Subscribe to Updates
Get the latest creative news from FooBar about art, design and business.
- “ಸಮಾನತೆ ಕಲಿಸಿದ ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕ” | ಬಸವಯುಗ ವೈಭವ ಗ್ರಂಥ ಬಿಡುಗಡೆ
- ಬೀದರ್: ಬಿಸಿಎಂ ವಸತಿ ನಿಲಯದಲ್ಲಿ ಅವ್ಯವಸ್ಥೆ: ಕಿರಿಯ ಮೇಲ್ವಿಚಾರಕಿ ಅಮಾನತು
- ಡಿಜೆ, ಅತಿಯಾದ ಶಬ್ದಕ್ಕೆ ಕಡಿವಾಣ : ಇನ್ಸ್ಪೆಕ್ಟರ್ ಸುರೇಶ್ ಎಚ್ಚರಿಕೆ
- ತುಮಕೂರು ದಸರಾ ಮಹೋತ್ಸವ: ಕಲಾ ತಂಡಗಳಿಂದ ಅರ್ಜಿ ಆಹ್ವಾನ
- ತುಮಕೂರು: ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯ್ದೆ, ಪೌಷ್ಟಿಕಾಂಶದ ಅರಿವು ಕಾರ್ಯಕ್ರಮ
- ವಸತಿ ಶಾಲೆಗಳಿಗೆ ವೈದ್ಯಾಧಿಕಾರಿಗಳ ಭೇಟಿ ಕಡ್ಡಾಯ: ಆಶ್ವಿಜಾ ಬಿ.ವಿ.
- ಸಾಲ ಸೌಲಭ್ಯ: ಕಾಡುಗೊಲ್ಲ ಸಮುದಾಯದವರಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸುವ ವಿವರ ಇಲ್ಲಿದೆ
- ಹೊಲದ ಕಟ್ಟೆಯಲ್ಲಿ ಗಾಂಜಾ ಗಿಡ ಬೆಳೆದಿದ್ದ ಆರೋಪಿ ಬಂಧನ; 2.35 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ
Author: Ganesh Tumkuru
ಸಿರಾ: ಸಾಹಿತ್ಯ ಬರವಣಿಗೆ ಬಹಳ ಸುಲಭ ಅಂದುಕೊಳ್ಳುವ ಬಹುತೇಕರು ಸಾಹಿತ್ಯದ ಗಟ್ಟಿತನದ ಕಸುವನ್ನು ಕಲಿತು ಕೊಳ್ಳುವ ಅಗತ್ಯವಿದೆ. ಹೊಸದಾಗಿ ಬರೆಯುವವರಿಗೆ ಸಾಹಿತ್ಯ ರಚನೆ ಸುಲಭ ಅನಿಸಬಹುದಾದರೂ ಅನುಭವ, ಅಧ್ಯಯನ ಹಾಗೂ ಅಭಿವ್ಯಕ್ತಿಗಳು ಒಟ್ಟುಗೂಡಿದಾಗ ಮಾತ್ರ ಉತ್ತಮ ಗುಣಮಟ್ಟದ ಸಾಹಿತ್ಯ ರಚನೆಯು ಸಾಧ್ಯವಾಗುತ್ತದೆ ಎಂದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು. ಅವರು ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಶಾಂತಿನಿಕೇತನ ಶಾಲೆಯಲ್ಲಿ ಭಾನುವಾರ ಸಾಹಿತ್ಯ ಸಂವಾದದಲ್ಲಿ ದೀಕ್ಷಾ ಜಿ ಭಾಷಣ ಮಾಡಿದರು. ಬರೆಯುವುದು ಒಂದು ಕೃಷಿ, ಮಳೆ ಬಂದರೆ ಕೃಷಿ ಚೆನ್ನಾಗಿ ಆಗುತ್ತೆ. ಬರೆದದ್ದೆಲ್ಲವೂ ಸಾಹಿತ್ಯ ಅನ್ನುವ ಭ್ರಮೆಯಿಂದ ಬದುಕಿನಿಂದ ಬರಹಗಾರರು ಹೊರಬಾರದಿದ್ಧಲ್ಲಿ ಉತ್ತಮ ಸಾಹಿತ್ಯವನ್ನು ಈ ನಾಡಿಗೆ ಕಟ್ಟಿಕೊಡಲು ಕಷ್ಟ ಸಾಧ್ಯ. ಬರಹಗಾರರಿಗೆ ಸೃಜನಶೀಲತೆಯು ಅಗತ್ಯವಿದೆ. ಒಂದು ಘಟನೆ ನಿರೂಪಿಸಿದರೆ ಅದು ಕಥೆಯಾಗುವುದಿಲ್ಲ ಅದೊಂದು ಪತ್ರಿಕಾ ವರದಿಯಾಗುತ್ತದೆ. ಕಥೆಗಾರರು ಕಥೆಗಳನ್ನು ಬರೆಯುವಾಗ ನಿರೂಪಣಾ ವಿಧಾನ, ಕಥೆಯ ಸಾಂಕೇತಿಕ ಹಾಗೂ ಭಾಷೆಯ ಮೇಲಿನ ಹಿಡಿತವಿಬೇಕಾಗುತ್ತದೆ ಎಂದರು. ಬೇಂದ್ರೆಯವರ ಕುರುಡು ಕಾಂಚಾಣ, ಕುವೆಂಪು ಅವರ ಪಕ್ಷಿಕಾಶಿಯಂತಹ ಬಹಳಷ್ಟು…
