Author: Ganesh Tumkuru

ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸ್ಟುಡಿಯೋ ಸ್ಥಾಪಕರು ಹಾಗೂ ತಿಪಟೂರಿನ ಖ್ಯಾತಿಯ ‘ಕಲಾ ಕಂಠೀರವ’ ದಿವಂಗತ ಟಿ.ಎಸ್. ಕರಿಬಸಯ್ಯ ಅವರ ಕಂಚಿನ ಪುತ್ತಳಿಯನ್ನು ಅತ್ಯಂತ ಗೌರವಪೂರ್ವಕವಾಗಿ ಅನಾವರಣಗೊಳಿಸಲಾಯಿತು. ಈ ವಿಶೇಷ ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಮಂಜುನಾಥ್ ಹಾಗೂ ವಾರ್ತಾ ಇಲಾಖೆಯ ಆಯುಕ್ತರಾದ ಶ್ರೀ ಅನುಚೇತ್ ಮುಖ್ಯ ಅತಿಷ್ಠಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ದಿವಂಗತ ಟಿ.ಎಸ್. ಕರಿಬಸಯ್ಯ ಅವರ ಮಕ್ಕಳಾದ ಟಿ.ಕೆ. ಪ್ರಕಾಶ್, ಶಶಿಶೇಖರ್, ಪ್ರಭು ಸೇರಿದಂತೆ ಅವರ ಕುಟುಂಬದ ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು. ಜೊತೆಗೆ, ಕಂಠೀರವ ಸ್ಟುಡಿಯೋ ಅಧ್ಯಕ್ಷರಾದ ಮಹಬೂಬ್ ಪಾಷಾ, ಗಂಡಸಿ ಸದಾನಂದ ಸ್ವಾಮಿ, ಕಿರುತೆರೆ ನಟ ತಿಪಟೂರು ದಯಾನಂದ ಸಾಗರ್ ಸೇರಿದಂತೆ ಕನ್ನಡ ಚಲನಚಿತ್ರ ರಂಗದ ಹಾಗೂ ಸರ್ಕಾರದ ಹಲವು ಗಣ್ಯರು ಉಪಸ್ಥಿತರಿದ್ದು, ಕರಿಬಸಯ್ಯ ಅವರ ಸೇನೆಯನ್ನು ಸ್ಮರಿಸಿದರು. ವರದಿ: ಆನಂದ್, ತಿಪಟೂರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

