Author: Ganesh Tumkuru

ಬೀದರ್: ಶ್ರೀಶೈಲಂನ ಅಕ್ಕ ಮಹಾದೇವಿ ಚೈತನ್ಯ ಪೀಠದಲ್ಲಿ ಜಿಲ್ಲೆಯವರೇ ಆದ ಕಾಂಗ್ರೆಸ್ ಕಿಸಾನ್ ವಿಭಾಗದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಜಾನಸನ್ ಘೋಡೆ ಅವರನ್ನು ಪೀಠದ ಅಧಿಪತಿ ಮಾತೆ ಕರುಣಾದೇವಿ ಅವರು ಶಾಲು ಹೊದಿಸಿ ಸನ್ಮಾನಿಸಿದರು. ಈ ವೇಳೆ ಜಾನಸನ್ ಘೋಡೆ ಅವರ ಸಾಮಾಜಿಕ ಕಾರ್ಯಗಳನ್ನು ಅವರು ವಿಶೇಷವಾಗಿ ಶ್ಲಾಘಿಸಿದರು. ಸನ್ಮಾನ ಸ್ವೀಕರಿಸಿದ ಬಳಿಕ ಜಾನಸನ್ ಘೋಡೆ ಅವರು ಜ್ಯೋತಿರ್ಲಿಂಗದ ದರ್ಶನ ಪಡೆದು ಧನ್ಯತಾ ಭಾವ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಬೇಮಳಖೇಡ ಮಠದ ಪೀಠಾಧಿಪತಿ ಡಾ.ರಾಜಶೇಖರ ಶಿವಾಚಾರ್ಯ, ಔರಾದ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಯುವ ಉದ್ಯಮಿ ಸಂಗಮೇಶ ಪಟೇಲ್ ಹಾಗೂ ಪ್ರಮುಖ ಮುಖಂಡರಾದ ಧಮ್ಮದೀಪ, ವಿಕಾಸ ನಾಸಿಗಾರ್, ರಾಕೇಶ್ ದಂಡೆ ಉಪಸ್ಥಿತರಿದ್ದರು. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

Read More

ಬೆಂಗಳೂರು: ಕರ್ನಾಟಕ ಹೈಕೋರ್ಟ್​​ ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತಮ್ಮ ವೇಗವಾದ ಹಾಗೂ ಹೆಚ್ಚಿನ ಸಂಖ್ಯೆಯ ಪ್ರಕರಣಗಳ ವಿಲೇವಾರಿಯಿಂದ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಸೆಪ್ಟೆಂಬರ್ 02 ರಂದು ಒಂದೇ ದಿನ ಬರೋಬ್ಬರಿ 555 ಪ್ರಕರಣಗಳ ವಿಚಾರಣೆ ನಡೆಸಿ ಹೈಕೋರ್ಟ್ ಕಲಾಪದಲ್ಲಿ ಹೊಸ ಇತಿಹಾಸ ಹಾಗೂ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಸಾಮಾನ್ಯವಾಗಿ ಹೈಕೋರ್ಟ್ ಕಲಾಪಗಳು ನಿಗದಿತ ವೇಳೆಗೆ ಮುಕ್ತಾಯಗೊಳ್ಳುತ್ತವೆ. ಆದರೆ, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿರುವ ಪೀಠವು ಸೆಪ್ಟೆಂಬರ್ 2ರಂದು ರಾತ್ರಿ 8:30 ಗಂಟೆಯವರೆಗೂ ಅರ್ಜಿಗಳ ವಿಚಾರಣೆ ನಡೆಸಿ ಅಚ್ಚರಿ ಮೂಡಿಸಿತು. 555 ಪ್ರಕರಣಗಳ ವಿಚಾರಣೆ: ಒಂದೇ ದಿನದಲ್ಲಿ ಒಟ್ಟು 555 ರಿಟ್ ಮತ್ತು ಕ್ರಿಮಿನಲ್ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಲಾಗಿದ್ದು, ಅದರಲ್ಲಿ ಒಟ್ಟು 85 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ತುರ್ತು ಅರ್ಜಿಗಳ ವಿಲೇವಾರಿ: ಬೆಳಗಿನ ಕಲಾಪದಲ್ಲಿ ನಿಗದಿತವಾಗಿದ್ದ 318 ಅರ್ಜಿಗಳ ವಿಚಾರಣೆ ಮುಗಿಸಿದ ಬಳಿಕ, ತುರ್ತು ವಿಚಾರಣೆಗೆ ಕೋರಿದ್ದ 240ಕ್ಕೂ ಹೆಚ್ಚು ಮೆಮೊಗಳನ್ನು ಸ್ವೀಕರಿಸಲಾಗಿತ್ತು. ಮಧ್ಯಾಹ್ನ 2:30ಕ್ಕೆ ಆರಂಭವಾದ ಕಲಾಪದಲ್ಲಿ ಈ ತುರ್ತು…

Read More

ತಿಪಟೂರು: ನೈತಿಕ ರಾಜಕಾರಣ ಕುಸಿಯುತ್ತಿರುವ ಕಾಲಘಟ್ಟದಲ್ಲಿ ಬಿ.ಸಿ.ನಾಗೇಶ್ ಆದರ್ಶ ರಾಜಕಾರಣ ನಡೆಸಿದ್ದಾರೆ. ಪ್ರಾಮಾಣಿಕತೆ, ಸಿದ್ಧಾಂತ ಮತ್ತು ಹಿಂದುತ್ವದ ಆಧಾರದ ಮೇಲೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದು, ಅವರ ಕುಟುಂಬಕ್ಕೆ ರಾಜಕೀಯವಾಗಿ ಶಕ್ತಿ ತುಂಬುವುದರ ಜೊತೆಗೆ, ಮಾನ್ಯತೆ ನೀಡುವುದು ಪಕ್ಷದ ಜವಾಬ್ದಾರಿಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದರು. ಅವರು ನಗರದ ಗುರುಕುಲ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪಕ್ಷದ ಮುಖಂಡ ಹಾಗೂ ಮಾಜಿ ಸಚಿವ ಬಿ.ಸಿ.ನಾಗೇಶ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ನೈತಿಕ ರಾಜಕಾರಣ ಕುಸಿಯುತ್ತಿದೆ. ಧರ್ಮ ಹಾಗೂ ನೈತಿಕತೆಯ ರಕ್ಷಣೆಗಾಗಿ ನಾನು ಸಹ ಪ್ರತಿರೋಧ ಮಾಡಿದ್ದೇನೆ. ನಮಗೆ ಧರ್ಮರಕ್ಷಣೆ ಮುಖ್ಯ. ಬಿ.ಸಿ. ನಾಗೇಶ್ ಅವರೊಂದಿಗೆ ನಾನು ಅತಿ ಪ್ರೀಯ ಒಡನಾಟ ಹೊಂದಿದ್ದೆ. ಸರಳತೆಯ ಜೀವನ ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಆದರ್ಶಮಯ ರಾಜಕೀಯ ಜೀವನವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.  ಬಿ.ಸಿ.ನಾಗೇಶ್ ವೈಚಾರಿಕ ರಾಜಕಾರಣ ಪಾಲಿಸುತ್ತಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ನೈತಿಕ ಮೌಲ್ಯ ತುಂಬುವ ಕೆಲಸ ಮಾಡಿದ್ದರು. ವೈಚಾರಿಕ…