ಹೊಳೆನರಸೀಪುರ / ಹಳ್ಳಿಮೈಸೂರು: ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಪಂಚಾಯತಿ ಆವರಣದಲ್ಲಿ ಇತ್ತೀಚೆಗೆ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೇಯಸ್ ಪಟೇಲ್ ಅಧ್ಯಕ್ಷತೆಯಲ್ಲಿ ನಡೆದ ‘ಜನಸ್ಪಂದನ’ ಸಭೆಯು ಕೇವಲ ಕಾಗದದ ಮೇಲಿನಾಚೆಗೆ ಸಾರ್ವಜನಿಕರಿಗೆ ಯಾವುದೇ ಸ್ಪಷ್ಟ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಭೆಯಲ್ಲಿ ಸಂಸದರ ಸಮ್ಮುಖದಲ್ಲೇ ಅಧಿಕಾರಿಗಳು ನೀಡಿದ ಭರವಸೆಗಳು ಕೇವಲ ನೀರ ಮೇಲಿನ ಗುಳ್ಳೆಯಾಗಿ ಮಾರ್ಪಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೊಳೆನರಸೀಪುರದ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರ ಸಂಘದ ‘ಇ ಸ್ವತ್ತು’ ದಾಖಲೆಗೆ ಸಂಬಂಧಿಸಿದಂತೆ ಸಂಘದ ಕಾರ್ಯದರ್ಶಿ ಅಕ್ಷಯ್ ಕುಮಾರ್ ಅವರು ಕಳೆದ 6 ತಿಂಗಳುಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ, ಹಳ್ಳಿಮೈಸೂರು ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಯಾವುದೇ ಹಿಂಬರಹ ನೀಡಿರಲಿಲ್ಲ. ಜನಸ್ಪಂದನ ಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ, ಪಿಡಿಒ ಅವರು “ಇದು ಖಾದಿ ಸಂಸ್ಥೆಯ ಜಾಗವೇ ಅಲ್ಲ” ಎಂದು ವಾದಿಸಿ, ತಾವೇ ಈಗಾಗಲೇ ಹಿಂಬರಹ ನೀಡಿರುವುದಾಗಿ ಸಭೆಯನ್ನು ದಾರಿ ತಪ್ಪಿಸುವ ಯತ್ನ ಮಾಡಿದರು. ಆದರೆ ಅಂತಹ…
ಹೊಳೆನರಸೀಪುರ: “ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ” ಎಂಬ ಗಾದೆಯಂತೆ ಸ್ಥಳೀಯ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಐತಿಹಾಸಿಕ ಎಣ್ಣೆಹೊಳೆ ಬೆಟ್ಟದ ರಂಗನಾಥ ದೇವಸ್ಥಾನದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ2ದ್ದಾರೆ ಎಂದು ಭಕ್ತರು ಹಾಗೂ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೊಳೆನರಸೀಪುರ ಪಟ್ಟಣದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿರುವ ಈ ಬೆಟ್ಟಕ್ಕೆ ತೆರಳಲು ಸೂಕ್ತ ರಸ್ತೆಯಿಲ್ಲದೆ, ಭಕ್ತರು ಬಂಡೆಗಳು, ಕಲ್ಲುಗುಡ್ಡಗಳು ಹಾಗೂ ಗಿಡಗಂಟೆಗಳ ನಡುವೆ ಸುಮಾರು 1 ಕಿಲೋಮೀಟರ್ ದೂರ ನಡೆದುಕೊಂಡೇ ಸಾಗಬೇಕಾದ ಶೋಚನೀಯ ಸ್ಥಿತಿಯಿದೆ. ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಮಾಡಲು ಯಾವುದೇ ತಡೆಗೋಡೆ (Barricade) ಅಥವಾ ಗ್ರಿಲ್ಸ್ ವ್ಯವಸ್ಥೆ ಇಲ್ಲದಿರುವುದು ಭಕ್ತರ ಜೀವಕ್ಕೆ ಮುಳುವಾಗಿದೆ. ಆಕಸ್ಮಿಕವಾಗಿ ಕಾಲುಜಾರಿದರೆ ಸಾವಿರಾರು ಅಡಿ ಪಾತಾಳಕ್ಕೆ ಬೀಳುವ ಆತಂಕವಿದ್ದು, ವಯೋವೃದ್ಧರು ಹಾಗೂ ಮಕ್ಕಳು ಭಯದ ನೆರಳಲ್ಲೇ ದರ್ಶನ ಪಡೆಯುವಂತಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ದೇವಾಲಯದ ಅಭಿವೃದ್ಧಿಗೆ ಕೆಲ ತಿಂಗಳ ಹಿಂದೆ ಹಾಸನ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರೂ, ಕಂದಾಯ ಇಲಾಖೆಯ ಕಡತಗಳಲ್ಲಿ…
ಬೀದರ್: ತಾಲೂಕಿನ ಸುಂಧಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ-–ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಬುಧವಾರ ವಿಶೇಷ ಜಾಬ್ ಕಾರ್ಡ್ ಮೇಳ ಹಾಗೂ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿಬಿ–ಜಿ ರಾಮ್ ಜಿ (VB-G RAM G) ಯೋಜನೆಯಡಿ ವಾರ್ಷಿಕ ಉದ್ಯೋಗದ ದಿನಗಳನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ಪ್ರತಿದಿನ ರೂ. 382 ರಂತೆ ಕೂಲಿ ನೀಡಲಾಗುತ್ತಿದ್ದು, ಪೂರ್ಣ 125 ದಿನಗಳ ಉದ್ಯೋಗ ಪಡೆದ ಕುಟುಂಬವು ಗರಿಷ್ಠ ರೂ. 47,750 ವರೆಗೆ ಕೂಲಿ ಪಡೆಯಬಹುದು ಎಂದು ತಾಲೂಕು ಪಂಚಾಯತಿ ಮಾಹಿತಿ, ಶಿಕ್ಷಣ ಮತ್ತು ಸಂವಹನಾಧಿಕಾರಿ ಅಂಬಾದಾಸ ಪಾಟೀಲ್ ತಿಳಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಶ್ರೀಪತರಾವ ಚಿಟಗೀರೆ ಮಾತನಾಡಿ, ಜಾಬ್ ಕಾರ್ಡ್ ಹೊಂದಿರುವ ಮಹತ್ವ, ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವ ವಿಧಾನ ಹಾಗೂ ಕೆಲಸದ ಸ್ಥಳದಲ್ಲಿ ಹಾಜರಾತಿ ಕುರಿತು ಸವಿಸ್ತಾರವಾಗಿ ವಿವರಿಸಿದರು. ಈ ಜಾಗೃತಿ ಕಾರ್ಯಕ್ರಮದಲ್ಲಿ ಮಾರುತಿ ಶಿಂಗೋಡೆ, ಚಂದ್ರಶೇಖರ ಮಾಲಿ ಪಾಟೀಲ್, ಶಿವಕುಮಾರ್ ಪಾಟೀಲ್, ಕಾಶಿನಾಥ…
