Author: Ganesh Tumkuru

ಅರಸೀಕೆರೆ: ತಾಲ್ಲೂಕಿನ ಗಂಡಸಿ ಹೋಬಳಿಯ ಮುದುಡಿ ಬಿ ತಾಂಡ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕರಿಯಮ್ಮ ದೇವಿ ಹಾಗೂ ಶ್ರೀ ಬನಶಂಕರಿ ದೇವಿಯವರ ನೂತನ ದೇವಾಲಯ ಪ್ರವೇಶ ಮತ್ತು ಅಮ್ಮನವರ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವವು ಅತ್ಯಂತ ವಿಜೃಂಭಣೆ ಹಾಗೂ ಭಕ್ತಿಭಾವದಿಂದ ನೆರವೇರಿತು. ಈ ಪವಿತ್ರ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಹಾಸನ ಸಂಸದರಾದ ಶ್ರೇಯಸ್ ಎಂ. ಪಟೇಲ್ ಅವರು ಭಾಗವಹಿಸಿ, ದೇವಿಯವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ, ನಾಡಿನ ಸುಖ, ಶಾಂತಿ, ಸಮೃದ್ಧಿ ಹಾಗೂ ಸರ್ವರ ಆರೋಗ್ಯ ಮತ್ತು ನೆಮ್ಮದಿಗಾಗಿ ದೇವಿಯಲ್ಲಿ ಪ್ರಾರ್ಥಿಸಿದರು. ಇದನ್ನೂ ಓದಿ: ತುಮಕೂರು: ಗೊಲನ ಎಂಟರ್ ಪ್ರೈಸಸ್ ನಲ್ಲಿ ಉದ್ಯೋಗಾವಕಾಶ: ನೇರ ಸಂದರ್ಶನ ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು,  ಗ್ರಾಮಸ್ಥರ ಶ್ರದ್ಧೆ, ಭಕ್ತಿ ಹಾಗೂ ಒಗ್ಗಟ್ಟಿನ ಪ್ರತೀಕವಾಗಿ ಈ ನೂತನ ದೇವಾಲಯ ನಿರ್ಮಾಣಗೊಂಡಿದೆ. ಇದು ಮುದುಡಿ ಬಿ ತಾಂಡ್ಯದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲಿ” ಎಂದು ಶುಭ ಹಾರೈಸಿದರು. ಅಲ್ಲದೆ, ದೇವಿಯವರ ಅನುಗ್ರಹದಿಂದ ಪ್ರತಿಯೊಂದು…

Read More

ಗುಬ್ಬಿ: ಒಂದೇ ಸೂರಿನಡಿ ಸಾರ್ವಜನಿಕರ ಅರ್ಜಿಗೆ ಸ್ಥಳದಲ್ಲೇ ಉತ್ತರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಆರಂಭಿಸಿರುವ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ಯಶಸ್ಸಿಗೆ ಪಟ್ಟಣದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ತಿಳಿಸಿದರು. ಅವರು ಪಟ್ಟಣದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಸೆ.5 ರಂದು ನಡೆಯುವ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮಕ್ಕೆ ಅವಶ್ಯ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿ, ಸಾರ್ವಜನಿಕರಿಗೆ ಮೂಲಭೂತ ಸವಲತ್ತು ಜೊತೆಗೆ ಇಲಾಖಾವಾರು ಸ್ಟಾಲ್‌ ಮೂಲಕ ಅರ್ಜಿ ಸ್ವೀಕಾರ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ತಾಲ್ಲೂಕಿನಾದ್ಯಂತ ಸಾರ್ವಜನಿಕರಿಗೆ ಕಾರ್ಯಕ್ರಮ ಕುರಿತು ಪ್ರಚಾರ ಕಾರ್ಯ ಮಾಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿ ಮೂಲಕ ಜನರಿಗೆ ಆಂದೋಲನ ಬಗ್ಗೆ ತಿಳಿಸಲಾಗಿದೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಉಪಸ್ಥಿತರಿದ್ದು, ಅರ್ಜಿ ಆಹವಾಲು ಸ್ವೀಕರಿಸಲಿದ್ದಾರೆ. ಸ್ಥಳದಲ್ಲೇ ಅರ್ಜಿಗೆ ಉತ್ತರ ಸಿಗಲಿದೆ. ಇಲ್ಲವಾದಲ್ಲಿ ಮೂರು ಹಂತದಲ್ಲಿ ಅಂದರೆ ತಹಸೀಲ್ದಾರ್‌, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಮೂಲಕ…

Read More

ತುಮಕೂರು: ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಮೆಟ್ರಿಕ್ ನಂತರ(ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ವಿದ್ಯಾರ್ಥಿಗಳಿಗೆ ಮಾತ್ರ) ಬಾಲಕ/ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಆನ್‌ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಪ್ರವರ್ಗ–1, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ವರಮಾನ 2.50 ಲಕ್ಷ ರೂ. ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿಗಳಿಗೆ ಸೇರಿದ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ವರಮಾನ 1 ಲಕ್ಷ ರೂ.ಗಳ ಮಿತಿಯೊಳಿರಬೇಕು. ಅರ್ಹ ವಿದ್ಯಾರ್ಥಿಗಳು ತಮ್ಮ ಅರ್ಜಿಯನ್ನು ಸೆಪ್ಟೆಂಬರ್ 30ರೊಳಗೆ ಜಾಲತಾಣ: https://shp.karnataka.gov.in/bcwd ಮೂಲಕ ಸಲ್ಲಿಸಬಹುದಾಗಿದೆ. ತಾಲೂಕುವಾರು ವಿದ್ಯಾರ್ಥಿ ನಿಲಯಗಳ ವಿವರ, ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ, ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಾಲತಾಣ: https://bcwd.karnataka.gov.in/ ಅನ್ನು ಸಂಪರ್ಕಿಸಬಹುದಾಗಿದೆ. ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ ವಿ-ಅಂಚೆ: bcwd-helpline@gmail.com ಮೂಲಕ ಅಥವಾ ಜಿಲ್ಲಾ/ ತಾಲೂಕು ಮಟ್ಟದ ಇಲಾಖಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ…

Read More

ತುಮಕೂರು: ಮಧುಗಿರಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಹಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ತಲಾ 4 ಸೇರಿದಂತೆ ಒಟ್ಟು 12 ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ವಿವರ ಇಂತಿದೆ. ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಹಶಿಕ್ಷಕರಾದ ಕೊರಟಗೆರೆ ತಾಲೂಕು ಶಂಭೋನಹಳ್ಳಿ ಶಾಲೆಯ ರೇವಣ್ಣ ಎಸ್., ಮಧುಗಿರಿ ತಾಲೂಕು ಸೋಗೆನಹಳ್ಳಿ ಗೊಲ್ಲರಹಟ್ಟಿ ಶಾಲೆಯ ನೇತ್ರಾವತಿ ಯು., ಪಾವಗಡ ತಾಲೂಕು ಪಾವಗಡ ಪಟ್ಟಣದ ಶನೇಶ್ವರ ದೇವಸ್ಥಾನದ ಹಿಂಭಾಗದ ಶಾಲೆಯ ಆದಿಲಕ್ಷ್ಮಿ ಹಾಗೂ ಸಿರಾ ತಾಲೂಕು ಅನುಪನಹಳ್ಳಿ ಶಾಲೆಯ ನಿರ್ಮಲ ಆಯ್ಕೆಯಾಗಿದ್ದಾರೆ. ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಹಶಿಕ್ಷಕರಾದ ಕೊರಟಗೆರೆ ತಾಲೂಕು ಪಾಠಗಾನಹಳ್ಳಿ ಶಾಲೆಯ ಗಿರಿಜಮ್ಮ ಹೆಚ್.ಜೆ., ಪಾವಗಡ ತಾಲೂಕು ಕಣಿವೆನಹಳ್ಳಿ ಶಾಲೆಯ ನಾರಾಯಣಪ್ಪ ಕೆ., ಸಿರಾ ತಾಲೂಕು ಒಜ್ಜುಗುಂಟೆ ಶಾಲೆಯ ಸಿದ್ದಪ್ಪ ಟಿ.ಹೆಚ್., ಮುಖ್ಯ ಶಿಕ್ಷಕರಾದ ಮಧುಗಿರಿ ತಾಲೂಕು ಯಳ್ಳೂರು ಶಾಲೆಯ ದೇವರಾಜಮ್ಮ ಹೆಚ್.ಎನ್.  ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ಸಹಶಿಕ್ಷಕರಾದ ಕೊರಟಗೆರೆ ತಾಲೂಕು ದುಡ್ಡನಹಳ್ಳಿ…

Read More

ಬಳ್ಳಾರಿ: ಕರ್ನಾಟಕ ಸರ್ಕಾರದ ಇ–ಆಡಳಿತ ಇಲಾಖೆಯ ಇಡಿಸಿಎಸ್ ನಿರ್ದೇಶನಾಲಯದ ನಿರ್ದೇಶನದಂತೆ, ಬಳ್ಳಾರಿ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಫ್ರಾಂಚೈಸಿಗಳ ನೇಮಕಕ್ಕೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‍ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮರು–ಅಧಿಸೂಚನೆ ಖಾಲಿ ಹುದ್ದೆಗಳಿದ್ದು, ಒಟ್ಟು 2 ಕೇಂದ್ರಗಳಿಗೆ ಫ್ರಾಂಚೈಸಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ವೆಬ್‍ ಸೈಟ್ ಲಿಂಕ್  https://Sevasindhuservices.karnataka.gov.in/directApply.doserviceld=2631 ಲಿಂಕ್ ಗೆ ಭೇಟಿ ನೀಡಬಹುದಾಗಿದೆ. ಆಸಕ್ತ ನಾಗರಿಕರು ನಿಗದಿತ ದಿನಾಂಕದೊಳಗೆ ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

Read More

ತಿಪಟೂರು: ಮಾಜಿ ಶಾಸಕ ಹಾಗೂ ಮಾಜಿ ಸಚಿವ ಬಿ.ಸಿ. ನಾಗೇಶ್ ಅವರ ನಿಧನದ ಹಿನ್ನೆಲೆಯಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡುವ ವೇಳೆ , ಬಿ.ಸಿ ನಾಗೇಶ್  ಪುತ್ರ ವಿಶ್ವದೀಪ್ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ಕುಟುಂಬಕ್ಕೆ ರಾಜಕೀಯವಾಗಿ ಬಲ ತುಂಬಬೇಕು ಎಂಬ ವಿಚಾರವನ್ನು ಪ್ರಸ್ತಾಪಿಸಿರುವುದು ಆ ವೇದಿಕೆಗೆ ಅಪ್ರಸ್ತುತವಾಗಿತ್ತು ಎಂದು ತಿಪಟೂರು ಷಡಕ್ಷರ ಮಠದ ಶ್ರೀ ರುದ್ರಮುನಿಸ್ವಾಮೀಜಿ ತಿಳಿಸಿದರು. ನಗರದ ಶ್ರೀಮಠದ ಆವರಣದಲ್ಲಿ  ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಶ್ರೀಗಳು, ಬಿ.ಸಿ. ನಾಗೇಶ್ ಅವರ ಸಂತಾಪ ಸಭೆಯಲ್ಲಿ ಟಿಕೆಟ್ ವಿಚಾರವನ್ನು ಪ್ರಸ್ತಾಪಿಸಿರುವುದು ಆ ವೇದಿಕೆಗೆ ಸೂಕ್ತವಲ್ಲ ಎಂಬುದು ತಮ್ಮ ಅಭಿಪ್ರಾಯವಾಗಿದೆ ಎಂದರು. ಪಕ್ಷದ ವಿಚಾರ ವೈಯಕ್ತಿಕವಾಗಿದ್ದು, ಸಂತಾಪ ಸಭೆಯಲ್ಲಿ ಟಿಕೆಟ್ ವಿಚಾರ ಪ್ರಸ್ತಾಪಿಸಿರುವುದರಿಂದ ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದಿರುವ ಅನೇಕ ಕಾರ್ಯಕರ್ತರು ಹಾಗೂ ಮುಖಂಡರಿಗೆ ನೋವಾಗಿರಬಹುದು. ಯಾರನ್ನು ನಾಯಕರನ್ನಾಗಿ ಮಾಡಬೇಕು, ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ತೀರ್ಮಾನಿಸುವುದು ಪಕ್ಷದ ಹಿರಿಯರು ಹಾಗೂ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ ಎಂದು ಹೇಳಿದರು. ಶ್ರೀಮಠ…

