿದಂತೆ ಹಲವಾರು ಪ್ರಾದೇಶಿಕ ಪಕ್ಷಗಳು ನಿರ್ಣಯವನ್ನು ಬೆಂಬಲಿಸಿದವು. ಇದಕ್ಕೂ ಮೊದಲು, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದ ಕೆ. ಕನಿಮೊಳಿ ಅವರು ದೇಶಾದ್ಯಂತ ವೈದ್ಯಕೀಯ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ( ಎನ್.ಟಿ.ಎ) ನಡೆಸಿದ ನೀಟ್ ನಿಂದ ತಮಿಳುನಾಡಿಗೆ “ವಿನಾಯಿತಿ” ನೀಡುವ ಬೇಡಿಕೆಯನ್ನು…

Read More

ನಿದ್ದೆಯಲ್ಲಿದ್ದ ಯುವಕನ ಚಡ್ಡಿಯೊಳಗೆಯೇ ಹಾವೊಂದು ಅವಿತು ಕುಳಿತು, ದೊಡ್ಡ ಅವಾಂತರವೇ ಸೃಷ್ಟಿಯಾದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಥೈಲ್ಯಾಂಡ್ ನಲ್ಲಿ ಹುಡುಗನೊಬ್ಬ ರಾತ್ರಿ ಬರೀ ಚಡ್ಡಿ ಹಾಕಿಕೊಂಡು ಮಲಗಿದ್ದಾನೆ. ನಿದ್ದೆಯಲ್ಲಿದ್ದ ಆತನ ಚಡ್ಡಿ ಒಳಗೆ ನಾಗರಹಾವೊಂದು ಸೇರಿಕೊಂಡುಬಿಟ್ಟಿದೆ. ಆದರೆ ಆತ ಅಲುಗಾಡದೆ ಮಲಗಿದ್ದರಿಂದ ಆತನಿಗೆ ಹಾವು ಕಚ್ಚಿಲ್ಲ. ಆತ ಎಚ್ಚರಗೊಂಡಾಗ ಚಡ್ಡಿಯಲ್ಲಿ ಹಾವು ಸೇರಿಕೊಂಡಿರುವುದು ಗೊತ್ತಾಗಿ ಭಯದಲ್ಲಿ ಬೆವರಿದ್ದಾನೆ. ಆದರೆ ಅಲುಗಾಡದೆ ಹಾಗೆಯೇ ಮಲಗಿದಂತೆ ನಟಿಸಿ ಬಚಾವಾಗಿದ್ದಾನೆ. ಥಾಯ್ಲೆಂಡ್ ನ ರೇಯಾಂಗ್ ನಲ್ಲಿ ಈ ಘಟನೆ ನಡೆದಿದ್ದು, ಆತ ತನ್ನ ಸ್ನೇಹಿತನಿಗೆ ಸನ್ನೆಯ ಮೂಲಕ ಅದನ್ನು ತಿಳಿಸಿದ್ದಾನೆ. ಚಡ್ಡಿಯೊಳಕ್ಕೆ ಹಾವಿರುವ ಬಗ್ಗೆ ಆತನ ಸ್ನೇಹಿತನಿಗೆ ಗೊತ್ತಾದ ಬಳಿಕ ಆತ ಉರಗ ರಕ್ಷಕರಿಗೆ ಮಾಹಿತಿ ನೀಡಿದ್ದಾನೆ. ಬಳಿಕ, ಉರಗ ತಜ್ಞರು ಬಂದು ಹಾವು ಹಿಡಿದು ಆತನ ಜೀವ ಉಳಿಸಿದ್ದಾರೆ. ಉರಗ ತಜ್ಞ ಆ ಹಾವನ್ನು ಹೊರಗೆ ತೆಗೆದ ಬಳಿಕ ಅದು ನಾಗರಹಾವು ಎಂದು ತಿಳಿದುಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…

