Subscribe to Updates
Get the latest creative news from FooBar about art, design and business.
- ಗ್ರಾಮೀಣ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೂ ಶೇ.7.5ರ ವಿಶೇಷ ಮೀಸಲಾತಿ ವಿಸ್ತರಿಸಲು ಆಗ್ರಹ
- ಮಾದಿಗ ಸಮಾಜಕ್ಕೆ ಸಚಿವ ಸ್ಥಾನ ಕೋರಿ ನೊಣವಿನಕೆರೆ ಅಜ್ಜಯ್ಯನವರಿಗೆ ಭಿನ್ನವತ್ತಳೆ
- “ಸಮಾನತೆ ಕಲಿಸಿದ ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕ” | ಬಸವಯುಗ ವೈಭವ ಗ್ರಂಥ ಬಿಡುಗಡೆ
- ಬೀದರ್: ಬಿಸಿಎಂ ವಸತಿ ನಿಲಯದಲ್ಲಿ ಅವ್ಯವಸ್ಥೆ: ಕಿರಿಯ ಮೇಲ್ವಿಚಾರಕಿ ಅಮಾನತು
- ಡಿಜೆ, ಅತಿಯಾದ ಶಬ್ದಕ್ಕೆ ಕಡಿವಾಣ : ಇನ್ಸ್ಪೆಕ್ಟರ್ ಸುರೇಶ್ ಎಚ್ಚರಿಕೆ
- ತುಮಕೂರು ದಸರಾ ಮಹೋತ್ಸವ: ಕಲಾ ತಂಡಗಳಿಂದ ಅರ್ಜಿ ಆಹ್ವಾನ
- ತುಮಕೂರು: ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯ್ದೆ, ಪೌಷ್ಟಿಕಾಂಶದ ಅರಿವು ಕಾರ್ಯಕ್ರಮ
- ವಸತಿ ಶಾಲೆಗಳಿಗೆ ವೈದ್ಯಾಧಿಕಾರಿಗಳ ಭೇಟಿ ಕಡ್ಡಾಯ: ಆಶ್ವಿಜಾ ಬಿ.ವಿ.
Author: Ganesh Tumkuru
ತಿಪಟೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕರಾದ ಶ್ರೀ ನಾರಾಯಣ ದಾಸ್ ಅವರಿಗೆ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. (ಡಾಕ್ಟರೇಟ್) ಪದವಿ ಲಭಿಸಿದೆ. ಪ್ರೊಫೆಸರ್ ಕೆ. ನಾಗೇಂದ್ರ ಬಾಬು ಅವರ ಮಾರ್ಗದರ್ಶನದಲ್ಲಿ “ಮಾರ್ಕೆಟಿಂಗ್ ಸ್ಟ್ರಾಟೆಜೀಸ್ ಆಫ್ ಆಯುರ್ವೇದಿಕ್ ಪ್ರಾಡಕ್ಟ್ಸ್ — ಎ ಸ್ಟಡಿ” (Marketing Strategies of Ayurvedic Products — A Study) ಎಂಬ ವಿಷಯದ ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಈ ಉನ್ನತ ಗೌರವ ದೊರೆತಿದೆ. ನಾರಾಯಣ ದಾಸ್ ಅವರ ಈ ಶೈಕ್ಷಣಿಕ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ, ಆತ್ಮೀಯವಾಗಿ ಅಭಿನಂದಿಸಿದ್ದಾರೆ. ವರದಿ: ಆನಂದ್, ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ಖಂಡಿಕೇರಿ ಗ್ರಾಮದ ಹೊಲವೊಂದರಲ್ಲಿ ಯಾವುದೇ ಸರ್ಕಾರಿ ಅನುಮತಿ ಇಲ್ಲದೆ ಕಾನೂನುಬಾಹಿರವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಔರಾದ್–ಬಿ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ (ಐಪಿಎಸ್) ಅವರ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ-1 ಚಂದ್ರಕಾಂತ ಪೂಜಾರಿ ಹಾಗೂ ಭಾಲ್ಕಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಲ್ಲಪ್ಪ ನಂದಗಾಂವಿ ಅವರ ಮುಂದಾಳತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಔರಾದ್–ಬಿ ವೃತ್ತದ ಸಿಪಿಐ ರಘುವೀರಸಿಂಗ್ ಠಾಕೂರ್ ಅವರ ನೇತೃತ್ವದಲ್ಲಿ ಪಿಎಸ್ ಐ ವಸೀಮ್ ಪಟೇಲ್ ಹಾಗೂ ಪೊಲೀಸ್ ಸಿಬ್ಬಂದಿ ಖಂಡಿಕೇರಿ ಗ್ರಾಮದ ಹೊಲಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ 100 ಹಸಿ ಗಾಂಜಾ ಗಿಡಗಳು ಪತ್ತೆಯಾಗಿವೆ. ನಂತರ ಪತ್ರಾಂಕಿತ ಅಧಿಕಾರಿಯಾಗಿರುವ ಔರಾದ್ ತಹಶೀಲ್ದಾರ್ ಅವರ ಸಮಕ್ಷಮದಲ್ಲಿ ಗಾಂಜಾ ಗಿಡಗಳನ್ನು ಕಿತ್ತು ವಶಕ್ಕೆ ಪಡೆಯಲಾಗಿದ್ದು, ಅವುಗಳ ಒಟ್ಟು ತೂಕ 60 ಕೆ.ಜಿ. 430 ಗ್ರಾಂ ಎಂದು ಅಂದಾಜಿಸಲಾಗಿದೆ. ವಶಪಡಿಸಿಕೊಂಡ…
ಬೆಂಗಳೂರು: ರಾಜ್ಯದಲ್ಲಿ ಕಿಶೋರಿಯರ (ಅಪ್ರಾಪ್ತ) ಗರ್ಭಧಾರಣೆ ಪ್ರಕರಣಗಳ ಸಂಖ್ಯೆಯಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ ಇಳಿಕೆ ಕಂಡುಬಂದಿದ್ದರೂ, ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ನೂರಾರು ಬಾಲಕಿಯರು ಗರ್ಭಿಣಿಯಾಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಕೇಳಿದ ಪ್ರಶ್ನೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಲಿಖಿತ ಉತ್ತರದಲ್ಲಿ ಈ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. 2026ರ ಏಪ್ರಿಲ್‌ನಿಂದ ಜುಲೈವರೆಗಿನ 4 ತಿಂಗಳ ಅವಧಿಯಲ್ಲಿ 14ರಿಂದ 17 ವರ್ಷ ವಯೋಮಾನದ ಒಟ್ಟು 725 ಬಾಲಕಿಯರು ಗರ್ಭಿಣಿಯಾಗಿರುವ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳಲ್ಲಿ 17 ವರ್ಷದ ಬಾಲಕಿಯರ ಸಂಖ್ಯೆಯೇ ಗರಿಷ್ಠವಾಗಿದ್ದು, 521 ಪ್ರಕರಣಗಳು ದಾಖಲಾಗಿವೆ. ವಯೋಮಾನದ ವಿವರ: 14 ವರ್ಷ: 21 ಪ್ರಕರಣಗಳು 15 ವರ್ಷ: 56 ಪ್ರಕರಣಗಳು 16 ವರ್ಷ: 127 ಪ್ರಕರಣಗಳು 17 ವರ್ಷ: 521 ಪ್ರಕರಣಗಳು ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ: ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ 100 ಕಿಶೋರಿ ಗರ್ಭಧಾರಣೆ ಪ್ರಕರಣಗಳು ರಾಯಚೂರು ಜಿಲ್ಲೆಯೊಂದರಲ್ಲೇ…
ಚಿಕ್ಕನಾಯಕನಹಳ್ಳಿ: ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯ ಪರಿಷ್ಕರಣೆ ಕಾರ್ಯವು ತಾಲೂಕಿನಲ್ಲಿ ಶೇ.93ರಷ್ಟು ಮುಕ್ತಾಯಗೊಂಡಿದೆ ಎಂದು ಬೆಸ್ಕಾಂ ಎ.ಇ.ಇ. ಗವಿರಂಗಯ್ಯ ತಿಳಿಸಿದ್ದಾರೆ. ಅವರು ತಾಲೂಕು ಪಂಚಾಯಿತಿ ಆವರಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಪರಿಷ್ಕರಣೆ ವೇಳೆ ಹಲವು ಕುಟುಂಬದವರು ಮನೆಯಲ್ಲಿ ಇಲ್ಲದಿರುವುದು ಅಥವಾ ಇತರ ಕಾರಣಾಂತರಗಳಿಂದ 5630 ಅರ್ಜಿಗಳ ಪರಿಷ್ಕರಣೆ ಬಾಕಿ ಉಳಿದಿದೆ. ಈ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ನೂರಕ್ಕೆ ನೂರರಷ್ಟು ಗುರಿ ಸಾಧಿಸಲಾಗುವುದು. ಪರಿಷ್ಕರಣೆಯಾಗದೆ ಉಳಿದಿರುವವರು ಕಚೇರಿಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಪಾಂಡುರಂಗಯ್ಯ ಮಾತನಾಡಿ, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ನಕಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ವಂಚಿಸುತ್ತಿರುವ ಜಾಲ ಸಕ್ರಿಯವಾಗಿದೆ. ಇತ್ತೀಚೆಗೆ ಹುಳಿಯಾರಿನಲ್ಲಿ ಗ್ರಾಮೀಣ ಜನರಿಗೆ ವಂಚಿಸುತ್ತಿದ್ದವರನ್ನು ಪತ್ತೆ ಹಚ್ಚಿ ತಹಸೀಲ್ದಾರ್ ಮಮತಾ ಅವರು ಪೊಲೀಸರಿಗೆ…
ಕುಣಿಗಲ್: ತಿರುಮಲ ಪಾದಯಾತ್ರಾ ಸಮಿತಿ ವತಿಯಿಂದ 19 ನೇ ವರ್ಷದ ತಿರುಮಲ, ತಿರುಪತಿ ಪಾದಯಾತ್ರೆ ಅಂಗವಾಗಿ ಪಟ್ಟಣದ ದಿವ್ಯ ಕನ್ವೆನ್ಷನ್ ಹಾಲ್‌ನಲ್ಲಿ ಆ.23 ಭಾನುವಾರ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮುಖ್ಯಸ್ಥ ಕೆ.ಎಸ್.ಬಲರಾಮ್ ತಿಳಿಸಿದ್ದಾರೆ. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶ್ರೀನಿವಾಸ ಕಲ್ಯಾಣೋತ್ಸವವು ಹಿಂದೂ ಧರ್ಮದಲ್ಲಿ ಭಗವಾನ್ ಶ್ರೀನಿವಾಸ (ವೆಂಕಟೇಶ್ವರ) ಮತ್ತು ದೇವಿಯರಾದ ಶ್ರೀದೇವಿ ಹಾಗೂ ಭೂದೇವಿ ಅವರ ದಿವ್ಯ ವಿವಾಹ ಮಹೋತ್ಸವ ಆಚರಿಸುವ ಪವಿತ್ರ ಧಾರ್ಮಿಕ ಸೇವೆಯಾಗಿದೆ. ಈ ನಿಟ್ಟಿನಲ್ಲಿ ತಿರುಮಲ ಪಾದಯಾತ್ರಾ ಸಮಿತಿ ವತಿಯಿಂದ ಕಳೆದ ಹತ್ತು ವರ್ಷಗಳ ಹಿಂದೆ ಪ್ರಥಮ ಬಾರಿಗೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿತ್ತು. ಈಗ ಎರಡನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವವನ್ನು ಎಲ್ಲಾ ಪಾದಯಾತ್ರಿಗಳು ಸೇರಿ ಮಾಡುತ್ತಿದ್ದೇವೆ. ಕಲ್ಯಾಣೋತ್ಸವದಲ್ಲಿ ಪಾದಯಾತ್ರಿಗಳು ಸೇರಿದಂತೆ ಸುಮಾರು 15 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಲಿದ್ದಾರೆ. ಅಲ್ಲದೆ 500 ಮಂದಿ ದಾಸಪ್ಪ ಹಾಗೂ 500 ಮಂದಿ ವೈಷ್ಣವ ಅರ್ಚಕರು ಕಲ್ಯಾಣೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು. ಡಾ.ಶೆಲ್ವಪಿಳ್ಳೈ ಅಯ್ಯಂಗಾರ್ ನೇತೃತ್ವದಲ್ಲಿ ಕಾರ್ಯಕ್ರಮ:…
ಬಹಳ ಹಿಂದೆ ಸರ್ವಸಿದ್ಧಕನೆಂಬ ವ್ಯಕ್ತಿ ಇದ್ದನು. ಈತನಿಗೆ ತನ್ನದೇ ನೆಲೆಯಾಗಲೀ, ಮಾತಾ ಪಿತೃಗಳಾಗಲೀ, ಬಂಧು ಬಾಂಧವರಾಗಲೀ ಯಾರೂ ಇರಲಿಲ್ಲ, ಸನ್ಯಾಸಿಯಂತೆ ಕೆಂಪು ವಸ್ತ್ರ ಧರಿಸಿ ಕಾಡು ಮೇಡು ಅಲೆಯುತ್ತಾ, ಊರಿಂದ ಊರು ಕಾಲ್ನಡಿಗೆಯಲ್ಲಿ ಅಲೆಯುತ್ತಾ ದೇವಸ್ಥಾನಗಳ ಪ್ರಸಾದವನ್ನೇ ಸ್ವೀರಿಸಿ, ಯಾರದರೂ ದಾನ ಮಾಡಿದರೆ ಅದನ್ನು ಸ್ವೀಕರಿಸುತ್ತಾ, ಅತ್ಯಂತ ದೈವ ಭಕ್ತನಾಗಿ ಕಾಲ ಕಳೆಯುತ್ತಿದ್ದನು. ಹೀಗಿರುವಾಗ ಒಮ್ಮೆ ಕಾಡಿನಲ್ಲಿ ನಡೆದುಕೊಂಡು ಬರುತ್ತಾ ನಾನೂ ಏಕೆ ಯಾವುದಾದರೂ ಗುರುಕುಲದಲ್ಲಿ ಕೆಲಸಕ್ಕೆ ಸೇರಿಕೊಂಡು ಸೇವೆ ಮಾಡಬಾರದು ಎಂದು ಯೋಚಿಸಿಕೊಂಡು ಬರುವಾಗ ಎದುರುಗಡೆ ಒಂದು ಗುರುಕುಲ ಕಾಣಿಸುತ್ತದೆ. ಅಲ್ಲಿ ಅರಳಿಮರದ ಕಟ್ಟೆಯ ಮೇಲೆ ಪ್ರಶಾಂತಚಿತ್ತದಿಂದ ಕುಳಿತಿದ್ದ ಗುರುಗಳಿಗೆ ಕೈ ಮುಗಿದು ಗುರುದೇವ ನನಗೆ ನಿಮ್ಮ ಗುರುಕುಲದಲ್ಲಿ ಏನಾದರೂ ಕೆಲಸ ನೀಡುವಿರಾ, ನೀವು ನನಗೆ ಮೂರು ಹೊತ್ತು ಊಟ, ಒಂದೆರಡು ಕಂಚಿನ ವರಹವನ್ನು ಮಾಸಿಕ ವೇತನ ರೂಪ ನೀಡಿದರೆ ಸಾಕು ನಾನು ತೃಪ್ತನಾಗುತ್ತೇನೆ, ನಾನು ಅನಾಥ ಕೃಪೆ ಮಾಡಿ ಎಂದಾಗ, ಗುರುಗಳು ಸರಿಯಾದ ಸಮಯಕ್ಕೇ ಬಂದಿರುವೆ, ಆದರೆ ಯಾವುದೇ…
ಬೆಂಗಳೂರು: ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಬೆಂಗಳೂರಿನಲ್ಲಿರುವ ತಮ್ಮ ಪುತ್ರಿಯನಿವಾಸದಲ್ಲಿ ಸಾವನ್ನಪ್ಪಿದ್ದಾರೆ. ಕಳೆದ ಒಂದು ವರ್ಷದಿಂದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಅವರಿಗೆ ಎರಡು ಬಾರಿ ಶಸ್ತ್ರಚಿಕಿತ್ಸೆಯಾಗಿತ್ತು ಎನ್ನಲಾಗಿದೆ. ಇಂದು ಸ್ವಕ್ಷೇತ್ರ ತಿಪಟೂರಿನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ತಿಪಟೂರು ಕ್ಷೇತ್ರದಿಂದ 2008 ಮತ್ತು 2018 ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ನಾಗೇಶ್, ಬೊಮ್ಮಾಯಿ ಸಂಪುಟದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಶಾಲಾ ಸಮವಸ್ತ್ರ ವಿವಾದ; ಬಿ.