Read More

ಹೊಳೆನರಸೀಪುರ: ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ (KSDC) ವತಿಯಿಂದ ಆಯೋಜಿಸಲಾಗಿರುವ ‘ವಿದೇಶದಲ್ಲಿ ಅಧ್ಯಯನ 2026’ ಬೃಹತ್ ಕಾರ್ಯಕ್ರಮದ ಕುರಿತು ಹಾಸನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿಗಳು ತಾಲೂಕಿನಲ್ಲಿ ವ್ಯಾಪಕ ಪ್ರಚಾರ ಕೈಗೊಂಡಿದ್ದಾರೆ. ಈ ಸಂಬಂಧ ಹೊಳೆನರಸೀಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷರಾದ ಶ್ರೀ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿಗಳಾದ ಗುರುಸ್ವಾಮಿ (JDE) ಹಾಗೂ ಪುರುಷೋತ್ತಮ್ ಹೆಚ್.ಆರ್ (CCT) ಅವರು, ಗ್ರಾಮೀಣ ಭಾಗದ ಆಸಕ್ತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ದೊರೆಯುವ ಸುವರ್ಣಾವಕಾಶಗಳ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರಿಗೆ ತಲುಪಿಸಲು ಮನವಿ ಮಾಡಿದರು. ಈ ಮಹತ್ವದ ಶೈಕ್ಷಣಿಕ ಕಾರ್ಯಕ್ರಮವು ದಿನಾಂಕ 06 ಸೆಪ್ಟೆಂಬರ್ 2026 ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ (ಗೇಟ್ ಸಂಖ್ಯೆ 4, ಗಾಯತ್ರಿ ಗ್ರಾಂಡ್) ಬೆಳಿಗ್ಗೆ…

Read More

ಮಧುಗಿರಿ: ವಸತಿ ಮತ್ತು ನಿವೇಶನ ರಹಿತರಿಗೆ ಶೀಘ್ರ ನಿವೇಶನ ವಿತರಣೆಗೆ ಕ್ರಮಕೈಗೊಳ್ಳಬೇಕೆಂದು ಮಾಜಿ ಸಚಿವರು ಹಾಗೂ ಶಾಸಕ ಕೆ.ಎನ್. ರಾಜಣ್ಣ ಅಧಿಕಾರಿಗಳಿಗೆ ಸೂಚಿಸಿದರು. ಅವರು ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕಿನ ವಸತಿ ಮತ್ತು ನಿವೇಶನ ರಹಿತರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ವಸತಿ ಹಾಗೂ ನಿವೇಶನ ಹಂಚಿಕೆ ಸಂಬಂಧಿಸಿದ ಕಾಮಗಾರಿಗಳ ಬಗ್ಗೆ ಪ್ರಸ್ತುತ ಸ್ಥಿತಿ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು, ಸಲಹೆ-ಸೂಚನೆಗಳನ್ನು ನೀಡಿದರು. ತಾಲೂಕಿನಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳು ಹಾಗೂ ಅರ್ಜಿ ವಿಲೇವಾರಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಸಮಗ್ರವಾಗಿ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಕೆಇಆರ್ ಉಪವಿಭಾಗಾಧಿಕಾರಿಗಳ ಕಚೇರಿಯ ಮೊದಲ ಮಹಡಿಯಲ್ಲಿ ನವೀಕರಣಗೊಳಿಸಿರುವ ಹಳೆಯ ಭೂ ದಾಖಲೆಗಳ ಗಣಕೀಕರಣಗೊಂಡ ವಸತಿ ಮತ್ತು ನಿವೇಶನ ರಹಿತ ರೈತರಿಗೆ ಸೂರು ಕಲ್ಪಿಸುವುದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ, ಸರ್ಕಾರದ ಯೋಜನೆಗಳ ಸದುಪಯೋಗವನ್ನು ಅರ್ಹರಿಗೆ ತಲುಪಿಸಬೇಕಾಗಿದೆ. ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು…

Read More

ಮಧುಗಿರಿ: ತಾಲ್ಲೂಕಿನ ಮಿಡಿಗೆಶಿ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 10 ಮಂದಿ ನೌಕರರಿಗೆ 2024ರ ಅಂತ್ಯದವರೆಗೆ ಬರೋಬ್ಬರಿ 10,89,164 ರೂ.ಗಳ ವೇತನ ಬಾಕಿ ಉಳಿದಿದ್ದು, ಇದುವರೆಗೂ ಪಂಚಾಯತಿ ಅಧಿಕಾರಿಗಳು ಬಿಡುಗಡೆ ಮಾಡದಿರುವುದು ನೌಕರರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಪ್ರಸ್ತುತ ಸಾಲಿನ ಎರಡು ತಿಂಗಳುಗಳು ಕಳೆದು ಮೂರನೇ ತಿಂಗಳು ಪ್ರಾರಂಭವಾಗಿದ್ದರೂ, ಇಲ್ಲಿನ ಸಿಬ್ಬಂದಿಗಳಿಗೆ ಇದುವರೆಗೂ ಒಂದು ರೂ ವೇತನ ಕೂಡ ಕೈ ಸೇರಿಲ್ಲ. ಪರಿಣಾಮವಾಗಿ ನೌಕರರು ತಮ್ಮ ಸಂಸಾರವನ್ನು ಹೇಗೆ ನಿರ್ವಹಿಸುವುದು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುವುದು ಹೇಗೆ ಎಂದು ದಿಕ್ಕು ತೋಚದೆ ಕಣ್ಣೀರಿನಲ್ಲಿ ಕಾಲ ಕಳೆಯುವಂತಾಗಿದೆ. ಪಂಚಾಯತಿಯಲ್ಲಿ ಕರವಸೂಲಿಗಾರರಾದ ಕೆಂಚಪ್ಪ, ನರಸಿಂಹಮೂರ್ತಿ, ಗೋವಿಂದಪ್ಪ, ನರಸಿಂಹರೆಡ್ಡಿ, ಲಕ್ಷ್ಮೀನರಸಪ್ಪ, ಸೋಮಶೇಖರಪ್ಪ, ರಂಗಶಾಮಯ್ಯ, ಪುಟ್ಟರಾಜು ಹಾಗೂ ನೀರು ವಿತರಕ ರಾಜು ಸೇರಿದಂತೆ ಒಟ್ಟು 10 ನೌಕರರು ಸಂಕಷ್ಟದಲ್ಲಿದ್ದಾರೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ನೌಕರರು ಹಿಂದುಳಿದ ವರ್ಗದ ಜನಾಂಗಕ್ಕೆ ಸೇರಿದವರಾಗಿದ್ದು, ದಿನನಿತ್ಯದ ಜೀವನ ನಿರ್ವಹಣೆಗಾಗಿ ಅಂಗಡಿಗಳಲ್ಲಿ ಸಾಲ ಪಡೆಯಲು ಹೋದರೆ, ಮಾಸಿಕ ವೇತನವೇ ಸಿಗದ ಹಿನ್ನೆಲೆಯಲ್ಲಿ…

Read More

ಬೆಂಗಳೂರು: ಬೆಂಗಳೂರು–ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (BMIC) ಯೋಜನೆಯ ಬಿಡದಿ ವಲಯದಲ್ಲಿ ತಮ್ಮ ಜಮೀನುಗಳನ್ನು ಬಿಟ್ಟುಕೊಟ್ಟ 1,453 ರೈತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಈ ಇಡೀ ಪ್ರಕ್ರಿಯೆಯನ್ನು ಮುಂದಿನ ಎರಡು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಗಡುವು ವಿಧಿಸಿದ್ದಾರೆ. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, BMIC ಕುರಿತು ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷರಾಗಿರುವ ತಾವು, ಈವರೆಗೆ ಎಂಟು ಸಭೆಗಳನ್ನು ನಡೆಸಿ ಈ ವಿಚಾರವನ್ನು ಸವಿಸ್ತಾರವಾಗಿ ಚರ್ಚಿಸಿರುವುದಾಗಿ ತಿಳಿಸಿದರು. ಒಟ್ಟು 1,453 ರೈತರು ಜಮೀನು ಕಳೆದುಕೊಂಡಿದ್ದರೂ, ಪ್ರಸ್ತುತ ಬಿಡದಿಯ ಸೆಕ್ಟರ್-ಎ ವ್ಯಾಪ್ತಿಯಲ್ಲಿ 574 ನಿವೇಶನಗಳು ಮಾತ್ರ ಲಭ್ಯವಿವೆ (30×40 ಅಡಿಯ 231 ನಿವೇಶನಗಳು ಹಾಗೂ 40×60 ಅಡಿಯ 243 ನಿವೇಶನಗಳು). ಉಳಿದ 879 ನಿವೇಶನಗಳನ್ನು ವರಾಹಸಂದ್ರ, ಮಾದಾವರ, ಕೊಡಿಗೆನಹಳ್ಳಿ ಹಾಗೂ ಶ್ರೀಕಂಠಪುರ-ಲಿಂಗನಂದನಹಳ್ಳಿ ಪ್ರದೇಶಗಳಲ್ಲಿ ನೈಸ್ (NICE) ಕಂಪನಿಯ ಸಹಯೋಗದೊಂದಿಗೆ…

Read More