Read More

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜೈಲಿನಲ್ಲಿದ್ದಾರೆ ಈ ನಡುವೆ ನಟ ದರ್ಶನ್ ಖೈದಿ ನಂಬರ್ 6106 ಎಂಬುದು ಎಲ್ಲರಿಗೂ ಗೊತ್ತಾಗಿದ್ದು, ಈ ಸಂಖ್ಯೆ ಈಗ ಟ್ರೆಂಡ್ ಆಗುತ್ತಿದೆ. ಇದೀಗ, 6106 ಸ್ಟಿಕ್ಕರ್ ಗೆ ಫುಲ್ ಡಿಮ್ಯಾಂಡ್ ಹೆಚ್ಚಾಗಿದ್ದು, ಬೆಂಗಳೂರು, ರಾಯಚೂರು, ಮಂಡ್ಯ ಮತ್ತಿತರ ಜಿಲ್ಲೆಗಳಲ್ಲಿ ಮೊಬೈಲ್ ಅಂಗಡಿಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ. ತಮ್ಮ ಮೊಬೈಲ್ ಕವರ್ ನಲ್ಲಿ ಕೈದಿ ನಂಬರ್ ಅನ್ನು ಸ್ಟಿಕ್ಕರ್ ಮಾಡಿ ಅಂಟಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಗಾಡಿಗಳ ಮೇಲು ಕೈದಿ ನಂ.6106 ಎಂದು ಅಂಟಿಸಿಕೊಳ್ಳುತ್ತಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ ಪರಪ್ಪನ ಅಗ್ರಹಾರದ ಜೈಲಿನಿಂದಲೇ ನಟ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಜೈಲು ಅಧಿಕಾರಿಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ. ‘ಅಭಿಮಾನಿಗಳು ಯಾರೂ ಜೈಲಿನ ಬಳಿ ಬರಬೇಡಿ. ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ. ಜೈಲಿನ ಬಳಿ ನನ್ನ ಭೇಟಿಗೆ ಬಂದು ನೀವು ಕಾಯುವುದು, ನನ್ನ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ವಾಪಸ್ ಹೋಗುವುದು…

Read More

ತುಮಕೂರು: ಚಿತ್ರಕಲೆ ಕ್ಷೇತ್ರ ಅವನತಿಯತ್ತ ಸಾಗುತ್ತಿದ್ದು, ಕಲೆ ಉಳಿಯುವತ್ತಾ ತಾವು ಕೆಲಸ ಮಾಡಬೇಕು. ಕಾಲೇಜು ಶಿಕ್ಷಣ ಇಲಾಖೆಯು ಚಿತ್ರಕಲಾ ಕ್ಷೇತ್ರದ ಅಭಿವೃದ್ದಿಗೆ ಬದ್ದವಾಗಿರುತ್ತದೆ ಎಂದು ಕಾಲೇಜು ಶಿಕ್ಷಣ ಪ್ರಾದೇಶಿಕ ಕಛೇರಿ ನಿರ್ದೇಶಕ ಡಾ.ರಾಮಕೃಷ್ಣರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರದ ಬಗ್ಗೆ ಅಸಡ್ಡೆ ಪಡಬೇಡಿ, ಅಂತಹ ಸರ್ಕಾರಗಳಿಂದಲೇ ನಾವಿಂದು ಉನ್ನತ ಹುದ್ದೆಯಲ್ಲಿ ಇರೋಕೆ ಸಾಧ್ಯ. ನಮ್ಮ ಶ್ರಮಕ್ಕೆ ತಕ್ಕ ಫಲ ಸಿಕ್ಕೆಸಿಗುತ್ತದೆ. ನಾನು ಕೂಡ ಬಡತನ ಕುಟುಂಬದಿಂದ ಬಂದವನು, ಸರ್ಕಾರಿ ಶಾಲಾ-ಕಾಲೇಜಿನಲ್ಲಿ ಓದಿ ಬೆಳೆದವನು. ಕಲಿಯುವ ಹಂತದಲ್ಲಿ ಕಷ್ಟಪಟ್ಟು ಅಭ್ಯಾಸ ಮಾಡಿದ್ದರ ಪರಿಣಾಮ ಸರ್ಕಾರಿ ಕೆಲಸ ಸಿಕ್ಕದೆ. ಹಾಗಾಗಿ ಸರ್ಕಾರ ನೀಡುವಂತಹ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕಿದೆ ಎಂದು ಕಿವಿ ಮಾತು ಹೇಳಿದರು. ಸರ್ಕಾರಿ ಕಾಲೇಜು ನಮ್ಮದು ಎನ್ನುವ ಭಾವನೆ ಎಲ್ಲರಲ್ಲಿ ಮೂಡಬೇಕು. ಪ್ರಾಂಶುಪಾಲರ ಹೊರತಾಗಿಯೂ ಎಲ್ಲಾರೂ ಕಾಲೇಜಿನ ಸುತ್ತಮುತ್ತ…

