Subscribe to Updates
Get the latest creative news from FooBar about art, design and business.
- “ಸಮಾನತೆ ಕಲಿಸಿದ ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕ” | ಬಸವಯುಗ ವೈಭವ ಗ್ರಂಥ ಬಿಡುಗಡೆ
- ಬೀದರ್: ಬಿಸಿಎಂ ವಸತಿ ನಿಲಯದಲ್ಲಿ ಅವ್ಯವಸ್ಥೆ: ಕಿರಿಯ ಮೇಲ್ವಿಚಾರಕಿ ಅಮಾನತು
- ಡಿಜೆ, ಅತಿಯಾದ ಶಬ್ದಕ್ಕೆ ಕಡಿವಾಣ : ಇನ್ಸ್ಪೆಕ್ಟರ್ ಸುರೇಶ್ ಎಚ್ಚರಿಕೆ
- ತುಮಕೂರು ದಸರಾ ಮಹೋತ್ಸವ: ಕಲಾ ತಂಡಗಳಿಂದ ಅರ್ಜಿ ಆಹ್ವಾನ
- ತುಮಕೂರು: ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯ್ದೆ, ಪೌಷ್ಟಿಕಾಂಶದ ಅರಿವು ಕಾರ್ಯಕ್ರಮ
- ವಸತಿ ಶಾಲೆಗಳಿಗೆ ವೈದ್ಯಾಧಿಕಾರಿಗಳ ಭೇಟಿ ಕಡ್ಡಾಯ: ಆಶ್ವಿಜಾ ಬಿ.ವಿ.
- ಸಾಲ ಸೌಲಭ್ಯ: ಕಾಡುಗೊಲ್ಲ ಸಮುದಾಯದವರಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸುವ ವಿವರ ಇಲ್ಲಿದೆ
- ಹೊಲದ ಕಟ್ಟೆಯಲ್ಲಿ ಗಾಂಜಾ ಗಿಡ ಬೆಳೆದಿದ್ದ ಆರೋಪಿ ಬಂಧನ; 2.35 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ
Author: Ganesh Tumkuru
ತಿಪಟೂರು: ತಾಲೂಕಿನ ಜ್ಞಾನ ವಿಕಾಸ ವಿಭಾಗದ ವತಿಯಿಂದ ವಿಶೇಷ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ಕೇಂದ್ರ ಕಚೇರಿಯ ಜ್ಞಾನ ವಿಕಾಸ ವಿಭಾಗದ ನಿರ್ದೇಶಕರಾದ ದಿನೇಶ್ ಪೂಜಾರಿ ಅವರು ದೇವಗೀತೆ ಹಾಗೂ ಧ್ವೇಯಗೀತೆ ಹಾಡಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಮಹಿಳೆಯರಲ್ಲಿ ಆತ್ಮವಿಶ್ವಾಸ ಮತ್ತು ಶಿಸ್ತು ಅತ್ಯಗತ್ಯ. ಸಂಘದ ಸದಸ್ಯರ ಆಸಕ್ತಿ ಹಾಗೂ ಶಿಸ್ತು ಶ್ಲಾಘನೀಯ,” ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಜ್ಞಾನ ವಿಕಾಸ ಕಾರ್ಯಕ್ರಮದ ವಿವಿಧ ವಿಷಯಗಳ ಬಗ್ಗೆ ಸುದೀರ್ಘ ಮಾಹಿತಿ ನೀಡಿದರು. ಡಾ. ಯಮುನಾ ಅವರು ಕ್ಯಾನ್ಸರ್ ಖಾಯಿಲೆಯ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಆರಂಭಿಕ ಲಕ್ಷಣಗಳ ಕುರಿತು ಜಾಗೃತಿ ಮೂಡಿಸಿದರು. ಡಾ. ಹರಿಪ್ರಿಯಾ ಅವರು ಹೃದಯ ಸಂಬಂಧಿ ಕಾಯಿಲೆಗಳ ತಡೆಗಟ್ಟುವಿಕೆ ಕುರಿತು ಪ್ರಾತ್ಯಕ್ಷಿಕೆ ಹಾಗೂ ಸಂವಾದದ ಮೂಲಕ ಉಪಯುಕ್ತ ಮಾಹಿತಿ ನೀಡಿದರು. ಕಾರ್ಯಕ್ರಮದ ಭಾಗವಾಗಿ ನೂತನವಾಗಿ ಪ್ರಾರಂಭಗೊಂಡ ಚಿಕ್ಕ ಹೊನ್ನವಳ್ಳಿ ಶಿವಾನಿ ಜ್ಞಾನ ವಿಕಾಸ ಕೇಂದ್ರ ಹಾಗೂ ಘಟಕಿನಕರೆ ಭೂಮಿ ಜ್ಞಾನ ವಿಕಾಸ ಕೇಂದ್ರಗಳಿಗೆ ಅಧಿಕೃತ…
ವಿಜಯಪುರ: ರಸ್ತೆಗೆ ಅಡ್ಡಲಾಗಿ ನಿಂತಿದ್ದ ಆಟೋರಿಕ್ಷಾವನ್ನು ಪಕ್ಕಕ್ಕೆ ಸರಿಸುವಂತೆ ಹೇಳಿದ್ದಕ್ಕೆ, ಕರ್ತವ್ಯ ನಿರತ KSRTC ಬಸ್ ನಿರ್ವಾಹಕ (ಕಂಡಕ್ಟರ್) ಮೇಲೆ ಇಬ್ಬರು ದುಷ್ಕರ್ಮಿಗಳು ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಲಹಳ್ಳಿ ಸಮೀಪ ಮದರಿ–ಕನ್ನೊಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಅನ್ನು ಆರೋಪಿಗಳು ಅಡ್ಡಗಟ್ಟಿದ್ದಾರೆ. ಬಳಿಕ ಬಸ್ ನಿರ್ವಾಹಕ ಮಲ್ಲಪ್ಪ ಲಮಾಣಿ ಅವರೊಂದಿಗೆ ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾತಿನ ಚಕಮಕಿ ತೀವ್ರಗೊಂಡು, ಆರೋಪಿಗಳು ಏಕಾಏಕಿ ಕಂಡಕ್ಟರ್ ಮಲ್ಲಪ್ಪ ಅವರ ಮೇಲೆ ಮುಗಿಬಿದ್ದು ಮನಬಂದಂತೆ ಥಳಿಸಿದ್ದಾರೆ. ಕಂಡಕ್ಟರ್ ಪ್ರತಿರೋಧ ಒಡ್ಡಿದಾಗ, ಆರೋಪಿಗಳು ಅವರ ಕುತ್ತಿಗೆಯನ್ನು ಬಲವಾಗಿ ಹಿಸುಕಿದ್ದಾರೆ. ಪರಿಣಾಮ ಮಲ್ಲಪ್ಪ ಅವರು ಬಸ್ ನಲ್ಲೇ ಅರೆಪ್ರಜ್ಞಾವಸ್ಥೆಗೆ ಜಾರಿ ಕುಸಿದುಬಿದ್ದಿದ್ದಾರೆ. ಕಂಡಕ್ಟರ್ ಮೇಲೆ ದಾಳಿ ನಡೆಯುತ್ತಿದ್ದಂತೆ ಬಸ್ ನಲ್ಲಿದ್ದ ಪ್ರಯಾಣಿಕರು ತಕ್ಷಣ ಮಧ್ಯಪ್ರವೇಶಿಸಿ ಹಲ್ಲೆಯನ್ನು ತಡೆದಿದ್ದಾರೆ. ಅಲ್ಲದೆ, ಗಾಯಾಳು ನಿರ್ವಾಹಕರಿಗೆ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ…
ಮೈಸೂರು: ತಿಂಡಿಯ ಪ್ಯಾಕೆಟ್ ನೊಂದಿಗೆ ಬಂದಿದ್ದ ಸಣ್ಣ ಪ್ಲಾಸ್ಟಿಕ್ ಆಟಿಕೆ ಚೆಂಡನ್ನು (Plastic Toy Ball) ಅಚಾನಕ್ಕಾಗಿ ನುಂಗಿದ ಪರಿಣಾಮ ಗಂಟಲಲ್ಲಿ ಸಿಲುಕಿ ಐದು ವರ್ಷದ ಬಾಲಕನೊಬ್ಬ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ ಆಘಾತಕಾರಿ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ. ಮೃತರನ್ನು ಹುಣಸೂರು ತಾಲೂಕಿನ ಗೌರಿಪುರ ಗ್ರಾಮದ ಸಂತೋಷ್ ಹಾಗೂ ಐಶ್ವರ್ಯ ದಂಪತಿಯ ಏಕೈಕ ಪುತ್ರ ಮುಕುಂದ್ ಮಯೂರ್ (5) ಎಂದು ಗುರುತಿಸಲಾಗಿದೆ. ಈ ಬಾಲಕ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಗೌರಮ್ಮ ಹಾಗೂ ಶಂಕರ್ ನಾಯಕ ಅವರ ಮೊಮ್ಮಗನಾಗಿದ್ದಾರೆ. ಸಂತೋಷ್ ಅವರ ಮನೆಯವರು ತಂದಿದ್ದ ಚಿಪ್ಸ್/ಕುರ್ ಕುರೆ ಪ್ಯಾಕೆಟ್ ನೊಳಗೆ ಉಚಿತ ಕೊಡುಗೆಯಾಗಿ (Complimentary item) ಸಣ್ಣದಾದ ಪ್ಲಾಸ್ಟಿಕ್ ಆಟಿಕೆ ಬಾಲ್ ಬಂದಿತ್ತು. ತಿಂಡಿ ತಿನ್ನುವ ವೇಳೆ ಆ ಪ್ಲಾಸ್ಟಿಕ್ ಬಾಲ್ ನೊಂದಿಗೆ ಬಾಲಕ ಆಟವಾಡುತ್ತಿದ್ದನು. ಈ ವೇಳೆ ಆಟಿಕೆ ಬಾಲ್ ಅನ್ನು ಅಚಾನಕ್ಕಾಗಿ ನುಂಗಿದ್ದು, ಅದು ನೇರವಾಗಿ ಗಂಟಲಲ್ಲಿ ಬಂದು ಸಿಲುಕಿಕೊಂಡಿದೆ. ಬಾಲಕನಿಗೆ ಉಸಿರಾಟದ ತೊಂದರೆಯಾಗಿ ಅಸ್ವಸ್ಥಗೊಳ್ಳುವುದನ್ನು…
ಹಣ್ಣು ಎಂದಾಕ್ಷಣ ಇದೀಗ ವಿದೇಶಿ ಹಣ್ಣುಗಳದ್ದೇ ಹವಾ ನಮ್ಮ ಕಾಡು ಹಣ್ಣುಗಳ ಔಷಧೀಯ ಗುಣಗಳ ಮುಂದೆ ಇದೇನು ಅಲ್ಲ ಮುಂದೊಂದು ದಿನ ಇವುಗಳ ಬಗ್ಗೆಯೂ ಆಂದೋಲನ ಮಾಡಬೇಕಾಗಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ ಹಣ್ಣುಗಳ ಒಳಗೆ ಏನು ಅಡಗಿದೆ….? ನಾವು ತಿನ್ನುವ ಹಣ್ಣುಗಳು ನಿಜವಾಗಿಯೂ ಸುರಕ್ಷಿತವೇ….? ಅಂದು ಹಣ್ಣು ಅದಾಗಿಯೇ ಹಣ್ಣಾಗುತ್ತಿತ್ತು ಇಂದು ಹೊಟ್ಟೆಯಲ್ಲಿ ಹುಣ್ಣಾಗುತ್ತಿವೆ ಇದೊಂದು ಕಾಡು ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು ಗೊತ್ತಿದ್ದರೆ ಹಣ್ಣಿನ ಹೆಸರಿನ ಜೊತೆ ತಿಂದ ಅನುಭವವನ್ನು ಹಂಚಿಕೊಳ್ಳಿ. ಬದುಕಿನಲ್ಲಿ ಎಲ್ಲಾ ಯಶಸ್ಸಿಗೂ ಮೂರು ಔಷಧಿಗಳಿವೆ ಒಂದು ವಿದ್ಯೆ ಇನ್ನೊಂದು ದುಡಿಮೆ ಮತ್ತೊಂದು ತಾಳ್ಮೆ ಜೀವನದ ಖುಷಿಯನ್ನು ನಾವು ನಮ್ಮಲ್ಲೇ ಕಂಡುಕೊಳ್ಳಬೇಕು ಇದು ಇನ್ನೆಲ್ಲೋ ಸಿಗುವುದಿಲ್ಲ ಯಾವಾಗಲೂ ಎಲ್ಲಾ ನೋವನ್ನು ದೇವರು ನಮಗೆ ಯಾಕೆ ದುಃಖ ನೀಡುತ್ತಾನೆ ಎಂದು ನಿಜ ಹೇಳಬೇಕೆಂದರೆ ಒಂದು ವಸ್ತುವಿನ ಖುಷಿಯ ಕೀಲಿ ಕೈ ಜೀವನ ನಮ್ಮಲ್ಲೇ ಇರಬೇಕು. ಇದು ಹುಳಿ ಹಣ್ಣು ಇದರಲ್ಲಿ ಸಿ — ವಿಟಮಿನ್ ಹೇರಳವಾಗಿದ್ದು ಕಣ್ಣಿನ ದೃಷ್ಟಿ…