​ಹಳ್ಳಿಮೈಸೂರು (ಹೊಳೆನರಸೀಪುರ): ಸಾರ್ವಜನಿಕರ ಹಾಗೂ ರೈತರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ನಿಟ್ಟಿನಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೇಯಸ್ ಎಂ. ಪಟೇಲ್ ಅವರು ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಗ್ರಾಮ ಪಂಚಾಯತಿ ಆವರಣದಲ್ಲಿ ಇಂದು ಬೃಹತ್ ಜನಸಂಪರ್ಕ ಹಾಗೂ ಕುಂದುಕೊರತೆ ಆಲಿಕೆ ಸಭೆ ನಡೆಸಿದರು. ಗ್ರಾಮಕ್ಕೆ ಆಗಮಿಸಿದ ಯುವ ಸಂಸದ ಶ್ರೇಯಸ್ ಎಂ. ಪಟೇಲ್ ಅವರನ್ನು ಸ್ಥಳೀಯ ಮುಖಂಡರು, ರೈತರು ಹಾಗೂ ಸಾರ್ವಜನಿಕರು ಪಟಾಕಿ ಸಿಡಿಸಿ, ಹೂಮಳೆ ಸುರಿಸಿ ಅತ್ಯಂತ ಅದ್ಧೂರಿಯಾಗಿ ಬರಮಾಡಿಕೊಂಡರು. ಅಹವಾಲುಗಳ ಮಹಾಪೂರ ಗ್ರಾಮ ಪಂಚಾಯತಿ ಆವರಣದಲ್ಲಿ ಆಯೋಜಿಸಲಾಗಿದ್ದ ಈ ಸಭೆಗೆ ಹಳ್ಳಿಮೈಸೂರು ಹೋಬಳಿಯ ಸುತ್ತಮುತ್ತಲಿನ ನೂರಾರು ಗ್ರಾಮಗಳಿಂದ ಆಗಮಿಸಿದ್ದ. ಸಾರ್ವಜನಿಕರು ಹಾಗೂ ರೈತರು ತಮ್ಮ ಕುಂದುಕೊರತೆಗಳ ಬಗ್ಗೆ ನೂರಾರು ಅರ್ಜಿಗಳನ್ನು ಸಂಸದರಿಗೆ ಸಲ್ಲಿಸಿದರು. ಕುಡಿಯುವ ನೀರು, ರಸ್ತೆ ಸಂಪರ್ಕ, ಕೃಷಿ ಸಂಬಂಧಿತ ಸೌಲಭ್ಯಗಳು, ಪಿಂಚಣಿ, ವಸತಿ ಯೋಜನೆ ಹಾಗೂ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಸಂಸದರ ಗಮನಕ್ಕೆ ತಂದರು. ಪ್ರತಿಯೊಂದು ಅರ್ಜಿಯನ್ನು ಪರಿಶೀಲಿಸಿದ ಸಂಸದರು, ಸಾರ್ವಜನಿಕರ ಅಹವಾಲುಗಳನ್ನು ತಾಳ್ಮೆಯಿಂದ…

Read More

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೌರಿ-ಗಣೇಶ ವಿಗ್ರಹಗಳನ್ನು ತಯಾರಿಸುವ / ಮಾರಾಟ ಮಾಡುವ ಮಾಲೀಕರು ನಿಗದಿತ ಸ್ಥಳಗಳಲ್ಲಿ ಮಾತ್ರ ಮಾರಾಟ ಮಾಡಬೇಕೆಂದು ಮಹಾನಗರಪಾಲಿಕೆ ಸೂಚನೆ ನೀಡಿದೆ. ಪಿ.ಒ.ಪಿ. ನಿರ್ಮಿತ ಹಾಗೂ ರಾಸಾಯನಿಕ ಗುಣಗಳುಳ್ಳ ವಸ್ತುಗಳನ್ನು ಬಳಸಿ ತಯಾರಿಸಲಾದ ಮತ್ತು ಬಣ್ಣಲೇಪಿತ ವಿಗ್ರಹಗಳ ಮಾರಾಟ ಹಾಗೂ ವಿಸರ್ಜನೆ ಮಾಡುವುದನ್ನು ನಿಷೇಧಿಸಲಾಗಿದೆ. ಗೌರಿ/ಗಣೇಶ ಹಬ್ಬದ ಪ್ರಯುಕ್ತ ಸಂಪೂರ್ಣವಾಗಿ ಮಣ್ಣಿನಿಂದ ವಿಗ್ರಹಗಳನ್ನು ತಯಾರಿಸುವಂತೆ ಹಾಗೂ ಮಾರಾಟ ಮಾಡುವಂತೆ ಈ ಮೂಲಕ ಸೂಚಿಸಲಾಗಿದೆ. ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವ ಮಾರಾಟಗಾರರು ಕಡ್ಡಾಯವಾಗಿ ಪಾಲಿಕೆ ವತಿಯಿಂದ ಅನುಮತಿ ಪಡೆಯಬೇಕು. ಗೌರಿ–ಗಣೇಶ ಮೂರ್ತಿಗಳನ್ನು ಕ್ಯಾತ್ಸಂದ್ರದ ಸರ್ಕಾರಿ ಹೈಸ್ಕೂಲ್ ಆವರಣ, ಕುಣಿಗಲ್ ರಸ್ತೆ ಹೈ–ಟೆನ್ಷನ್ ತಂತಿ ಪಕ್ಕದ ಖಾಸಗಿ ಜಾಗ, ಸರ್ಕಾರಿ ಜೂನಿಯರ್ ಕಾಲೇಜು ಮೈದಾನ, ಶಿರಾ ಗೇಟ್ ಅರಳೇಮರದ ಪಾಳ್ಯದ ರೇಣುಕಾ ಎಲ್ಲಮ್ಮ ದೇವಸ್ಥಾನದ ಬಳಿ ಹಾಗೂ ಶಿರಾ ಗೇಟ್ ಸರ್ಕಲ್‌ನ ಏಕನಾಥೇಶ್ವರಿ ದೇವಸ್ಥಾನದ ಬಳಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಅನುಮತಿ ಪಡೆಯದೇ ಎಲ್ಲೆಂದರಲ್ಲಿ ಮಾರಾಟ ಮಾಡಿದ್ದಲ್ಲಿ ಪಾಲಿಕೆ…

Read More

ತುಮಕೂರು: ನೇಪಾಳದ ಪ್ರವಾಹದಲ್ಲಿ ಯು.ಎಸ್ ಪೌರತ್ವ ಹೊಂದಿರುವ ತುಮಕೂರು ಮೂಲದ ಇಬ್ಬರು ನಾಪತ್ತೆಯಾಗಿದ್ದಾರೆ. ತುಮಕೂರು ನಗರದ ನೃಪತುಂಗನ ಬಡಾವಣೆಯ ರಂಗುಸುಧೀರ್ (53), ಕೀರ್ತಿ ಆಚಾರ್ಯ (50) ನಾಪತ್ತೆಯಾಗಿದ್ದಾರೆ. ಯು.ಎಸ್‌.ನಲ್ಲಿ ಸಾಫ್ಟ್‌’ವೇರ್ ಇಂಜಿನಿಯರ್ ಆಗಿರುವ ಇವರು ಆಗಸ್ಟ್ 22ರಂದು ಯು.ಎಸ್‌ನಿಂದ 10 ಜನರ ತಂಡ ನೇಪಾಳಕ್ಕೆ ಹೊರಟಿದ್ದರು. 26ರ ಬೆಳಗ್ಗೆ 8:29ರಂದು ಸಂಬಂಧಿ ಗುರುಪ್ರಸಾದ್ ಎನ್ನುವವರಿಗೆ ಕೊನೆಯ ಕಾಲ್ ಮಾಡಿದ್ದರು. ಅಲ್ಲಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಪರಿಣಾಮ ಅವರ ತುಮಕೂರಿನ ಮನೆಯ ಸದಸ್ಯರಲ್ಲಿ ಆತಂಕ ಎದುರಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