Read More

ಪ್ರಜ್ವಲ್, ಸೂರಜ್ ಪ್ರಕರಣ ಕೋರ್ಟ್ ನಲ್ಲಿ ಇದೆ. ಹಾಗಾಗಿ ರೇವಣ್ಣ ಅವರಿಗರೆ ಸುದ್ದಿಗಾರರು ಕೆಲ ಪ್ರಶ್ನೆಗಳನ್ನು ಕೇಳಿದಾಗ ರೇವಣ್ಣ ಕೊಟ್ಟ ಉತ್ತರ ಇಲ್ಲಿದೆ. ಪ್ರಜ್ವಲ್, ಸೂರಜ್ ಪ್ರಕರಣ ಕೋರ್ಟ್ ನಲ್ಲಿ ಇದೆ. ಹೀಗಾಗಿ ಆ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ನನಗೆ ಕಾನೂನು, ನ್ಯಾಯಾಂಗದ ಮೇಲೆ ನಂಬಿಕೆ, ಗೌರವವಿದೆ. ಯಾವುದೇ ವಿಷಯ ಇದ್ರೂ ನ್ಯಾಯಾಂಗ, ದೇವರ ಮೇಲೆ ನಂಬಿಕೆಯಿದೆ ಎಂದರು. ನಾನು ರಾಜಕೀಯ ನಿವೃತ್ತಿಯಾಗೋ ಪ್ರಶ್ನೆಯೇ ಇಲ್ಲ. ಅದೆಲ್ಲವನ್ನು ಕಾಲವೇ ಉತ್ತರಿಸಲಿದೆ. ಮಾಜಿ ಶಾಸಕ ಪ್ರೀತಂ ಗೌಡ ಷಡ್ಯಂತ್ರದ ಬಗ್ಗೆಯೂ ಮಾತನಾಡಲ್ಲ. ನಾನು ಈಗ ಪ್ರಜ್ವಲ್, ಸೂರಜ್ ಬಗ್ಗೆ ಯಾವುದೇ ಮಾತನಾಡೋದಿಲ್ಲ ಅಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ತಿಳಿಸಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎನ್ನುವ ಸ್ವಾಮೀಜಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದಂತ ಅವರು, ನನಗೆ ಗೊತ್ತಿಲ್ಲ. ಅದೆಲ್ಲ ದೊಡ್ಡವರ ವಿಷಯವಾಗಿದೆ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…