Read More

ಕುಣಿಗಲ್: ಕ್ರೀಡೆ ಕ್ರೀಡಾಪಟುಗಳ ಸ್ನೇಹ ಸಂಕೇತದ ಕೊಂಡಿಯಾಗಿದ್ದು, ಯುವ ಕ್ರೀಡಾಪಟುಗಳನ್ನು ಒಗೂಡಿಸುವ ಆಟವಾಗಿದೆ. ಹಾಗಾಗಿ ಕ್ರೀಡಾಪಟುಗಳು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಬೇಕೆಂದು ತಹಶೀಲ್ದಾರ್ ಎನ್.ಆರ್.ಕರಿಯಾನಾಯ್ಕ್ ತಿಳಿಸಿದರು. ಅವರು ಮಂಗಳವಾರ ಪಟ್ಟಣದ ಜೆಕೆಬಿಎಂಎಸ್ ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಅರವಿಂದ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2026-27ನೇ ಸಾಲಿನ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದರು. ಪ್ರತಿಯೊಬ್ಬರು ಕ್ರೀಡೆಯಲ್ಲಿ ಉತ್ತಮ ತರಬೇತಿ ಹೊಂದಿ ತಾಲ್ಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸುವ ಮೂಲಕ ತಾಲ್ಲೂಕಿಗೆ ಕೀರ್ತಿ ತರಬೇಕು. ಹಾಗಾಗಿ ಶಿಕ್ಷಣಾಭ್ಯಾಸದ ಜೊತೆಗೆ ಕ್ರೀಡೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು. ಧ್ವಜವಂದನೆ ಸ್ವೀಕರಿಸಿ ಮಾತನಾಡಿದ, ಕುಣಿಗಲ್ ವೃತ್ತ ನಿರೀಕ್ಷಕ ಮಾಧ್ಯಾನಾಯ್ಕ್ ತಾಲ್ಲೂಕು ಕ್ರೀಡೆ, ಸಾಂಸ್ಕೃತಿಕ ಮತ್ತು ವಿದ್ಯಾಭ್ಯಾಸಕ್ಕೆ ಅತ್ಯಂತ ಹೆಚ್ಚಿನ ಮಹತ್ವವನ್ನು ನೀಡುತ್ತಿರುವುದು ವಿಶೇಷವಾಗಿದೆ. ಯಾರು ಗೆಲ್ಲುತ್ತಾರೆ ಎನ್ನುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯವಾಗಿದೆ. ಕ್ರೀಡೆಯಲ್ಲಿ…

Read More

ತುಮಕೂರು: ನಗರಪಾಲಿಕೆ ವ್ಯಾಪ್ತಿಯ ಸ್ಲಂ ಜನರ ಕುಂದುಕೊರತೆ ಸಭೆಯನ್ನು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರೆಯಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್, ದಿನಾಂಕ:14-8-2026 ರಂದು ಸ್ಲಂ ಸಮಿತಿ 11 ಬೇಡಿಕೆಗಳ ಕುಂದು ಕೊರತೆಯನ್ನು ನನ್ನ ಗಮನಕ್ಕೆ ಸಲ್ಲಿಸಿದ್ದು ಅದರಂತೆ ಇದುವರೆಗೂ 36 ಸ್ಲಂಗಳಲ್ಲಿ ಹಕ್ಕುಪತ್ರ ಸಂಬಂಧ ಸಮೀಕ್ಷೆ ಕೈಗೊಂಡಿದ್ದು ಸ್ಥಳೀಯ ಸಂಸ್ಥೆಗಳ ಸ್ವಾಧೀನದಲ್ಲಿರುವ ಕೊಳಚೆ ಪ್ರದೇಶಗಳಲ್ಲಿ 1250 ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ, 140 ಫಲಾನುಭವಿಗಳಿಗೆ ಇದುವರೆಗೂ ಹಕ್ಕುಪತ್ರ ವಿತರಿಸಲಾಗಿದೆ. ಬಾಕಿ ಉಳಿದಿರುವ 110 ಫಲಾನುಭವಿಗಳಿಗೆ ಡಿಸೆಂಬರ್ ಮೊದಲ ವಾರದಲ್ಲಿ ಹಕ್ಕುಪತ್ರ ನೀಡಲು ಅಗತ್ಯವಾದ ಕ್ರಮವಹಿಸಲು ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಹಾಗೂ ಸ್ಲಂ ಬೋರ್ಡ್ ಇಂಜಿನಿಯರ್ ಕ್ರಮವಹಿಸಬೇಕು ಎಂದರು. ಸಭೆಯಲ್ಲಿ ಸ್ಲಂ ಜನರಿಗೆ ಹೊನ್ನೇನಹಳ್ಳಿ ಸರ್ವೆ ನಂ, 44 ರಲ್ಲಿ ನಿರ್ಮಾಣವಾಗುತ್ತಿರುವ 192 ವಸತಿ ಸಮುಚ್ಚಯಗಳಿಗೆ ಪಿಎಂವಿಎ ವಸತಿ ಯೋಜನೆಯ ಗ್ರಿಡ್ ಲೈನ್ ನಂತೆ ಆಯ್ಕೆ ಮಾಡಬೇಕು. ಭಾರತಿ ನಗರ ಎಸ್.ಎನ್ ಪಾಳ್ಯ ಸ್ಲಂಗಳಿಗೆ ಮಳೆ ಹಾನಿಯಿಂದ ರಕ್ಷಿಸಲು ತಡೆಗೋಡೆ ನಿರ್ಮಿಸಲು ಪಾಲಿಕೆ…