Read More

ತುಮಕೂರು: 12ನೇ ಶತಮಾನದಲ್ಲಿ ಬಸವಣ್ಣನವರು ನೀಡಿದ ವಚನಗಳು ಇಂದಿಗೂ ಪ್ರಸ್ತುತ, ಎಲ್ಲರೂ ಬಸವಣ್ಣನವರ ವಚನಗಳನ್ನು ಕಲಿಯಬೇಕು ಅದರ ಅರ್ಥ ತಾತ್ಪರ್ಯಗಳನ್ನು ಇಂದಿನ ಯುವಪೀಳಿಗೆಗೆ ತಿಳಿಸಬೇಕು, ಧರ್ಮದ ಹಾದಿಯಲ್ಲಿ ಎಲ್ಲರೂ ನಡೆದಾಗ ಜೀವನ ಸಾರ್ಥಕವಾಗುತ್ತದೆ, ಮಕ್ಕಳಿಗೆ ಆಸ್ತಿ ಮಾಡುವ ತವಕದಲ್ಲಿ ಇಂದಿನ ತಂದೆ-ತಾಯಿಯರು ಇದ್ದಾರೆ ಅವರಿಗೆ ಆಸ್ತಿಗಿಂತ ಉತ್ತಮ ವಿದ್ಯೆ, ಸಂಸ್ಕಾರ ನೀಡುವ ಅಗತ್ಯವಿದೆ ಎಂದು ಶರಣ ಎಂ.ಜಿ.ಸಿದ್ಧರಾಮಯ್ಯ ಅವರು ತಿಳಿಸಿದರು. ನಗರದ 31ನೇ ವಾರ್ಡಿನ ಜಯನಗರ ಪಶ್ಚಿಮ ಬಡಾವಣೆಯ ಆರ್.ಎಸ್.ವೀರಭದ್ರೇವರ ಮನೆಯಲ್ಲಿ ತುಮಕೂರು ವೀರಶೈವ ಲಿಂಗಾಯಿತರ ಅಭಿವೃದ್ಧಿ ಸಮಿತಿ(ರಿ) ವತಿಯಿಂದ ಮನೆ-ಮನೆಗಳ ಧಾರ್ಮಿಕ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಶರಣರ ತತ್ವಗಳು ಮತ್ತು ವಚನಗಳ ಬಗ್ಗೆ ಮಾತನಾಡಿದ ಅವರು, ಗುರು-ಹಿರಿಯರಿಗೆ ಗೌರವ ನೀಡಬೇಕು, ವಚನಗಳಲ್ಲಿ ಇದನ್ನು ಅಣ್ಣ ಬಸವಣ್ಣನವರು ವಚನಗಳ ಮೂಲಕ ಬರೆದಿರುವುದು, ಭೂತ—ಭವಿಷ್ಯ–ವರ್ತಮಾನ ಕಾಲವನ್ನು, ಅನ್ನದಾಸೋಹವನ್ನು ನೀಡಿದ್ದು ಬಸವಣ್ಣ, ಮೊದಲ ಪಾರ್ಲಿಮೆಂಟ್ ಅನುಭವ ಮಂಟಪ, ಮಹಿಳೆಯರಿಗೆ ಸಮಾನಹಕ್ಕು ಸಮಾನ ಗೌರವ, ಸಮಾಜಕ್ಕೆ ಅಗತ್ಯವಾದ ಎಲ್ಲವನ್ನೂ ನೀಡಿತ್ತು ಬಸವಣ್ಣನವರು ಎಂದು ತಿಳಿಸಿದರು. ರುದ್ರಮೂರ್ತಿ…

Read More

ತಿಪಟೂರು: ತಾಲೂಕನ್ನು ಎರಡನೇ ಹಂತದ ಪಟ್ಟಿಯಲ್ಲಿ ಬರಪೀಡಿತ ಪ್ರದೇಶವೆಂದು ಘೋಷಿಸಲಾಗುವುದು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು. ಅವರು ನಗರಸಭೆಯ ಶಾಸಕರ ಕಚೇರಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆಯ ಹಳೆಯ ಕಲುಷಿತ ನೀರನ್ನು ಈ ವರ್ಷ ಸಂಪೂರ್ಣವಾಗಿ ಖಾಲಿ ಮಾಡಿದ್ದು, ಈ ವರ್ಷ ಕೆರೆಗೆ ಹೊಸದಾಗಿ ಹೇಮಾವತಿ ನೀರನ್ನು ಪಂಪ್ ಮಾಡಿ ನಗರಕ್ಕೆ ಸರಬರಾಜು ಮಾಡುತ್ತಿದ್ದೇವೆ. ಈ ವಿಚಾರವಾಗಿ ನಗರಸಭೆ ಪೌರಾಯುಕ್ತರು ಸಂಬಂಧಪಟ್ಟ ಇಲಾಖೆಯಲ್ಲಿ ನೀರಿನ ಪರೀಕ್ಷೆ ಮಾಡಿ, ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿ, ನೀರಿನ ಪರೀಕ್ಷಾ ಪ್ರಮಾಣ ಪತ್ರ ನೀಡಿದ ಮೇಲೆ ನೀರನ್ನು ಸರಬರಾಜು ಮಾಡುತ್ತಿದ್ದೇವೆ ಎಂದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಜಾ ಸೇವಾ ಅಭಿಯಾನವು ಇದೇ ತಿಂಗಳ 05 ರಂದು ಹೊನ್ನವಳ್ಳಿಯಲ್ಲಿ ಹೋಬಳಿ ಮಟ್ಟದಲ್ಲಿ ಚಾಲನೆ ನೀಡಲಾಗುವುದು. ಈ ಸೇವೆಯ ಪ್ರಮುಖ ಉದ್ದೇಶವಾದ ನಾಗರಿಕರಿಂದ ಸಮಸ್ಯೆಗಳ ಆಹವಾಲುಗಳನ್ನು ದೂರಿನ ಫಾರಂನಲ್ಲಿ ನಮೂದಿಸಿ, ಅರ್ಜಿಯನ್ನು ಸ್ವೀಕರಿಸಿ, ಪರಿಹಾರ ಒದಗಿಸಲು ತಾಲೂಕಿನ ಮೊದಲು…