ಸಿ ನಾಗೇಶ್ ಸಚಿವರಾಗಿದ್ದ ಸಂದರ್ಭದಲ್ಲಿ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಮತ್ತು ಶಿಸ್ತು ಪಾಲನೆ ವಿಷಯದಲ್ಲಿ ಉಂಟಾದ ವಿವಾದ ದೇಶದ ಗಮನ ಸೆಳೆದಿತ್ತು. ಬಿ.ಇ. ಇಂಜಿನಿಯರಿಂಗ್ ಪದವೀಧರರಾಗಿದ್ದ ಅವರು, ತಮ್ಮ ರಾಜಕೀಯ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ಪೂರ್ಣಕಾಲಿಕ ಕಾರ್ಯಕರ್ತರಾಗಿ ಪ್ರಾರಂಭಿಸಿದ್ದರು. ಮೃತರು ಒಬ್ಬ ಮಗ ಹಾಗೂ…
ಬೀದರ್: ನಾಗರ ಪಂಚಮಿ ಹಬ್ಬದ ಸಂಭ್ರಮದ ದಿನವೇ ದುರಂತವೊಂದು ಸಂಭವಿಸಿದ್ದು, ನೀರು ಪೂರೈಕೆ ಮಾಡಲು ತೆರಳಿದ್ದ ಗ್ರಾಮ ಪಂಚಾಯಿತಿ ವಾಟರ್ಮ್ಯಾನ್ ಹಾವು ಕಡಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಹುಲಸೂರು ತಾಲೂಕಿನಲ್ಲಿ ನಡೆದಿದೆ. ಹುಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಲದಾಪಕಾ ಗ್ರಾಮದ ನಿವಾಸಿ ಭೀಮ ಮಾಧವರಾವ ಜಾಧವ್ (48) ಮೃತಪಟ್ಟ ದುರದೃಷ್ಟಕರ ವಾಟರ್ಮ್ಯಾನ್. ಸೋಮವಾರ ನಾಗರ ಪಂಚಮಿ ಹಬ್ಬದ ದಿನದಂದು ಗ್ರಾಮದ ಹೊರವಲಯದ ಹಾಲಹಳ್ಳಿ ರಸ್ತೆಯಲ್ಲಿರುವ ಮಹಾದೇವ ಮಂದಿರದ ಸಮೀಪದ ಬೃಹತ್ ನೀರಿನ ಟ್ಯಾಂಕರ್ ಕೆಳಗೆ ನೀರು ಬಂದ್ ಮಾಡಲು ಭೀಮ ಜಾಧವ್ ತೆರಳಿದ್ದರು. ಈ ವೇಳೆ ಟ್ಯಾಂಕರ್ ಕೆಳಗೆ ಅಡಗಿದ್ದ ವಿಷಕಾರಿ ಹಾವು (ನಾಗರಹಾವು) ಅವರ ಕಾಲಿಗೆ ಕಚ್ಚಿದೆ. ಹಾವಿನ ತೀವ್ರ ವಿಷದ ಪರಿಣಾಮವಾಗಿ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಗ್ರಾಮಕ್ಕೆ ನೀರು ಪೂರೈಸುವ ಬೃಹತ್ ನೀರಿನ ಟ್ಯಾಂಕರ್ ಕೆಳಭಾಗದಲ್ಲಿ ದಟ್ಟವಾಗಿ ಹುಲ್ಲು ಹಾಗೂ ಮುಳ್ಳಿನ ಕಂಟಿಗಳು ಬೆಳೆದಿದ್ದವು. ಈ ಕುರಿತು ಹುಲ್ಲು–ಗಂಟಿಗಳನ್ನು ಕಟಾವು ಮಾಡಿಸಿ ಜಾಗ ಶುಚಿಗೊಳಿಸುವಂತೆ ಸ್ಥಳೀಯ ಗ್ರಾಮ…