ಸರಗೂರು: ಸ್ತನ್ಯಪಾನದಿಂದ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ತಾಯಿ ಮತ್ತು ಮಗುವಿನ ಆರೋಗ್ಯ ಸುಧಾರಣೆಗೆ ಇದು ಅತ್ಯಂತ ಅಗತ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬ ತಾಯಿಯೂ ಮಗುವಿಗೆ ಸಮರ್ಪಕವಾಗಿ ಸ್ತನ್ಯಪಾನ ಮಾಡಿಸಬೇಕು ಎಂದು ಎಚ್.ಡಿ. ಕೋಟೆ ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ (CDPO) ಸಿ. ದೀಪಾ ಕರೆ ನೀಡಿದರು. ಪಟ್ಟಣದ 11ನೇ ವಾರ್ಡ್ನ ಬಿಡಗಲು ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ವಿಶ್ವ ಸ್ತನ್ಯಪಾನ ಸಪ್ತಾಹ ಜಾಗೃತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಪ್ರತಿಯೊಬ್ಬ ತಾಯಿ ಮತ್ತು ಕುಟುಂಬದಲ್ಲಿ ಸ್ತನ್ಯಪಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವುದೇ ಈ ಸಪ್ತಾಹದ ಮುಖ್ಯ ಉದ್ದೇಶವಾಗಿದೆ. ಮಗು ಜನಿಸಿದ ಮೊದಲ ಒಂದು ಗಂಟೆಯೊಳಗೆ ತಾಯಿಯ ಎದೆಹಾಲು ಉಣಿಸುವುದು ಅತ್ಯಂತ ಮುಖ್ಯ. ಮೊದಲ ಆರು ತಿಂಗಳವರೆಗೆ ಮಗುವಿಗೆ ಕೇವಲ ತಾಯಿಯ ಹಾಲನ್ನು ಮಾತ್ರ ನೀಡಬೇಕು. ಇದು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಆರೋಗ್ಯಕರ ಬೆಳವಣಿಗೆಗೆ ನೆರವಾಗುತ್ತದೆ” ಎಂದು ದೀಪಾ ತಿಳಿಸಿದರು. ತಾಯಿಯ ಹಾಲು ಮಗುವಿಗೆ ಅತ್ಯುತ್ತಮ ಹಾಗೂ ಸುರಕ್ಷಿತ ಆಹಾರವಾಗಿದ್ದು,…
ತುಮಕೂರು: ನಗರದಲ್ಲಿ ಆರು ದಿನಗಳಿಂದ ನಡೆದ ಯೋನೆಕ್ಸ್–ಸನ್ ರೈಸ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಅಂಡರ್–11 ಮತ್ತು ಅಂಡರ್–13 ವಿಭಾಗಗಳ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಶನಿವಾರ ತೆರೆಬಿದ್ದಿತು. ಬಾಲಕರ ಅಂಡರ್–11 ವಿಭಾಗದ ಸಿಂಗಲ್ಸ್ ನಲ್ಲಿ ರಿಯಾನ್ಸ್ ರಿಷಿಕ್ ಸಾಯಿ ಯುಗಂಟ್ ಪ್ರಥಮ, ಲಿಟಿನ್ ಪಿ ದ್ವಿತೀಯ ಸ್ಥಾನ ಪಡೆದರೆ, ಡಬಲ್ ನಲ್ಲಿ ಅಥರ್ವ್ ಸಾಹು ಹಾಗೂ ರಿಯಾನ್ಸ್ ರಿಷಿಕ್ ಪ್ರಥಮ ಸ್ಥಾನ ಗೆದ್ದರು. ಇದೇ ವಿಭಾಗದ ಬಾಲಕಿಯರ ಸಿಂಗಲ್ಸ್ ನಲ್ಲಿ ಜ್ಯೋತ್ಸ್ನಾ ವಿನೋದ್ ಪ್ರಥಮ, ಯುವಿಕ ತಿಮ್ಮಯ್ಯ ದ್ವಿತೀಯ ಸ್ಥಾನ ಪಡೆದರು. ಡಬಲ್ ನಲ್ಲಿ ಜ್ಯೋತ್ಸ್ನಾ ವಿನೋದ್, ಕೃಪಾ ಸಿಂಗ್ದೇವ್ ಪ್ರಥಮ, ಆರುಷಿ ವೈಷ್ಣವಿ, ಸ್ವರ ಎಸ್. ಭಾರಧ್ವಾಜ್ ಗೆಲುವು ಸಾಧಿಸಿದರು. ಬಾಲಕಿಯರ ಅಂಡರ್ 13ರಲ್ಲ ವಿಭಾಗದ ಸಿಂಗಲ್ ನಲ್ಲಿ ಸಿಪಿ ಆದರ್ಶ್ ಮೊದಲ, ಶಾನ್ವಿ ಪಿ.ಎನ್ ದ್ವಿತೀಯ ಸ್ಥಾನ ಹಾಗೂ ಡಬಲ್ ನಲ್ಲಿ ಶಾನ್ವಿ ಪಿ.ಎನ್., ಶಾಂಭವಿ ಶರ್ಮಾ ಪ್ರಥಮ, ಹೇಮಾಶ್ರೀ, ಸಿಪಿ ಆದರ್ಶ್ ದ್ವಿತೀಯ ಸ್ಥಾನ ಪಡೆದರು. ಬಾಲಕರ ಅಂಡರ್ 13…
ತುಮಕೂರು: 30ನೇ ವಾರ್ಡಿನ ಗಾರೇನರಸಯ್ಯ ನಕಟ್ಟೆ ಸ್ವಚ್ಛತಾ ಕಾರ್ಯ: ಪಾಲಿಕೆ ಸಿಬ್ಬಂದಿ, ನಾಗರಿಕ ಹಿತರಕ್ಷಣಾ ಸಮಿತಿ ಭಾಗಿ
ತುಮಕೂರು: ನಗರದ 30ನೇ ವಾರ್ಡಿನ ಸಪ್ತಗಿರಿ ಬಡಾವಣೆಯ ಗಾರೇನರಸಯ್ಯ ನಕಟ್ಟೆಯಲ್ಲಿ ಮಹಾನಗರಪಾಲಿಕೆ ಮತ್ತು ಬಡಾವಣೆಯ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಶುಕ್ರವಾರ ಬೆಳಿಗ್ಗೆ ಸ್ವಚ್ಛತಾ ಕಾರ್ಯ ಹಮ್ಮಿ ಕೊಳ್ಳಲಾಗಿತ್ತು. ಕೆರೆಯ ಸುತ್ತಮುತ್ತ ಬೆಳೆದಿದ್ದ ಗಿಡಗಂಟೆಗಳು, ಕಾಲುವೆಯ ಮೂಲಕ ಕೆರೆ ಅಂಗಳಕ್ಕೆ ಸೇರಿದ್ದ ಪ್ಲಾಸ್ಟಿಕ್, ಬಟ್ಟೆ ಹಾಗೂ ಇತರೆ ತ್ಯಾಜ್ಯಗಳನ್ನು ಪಾಲಿಕೆಯ ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ಪೌರ ಕಾರ್ಮಿಕರು ಹಾಗೂ ನಾಗರಿಕರು ಜೊತೆಗೂಡಿ ತೆರವು ಕಾರ್ಯ ಮಾಡಿದರು. ಈ ವೇಳೆ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್ ಅವರು ಗಾರೇನರಸಯ್ಯನ ಕಟ್ಟೆ ಸ್ವಚ್ಛತಾ ಕಾರ್ಯ ಶುಕ್ರವಾರ ಮಹಾನಗರಪಾಲಿಕೆ ಹಾಗೂ ಬಡಾವಣೆ ನಾಗರಿಕರ ಸಮಿತಿ ಸಹಯೋಗದಲ್ಲಿ ಯಶಸ್ವಿಯಾಗಿ ನೆರವೇರಿದ್ದು, ಈ ಕಾರ್ಯಕ್ಕೆ ಸಹಕರಿಸಿದ ಪಾಲಿಕೆ ಹಾಗೂ ನಾಗರಿಕರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು. ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ ನಾಗರಿಕರು ನಗರದ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಬೇಕು. ಇದರಿಂದ ನಮ್ಮ ಬೀದಿ ಕೆರೆಕಟ್ಟೆ, ಸುತ್ತಮುತ್ತಲಿನ ಪ್ರದೇಶ ಸ್ವಚ್ಛತೆಯಿಂದ ಇರಲು ಸಾಧ್ಯವಾಗುತ್ತದೆ ಎಂದರು. ನಾಗರಿಕ ಸಮಿತಿ ಅಧ್ಯಕ್ಷ ರಮೇಶ್…
ತುಮಕೂರು : ಡೇಟಾ ಸೆಂಟರ್, ಎಐ ತಂತ್ರಜ್ಞಾನ ಬಳಕೆಯಿಂದ ಪರಿಸರ, ಸಮಾಜ ಹಾಗೂ ಗ್ರಾಮೀಣ ಜೀವನೋಪಾಯದ ಮೇಲೆ ಉಂಟು ಮಾಡುವ ಪರಿಣಾಮಗಳ ಬಗ್ಗೆ ಮತ್ತು ಲಿಂಕ್ ಕೆನಾಲ್ ಹಾಗೂ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ಆ. 6, 7 ಮತ್ತು 8ರಂದು ಗೊಲ್ಲೂರು ಹೋಬಳಿಯ ದೊಡ್ಡ ಹೊಸೂರು ಗ್ರಾಮದ ಗಾಂಧೀಜಿ ಸಹಜ ಬೇಸಾಯ ಆಶ್ರಮದಲ್ಲಿ ಚಳುವಳಿ ರೂಪದ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಎ. ಗೋವಿಂದರಾಜು ತಿಳಿಸಿದರು. ನಗರದ ವಿಜ್ಞಾನ ಕೇಂದ್ರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ಸರ್ಕಾರ ಸುಮಾರು 9,460 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿದೆ. ಗುಬ್ಬಿ ಲಿಂಕ್ ಕೆನಾಲ್ನ ನೀರನ್ನು ಎಲ್ಲಿಗೆ ಕೊಂಡೊಯ್ಯಲಾಗುತ್ತದೆ ಎಂಬುದರ ಕುರಿತು ಸ್ಪಷ್ಟನೆ ನೀಡಬೇಕು. ಕೃಷಿ ಭೂಮಿ ಸ್ವಾಧೀನವನ್ನು ವಿರೋಧಿಸುವುದು ಹಾಗೂ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಐ ಆಧಾರಿತ ಡೇಟಾ…
ಔರಾದ / ಬೀದರ್: ಬೀದರ್ ಜಿಲ್ಲೆಯ ಔರಾದ ತಾಲೂಕಿನ ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಭಾಗವಹಿಸಿ ಮಾತನಾಡಿದ ಡಾ.ವಿಶ್ವ ಶಿಂಗಾಡಿ ಅವರು, “ಸಮಾಜಕ್ಕೆ ಡಾ. ಮಹಾಂತ ಶಿವಯೋಗಿಗಳ ಕೊಡುಗೆ ಅತ್ಯಂತ ಅಪಾರವಾಗಿದೆ. ಜನರು ದುಶ್ಚಟಗಳಿಂದ ಮುಕ್ತರಾಗಲು ಅವರು ಕೈಗೊಂಡ ಜಾಗೃತಿ ಅಭಿಯಾನಗಳು ಹಾಗೂ ಅವರ ನಿಸ್ವಾರ್ಥ ಸೇವೆ ಸಮಾಜವನ್ನು ಸುಧಾರಿಸಲು ಪ್ರಮುಖ ಪಾತ್ರ ವಹಿಸಿವೆ,” ಎಂದು ಬಣ್ಣಿಸಿದರು. ಡಾ. ಮಹಾಂತ ಶಿವಯೋಗಿಗಳು ಜನರ ಬಳಿ ಹಣ ಅಥವಾ ಧಾನ್ಯದ ಬದಲಿಗೆ, ಅವರಲ್ಲಿದ್ದ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯಾಗಿ ಪಡೆದು ಜನರಲ್ಲಿ ವೈಚಾರಿಕ ಹಾಗೂ ನೈತಿಕ ಬದಲಾವಣೆ ತಂದಿದ್ದರು. ಈ ವಿನೂತನ ಮಾರ್ಗವು ಸಮಾಜವನ್ನು ವ್ಯಸನಮುಕ್ತಗೊಳಿಸಲು ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿತು ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸತೀಶ್, ಸಂತೋಷ್ ಬಾವಗೆ, ಶ್ರೀಕಾಂತ್, ಕಿರಣ್ ಕುಮಾರ್ ಸೇರಿದಂತೆ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಸಾರ್ವಜನಿಕರು…
ತುಮಕೂರು: ನಗರದ ದೇವರಾಯಪಟ್ಟಣ ಭಾಗದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ದೇವರಾಯಪಟ್ಟಣದಿಂದ ಬಂಡೇಪಾಳ್ಯ ಸಂಪರ್ಕಿಸುವ ರಸ್ತೆಯಲ್ಲಿ ಚಿರತೆಯ ಸಂಚಾರ ಕಂಡುಬಂದಿದ್ದು, ಸುತ್ತಮುತ್ತಲ ಪ್ರದೇಶದ ಜನರು ಭೀತಿಯ ವಾತಾವರಣದಲ್ಲಿ ದಿನ ದೂಡುವಂತಾಗಿದೆ. ಈ ನಡುವೆ ಇಸ್ರೋ ಆವರಣದ (ಹಿಂದಿನ ಎಚ್ ಎಂಟಿ ಕಾಂಪೌಂಡ್) ಒಳಗೆ ನುಗ್ಗಿದ ಚಿರತೆಯು ಅಲ್ಲಿದ್ದ ಕುರಿಯೊಂದರ ಮೇಲೆ ದಾಳಿ ನಡೆಸಿ ಸಾಯಿಸಿದೆ. ಘಟನೆಯಿಂದ ಆತಂಕಗೊಂಡ ಗ್ರಾಮಸ್ಥರು ಹಾಗೂ ನಿವಾಸಿಗಳು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು, ದೇವರಾಯಪಟ್ಟಣದ ಆಂಜನೇಯ ದೇವಸ್ಥಾನದ ಸಮೀಪ ಚಿರತೆಯನ್ನು ಸೆರೆ ಹಿಡಿಯಲು ಬೋನು ಇರಿಸಿದ್ದಾರೆ. ಚಿರತೆ ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಾರ್ವಜನಿಕರು ಮತ್ತು ಮಕ್ಕಳು ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಜಾಗರೂಕರಾಗಿ ಓಡಾಡಬೇಕೆಂದು ಇಲಾಖೆ ಹಾಗೂ ಸ್ಥಳೀಯ ಮುಖಂಡರು ಮನವಿ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…