Read More

ಮಧುಗಿರಿ/ಮಿಡಿಗೇಶಿ: ಪರಸ್ಪರ ಕಿತ್ತಾಡಿಕೊಂಡು ಹೆಣ್ಣು ಕರಡಿಯು ಬಂಡೆಯ ಮೇಲಿನಿಂದ ಕೆಳಗೆ ಬಿದ್ದು ಮುಂಭಾಗದ ಕಾಲಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ತಾಲೂಕಿನ ಮಿಡಿಗೇಶಿ ಹೋಬಳಿಯ ಬಿಡರೆಕೆರೆ ಗ್ರಾಮದ ಜಮೀನೊಂದರಲ್ಲಿ ಎರಡು ಕರಡಿಗಳು ಕಿತ್ತಾಡಿಕೊಂಡು ಸುಮಾರು ಮೂರು ವರ್ಷದ ಹೆಣ್ಣು ಕರಡಿ ದೊಡ್ಡ ಗಾತ್ರದ ಗುಂಡಿನ ಮೇಲ್ಭಾಗದಿಂದ ಬಿದ್ದು ನೋವಿನಿಂದ ಚೀರಾಡುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣವೇ ಅರಣ್ಯ ಗಸ್ತು ಪಾಲಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಗ್ರಾಮಸ್ಥರ ಮನವಿ ಮೇರೆಗೆ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಸುರೇಶ್ ಎಚ್.ಎಂ, ಡಿಆರ್‌ಆರ್‌ಓ ಶಾಲಿನಿ, ಅರಣ್ಯ ರಕ್ಷಕರಾದ ಮಹೇಶ್, ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿ ಹೆಣ್ಣು ಕರಡಿಯನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಬನ್ನೇರುಘಟ್ಟ ಆಸ್ಪತ್ರೆಗೆ ರವಾನಿಸಿದರು. ಕರಡಿಯ ಮುಂದಿನ ಕಾಲಿನ ಮೂಳೆ ಮುರಿದಿದೆ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