ಕಲಬುರಗಿ: ಪತಿ–ಪತ್ನಿ ನಡುವಿನ ಜಗಳ ವಿಕೋಪಕ್ಕೆ ತಿರುಗಿ, ಪತಿಯನ್ನೇ ಪತ್ನಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಸೇಡಂ ತಾಲೂಕಿನ ಯಡ್ಡಳ್ಳಿ ಗ್ರಾಮದ ನಿವಾಸಿ ನಾಗೇಂದ್ರ ಮುಧೋಳ (35) ಎಂದು ಗುರುತಿಸಲಾಗಿದೆ. ಹತ್ಯೆ ಆರೋಪದ ಮೇಲೆ ಆತನ ಪತ್ನಿ ಸುಧಾರಾಣಿ ಮುಧೋಳ (30) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಾಗೇಂದ್ರ ತನ್ನ ಕುಟುಂಬದೊಂದಿಗೆ ಪತ್ನಿಯ ತವರೂರಾದ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮಕ್ಕೆ ಆಗಮಿಸಿ ಕುರಿ ಮೇಯಿಸುವ ಕೆಲಸ ಮಾಡುತ್ತಿದ್ದ. ಮದ್ಯಪಾನದ ಚಟಕ್ಕೆ ಬಿದ್ದಿದ್ದ ಈತ ಪ್ರತಿದಿನ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಈ ಹಿಂದೆ ಕೂಡ ಜಗಳದ ಹಿನ್ನೆಲೆಯಲ್ಲಿ ಹಲವು ಬಾರಿ ಜೈಲಿಗೂ ಹೋಗಿ ಬಂದಿದ್ದ. ಭಾನುವಾರ ರಾತ್ರಿ ಮತ್ತೆ ಪತಿ-ಪತ್ನಿ ನಡುವೆ ತೀವ್ರ ಜಗಳ ನಡೆದಿದೆ. ಈ ವೇಳೆ ನಾಗೇಂದ್ರ ತನ್ನ ಆರು ಹಾಗೂ ಎಂಟು ವರ್ಷದ ಇಬ್ಬರು ಗಂಡು ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಆಕ್ರೋಶಗೊಂಡ ಸುಧಾರಾಣಿ,…
ಬೀದರ್: ನಗರದ ಮೋಹನ್ ಮಾರುಕಟ್ಟೆಯಲ್ಲಿರುವ ನಿತುರ್ಕರ್ ಕಾಂಪ್ಲೆಕ್ಸ್ ನ ಎರಡನೇ ಮಹಡಿಯಲ್ಲಿ ಭಾನುವಾರ ಕಲಾವಿದ ಸಚಿನ್ ಮನೋಲ್ಕರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಆಯೋಜಿತಗೊಂಡಿದ್ದ ಈ ವೈವಿಧ್ಯಮಯ ಪ್ರದರ್ಶನದಲ್ಲಿ ಸಚಿನ್ ಮನೋಲ್ಕರ್ ಅವರು ರಚಿಸಿದ ಅಪರೂಪದ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದ್ದು, ಇವು ಸ್ಥಳೀಯ ಕಲಾಸಕ್ತರ ಹಾಗೂ ಸಾರ್ವಜನಿಕರ ವಿಶೇಷ ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶ್ರೀ ಸಿದ್ಧಲಿಂಗೇಶ್ವರ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲ ಹಾಗೂ ಬೆಂಗಳೂರಿನ ಆರ್‌ಜಿಯುಎಚ್‌ಎಸ್ (RGUHS) ಬಿಒಎಸ್ ಸದಸ್ಯ ಡಾ. ರಾಜಕುಮಾರ್ ಎಂ. ಬಿರಾದಾರ ಅವರು ಕಲಾವಿದನ ಪ್ರಯತ್ನಕ್ಕೆ ಶುಭ ಹಾರೈಸಿದರು. ಮತ್ತೋರ್ವ ಅತಿಥಿ, ಬೆಳ್ಳೂರು ಶಿಕ್ಷಣ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸೊಸೈಟಿಯ ಅಧ್ಯಕ್ಷ ದತ್ತಾತ್ರಿ ಬೆಳ್ಳೂರೆ ಅವರು ಮಾತನಾಡಿ, ಚಿತ್ರಕಲೆಯು ಕೇವಲ ಮನರಂಜನೆಯ ಕಲೆಯಾಗಿರದೆ, ನಮ್ಮ ಭಾವನೆ, ಸಂಸ್ಕೃತಿ ಹಾಗೂ ಬದುಕಿನ ಅನುಭವಗಳನ್ನು ಅಭಿವ್ಯಕ್ತಿಸುವ ಜೀವಂತ ಮಾಧ್ಯಮವಾಗಿದೆ ಎಂದು ಬಣ್ಣಿಸಿದರು.…