Read More

ಸಿರಾ: ಸಾಹಿತ್ಯ ಬರವಣಿಗೆ ಬಹಳ ಸುಲಭ ಅಂದುಕೊಳ್ಳುವ ಬಹುತೇಕರು ಸಾಹಿತ್ಯದ ಗಟ್ಟಿತನದ ಕಸುವನ್ನು ಕಲಿತು ಕೊಳ್ಳುವ ಅಗತ್ಯವಿದೆ. ಹೊಸದಾಗಿ ಬರೆಯುವವರಿಗೆ ಸಾಹಿತ್ಯ ರಚನೆ ಸುಲಭ ಅನಿಸಬಹುದಾದರೂ ಅನುಭವ, ಅಧ್ಯಯನ ಹಾಗೂ ಅಭಿವ್ಯಕ್ತಿಗಳು ಒಟ್ಟುಗೂಡಿದಾಗ ಮಾತ್ರ ಉತ್ತಮ ಗುಣಮಟ್ಟದ ಸಾಹಿತ್ಯ ರಚನೆಯು ಸಾಧ್ಯವಾಗುತ್ತದೆ ಎಂದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು. ಅವರು ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಶಾಂತಿನಿಕೇತನ ಶಾಲೆಯಲ್ಲಿ ಭಾನುವಾರ ಸಾಹಿತ್ಯ ಸಂವಾದದಲ್ಲಿ ದೀಕ್ಷಾ ಜಿ ಭಾಷಣ ಮಾಡಿದರು. ಬರೆಯುವುದು ಒಂದು ಕೃಷಿ, ಮಳೆ ಬಂದರೆ ಕೃಷಿ ಚೆನ್ನಾಗಿ ಆಗುತ್ತೆ. ಬರೆದದ್ದೆಲ್ಲವೂ ಸಾಹಿತ್ಯ ಅನ್ನುವ ಭ್ರಮೆಯಿಂದ ಬದುಕಿನಿಂದ ಬರಹಗಾರರು ಹೊರಬಾರದಿದ್ಧಲ್ಲಿ ಉತ್ತಮ ಸಾಹಿತ್ಯವನ್ನು ಈ ನಾಡಿಗೆ ಕಟ್ಟಿಕೊಡಲು ಕಷ್ಟ ಸಾಧ್ಯ. ಬರಹಗಾರರಿಗೆ ಸೃಜನಶೀಲತೆಯು ಅಗತ್ಯವಿದೆ. ಒಂದು ಘಟನೆ ನಿರೂಪಿಸಿದರೆ ಅದು ಕಥೆಯಾಗುವುದಿಲ್ಲ ಅದೊಂದು ಪತ್ರಿಕಾ ವರದಿಯಾಗುತ್ತದೆ. ಕಥೆಗಾರರು ಕಥೆಗಳನ್ನು ಬರೆಯುವಾಗ ನಿರೂಪಣಾ ವಿಧಾನ, ಕಥೆಯ ಸಾಂಕೇತಿಕ ಹಾಗೂ ಭಾಷೆಯ ಮೇಲಿನ ಹಿಡಿತವಿಬೇಕಾಗುತ್ತದೆ ಎಂದರು. ಬೇಂದ್ರೆಯವರ ಕುರುಡು ಕಾಂಚಾಣ, ಕುವೆಂಪು ಅವರ ಪಕ್ಷಿಕಾಶಿಯಂತಹ ಬಹಳಷ್ಟು…

Read More

ಹೊಳೆನರಸೀಪುರ / ಹಳ್ಳಿಮೈಸೂರು:  ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಪಂಚಾಯತಿ ಆವರಣದಲ್ಲಿ ಇತ್ತೀಚೆಗೆ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೇಯಸ್ ಪಟೇಲ್ ಅಧ್ಯಕ್ಷತೆಯಲ್ಲಿ ನಡೆದ ‘ಜನಸ್ಪಂದನ’ ಸಭೆಯು ಕೇವಲ ಕಾಗದದ ಮೇಲಿನಾಚೆಗೆ ಸಾರ್ವಜನಿಕರಿಗೆ ಯಾವುದೇ ಸ್ಪಷ್ಟ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಭೆಯಲ್ಲಿ ಸಂಸದರ ಸಮ್ಮುಖದಲ್ಲೇ ಅಧಿಕಾರಿಗಳು ನೀಡಿದ ಭರವಸೆಗಳು ಕೇವಲ ನೀರ ಮೇಲಿನ ಗುಳ್ಳೆಯಾಗಿ ಮಾರ್ಪಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೊಳೆನರಸೀಪುರದ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರ ಸಂಘದ ‘ಇ ಸ್ವತ್ತು’ ದಾಖಲೆಗೆ ಸಂಬಂಧಿಸಿದಂತೆ ಸಂಘದ ಕಾರ್ಯದರ್ಶಿ ಅಕ್ಷಯ್ ಕುಮಾರ್ ಅವರು ಕಳೆದ 6 ತಿಂಗಳುಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ, ಹಳ್ಳಿಮೈಸೂರು ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಯಾವುದೇ ಹಿಂಬರಹ ನೀಡಿರಲಿಲ್ಲ. ಜನಸ್ಪಂದನ ಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ, ಪಿಡಿಒ ಅವರು “ಇದು ಖಾದಿ ಸಂಸ್ಥೆಯ ಜಾಗವೇ ಅಲ್ಲ” ಎಂದು ವಾದಿಸಿ, ತಾವೇ ಈಗಾಗಲೇ ಹಿಂಬರಹ ನೀಡಿರುವುದಾಗಿ ಸಭೆಯನ್ನು ದಾರಿ ತಪ್ಪಿಸುವ ಯತ್ನ ಮಾಡಿದರು. ಆದರೆ ಅಂತಹ…

Read More

ಹೊಳೆನರಸೀಪುರ: “ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ” ಎಂಬ ಗಾದೆಯಂತೆ ಸ್ಥಳೀಯ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಐತಿಹಾಸಿಕ ಎಣ್ಣೆಹೊಳೆ ಬೆಟ್ಟದ ರಂಗನಾಥ ದೇವಸ್ಥಾನದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ2ದ್ದಾರೆ ಎಂದು ಭಕ್ತರು ಹಾಗೂ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೊಳೆನರಸೀಪುರ ಪಟ್ಟಣದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿರುವ ಈ ಬೆಟ್ಟಕ್ಕೆ ತೆರಳಲು ಸೂಕ್ತ ರಸ್ತೆಯಿಲ್ಲದೆ, ಭಕ್ತರು ಬಂಡೆಗಳು, ಕಲ್ಲುಗುಡ್ಡಗಳು ಹಾಗೂ ಗಿಡಗಂಟೆಗಳ ನಡುವೆ ಸುಮಾರು 1 ಕಿಲೋಮೀಟರ್ ದೂರ ನಡೆದುಕೊಂಡೇ ಸಾಗಬೇಕಾದ ಶೋಚನೀಯ ಸ್ಥಿತಿಯಿದೆ. ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಮಾಡಲು ಯಾವುದೇ ತಡೆಗೋಡೆ (Barricade) ಅಥವಾ ಗ್ರಿಲ್ಸ್ ವ್ಯವಸ್ಥೆ ಇಲ್ಲದಿರುವುದು ಭಕ್ತರ ಜೀವಕ್ಕೆ ಮುಳುವಾಗಿದೆ. ಆಕಸ್ಮಿಕವಾಗಿ ಕಾಲುಜಾರಿದರೆ ಸಾವಿರಾರು ಅಡಿ ಪಾತಾಳಕ್ಕೆ ಬೀಳುವ ಆತಂಕವಿದ್ದು, ವಯೋವೃದ್ಧರು ಹಾಗೂ ಮಕ್ಕಳು ಭಯದ ನೆರಳಲ್ಲೇ ದರ್ಶನ ಪಡೆಯುವಂತಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ದೇವಾಲಯದ ಅಭಿವೃದ್ಧಿಗೆ ಕೆಲ ತಿಂಗಳ ಹಿಂದೆ ಹಾಸನ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರೂ, ಕಂದಾಯ ಇಲಾಖೆಯ ಕಡತಗಳಲ್ಲಿ…

Read More

ಬೀದರ್: ತಾಲೂಕಿನ ಸುಂಧಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ-–ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಬುಧವಾರ ವಿಶೇಷ ಜಾಬ್ ಕಾರ್ಡ್ ಮೇಳ ಹಾಗೂ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿಬಿ–ಜಿ ರಾಮ್ ಜಿ (VB-G RAM G) ಯೋಜನೆಯಡಿ ವಾರ್ಷಿಕ ಉದ್ಯೋಗದ ದಿನಗಳನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ.  ಪ್ರತಿದಿನ ರೂ. 382 ರಂತೆ ಕೂಲಿ ನೀಡಲಾಗುತ್ತಿದ್ದು, ಪೂರ್ಣ 125 ದಿನಗಳ ಉದ್ಯೋಗ ಪಡೆದ ಕುಟುಂಬವು ಗರಿಷ್ಠ ರೂ. 47,750 ವರೆಗೆ ಕೂಲಿ ಪಡೆಯಬಹುದು ಎಂದು ತಾಲೂಕು ಪಂಚಾಯತಿ ಮಾಹಿತಿ, ಶಿಕ್ಷಣ ಮತ್ತು ಸಂವಹನಾಧಿಕಾರಿ ಅಂಬಾದಾಸ ಪಾಟೀಲ್ ತಿಳಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಶ್ರೀಪತರಾವ ಚಿಟಗೀರೆ ಮಾತನಾಡಿ, ಜಾಬ್ ಕಾರ್ಡ್ ಹೊಂದಿರುವ ಮಹತ್ವ, ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವ ವಿಧಾನ ಹಾಗೂ ಕೆಲಸದ ಸ್ಥಳದಲ್ಲಿ ಹಾಜರಾತಿ ಕುರಿತು ಸವಿಸ್ತಾರವಾಗಿ ವಿವರಿಸಿದರು. ಈ ಜಾಗೃತಿ ಕಾರ್ಯಕ್ರಮದಲ್ಲಿ ಮಾರುತಿ ಶಿಂಗೋಡೆ, ಚಂದ್ರಶೇಖರ ಮಾಲಿ ಪಾಟೀಲ್, ಶಿವಕುಮಾರ್ ಪಾಟೀಲ್, ಕಾಶಿನಾಥ…

Read More

ಸರಗೂರು: ಪಟ್ಟಣದ ಎಂಡಿಡಿಸಿ ಬ್ಯಾಂಕ್ ಪಕ್ಕದಲ್ಲಿರುವ ವೀರಶೈವ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ದಡದಹಳ್ಳಿ ಡಿ.ಸಿ. ಮಹೇಶ್ ಹಾಗೂ ಉಪಾಧ್ಯಕ್ಷರಾಗಿ ಮನುಗನಹಳ್ಳಿ ಎಂ. ಶಿವಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಚುನಾವಣಾಧಿಕಾರಿ ಹಾಗೂ ಸಂಘದ ಕಾರ್ಯದರ್ಶಿಗಳಾದ ಶಿವಕುಮಾರ್ ಮತ್ತು ಸ್ವಾಮಿ ಅವರು ಇಬ್ಬರನ್ನೂ ನಿರ್ದೇಶಕರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಅಧಿಕೃತವಾಗಿ ಘೋಷಿಸಿದರು. ನಿಕಟಪೂರ್ವ ಅಧ್ಯಕ್ಷ ಡಿ.ಜಿ. ಶಿವರಾಜು ಮಾತನಾಡಿ, ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರ ಹಾಗೂ ನೂತನ ಆಡಳಿತ ಮಂಡಳಿಯ ಒಗ್ಗಟ್ಟಿನ ಪ್ರಯತ್ನ ಅತ್ಯಗತ್ಯ ಎಂದರು. ಸದಸ್ಯರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಉತ್ತಮ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು. ನೂತನ ಅಧ್ಯಕ್ಷ ಡಿ.ಸಿ. ಮಹೇಶ್ ಕೃತಜ್ಞತೆ ಸಲ್ಲಿಸುತ್ತಾ, ತಮ್ಮ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿರುವ ಎಲ್ಲ ಸದಸ್ಯರಿಗೆ ಧನ್ಯವಾದ ತಿಳಿಸಿದರು. ಸಂಘದ ಅಭಿವೃದ್ಧಿ…

Read More