Read More

ರಾಜ್ಯ ಶಿಕ್ಷಣ ನೀತಿಯಲ್ಲಿ ಪದವಿ ವ್ಯಾಸಂಗದಲ್ಲಿ ಕನ್ನಡ ಭಾಷಾ ವಿಷಯ ಬೋಧನೆಗೆ ಒಂದು ವಾರಕ್ಕೆ ಮೂರು ಗಂಟೆಗಳ ಅವಧಿ ನಿಗದಿಪಡಿಸಿದ್ದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿ ಈ ಹಿಂದೆ ಇದ್ದಂತೆ 4 ಗಂಟೆಗಳ ಸಮಯವನ್ನೇ ಮರು ನಿಗದಿಪಡಿಸಲು ಒಪ್ಪಿಕೊಂಡಿದೆ. ರಾಜ್ಯ ಶಿಕ್ಷಣ ನೀತಿಯಲ್ಲಿ ನಾಲ್ಕು ವರ್ಷಗಳ ಪದವಿ ರದ್ದು ಮಾಡಿ ಹಿಂದೆ ಇದ್ದಂತೆ ಮೂರು ವರ್ಷದ ಪದವಿಯನ್ನು ಪುನರ್ ಜಾರಿ ಮಾಡಿದ ನಂತರ ಕನ್ನಡ ಭಾಷಾ ಬೋಧನೆಗೆ ಇದ್ದ ಅವಧಿಯನ್ನು ಮೂರು ಗಂಟೆಗೆ ಇಳಿಸಲಾಗಿತ್ತು. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಬೋಧನಾ ಅವಧಿ ಕಡಿತ ಮಾಡುವುದು ಕನ್ನಡ ಭಾಷೆಗೆ ಮಾಡುತ್ತಿರುವ ಅನ್ಯಾಯವಾಗಿದ್ದು, ಶೀಘ್ರವೇ ಸರಿಪಡಿಸಬೇಕೆಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಸಚಿವರು, ಈ ಮೊದಲು ಇದ್ದಂತೆ ನಾಲ್ಕು ಗಂಟೆಗಳಿಗೆ ಮರು ನಿಗದಿ ಮಾಡುವಂತೆ ಎಲ್ಲಾ ವಿವಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರ ಕಾಳಜಿ ಬಗ್ಗೆ…

Read More

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸದ್ಯ ಕರ್ನಾಟಕ ರಾಜಕೀಯ ವಲಯದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿ ಮೈತ್ರಿಗೆ ಇದು ಪ್ರತಿಷ್ಠೆಯ ಕಣವಾಗಿದೆ. ಪ್ರತಿಷ್ಠಿತ ಸ್ಪರ್ಧೆಗೆ ಯಾರು ಕಣಕ್ಕಿಳಿಯುತ್ತಾರೆ ಎನ್ನುವ ಕುತೂಹಲ ಹೆಚ್ಚಾಗುತ್ತಿದೆ. ಹಲವು ಅಚ್ಚರಿಯ ಹೆಸರುಗಳು ಕೂಡ ಚನ್ನಪಟ್ಟಣ ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರು ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಚನ್ನಪಟ್ಟಣವನ್ನು ಪಡೆಯಲು ಡಿ.ಕೆ. ಶಿವಕುಮಾರ್ ತಮ್ಮ ಕುಟುಂಬದವರನ್ನೇ ಕಣಕ್ಕಿಳಿಸುತ್ತಾರೆ ಎನ್ನಲಾಗಿತ್ತು. ಈಗ ಸ್ವತಃ ಡಿ.ಕೆ.ಶಿವಕುಮಾರ್ ಅವರು ಎಲ್ಲಾ ಊಹಾಪೋಹಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಮ್ಮ ಕುಟುಂಬದಿಂದ ಇನ್ಯಾರಿಗೂ ಚುನಾವಣಾ ರಾಜಕೀಯಕ್ಕೆ ಬರಲು ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ನಮ್ಮ ಕುಟುಂಬದ ಯಾವುದೇ ಸದಸ್ಯರು ಚುನಾವಣಾ ರಾಜಕೀಯಕ್ಕೆ ಬರುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ನಾನು ಬಹಳ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ಆದರೂ ಈ ಬಗ್ಗೆ ಆಗಾಗ ಸೃಷ್ಟಿಯಾಗುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ವಿನಂತಿಸುತ್ತಿದ್ದೇನೆ ಎಂದಿದ್ದಾರೆ ಡಿಕೆಶಿ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…

Read More