Read More

ಬಳ್ಳಾರಿ:  ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸ್ಥಳದಲ್ಲೇ ಅಥವಾ ನಿಗದಿತ ಕಾಲಮಿತಿಯಲ್ಲಿ ಪರಿಹಾರ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ನೂತನವಾಗಿ ರೂಪಿಸಿರುವ ಮಹತ್ವಾಕಾಂಕ್ಷೆಯ ‘ಪ್ರಜಾಸೇವಾ ಅಭಿಯಾನ’ವು ಸೆಪ್ಟೆಂಬರ್ 5 ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ. ಜನರು ತಮ್ಮ ಸಣ್ಣಪುಟ್ಟ ಸಮಸ್ಯೆಗಳಿಗೂ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಜನರ ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ಯುವುದು ಹೊಸದಾಗಿ ರಚಿಸಲಾದ ‘ಪ್ರಜಾಸೇವಾ ಇಲಾಖೆ’ಯ ಪ್ರಮುಖ ಗುರಿಯಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ. ಹಿಂದೆ ಸರ್ಕಾರದ ಸೇವೆಗಳನ್ನು ಪಡೆಯಲು ಅಥವಾ ಯೋಜನೆಯ ಪ್ರಯೋಜನಗಳು ತಲುಪದೇ ಇದ್ದಾಗ ಸಾರ್ವಜನಿಕರು ಹರಸಾಹಸ ಪಡಬೇಕಾದ ಪರಿಸ್ಥಿತಿ ಇತ್ತು. ಆದರೆ ಇನ್ನು ಮುಂದೆ ಕ್ಷಣಾರ್ಧದಲ್ಲಿ ಯಾವುದೇ ರೀತಿಯ ಕುಂದುಕೊರತೆಗಳನ್ನು ಸರ್ಕಾರದ ಬಳಿ ಹೇಳಿಕೊಳ್ಳಬಹುದು. ಈ ಅಭಿಯಾನವು ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ ಪರಿಹಾರ ಒದಗಿಸುವ ಏಕೀಕೃತ ವ್ಯವಸ್ಥೆಯಾಗಲಿದೆ. ಪ್ರಮುಖ ಉದ್ದೇಶಗಳು: ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು. ವಿವಿಧ ಇಲಾಖೆಗಳಿಗೆ…

Read More

ರಾಮನಗರ: ಸಾರ್ವಜನಿಕರ ಕಣ್ಣುತಪ್ಪಿಸಿ, ಯಾರೂ ಊಹಿಸದ ಸ್ಥಳದಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ಮಾರಾಟ ಮಾಡುತ್ತಿದ್ದ ಅಂತರಜಿಲ್ಲಾ ಖದೀಮರ ಜಾಲವನ್ನು ರಾಮನಗರದ ಐಜೂರು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ರಾಮನಗರದ ಶಾಂತಿಲಾಲ್ ಲೇಔಟ್‌ ನಲ್ಲಿರುವ ನಿರ್ಮಾಣ ಹಂತದ ಮನೆಯೊಂದರಲ್ಲಿ ಈ ಕೃತ್ಯ ಎಸಗುತ್ತಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಮನಗರದ ಶಾಂತಿಲಾಲ್ ಲೇಔಟ್‌ ನಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡವನ್ನು ಈ ಅಂತರಜಿಲ್ಲಾ ಜಾಲವು ನಕಲಿ ನೋಟು ಮುದ್ರಣ ಅಡ್ಡೆಯಾಗಿ ಬಳಸಿಕೊಳ್ಳುತ್ತಿತ್ತು. ಹೊರನೋಟಕ್ಕೆ ನಿರ್ಮಾಣ ಹಂತದಲ್ಲಿರುವ ಈ ಕಟ್ಟಡದಲ್ಲಿ ಯಾರಿಗೂ ಸಂಶಯ ಬಾರದಂತೆ ರಹಸ್ಯವಾಗಿ ಖೋಟಾ ನೋಟುಗಳ ದಂಧೆ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಪಡೆದ ಐಜೂರು ಠಾಣೆ ಪೊಲೀಸರು ದಿಢೀರ್ ದಾಳಿ ನಡೆಸಿ ಜಾಲವನ್ನು ಬಯಲಿಗೆಳೆದಿದ್ದಾರೆ. ಆರೋಪಿಗಳು ಹೊರಗಿನಿಂದ ವಿಶೇಷ ಕಾಗದದ ಶೀಟ್‌ಗಳನ್ನು ತರಿಸಿ, ಅವುಗಳಿಗೆ ನಿರ್ದಿಷ್ಟ ರಾಸಾಯನಿಕ (ಕೆಮಿಕಲ್) ಲೇಪಿಸಿ ಅಸಲಿ ನೋಟಿನಂತೆ ಕಾಣುವ 200 ರೂ. ಮತ್ತು 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು. ಮುದ್ರಿತ ಶೀಟ್‌ಗಳನ್ನು…

