ಬೆಂಗಳೂರು: ಸಲಗ ಚಿತ್ರದ ಬಳಿಕ ದುನಿಯಾ ವಿಜಯ್ ಎರಡನೇ ಸಿನಿಮಾದಲ್ಲಿ ನಟಿಸಿ ನಿರ್ದೇಶಿಸಿದ್ದು, ಈ ಚಿತ್ರ ‘ಭೀಮ’ ಆಗಸ್ಟ್ 9ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಈ ಚಿತ್ರಕ್ಕಾಗಿ ದುನಿಯಾ ವಿಜಯ್ ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ದೊಡ್ಡ ಯುವಕರ ತಂಡವೇ ಈ ಚಿತ್ರದಲ್ಲಿ ನಟಿಸಿದ್ದು, ಯುವಕರಿಗೆ ಈ ಚಿತ್ರ ಬಹಳ ಇಷ್ಟವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ದುನಿಯಾ ವಿಜಯ್ ಗೆ ಜೋಡಿಯಾಗಿ ಅಶ್ವಿನಿ ಅಭಿನಯಿಸಿದ್ದು, ರಂಗಾಯಣ ರಘು, ಅಚ್ಯುತ್ ಕುಮಾರ್, ಡ್ರ್ಯಾಗನ್ ಮಂಜು, ಕಲ್ಯಾಣಿ, ರಾಜು, ಪ್ರಿಯಾ, ಶತಮರ್ಶನ್ ಮತ್ತು ಕಾಕ್ರೋಚ್ ಸುಧಿ ಉಳಿದ ಪಾತ್ರ ವರ್ಗದಲ್ಲಿದ್ದಾರೆ.
ಕೃಷ್ಣ ಕ್ರಿಯೇಶನ್ಸ್ ಮತ್ತು ಜಗದೀಶ ಫಿಲಂಸ್ ಬ್ಯಾನರ್ ನಲ್ಲಿ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣ ಮಾಡಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ದೀಪು ಎಸ್ ಕುಮಾರ್ ಸಂಕಲನ, ಗೌತಮ್ ಸಾಹಸ ನಿರ್ದೇಶನ, ಮಾಸ್ತಿ ಅವರ ಸಂಭಾಷಣೆ ಹಾಗೂ ಶಿವಸೇನಾ ಛಾಯಾಗ್ರಹಣವಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296