Subscribe to Updates
Get the latest creative news from FooBar about art, design and business.
- ಪಿಜಿ ಡೆಂಟಲ್ (MDS) 3ನೇ ಸುತ್ತಿನ ಪ್ರವೇಶ: ಅಕ್ಟೋಬರ್ 27ರಂದು ದಾಖಲಾತಿ ಪರಿಶೀಲನೆ
- ಬೈಕ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ನೆರವಿಗೆ ಧಾವಿಸಿದ ಶಾಸಕ ಹೆಚ್.ಟಿ. ಮಂಜು
- ಡ್ರೈವಿಂಗ್ ಲೈಸೆನ್ಸ್ ನಿಯಮಗಳಲ್ಲಿ ಮಹತ್ವದ ಬದಲಾವಣೆ! ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಇನ್ಮುಂದೆ ಕಷ್ಟವಾಗುತ್ತಾ?
- ಆಯುರ್ವೇದ, ಹೋಮಿಯೋಪತಿ ಸೀಟು ಹಂಚಿಕೆ: ಚಾಯ್ಸ್ ಆಯ್ಕೆ, ಶುಲ್ಕ ಪಾವತಿ ದಿನಾಂಕ ವಿಸ್ತರಣೆ — ಕೆಇಎ ಅಂತಿಮ ಅವಕಾಶ
- ಮಾನಸಿಕ ಆರೋಗ್ಯ ಸೇವೆ ಪಡೆಯಲು ಹಿಂದೇಟು ಹಾಕಬಾರದು: ಡಾ.ನಂದಿತಾ
- ಮುರಿದು ಬಿದ್ದಿರುವ ಕ್ರಾಶ್ ಬ್ಯಾರಿಯರ್ ದುರಸ್ತಿ ಮಾಡೋರು ಯಾರು? | ಅನಾಹುತಕ್ಕೂ ಮುನ್ನ ಎಚ್ಚೆತ್ತುಕೊಳ್ಳುತ್ತಾರೆಯೇ ಅಧಿಕಾರಿಗಳು?
- ಯುಜಿ ನೀಟ್–2026: ವೈದ್ಯಕೀಯ ಮತ್ತು ದಂತವೈದ್ಯಕೀಯ ಆನ್ ಲೈನ್ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ
- ವೈದ್ಯಕೀಯ ಸೀಟುಗಳ ಹೆಚ್ಚುವರಿ ಸ್ಟ್ರೇ ವೇಕೆನ್ಸಿ ಸುತ್ತು: ಕೆಇಎ (KEA) ಮಹತ್ವದ ಪ್ರಕಟಣೆ
Author: Ganesh Tumkuru
ತುರುವೇಕೆರೆ: ಪಟ್ಟಣದ ಖಾಸಗಿ ಹೋಟೆಲ್ ಮುಂಭಾಗದಲ್ಲಿ ನನ್ನ ಮತದಾನ ನನ್ನ ಹಕ್ಕು ಎಂಬ ಶೀರ್ಷಿಕೆಯಡಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್) ಕುರಿತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರಹಾಲಪ್ಪ, ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಅತ್ಯಮೂಲ್ಯವಾದುದು ಎಂದರು. ಎಸ್ ಐಆರ್ ಫಾರಂ ಆನ್ ಲೈನ್ ನಲ್ಲಿ ಭರ್ತಿ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎದುರಾಗಬಹುದಾದ ತಾಂತ್ರಿಕ ತೊಂದರೆಗಳನ್ನು ಪರಿಹರಿಸಲು ಕೆಪಿಸಿಸಿಯಿಂದ ಪ್ರತ್ಯೇಕ ತಾಂತ್ರಿಕ ತಂಡವನ್ನು ರಚಿಸಲಾಗಿದೆ. ಫಾರಂ ಭರ್ತಿ ಮಾಡಲು ಸಾಧ್ಯವಾಗದವರು, ದಾಖಲೆಗಳ ಅಪ್ಲೋಡ್ ಸಂಬಂಧ ಗೊಂದಲಕ್ಕೊಳಗಾದವರು ಈ ತಂಡವನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಸ್ಪಷ್ಟಪಡಿಸಿದರು. ಗ್ಯಾರಂಟಿ ಸಮಿತಿ ಅಧ್ಯಕ್ಷ ಗುಡ್ಡೆನಹಳ್ಳಿ ಪ್ರಸನ್ನ ಕುಮಾರ್ ಮಾತನಾಡಿ, ಈ ಸೇವೆ ಸಂಪೂರ್ಣವಾಗಿ ಉಚಿತವಾಗಿದ್ದು, ಪಕ್ಷಾತೀತವಾಗಿ ಎಲ್ಲಾ ಮತದಾರರಿಗೂ ಲಭ್ಯವಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಮತದಾನದ ಹಕ್ಕಿನ ಮಹತ್ವದ ಕುರಿತು ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ತಾಲ್ಲೂಕಿನಾದ್ಯಂತ ಮುಂದುವರಿಯಲಿವೆ…
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ : ಮುಂಗಾರು ಮಳೆಯಿಲ್ಲದೇ ಕರ್ನಾಟಕದ 28 ಜಿಲ್ಲೆಗಳು ಬರಪೀಡಿತ ಪ್ರದೇಶ. ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಪತ್ರಬರೆದು ಕೈಕಟ್ಟಿಕೊಂಡು ಕುಳಿತುಕೊಂಡ್ರೇ ಆಗೋದಿಲ್ಲ. ಚುನಾವಣೆ ಬಂದಾಗ ರಾಜಕೀಯ ಮಾಡೋಣ ಈಗ ತುರ್ತಾಗಿ 10 ಸಾವಿರ ಕೋಟಿ ಬರಗಾಲದ ಹಣ ಬಿಡುಗಡೆ ಮಾಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹ ಮಾಡಿದರು. ಕೊರಟಗೆರೆ ತಾಲೂಕು ಕೋಳಾಲ ಮತ್ತು ಚನ್ನರಾಯನದುರ್ಗ ಹೋಬಳಿಯ 6 ಗ್ರಾಮಗಳ ರೈತರ ಜಮೀನುಗಳಿಗೆ ಮಂಗಳವಾರ ಭೇಟಿ ನೀಡಿ ಮುಸುಕಿನ ಜೋಳ, ರಾಗಿ ಮತ್ತು ಶೇಂಗಾ ಬೆಳೆಗಳ ಬರ ಅಧ್ಯಯನ ನಡೆಸಿದ ನಂತರ ಮಾತನಾಡಿದರು. ಕಲ್ಪತರು ಜಿಲ್ಲೆಯಲ್ಲಿ ಶೇಂಗಾ ಮತ್ತು ಮುಸುಕಿನ ಜೋಳದ ಬಿತ್ತನೆಯ ಅವಧಿ ಮುಗಿದಿದೆ. ಬಿತ್ತನೆ ಮಾಡಿರುವ ರಾಗಿ ಬೆಳೆ ಮಳೆಯಿಲ್ಲದೇ ನೆಲಕಚ್ಚಿದೆ. ಸಿರಿಧಾನ್ಯ ಬೆಳೆಗಳ ಬಿತ್ತನೆಗೆ ರೈತರ ಆಸಕ್ತಿಯೇ ಇಲ್ಲದೇ ವಿಮೆಯ ಹಣ ಕಟ್ಟೋದಿಕ್ಕೂ ಕಲ್ಪತರು ಜಿಲ್ಲೆಯ ರೈತರ ಬಳಿ ಹಣವಿಲ್ಲ. ರಾಜ್ಯ ಸರಕಾರ ತಕ್ಷಣವೇ ಬರಗಾಲ ಘೋಷಣೆ ಮಾಡಿ ರೈತರ ನೇರವಿಗೆ…
ರಾಘವೇಂದ್ರ ಅಡಿಗ ಎಚ್ಚೆನ್ ಆಗಸ್ಟ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರ ನಿರ್ಮಾಪಕ ಅಮಿತ್ ರೈ ಅವರ ಕುಟುಂಬ ಸಮೇತ ನೋಡಬಹುದಾದ ‘ಓಹ್ ಮೈ ಡಾಗ್’ ಚಿತ್ರವು, ಬಿಡುಗಡೆಗೂ ಮುನ್ನವೇ ದೇಶಾದ್ಯಂತ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನಗಳಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಭಾರತದ ವಿವಿಧ ನಗರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ನಂತರ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿಶೇಷ ಪ್ರದರ್ಶನದಲ್ಲೂ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ದೊಡ್ಡ ಮಟ್ಟದ ಪ್ರಚಾರ ತಂತ್ರಗಳೇ ಹೆಚ್ಚಾಗಿರುವ ಈ ದಿನಗಳಲ್ಲಿ, ‘ಓಹ್ ಮೈ ಡಾಗ್’ ತಂಡವು ಬಿಡುಗಡೆಗೂ ಮುನ್ನವೇ ಜನರಿಗೆ ಸಿನಿಮಾ ತೋರಿಸಿ, ಅವರಿಂದ ಬರುವ ನೈಜ ಅಭಿಪ್ರಾಯಗಳನ್ನೇ ತನ್ನ ಮುಖ್ಯ ಪ್ರಚಾರವನ್ನಾಗಿ ಮಾಡಿಕೊಂಡಿದೆ. ‘ದಿ ಲಂಚ್ ಬಾಕ್ಸ್’ ಮತ್ತು ‘ಲಾಪತಾ ಲೇಡೀಸ್’ ರೀತಿಯ ಹಿಟ್ ಸಿನಿಮಾಗಳು ಅನುಸರಿಸಿದ್ದ ಈ ತಂತ್ರದಂತೆಯೇ, ಈ ಚಿತ್ರತಂಡವೂ ಪ್ರೇಕ್ಷಕರ ಜನಾಭಿಪ್ರಾಯವನ್ನು ನೆಚ್ಚಿಕೊಂಡಿದೆ. ಇಂದೋರ್, ದೆಹಲಿ, ಪುಣೆ, ಲಕ್ನೋ, ಕೋಲ್ಕತ್ತಾ, ಪಟ್ನಾ, ಅಹಮದಾಬಾದ್, ಗುವಾಹಾಟಿ, ಜೈಪುರ ಮತ್ತು…
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರಿಗೆ ಇಂಧನ ಇಲಾಖೆ ಎಚ್ಚರಿಕೆಯ ಸಂದೇಶ ನೀಡಿದೆ. ರಾಜ್ಯಾದ್ಯಂತ ನಡೆಯುತ್ತಿರುವ ಮನೆ-ಮನೆ ಸಮೀಕ್ಷೆಯ ವೇಳೆ ಅಗತ್ಯ ದಾಖಲೆಗಳು ಹಾಗೂ ವಿವರಗಳನ್ನು ನೀಡಲು ನಿರಾಕರಿಸಿದರೆ ಅಥವಾ ಲಭ್ಯವಾಗದಿದ್ದರೆ ಫಲಾನುಭವಿಗಳು ಯೋಜನೆಯ ಲಾಭದಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 1,65,32,652 ಗೃಹ ವಿದ್ಯುತ್ ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಆಗಸ್ಟ್ 2, 2026ರವರೆಗೆ 91,50,081 ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಇನ್ನು 73,82,571 ಫಲಾನುಭವಿಗಳ ಮಾಹಿತಿ ಸಂಗ್ರಹಿಸುವುದು ಬಾಕಿಯಿದೆ. ಯಾವುದೇ ಅರ್ಹ ಗ್ರಾಹಕರು ಯೋಜನೆಯ ಸೌಲ್ಯಭದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಎಲ್ಲಾ ಎಸ್ಕಾಂ ಕಚೇರಿಗಳಲ್ಲಿ ವಿಶೇಷ ಸಮೀಕ್ಷಾ ಶಿಬಿರಗಳನ್ನು ನಡೆಸಲು ಸರ್ಕಾರದ ಅನುಮತಿ ಕೋರಲಾಗಿದೆ. ಬೆಸ್ಕಾಂ ವ್ಯಾಪ್ತಿಯ ವೈಟ್ಫೀಲ್ಡ್, ಮಹದೇವಪುರ ಹಾಗೂ ಸರ್ಜಾಪುರ ಸೇರಿದಂತೆ ಹಲವು ಬೃಹತ್ ಅಪಾರ್ಟ್ಮೆಂಟ್ಗಳಲ್ಲಿ ಮೀಟರ್ ರೀಡರ್ಗಳಿಗೆ ಪ್ರವೇಶ ನೀಡದಿರುವುದು ಮತ್ತು ನಿವಾಸಿಗಳು ವೈಯಕ್ತಿಕ ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಸಮೀಕ್ಷೆ ಕಾರ್ಯಕ್ಕೆ…
ತುಮಕೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಕೆಎಸ್ ಆರ್ ಟಿಸಿ (KSRTC) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಸಾಮಾನ್ಯ ರೈತರ ಮಕ್ಕಳು ಮೇಲೆ ಬರುವುದು ಕಷ್ಟ ಎಂಬ ಬೇಸರ ಹೊರಹಾಕಿದ್ದಾರೆ: “ಜನ ನನಗೆ ಸಚಿವ ಸ್ಥಾನ ನೀಡಬೇಕೆಂದು ಬಯಸಿದ್ದರು. ಆದರೆ ಯಾರು ನಿರ್ಧಾರ ತೆಗೆದುಕೊಳ್ಳಬೇಕಿತ್ತೋ ಅವರು ಗಮನಿಸಲಿಲ್ಲ. ನಮಗೆ ಗಾಡ್ ಫಾದರ್ ಇಲ್ಲದ ಕಾರಣ ಸಚಿವ ಸ್ಥಾನ ತಪ್ಪಿದೆ.” “ಯಾರದಾದರೂ ತಲೆ ಹೊಡೆದು ಹಣ ಸಂಪಾದನೆ ಮಾಡಿದವರು ಮಾತ್ರ ಮೇಲಕ್ಕೆ ಬರುತ್ತಾರೆ. ಜಗಳ ಮಾಡಿ ಪಡೆಯಲು ಇದೇನು ನಮ್ಮ ಅಪ್ಪನ ಆಸ್ತಿಯಲ್ಲ. ನಮಗೆ ಯೋಗ್ಯತೆ ಇಲ್ಲ ಎಂದು ಭಾವಿಸಬೇಕಷ್ಟೇ.” ರಾಜೀನಾಮೆ ನಿರ್ಧಾರ: ಕೆಎಸ್ ಆರ್ ಟಿಸಿ ಸಂಸ್ಥೆ ನಷ್ಟದಲ್ಲಿದ್ದು, ಅಲ್ಲಿ ಸಾಧನೆ ಮಾಡಲು ಅವಕಾಶವಿಲ್ಲದ ಕಾರಣ ಬುಧವಾರ (ನಾಳೆ) ಅಧಿಕೃತವಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ…
ತುಮಕೂರು: ರಾಜ್ಯದಲ್ಲಿ ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿಯ ಹೋರಾಟದ ಫಲವಾಗಿ ಬಡ್ತಿ ಮೀಸಲಾತಿ ಜಾರಿಯಲ್ಲಿದೆ. ಹಾಗೆಯೇ ಸಂವಿಧಾನದ ಅಡಿಯಲ್ಲಿ ಅವಕಾಶಗಳನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಎಸ್ಸಿ, ಎಸ್ಟಿ ನೌಕರರು ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗೂಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ 2026ರ ಆಗಸ್ಟ್ 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ 6ನೇ ರಾಜ್ಯಮಟ್ಟದ ಐಕ್ಯತಾ ಸಮಾವೇಶದಲ್ಲಿ ಎಲ್ಲಾ ನೌಕರರು ಪಾಲ್ಗೊಳ್ಳುವಂತೆ ಸಮಿತಿ ಅಧ್ಯಕ್ಷ ಡಿ. ಶಿವಶಂಕರ್ ಮನವಿ ಮಾಡಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿಯ ವತಿಯಿಂದ ಹಮ್ಮಿಕೊಂಡಿರುವ 6ನೇ ಐಕ್ಯತಾ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಇಡೀ ದೇಶದಲ್ಲಿ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ನಡೆಸಿದ ಹೋರಾಟ ಐತಿಹಾಸಿಕ. ಅದರ ಫಲವಾಗಿ ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲದ ಬಡ್ತಿ ಮೀಸಲಾತಿ ಕರ್ನಾಟಕದಲ್ಲಿದೆ. ಇದು ಸಮನ್ವಯ…
ತುಮಕೂರು: ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ 7 ಶಾಸಕರನ್ನು ಹೊಂದಿರುವ ತುಮಕೂರು ಜಿಲ್ಲೆಗೆ ಮಂತ್ರಿ ಸ್ಥಾನ ಸಿಗದಿರುವುದು ಜಿಲ್ಲಾ ಕಾಂಗ್ರೆಸ್ ನಾಯಕರು ಹಾಗೂ ಅವರ ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ, ಕೊರಟಗೆರೆ ಶಾಸಕ ಡಾ. ಜಿ. ಪರಮೇಶ್ವರ್ ನೇತೃತ್ವದ ಸರ್ಕಾರದಲ್ಲಿ 2ನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಉಳಿದ ಶಾಸಕರು ಮತ್ತು ಪರಿಷತ್ ಸದಸ್ಯರಿಗೆ ಅವಕಾಶ ನೀಡದಿರುವುದು ಪಕ್ಷದೊಳಗೆ ಅಸಮಾಧಾನದ ಹೊಗೆಯಾಡುವಂತೆ ಮಾಡಿದೆ. ಟಿ.ಬಿ.ಜಯಚಂದ್ರ ರಾಜೀನಾಮೆ ಸೂಚನೆ 2ನೇ ಹಂತದ ವಿಸ್ತರಣೆಯಲ್ಲಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹಿರಿಯ ಶಾಸಕ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರಿಗೆ ಅವಕಾಶ ಕೈತಪ್ಪಿದೆ. ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಅವರು ಯಾವ ಮಾನದಂಡವಿಟ್ಟು ಕೃಪೆ ತೋರಿದ್ದಾರೋ ಗೊತ್ತಿಲ್ಲ. ಹಿರಿಯರು ಮತ್ತು ಪಕ್ವತೆ ಹೊಂದಿರುವ ಶಾಸಕರಿಗೆ ಅವಕಾಶ ನೀಡಬೇಕಿತ್ತು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಮಗೆ ಅವಕಾಶ ಸಿಗದಿದ್ದಕ್ಕೆ ಸಿರಾ ಕ್ಷೇತ್ರದ ಮತದಾರರು ಹಾಗೂ ಬೆಂಬಲಿಗರು…