Read More

ಕನ್ನಡಿಗರ ಅಡುಗೆ ಮನೆಯಲ್ಲಿ ಕರಿಬೇವು ಇಲ್ಲದೆ ಯಾವುದೇ ಅಡುಗೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಷ್ಟು ಪ್ರಾಮುಖ್ಯತೆ ಇರುವ ಕರಿಬೇವನ್ನು ಫ್ರಿಡ್ಜ್‌ ನಲ್ಲಿಟ್ಟರೂ ಕೆಲವೇ ದಿನಗಳಲ್ಲಿ ಬಾಡಿಹೋಗುವುದು ಅಥವಾ ಕೊಳೆತುಹೋಗುವುದು ಸಾಮಾನ್ಯ. ಇದನ್ನು ದೀರ್ಘಕಾಲ ತಾಜಾವಾಗಿ ಮತ್ತು ಹಸಿರಾಗಿಡಲು ಇಲ್ಲಿದೆ ಕೆಲವು ಅತ್ಯುತ್ತಮ ಸಲಹೆಗಳು: ಮಾರುಕಟ್ಟೆಯಿಂದ ತಂದ ತಕ್ಷಣ ಕರಿಬೇವನ್ನು ಹಾಗೇ ಫ್ರಿಡ್ಜ್‌ ನಲ್ಲಿಡುವುದು ದೊಡ್ಡ ತಪ್ಪು. ಮೊದಲಿಗೆ ಅವುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದು, ಒಣ ಬಟ್ಟೆಯ ಮೇಲೆ ಹಾಕಿ ತೇವಾಂಶವಿಲ್ಲದಂತೆ ಒಣಗಿಸಬೇಕು. ಬಳಿಕ ಟಿಶ್ಯು ಪೇಪರ್‌ ನಲ್ಲಿ ಸುತ್ತಿ ಪ್ಲಾಸ್ಟಿಕ್ ನಲ್ಲಿ ಕಟ್ಟಿ ಫ್ರಿಡ್ಜ್‌ ನಲ್ಲಿಟ್ಟರೆ ಸುಮಾರು ಒಂದು ವಾರಗಳವರೆಗೆ ಹಾಳಾಗದಂತೆ ಇಡಬಹುದು. ಕರಿಬೇವಿನ ಎಲೆಗಳನ್ನು ಹಾಗೆ ಇಡಲು ಕಷ್ಟವಾಗುವವರು ಐಸ್ ಕ್ಯೂಬ್ ಟ್ರೇ ಅನ್ನು ಬಳಸಬಹುದು. ತೊಳೆದು ಒಣಗಿಸಿದ ಎಲೆಗಳನ್ನು ಐಸ್ ಕ್ಯೂಬ್ ಟ್ರೇನಲ್ಲಿ ಹಾಕಿ ಸಂಗ್ರಹಿಸಿಡಬಹುದು. ಅಡುಗೆಗೆ ಬೇಕಾದಾಗ ಬಿಸಿ ನೀರಿಗೆ ಹಾಕಿ ಬಳಸಿದರೆ, ಎಲೆಗಳು ಸಂಪೂರ್ಣ ಫ್ರೆಶ್ ಆಗಿ ಸಿಗುತ್ತವೆ. ಕೆಡದಂತೆ ದೀರ್ಘಕಾಲದವರೆಗೆ ಇಡಲು ತೊಳೆದು ಒಣಗಿಸಿದ ಎಲೆಗಳನ್ನು…

Read More