ಸರಗೂರು: ಪಟ್ಟಣದ ಎಂಡಿಡಿಸಿ ಬ್ಯಾಂಕ್ ಪಕ್ಕದಲ್ಲಿರುವ ವೀರಶೈವ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ದಡದಹಳ್ಳಿ ಡಿ.ಸಿ. ಮಹೇಶ್ ಹಾಗೂ ಉಪಾಧ್ಯಕ್ಷರಾಗಿ ಮನುಗನಹಳ್ಳಿ ಎಂ. ಶಿವಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಚುನಾವಣಾಧಿಕಾರಿ ಹಾಗೂ ಸಂಘದ ಕಾರ್ಯದರ್ಶಿಗಳಾದ ಶಿವಕುಮಾರ್ ಮತ್ತು ಸ್ವಾಮಿ ಅವರು ಇಬ್ಬರನ್ನೂ ನಿರ್ದೇಶಕರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಅಧಿಕೃತವಾಗಿ ಘೋಷಿಸಿದರು. ನಿಕಟಪೂರ್ವ ಅಧ್ಯಕ್ಷ ಡಿ.ಜಿ. ಶಿವರಾಜು ಮಾತನಾಡಿ, ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರ ಹಾಗೂ ನೂತನ ಆಡಳಿತ ಮಂಡಳಿಯ ಒಗ್ಗಟ್ಟಿನ ಪ್ರಯತ್ನ ಅತ್ಯಗತ್ಯ ಎಂದರು. ಸದಸ್ಯರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಉತ್ತಮ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು. ನೂತನ ಅಧ್ಯಕ್ಷ ಡಿ.ಸಿ. ಮಹೇಶ್ ಕೃತಜ್ಞತೆ ಸಲ್ಲಿಸುತ್ತಾ, ತಮ್ಮ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿರುವ ಎಲ್ಲ ಸದಸ್ಯರಿಗೆ ಧನ್ಯವಾದ ತಿಳಿಸಿದರು. ಸಂಘದ ಅಭಿವೃದ್ಧಿ…
ಅಡುಗೆ ರುಚಿ ನೋಡಿದರೆ ತಿಳಿಯುವುದಿಲ್ಲ ತಿಂದರೆ ಮಾತ್ರ ರುಚಿ ತಿಳಿಯುವುದು ರುಚಿಯ ಪರಂಪರೆ ಆತಿತ್ಯದ ಹೊಸ ಅಧ್ಯಾಯ ಅನಾದಿಯಿಂದಲೇ ಮನೆಎಂದಾಕ್ಷಣ ಕಡೆಯುವ ಕಲ್ಲು ಬೇಕೇ ಬೇಕು ಕಡೆಯುವ ಕಲ್ಲು ತಯಾರಿಕೆಯ ಪೂರ್ಣ ಹೆಸರು ಹೇಳಿ ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಂಟ್ಯಾರು ಸಮೀಪ ಕಲ್ಲರ್ಪೆ ಪುತ್ತೂರು ಸುಳ್ಯ ರಸ್ತೆಯಲ್ಲಿ ಈ ಊರು ಇದ್ದು ಹೆಸರು ಕಲ್ಲರ್ಪೆ ಮಾರ್ಗದ ಇಕ್ಕೆಲಗಳಲ್ಲಿ ಮೊದಲಿಗೆ ತುಂಬಾ ಜನರಿಂದ ಕಡೆಯುವ ಕಲ್ಲು ತಯಾರಾಗುತ್ತಿದ್ದು ಇದೀಗ ಬೆರಳಣಿಕೆಯಷ್ಟೇ…. ಇಲ್ಲಿಯ ಕಡೆಯುವ ಕಲ್ಲಿ ನಿಂದ ಮಾಡಿರುವಂತಹ ಪದಾರ್ಥಗಳು ಸೂಪರ್ ಆಗಿರುತ್ತವೆ. ದ.ಕ ಪುತ್ತೂರು ಭಾಗದಲ್ಲಿನ ಕಡೆಯುವ ಕಲ್ಲು ರಾಷ್ಟ್ರಮಟ್ಟದ ಹೆಸರು ಮಾಡಿದೆ. ಇಲ್ಲಿ ಬಸ್ಸಿನಲ್ಲಿ ವಾಹನಗಳಲ್ಲಿ ಹೋಗುವಾಗ ಕಲ್ಲಿಗೆ ಉಳಿಯಪೆಟ್ಟಿನ ನಾದ ನೀನಾದ ಕೇಳುವುದೇ ಸಂಭ್ರಮ. ಕಲೆ ಮತ್ತು ವೃತ್ತಿ ಬದುಕಿನ ಅಪೂರ್ವ ಸಂಗಮ ಇದೀಗ ಮಿಷನ್ ಟಚ್ ಬಂದಿದೆ, ಹಾಗೆ ಸ್ಟೀಲ್ನ ಹಿಡಿ ಹಾಕಿದ್ದು ಮೊದಲು ಮರದ ಹಿಡಿಯಲೇ ಇರುತಿತ್ತು. ಕಡೆಯುವುದೇ ಒಂದು ಉತ್ತಮ ವ್ಯಾಯಾಮವಾಗುತ್ತಿತ್ತು…
ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ಕೋಟ್ಯಂತರ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಬಹುಭಾಷಾ ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್ನಲ್ಲಿ ‘ಚುನಾವಣಾ ಆಯೋಗ ಚಲೋ’ ಬೃಹತ್ ಪ್ರತಿಭಟನೆ ನಡೆಯಿತು. ವಿವಿಧ ಸಂಘಟನೆಗಳು ಹಾಗೂ ಬಾಧಿತ ಮತದಾರರು ಭಾಗವಹಿಸಿದ್ದ ಈ ಸಮಾವೇಶದಲ್ಲಿ, ಎಲ್ಲರೂ ಒಟ್ಟಾಗಿ ‘ನನ್ನ ಮತ ನನ್ನ ಹಕ್ಕು’ ಎಂದು ಪ್ರತಿಜ್ಞೆ ಸ್ವೀಕರಿಸಿದರು. ವೇದಿಕೆಯಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್, ಎಸ್ ಐಆರ್ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡುವ ಬೃಹತ್ ಷಡ್ಯಂತ್ರ ಹಾಗೂ ಮೋಸ ಎಂದು ಕಟುವಾಗಿ ವಾಗ್ದಾಳಿ ನಡೆಸಿದರು. ಮುಂದಿನ ಚುನಾವಣೆಗೆ ಇನ್ನೂ ಎರಡು ವರ್ಷ ಸಮಯವಿರುವಾಗ, T20 ಮ್ಯಾಚ್ ನಂತೆ ಆತುರಾತುರವಾಗಿ ಈ ಪ್ರಕ್ರಿಯೆ ನಡೆಸುತ್ತಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು. ಮತದಾರರಿಗೆ ಸರಿಯಾದ ಅರಿವು ಮೂಡಿಸದೇ, ಬಿಎಲ್ ಓ (BLO) ಸಿಬ್ಬಂದಿಗೆ ಸರಿಯಾದ ತರಬೇತಿ ನೀಡದೇ ಪರಿಶೀಲನೆ ಮುಗಿಸಿರುವುದನ್ನು ಖಂಡಿಸಿದರು. ನಾಗರಿಕರನ್ನು ‘ಆದರ್ಸ್’ ಎಂದು ವರ್ಗೀಕರಿಸಿರುವುದರ…
ಮೈಸೂರು: ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿ ಮತ್ತು ಬೆಳೆಹಾನಿಯನ್ನು ಪರಿಶೀಲಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಮೈಸೂರು ಜಿಲ್ಲೆಯ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಸಾಲ ವಸೂಲಾತಿ ಹೆಸರಿನಲ್ಲಿ ರೈತರಿಗೆ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಕರಾರುವಾಕ್ ಎಚ್ಚರಿಕೆ ನೀಡಿದ್ದಾರೆ. ಬರ ಪರಿಸ್ಥಿತಿಯಿಂದ ರೈತರು ಆರ್ಥಿಕ ಸಂಕಷ್ಟದಲ್ಲಿದ್ದು, ಈ ವೇಳೆ ಸಾಲ ವಸೂಲಾತಿ ಹೆಸರಿನಲ್ಲಿ ರೈತರಿಗೆ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಎಚ್ಚರಿಸಿದ್ದಾರೆ. ಕೆ.ಆರ್. ನಗರ ತಾಲೂಕಿನ ಕಂಚುಗಾರನ ಕೊಪ್ಪಲು ಹಾಗೂ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮಗಳಿಗೆ ಭೇಟಿ ನೀಡಿದ ಡಿಸಿಎಂ, ಮಳೆ ಕೊರತೆಯಿಂದ ರಾಗಿ, ಜೋಳ, ತಂಬಾಕು ಸೇರಿದಂತೆ ಮೊಳಕೆ ಹಂತದಲ್ಲೇ ಒಣಗಿಹೋಗಿರುವ ಬೆಳೆಗಳನ್ನು ಪರಿಶೀಲಿಸಿದರು. ಇನ್ನೆರಡು ವಾರಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಮಗ್ರ ಬರ ವರದಿ ಸಲ್ಲಿಸಲಾಗುವುದು. ಎನ್‌ಡಿಆರ್‌ಎಫ್ ನಿಯಮಗಳನ್ನು ಸಡಿಲಗೊಳಿಸಿ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರವನ್ನು…
ತುಮಕೂರು: ಕೃಷಿ ಇಲಾಖೆಯು ಜಿಲ್ಲಾ ಮಟ್ಟದ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಲು ರೈತರಿಂದ ಅರ್ಜಿ ಆಹ್ವಾನಿಸಿದೆ. ಸಮಗ್ರ ಕೃಷಿ ಪದ್ಧತಿ, ಮಣ್ಣು ಹಾಗೂ ನೀರಿನ ಸಂರಕ್ಷಣೆ, ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ರೈತರು ಹಾಗೂ ರೈತ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ರೈತರು ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 1 ರಿಂದ 15ರೊಳಗೆ ಸಲ್ಲಿಸಬಹುದು. ಅರ್ಹತೆ ಹಾಗೂ ಹೆಚ್ಚಿನ ಮಾಹಿತಿಯನ್ನು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಆಯಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
ಬೆಂಗಳೂರು: ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯ ಕುರಿತು ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದುವರೆಗೆ ಅಧಿಕೃತವಾಗಿ 102 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ. ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಕ್ಕೂ ಮುನ್ನ ಮಾತನಾಡಿದ ಅವರು, ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಬರಪೀಡಿತ ಹಾಗೂ ಮಳೆ ಕೊರತೆ ಎದುರಿಸುತ್ತಿರುವ ಎಲ್ಲಾ ತಾಲ್ಲೂಕುಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆ. ಕಂದಾಯ ಸಚಿವರು ಮತ್ತು ಅಧಿಕಾರಿಗಳು ನೇರವಾಗಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ನಿಯಮಗಳ ಅನ್ವಯವೇ ಬರ ನಿರ್ವಹಣೆ ಮತ್ತು ಸಮೀಕ್ಷೆ ನಡೆಯುತ್ತಿದ್ದು, ಯಾವುದೇ ತಾಂತ್ರಿಕ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ನಾನೂ ಕೂಡ ಪ್ರತಿ 15 ದಿನಗಳಿಗೊಮ್ಮೆ ವರದಿಗಳನ್ನು ಪಡೆದು ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ. ಯಾವ ತಾಲ್ಲೂಕಿನಲ್ಲಿ, ಎಲ್ಲೆಲ್ಲಿ ನಿಜವಾಗಿಯೂ ಬರ ಪರಿಸ್ಥಿತಿ ಇದೆಯೋ ಅದೆಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕ್ರಿಯೆಗೆ ಸಮಯ ಹಿಡಿಯುವುದರಿಂದ ಸಾರ್ವಜನಿಕರು ಮತ್ತು ರೈತರು ತಾಳ್ಮೆಯಿಂದಿರಬೇಕು ಎಂದು ಮುಖ್ಯಮಂತ್ರಿ…