Subscribe to Updates
Get the latest creative news from FooBar about art, design and business.
- ಬೈಕ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ನೆರವಿಗೆ ಧಾವಿಸಿದ ಶಾಸಕ ಹೆಚ್.ಟಿ. ಮಂಜು
- ಡ್ರೈವಿಂಗ್ ಲೈಸೆನ್ಸ್ ನಿಯಮಗಳಲ್ಲಿ ಮಹತ್ವದ ಬದಲಾವಣೆ! ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಇನ್ಮುಂದೆ ಕಷ್ಟವಾಗುತ್ತಾ?
- ಆಯುರ್ವೇದ, ಹೋಮಿಯೋಪತಿ ಸೀಟು ಹಂಚಿಕೆ: ಚಾಯ್ಸ್ ಆಯ್ಕೆ, ಶುಲ್ಕ ಪಾವತಿ ದಿನಾಂಕ ವಿಸ್ತರಣೆ — ಕೆಇಎ ಅಂತಿಮ ಅವಕಾಶ
- ಮಾನಸಿಕ ಆರೋಗ್ಯ ಸೇವೆ ಪಡೆಯಲು ಹಿಂದೇಟು ಹಾಕಬಾರದು: ಡಾ.ನಂದಿತಾ
- ಮುರಿದು ಬಿದ್ದಿರುವ ಕ್ರಾಶ್ ಬ್ಯಾರಿಯರ್ ದುರಸ್ತಿ ಮಾಡೋರು ಯಾರು? | ಅನಾಹುತಕ್ಕೂ ಮುನ್ನ ಎಚ್ಚೆತ್ತುಕೊಳ್ಳುತ್ತಾರೆಯೇ ಅಧಿಕಾರಿಗಳು?
- ಯುಜಿ ನೀಟ್–2026: ವೈದ್ಯಕೀಯ ಮತ್ತು ದಂತವೈದ್ಯಕೀಯ ಆನ್ ಲೈನ್ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ
- ವೈದ್ಯಕೀಯ ಸೀಟುಗಳ ಹೆಚ್ಚುವರಿ ಸ್ಟ್ರೇ ವೇಕೆನ್ಸಿ ಸುತ್ತು: ಕೆಇಎ (KEA) ಮಹತ್ವದ ಪ್ರಕಟಣೆ
- ದಸರಾ ವೇದಿಕೆಯಲ್ಲಿ ಸಚಿವರನ್ನು ತಡೆದ ಪೊಲೀಸ್ ಅಧಿಕಾರಿ; ತನಿಖೆಗೆ ಸಿಎಂ ಆದೇಶ
Author: Ganesh Tumkuru
ಸರಗೂರು: ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ಮಧ್ಯರಾತ್ರಿ ಕಾಡು ಪ್ರಾಣಿಯೊಂದು ಕುರಿಗಳ ಕೊಟ್ಟಿಗೆಗೆ ನುಗ್ಗಿ ರಕ್ತಪಾತ ಹರಿಸಿದ ಪರಿಣಾಮ 6 ಕುರಿಗಳು ಸ್ಥಳದಲ್ಲೇ ಮೃತಪಟ್ಟು, 12 ಕುರಿಗಳು ತೀವ್ರವಾಗಿ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ. ಈ ಘಟನೆಯಿಂದ ಗ್ರಾಮಸ್ಥರಲ್ಲಿ ತೀವ್ರ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದ ನಿವಾಸಿ ಚಲುವಮ್ಮ ಎಂಬುವರಿಗೆ ಸೇರಿದ 20 ಕುರಿಗಳನ್ನು ಎಂದಿನಂತೆ ಗುರುವಾರ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಲಾಗಿತ್ತು. ಮಧ್ಯರಾತ್ರಿಯ ವೇಳೆ ಕಾಡಿನಿಂದ ಬಂದಿರುವ ಶಂಕಿತ ಚಿರತೆ ಅಥವಾ ಮತ್ತಾವುದೋ ಕಾಡು ಪ್ರಾಣಿ ಏಕಾಏಕಿ ಕೊಟ್ಟಿಗೆಗೆ ನುಗ್ಗಿ ದಾಳಿ ನಡೆಸಿದೆ. ದಾಳಿಯ ತೀವ್ರತೆಗೆ ಹೆದರಿದ ಕುರಿಗಳು ಚದುರಿ ಓಡಾಡಿದ್ದು, ಶುಕ್ರವಾರ ಬೆಳಿಗ್ಗೆ ಕುಟುಂಬದವರು ನೋಡಿದಾಗ ಕೊಟ್ಟಿಗೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕುರಿಗಳ ದೃಶ್ಯ ಕಂಡು ಆಘಾತಕ್ಕೊಳಗಾಗಿದ್ದಾರೆ. ಸ್ಥಳದಲ್ಲೇ 6 ಕುರಿ ಸಾವು: ದಾಳಿಯ ತೀವ್ರತೆಗೆ 6 ಕುರಿಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ, 12 ಕುರಿಗಳ ಕುತ್ತಿಗೆ, ಹೊಟ್ಟೆ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ವಿಷಯ ತಿಳಿದ ಪಶು…
ಸರಗೂರು: ಪಟ್ಟಣದಲ್ಲಿ ಮೂರನೇ ಆಷಾಢ ಶುಕ್ರವಾರದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮದ ಅಂಗವಾಗಿ ವಾಹನ ಚಾಲಕರ ಸಂಘದ ವತಿಯಿಂದ ತಾಯಿ ಚಾಮುಂಡೇಶ್ವರಿ ಹಾಗೂ ಶ್ರೀ ಚಿಕ್ಕದೇವಮ್ಮ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ವಿಶೇಷ ಪೂಜಾ ಕೈಂಕರ್ಯಗಳನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ದೇವಿಯ ಕೃಪೆಯಿಂದ ಎಲ್ಲ ವಾಹನ ಚಾಲಕರು ಸುರಕ್ಷಿತವಾಗಿ ಕರ್ತವ್ಯ ನಿರ್ವಹಿಸುವಂತಾಗಲಿ, ಅಪಘಾತಗಳು ನಿಯಂತ್ರಣಕ್ಕೆ ಬರಲಿ ಹಾಗೂ ಸರ್ವರ ಕುಟುಂಬಗಳಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಾಹನ ಚಾಲಕರ ಸಂಘದ ಅಧ್ಯಕ್ಷ ಬಿರ್ವಾಳ್ ಚಿಕ್ಕಣ್ಣ, “ವಾಹನ ಚಾಲಕರು ಸಮಾಜ ಸೇವೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದು, ಪ್ರತಿನಿತ್ಯ ಸಾವಿರಾರು ಜನರನ್ನು ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ತಲುಪಿಸುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು. ಸಂಘದ ಸದಸ್ಯರು ಪರಸ್ಪರ ಸಹಕಾರ ಮತ್ತು ಐಕ್ಯತೆಯಿಂದ ಶ್ರಮಿಸಿದರೆ ಸಂಘ ಇನ್ನಷ್ಟು ಬಲಿಷ್ಠವಾಗಲಿದೆ” ಎಂದು ತಿಳಿಸಿದರು. ಉಚಿತ…
ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ಬೆಳಕುಣಿ (ಚೌದ್ರಿ) ಗ್ರಾಮದ ನಿವಾಸಿ, ಜೈ ಕಿಸಾನ್ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಹಾಗೂ ಬಿ.ಎಲ್.ಓ (BLO) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ ಸಂಗಪ್ಪಾ ಪಿಟ್ರೆ (59) ಅವರು ನಿಧನರಾಗಿದ್ದಾರೆ. ಮೃತರು ತಾಯಿ, ಓರ್ವ ಮಗಳು, ಓರ್ವ ಮಗ ಹಾಗೂ ಅಪಾರ ಬಂಧು-ಬಳಗ, ಶಿಷ್ಯವೃಂದವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಶನಿವಾರ ಮಧ್ಯಾಹ್ನ 11:00 ಗಂಟೆಗೆ ಅವರ ಸ್ವಗ್ರಾಮವಾದ ಬೆಳಕುಣಿ (ಚೌದ್ರಿ) ಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಗ್ರಾಮದಲ್ಲಿ ಸಹ ಶಿಕ್ಷಕರಾಗಿ ಅಕ್ಷರ ದಾಸೋಹ ನೀಡುತ್ತಾ, ವಿದ್ಯಾರ್ಥಿಗಳಿಗೆ ಸನ್ಮಾರ್ಗ ತೋರಿದ್ದ ಮಲ್ಲಿಕಾರ್ಜುನ ಪಿಟ್ರೆ ಅವರ ಅಗಲಿಕೆಗೆ ಗ್ರಾಮಸ್ಥರು, ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಬಿ.ಎಲ್.ಓ ಆಗಿಯೂ ಸಾರ್ವಜನಿಕ ಸೇವೆ ಸಲ್ಲಿಸಿದ್ದ ಅವರ ನಿಧನಕ್ಕೆ ಸ್ಥಳೀಯ ಪ್ರಮುಖರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದು, ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಕುಟುಂಬಸ್ಥರಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು…
ಬೆಂಗಳೂರು: ಕರ್ನಾಟಕದಲ್ಲಿ ಕಾವೇರಿ ನೀರು ಹಂಚಿಕೆ ವಿವಾದ ಮತ್ತು ತೀವ್ರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಆಗಸ್ಟ್ 3ರಂದು ಬೆಂಗಳೂರಿಗೆ ನಿಗದಿಯಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಸಿ. ವಿಜಯ್ ಜೋಸೆಫ್ ಅವರ ಭೇಟಿಯನ್ನು ಮುಂದೂಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಕಾವೇರಿ ನೀರು ಹಂಚಿಕೆ ಪ್ರಾಧಿಕಾರವು (CWMA) ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ನಿರ್ದೇಶನದಿಂದಾಗಿ ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ಹಾಗೂ ಪ್ರತಿಭಟನೆಗಳು ಹೆಚ್ಚಾಗಿವೆ. ಪ್ರತಿಭಟನಾಕಾರರು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ ಇತ್ತೀಚಿನ ‘ಜನನಾಯಕನ್’ ಚಿತ್ರದ ಪೋಸ್ಟರ್ಗಳನ್ನು ಹರಿದುಹಾಕಿ, ಕೆಲವು ಕಡೆ ಪ್ರದರ್ಶನವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ. “ಪರಿಸ್ಥಿತಿ ಸಂಪೂರ್ಣ ಶಾಂತವಾದ ಬಳಿಕ, ಉತ್ತಮ ವಾತಾವರಣದಲ್ಲಿ ಸ್ನೇಹಪೂರ್ವಕವಾಗಿ ಸಭೆ ನಡೆಸೋಣ. ಹಾಗಾಗಿ ತಾತ್ಕಾಲಿಕವಾಗಿ ತಮ್ಮ ಭೇಟಿಯನ್ನು ಮುಂದೂಡಬೇಕೆಂದು ತಮಿಳುನಾಡು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ”. “ಕರ್ನಾಟಕವು ಎಂದಿಗೂ ಎಲ್ಲ ರಾಜ್ಯಗಳ ಜನರನ್ನು ಗೌರವದಿಂದ ಬರಮಾಡಿಕೊಂಡಿದೆ. ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವುದು ನಮ್ಮ ಸಂಸ್ಕೃತಿ, ಯಾರ ಭಾವನೆಗೂ ಧಕ್ಕೆ ಆಗಬಾರದು” ಎಂದು…
ಬೀದರ್: ಜಿಲ್ಲೆಯ ಐತಿಹಾಸಿಕ ಬಸವಕಲ್ಯಾಣ ನಗರದಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳ ಹದೆಗೆಟ್ಟ ಸ್ಥಿತಿ ಮತ್ತೊಮ್ಮೆ ಬಹಿರಂಗಗೊಂಡಿದೆ. ನಗರದ ಮುಖ್ಯರಸ್ತೆಗಳೆಲ್ಲವೂ ಸಂಪೂರ್ಣವಾಗಿ ಗುಂಡಿಮಯವಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಮಳೆಯಾಘಾತಕ್ಕೆ ಬಸವಕಲ್ಯಾಣದ ಮುಖ್ಯರಸ್ತೆಗಳಲ್ಲಿ ದೊಡ್ಡ ಅಳತೆಯ ಗುಂಡಿಗಳು ಸೃಷ್ಟಿಯಾಗಿದ್ದು, ಅಪಾರ ಪ್ರಮಾಣದ ಮಳೆನೀರು ನಿಂತು ರಸ್ತೆಗಳು ಅಕ್ಷರಶಃ ಕೆರೆಯಂತಾಗಿ ಮಾರ್ಪಟ್ಟಿವೆ. ರಸ್ತೆಯಲ್ಲಿನ ಹೊಂಡಗಳಲ್ಲಿ ಮಳೆನೀರು ತುಂಬಿ ನಿಂತಿರುವುದನ್ನು ಕಂಡ ಸ್ಥಳೀಯ ಮಕ್ಕಳು, ಅಲ್ಲಿಯೇ ಇಳಿದು ಈಜಾಡಿ ಆಟವಾಡುತ್ತಿರುವ ದೃಶ್ಯಗಳು ಕಂಡುಬಂದವು. ಪ್ರಮುಖ ರಸ್ತೆಗಳಲ್ಲಿ ಈ ರೀತಿ ಹೊಂಡ–ಗುಂಡಿಗಳು ನಿರ್ಮಾಣವಾಗಿ ಸರೋವರದಂತಾಗಿದ್ದರೂ, ಸಂಬಂಧಪಟ್ಟ ಆಡಳಿತ ಯಂತ್ರಂಗ ಹಾಗೂ ನಗರಸಭೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡು ರಸ್ತೆಗಳನ್ನು ದುರಸ್ತಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ವರದಿ: ಅರವಿಂದ ಮಲ್ಲೀಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ಸರಗೂರು: ಮೂರನೇ ಆಷಾಢ ಶುಕ್ರವಾರದ ಅಂಗವಾಗಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರವಾದ ತಾಯಿ ಚಿಕ್ಕದೇವಮ್ಮ ಬೆಟ್ಟದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ಅತ್ಯಂತ ಭಕ್ತಿಭಾವದಿಂದ ನೆರವೇರಿದವು. ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಭಕ್ತರು ಬೆಟ್ಟಕ್ಕೆ ಆಗಮಿಸಿ ತಾಯಿ ಚಿಕ್ಕದೇವಮ್ಮನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿ ತಾಯಿಗೆ ಅಭಿಷೇಕ, ವಿಶೇಷ ಅಲಂಕಾರ, ಅರ್ಚನೆ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ನಂತರ ತಾಯಿ ಚಿಕ್ಕದೇವಮ್ಮನ ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತ ಭಕ್ತಿಭಾವದಿಂದ ಮೆರವಣಿಗೆ ನಡೆಸಲಾಯಿತು. ಈ ವೇಳೆ ಭಕ್ತರು ಜಯಘೋಷ ಮೊಳಗಿಸಿ ದೇವಿಯ ಕೃಪೆಗೆ ಪಾತ್ರರಾದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬಿ. ಮಟಕರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಶೇಖರ ಅವರು ತಮ್ಮ ಕುಟುಂಬ ಸಮೇತ ಹಾಗೂ ಸ್ನೇಹಿತರೊಂದಿಗೆ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಭಕ್ತರು ಪ್ರಸಾದ ಸ್ವೀಕರಿಸಿ ಧನ್ಯತಾಭಾವ ಮೆರಿದರು.…
ಸರಗೂರು: “ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸಮಾಜದ ಎಲ್ಲ ವರ್ಗದ ಜನರಿಗೆ ನ್ಯಾಯ, ಸಮಾನತೆ ಹಾಗೂ ಗೌರವಯುತ ಜೀವನ ದೊರಕುವಂತೆ ಮಾನವ ಹಕ್ಕುಗಳ ಮೌಲ್ಯಗಳನ್ನು ಎಲ್ಲರೂ ಪಾಲಿಸಬೇಕು” ಎಂದು ಮಾನವ ಹಕ್ಕುಗಳ ಮಿಷನ್ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಅಹಮದ್ ಖಾನ್ ಸೆರ್ ಕರೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾನವ ಹಕ್ಕುಗಳ ಮಿಷನ್ ವತಿಯಿಂದ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಮಹಾತ್ಮ ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಹಕ್ಕುಗಳು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳಾಗಿದ್ದು, ಜಾತಿ, ಧರ್ಮ, ಲಿಂಗ ಅಥವಾ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಯಾರ ಮೇಲೆಯೂ ಅನ್ಯಾಯ ಅಥವಾ ಶೋಷಣೆ ನಡೆಯಬಾರದು ಎಂದು ಮುಖಂಡರು ಅಭಿಪ್ರಾಯಪಟ್ಟರು. ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ ಮಾತನಾಡಿ, “ಸಮಾಜದಲ್ಲಿ ನಡೆಯುವ ಅನ್ಯಾಯ, ದೌರ್ಜನ್ಯ, ಮಹಿಳೆಯರು ಮತ್ತು ಮಕ್ಕಳ ಮೇಲಿನ…
ತಿಪಟೂರು: ತಾಲೂಕಿನ ಕಟ್ಟೇಮನೆ ಕೋಟೇನಾಯಕನಹಳ್ಳಿಯಲ್ಲಿ 58ನೇ ವರ್ಷದ ಶ್ರೀ ಬನಶಂಕರಿ ಅಮ್ಮನವರ ಭೀಮನ ಅಮಾವಾಸ್ಯೆ ಮಹೋತ್ಸವ ಆ.12 ಮತ್ತು 13 ರಂದು ನೆರವೇರಲಿದೆ. ಆ.12 ರಂದು ಬೆಳಿಗ್ಗೆ 6ಕ್ಕೆ ಅಮ್ಮನವರಿಗೆ ಅಭಿಷೇಕ, 7ಕ್ಕೆ 8 ವರ್ಷದ ಹೆಣ್ಣು ಮಗುವಿನ ಮೇಲೆ ಅಮ್ಮನವರ ಕಳಸವನ್ನು ತರುವುದು, 7.30ಕ್ಕೆ ನವಗ್ರಹ ಸ್ಥಾಪನೆ, ನಂದಾದೀಪ ಸೇವೆ, 8ಕ್ಕೆ ಶ್ರೀ ರುದ್ರಂಭಾವಸ್ವಾಮಿಯವರನೇತೃತ್ವದಲ್ಲಿ ಅಖಂಡ ಭಜನೆ, 8.30ಕ್ಕೆ ಅಮ್ಮನವರಿಗೆ ಚಿನ್ನ ಲೇಪಿತ ವಜ್ರಾಂಗಿ ಅಲಂಕಾರ, ಮಧ್ಯಾಹ್ನ 12ಕ್ಕೆ ಹೂವಿನ ಅಲಂಕಾರ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ 6ಕ್ಕೆ ಅಮ್ಮನವರಿಗೆ ಬೆಣ್ಣೆ ಅಲಂಕಾರ, ರಾತ್ರಿ 8 ಗಂಟೆಗೆ ಆರ್ಕೆಸ್ಟ್ರಾ, 8.30ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ. ಆ.13 ರಂದು ಬೆಳಿಗ್ಗೆ 7ಕ್ಕೆ ಅಮ್ಮನವರಿಗೆ ಅಭಿಷೇಕ, 8 ಗಂಟೆಗೆ ಅಖಂಡ ಭಜನೆ ಮುಕ್ತಾಯ, 8.30ಕ್ಕೆ ಶ್ರೀ ಬನಶಂಕರಿ ಅಮ್ಮನವರಿಗೆ ವಜ್ರಾಂಗಿ ಅಲಂಕಾರ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ರಾತ್ರಿ 9ಕ್ಕೆ ಶ್ರೀ…
ತುಮಕೂರು: ಇಲ್ಲಿನ ಪಾಂಡುರಂಗನಗರ (ಎಮ್ಮೆಕೇರಿ) ದಲ್ಲಿರುವ ಕೋಟೆ ಶ್ರೀ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವವು ಆ.3 ರಿಂದ 6ರವರೆಗೆ ಜರುಗಲಿದೆ. ಆ.3 ರಂದು ಸಂಜೆ ಚಿಕ್ಕಮ್ಮ ಮತ್ತು ಆರತಿಯ ನಡೆ ಮುಡಿಯ ಮೂಲಕ ಚಿಕ್ಕಪೇಟೆ ಶ್ರೀ ಗ್ರಾಮದೇವತೆ ದೇವಸ್ಥಾನದ ಬಳಿ ಜಾತ್ರಾ ಮಂಟಪಕ್ಕೆ ಆಗಮಿಸಿ ಗದ್ದುಗೆಯಾಗುವುದು, ಆ.4 ರಂದು ಬೆಳಿಗ್ಗೆ 8.30ಕ್ಕೆ ಪಾಂಡುರಂಗನಗರದ ಎಮ್ಮೆ ಕೇರಿಯಲ್ಲಿರುವ ಮೂಲ ಶ್ರೀ ಗ್ರಾಮ ದೇವತೆ ಅಮ್ಮನವರ ದೇವಸ್ಥಾನದಲ್ಲಿ ಅಮ್ಮನವರಿಗೆ ಪುಣ್ಯಾರ್ಚನೆ ಮತ್ತು ದೃಷ್ಟಿ ಪೂಜೆ, ಮಧ್ಯಾಹ್ನ 12ಕ್ಕೆ ಅಗ್ನಿವಂಶ ಕ್ಷತ್ರಿಯರಾದ ಟಿ.ಜಿ.ಹನುಮಂತರಾಜು ಅವರ ಮನೆಯಿಂದ ಶ್ರೀ ದೊಡ್ಡಮ್ಮ –ಕಳಸವು ನಡೆ ಮುಡಿಯ ಮೂಲಕ ಪಾಂಡುರಂಗ ನಗರದ ಎಮ್ಮೆ ಕೇರಿ ಶ್ರೀ ಗ್ರಾಮ ದೇವತೆ ಅಮ್ಮನವರ ದೇವಸ್ಥಾನಕ್ಕೆ ಆಗಮಿಸುವುದು. ಮಧ್ಯಾಹ್ನ 1.30ಕ್ಕೆ ಮೆರವಣಿಗೆ ಕಾರ್ಯಕ್ರಮ ನಡೆಯಲಿದ್ದು, ದಿವ್ಯ ಸಾನಿಧ್ಯವನ್ನು ಹಿರೇಮಠಾಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಶಾಸಕ ಕೆ.ಎನ್.ರಾಜಣ್ಣ ಅವರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ವಿ.ಪ. ಸದಸ್ಯರಾದ…
ತುಮಕೂರು: ನಗರದ ಹನುಮಂತಪುರದಲ್ಲಿ ಪೇಟೆ ಮಾತೆ ಕೊಲ್ಲಾಪುರದಮ್ಮ ಹಾಗೂ ಕರುಗಳಮ್ಮ ದೇವರ ಐದು ದಿನಗಳ ಜಾತ್ರಾಮಹೋತ್ಸವ ಏರ್ಪಾಡಾಗಿದೆ. ಆಗಸ್ಟ್ 3ರಂದು ಬೆಳಿಗ್ಗೆ 10.30ಕ್ಕೆ ಶ್ರೀರಾಮನಗರದ ಆದಿಸ್ಥಾನ ಮುದ್ರೆಗೋಣೇಮರದ ಪೂಜೆ, ಮಧ್ಯಾಹ್ನ 3 ಗಂಟೆಗೆ ಕೋಟೆ ಕೊಲ್ಲಾಪುರದಮ್ಮ ಹಾಗೂ ಕರುಗಳಮ್ಮ ದೇವಸ್ಥಾನದಿಂದ ದೇವರುಗಳನ್ನು ಮಂಗಳವಾದ್ಯ, ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಹನುಮಂತಪುರ ದೇವಸ್ಥಾನಕ್ಕೆ ಕರೆತರಲಾಗುವುದು. ನಂತರ ನಡೆಯುವ ಸಮಾರಂಭದಲ್ಲಿ ತಿಪಟೂರು ತಾಲೂಕು ಆಳುಬುರುಕ್ಷೇತ್ರದ ಸೋಮಶೇಖರ ಸ್ವಾಮೀಜಿ ಸಾನಿಧ್ಯವಹಿಸುವರು. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಿದರೆ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಎಸ್.ಆರ್.ಶ್ರೀನಿವಾಸ್, ಪ್ರಜಾಪ್ರಗತಿ ಸಂಪಾದಕ ಡಾ.ಎಸ್, ನಾಗಣ್ಣ ಅತಿಥಿಗಳಾಗಿ ಭಾಗವಹಿಸುವರು. ಆಗಸ್ಟ್ 4ರಂದು ಸಂಜೆ 5 ಗಂಟೆಗೆ ಆರತಿಅಗ್ನಿಕೊಂಡವನ್ನು ಕೇಂದ್ರ ಸಚಿವ ವಿ. ಸೋಮಣ್ಣ ಉದ್ಘಾಟಿಸುವರು. ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಸುರೇಶ್ ಗೌಡ, ಮಾಜಿ ಶಾಸಕ ಹೆಚ್.ನಿಂಗಪ್ಪ ಭಾಗವಹಿಸುವರು. ಇದೇ ದಿನ ಸಂಜೆ 6 ಗಂಟೆಗೆ ಕಂಬದರಂಗಯ್ಯ ಮತ್ತು ತಂಡದವರಿಂದ ಸಂಗೀತ ಸಂಜೆ ಏರ್ಪಾಡಾಗಿದೆ. ಆ. 4ರಂದು ಸಂಜೆ 5 ಗಂಟೆಗೆ ದೇವರುಗಳಿಗೆ ಆರತಿ…