ಕಾರವಾರ: ಅಡ್ವಾನ್ಸ್ಡ್ ಪೋಸ್ಟಲ್ ಟೆಕ್ನಾಲಜಿ 2.0 ವ್ಯವಸ್ಥೆಯಡಿಯಲ್ಲಿ ಕೊರಿಯರ್, ಎಕ್ಸ್ಪ್ರೆಸ್ ಮತ್ತು ಪಾರ್ಸೆಲ್ ಜಾಲವನ್ನು ಬಲಪಡಿಸಲು ಮತ್ತು ಸಾರ್ವಜನಿಕರಿಗೆ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ತಲುಪಿಸಲು ಭಾರತೀಯ ಅಂಚೆ ಇಲಾಖೆಯು ಹೊಸ ಫ್ರಾಂಚೈಸಿ ಯೋಜನೆ 2.0 ಪ್ರಾರಂಭಿಸಿದೆ. ಈ ಯೋಜನೆಯು ಸ್ಥಳೀಯ ಅಂಗಡಿಕಾರರು, ಸಣ್ಣ ಉದ್ಯಮಿಗಳು, ಲಾಜಿಸ್ಟಿಕ್ ಸಂಸ್ಥೆಗಳು, ಅಗ್ರಿಗೇಟರ್ಗಳು ಮತ್ತು ಯುವಕರಿಗೆ ಭಾರತೀಯ ಅಂಚೆಯೊಂದಿಗೆ ಬುಕಿಂಗ್, ಪಾರ್ಸೆಲ್ ಡೆಲಿವರಿ ಮತ್ತು ಮನೆಬಾಗಿಲ ಸಂಗ್ರಹಣೆ ಸೇವೆಗಳನ್ನು ಒದಗಿಸಲು ಅತ್ಯುತ್ತಮ ಸ್ವಯಂ ಉದ್ಯೋಗದ ಹಾಗೂ ಉದ್ಯಮಶೀಲತೆಯ ಅವಕಾಶವನ್ನು ನೀಡುತ್ತದೆ. ಆಸಕ್ತ ಅಭ್ಯರ್ಥಿಗಳು ಭಾರತೀಯ ಅಂಚೆಯ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಪರಿಶೀಲಿಸಿ, ಆಯ್ಕೆಯಾದ ಅಭ್ಯರ್ಥಿಗಳಿಗೆ 15 ದಿನಗಳ ಒಳಗೆ ನಿಶ್ಚಿತಾರ್ಥ ಪತ್ರ ನೀಡಲಾಗುವುದು. ಹೆಚ್ಚಿನ ವಿವರಗಳಿಗಾಗಿ, ಮಾರ್ಗದರ್ಶಿಗಳಿಗಾಗಿ ಹತ್ತಿರದ ಅಂಚೆ ಕಚೇರಿ ಹಾಗೂ ದೂ.ಸಂ: 08382221431 / 221435, ಮೊ.ಸಂ: 9686541879 ನ್ನು ಸಂಪರ್ಕಿಸಿ ಅಥವಾ www.indiapost.gov.in ವೆಬ್ ಸೈಟ್ ಗೆ ಭೇಟಿ ನೀಡಬಹುದೆಂದು ಕಾರವಾರ ವಿಭಾಗದ ಅಂಚೆ ಅಧೀಕ್ಷಕರಾದ ಹೂವಪ್ಪ…
ಬೀದರ್: ಜಿಲ್ಲೆಯ ವಿವಿಧ ಶಾಲೆಗಳ ಅಡುಗೆ ಕೋಣೆಗಳಿಂದ ಗ್ಯಾಸ್ ಸಿಲಿಂಡರ್ ಗಳನ್ನು ಕಳ್ಳತನ ಮಾಡುತ್ತಿದ್ದ ದೊಡ್ಡ ಜಾಲವೊಂದನ್ನು ಭಾಲ್ಕಿ ಉಪ–ವಿಭಾಗದ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಭಾಲ್ಕಿ ಗ್ರಾಮೀಣ, ಮೇಹಕರ ಹಾಗೂ ಖಟಕ್ ಚಿಂಚೋಳಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 09 ಸಿಲಿಂಡರ್ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿರುವ ಪೊಲೀಸರು, ನಾಲ್ಕು ಜನ ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು ₹9.75 ಲಕ್ಷ ಮೌಲ್ಯದ 55 ಗ್ಯಾಸ್ ಸಿಲಿಂಡರ್ ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಿದ್ದಾರೆ. ದಿನಾಂಕ 02-08-2026 ರಂದು ಕಳವು ಮಾಡಿದ ಸಿಲಿಂಡರ್ ಗಳನ್ನು ಮಹಾರಾಷ್ಟ್ರದ ಉದ್ಗೀರ್ ಕಡೆಗೆ ಕಾರಿನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಒಯ್ಯಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ (IPS), ಹೆಚ್ಚುವರಿ ಎಸ್ಪಿ ಚಂದ್ರಕಾಂತ ಪೂಜಾರಿ ಮತ್ತು ಭಾಲ್ಕಿ ಡಿವೈಎಸ್ಪಿ ಬಾಲಪ್ಪ ನಂದಗಾಂವಿ ಅವರ ಮಾರ್ಗದರ್ಶನದಲ್ಲಿ ಭಾಲ್ಕಿ ಗ್ರಾಮೀಣ ವೃತ್ತದ ಸಿಪಿಐ ಹಣಮರೆಡ್ಡಿ ಹಾಗೂ ಪಿಎಸ್…
ತುಮಕೂರು: ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 560 ಭೂಮಾಪಕರ ಹುದ್ದೆಗಳಿಗೆ, ಅರ್ಜಿಹಾಕಲು ಆ.7 ಅಂತಿಮ ದಿನಾಂಕ ನಿಗದಿಪಡಿಸಿದೆ, ಕರ್ನಾಟಕ ವಿಶೇಷ ಮೀಸಲು ಪೊಲೀಸ್ ಕಾನ್ಸ್ ಟೇಬಲ್ 1455 ಹುದ್ದೆಗಳಿಗೆ ಆನ್ ಲೈನ್ ನಲ್ಲಿ ಅರ್ಜಿಸಲ್ಲಿಸಲು ಆ.10 ಅಂತಿಮ ದಿನಾಂಕವಾಗಿದೆ. ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು, ಈ ಮೂರು ಹುದ್ದೆಗಳಿಗೆ ಕೃಷಿಕ್ ಸರ್ವೋದಯ ಫೌಂಡೇಷನ್ (ರಿ) ಕುವೆಂಪುನಗರ, ತುಮಕೂರು ಇವರು ಆ.6ರಂದು ಬೆಳಿಗ್ಗೆ 10:30ಗಂಟೆಗೆ ಸಂಸ್ಥೆಯ ಆವರಣದಲ್ಲಿ ಸದರಿ ಹುದ್ದೆಗಳಿಗೆ ಪೂರ್ವಭಾವಿ ಸಿದ್ಧತೆಗಾಗಿ, ಅರ್ಜಿಗಳನ್ನು ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವಯೋಮಿತಿ, ಪಠ್ಯಕ್ರಮ, ಲಿಖಿತ ಪರೀಕ್ಷೆ, ಅಂಕಗಳ ವಿಂಗಡನೆ, ನಿಗದಿಯಾಗಿರುವ, ಪರೀಕ್ಷಾ ದಿನಾಂಕ ಇತ್ಯಾದಿ ವಿವರಗಳನ್ನು ಉಚಿತ ಒರಿಯಂಟೇಶನ್ ಕಾರ್ಯಾಗಾರದಲ್ಲಿ ನೀಡಲಾಗುವುದು. ಆಸಕ್ತ ಉದ್ಯೋಗಾಂಕ್ಷಿಗಳು ಹೆಸರನ್ನು ಆ.6ರೊಳಗೆ 9449146200 ಸಂಪರ್ಕಿಸಿ ನೋಂದಾಯಿಸಿಕೊಳ್ಳಲು ಕೃಷಿಕ್ ಸರ್ವೋದಯ ಫೌಂಡೇಷನ್ (ರಿ) ತುಮಕೂರು ಶಾಖೆಯ ಕಾರ್ಯದರ್ಶಿ ಹೆಚ್.ಎಸ್. ಹನುಮೇಗೌಡರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು…