ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್– ಬಿಇಎಲ್ ಭಾರತದಾದ್ಯಂತ ತನ್ನ ಘಟಕಗಳಲ್ಲಿ ನೇಮಕ ಮಾಡಲು ಪ್ರೊಬೇಷನರಿ ಇಂಜಿನಿಯರ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಆಸಕ್ತರು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.
ನೇಮಕಾತಿ ಪ್ರಾಧಿಕಾರ: ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್
ಹುದ್ದೆಯ ಹೆಸರು: ಪ್ರೊಬೇಷನರಿ ಇಂಜಿನಿಯರ್ ಗಳು (ಇಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್)
ಒಟ್ಟು ಹುದ್ದೆಗಳ ಸಂಖ್ಯೆ: 350
ವೇತನ: 40,000- 1,40,000. (ಬೇಸಿಕ್ ಪೇ ಜತೆಗೆ ಡಿಎ, ಹೆಚ್ ಆರ್ ಎ, ಪ್ರಯಾಣ ಭತ್ಯೆ, ಕಾರ್ಯದಕ್ಷತೆ ಭತ್ಯೆ, ಮೆಡಿಕಲ್ ಪೇ, ಇತರೆ ಭತ್ಯೆ ನೀಡಲಾಗುತ್ತದೆ.
ಹುದ್ದೆಗಳು ಮತ್ತು ಸಂಖ್ಯೆ:
ಪ್ರೊಬೇಷನರಿ ಇಂಜಿನಿಯರ್ (ಇಲೆಕ್ಟ್ರಾನಿಕ್ಸ್) ಇನ್ ಇ–II ಗ್ರೇಡ್ ಹುದ್ದೆಗಳು: 200
ಪ್ರೊಬೇಷನರಿ ಇಂಜಿನಿಯರ್ (ಮೆಕ್ಯಾನಿಕಲ್) ಇನ್ ಇ–II ಗ್ರೇಡ್ : 150
ಒಟ್ಟು 350 ಹುದ್ದೆಗಳ ಪೈಕಿ ಸಾಮಾನ್ಯ ಅರ್ಹತೆಯವರಿಗೆ 143, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 35, ಒಬಿಸಿ ಎನ್ಸಿಎಲ್ ಅಭ್ಯರ್ಥಿಗಳಿಗೆ 94, ಎಸ್ಸಿ ಅಭ್ಯರ್ಥಿಗಳಿಗೆ 52, ಎಸ್ಟಿ ಅಭ್ಯರ್ಥಿಗಳಿಗೆ 26 ಹುದ್ದೆಗಳು ಮೀಸಲಿಡಲಾಗಿದೆ.
ಅರ್ಹತೆಗಳು:
* ಪ್ರೊಬೇಷನರಿ ಇಂಜಿನಿಯರ್ (ಇಲೆಕ್ಟ್ರಾನಿಕ್ಸ್) ಇನ್ ಇ-II ಗ್ರೇಡ್ ಹುದ್ದೆಗಳಿಗೆ ಇಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಷಯದಲ್ಲಿ ಬಿಇ, ಬಿ.ಟೆಕ್, ಬಿಎಸ್ಸಿ ಪದವಿ ಪಡೆದಿರಬೇಕು.
* ಪ್ರೊಬೇಷನರಿ ಇಂಜಿನಿಯರ್ (ಮೆಕ್ಯಾನಿಕಲ್) ಇನ್ ಇ-II ಗ್ರೇಡ್ ಹುದ್ದೆಗಳಿಗೆ ಮೆಕ್ಯಾನಿಕಲ್ ವಿಷಯದಲ್ಲಿ ಬಿಇ, ಬಿ.ಟೆಕ್, ಬಿಎಸ್ಸಿ ಪದವಿ ಪಡೆದಿರಬೇಕು.
* ಪ್ರಥಮ ಗ್ರೇಡ್ನಲ್ಲಿ ಪದವಿ ಪಡೆದಿರಬೇಕು.
* ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ದಿನಾಂಕ 01—01–2025 ಕ್ಕೆ 25 ವರ್ಷ ಮೀರಿರಬಾರದು.
* ಒಬಿಸಿ ವರ್ಗದವರಿಗೆ 3 ವರ್ಷ, ಎಸ್ಸಿ/ ಎಸ್ಟಿ ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ.
ಅರ್ಜಿ ಶುಲ್ಕ ರೂ.1180.
ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ : https://test.cbexams.com/EDPSU/BEL/Apps/Registration/RegStep.aspx
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 31—01–2025
ಸಿಬಿಟಿ ಪರೀಕ್ಷೆ ನಡೆಸುವ ಸಂಭಾವ್ಯ ದಿನಾಂಕ: 2025 ಮಾರ್ಚ್ ತಿಂಗಳು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx