nammatumakuru
    Facebook Twitter Instagram
    ಟ್ರೆಂಡಿಂಗ್
    • ಧರ್ಮೇಂದ್ರ ಪ್ರಧಾನ್ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ: ಡಾ.ಜಿ.ಪರಮೇಶ್ವರ್‌
    • ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ: 2028ರ ಚುನಾವಣೆಗೆ ಸ್ಪರ್ಧಿಸಲ್ಲವೆಂದು ಸ್ಪಷ್ಟನೆ
    • ರಾಜ್ಯದಲ್ಲಿ ಬರ ಪರಿಸ್ಥಿತಿ: ದೆಹಲಿಯಲ್ಲಿ ಸಂಸದರು, ಕೇಂದ್ರ ಸಚಿವರ ಸಭೆ ಕರೆದ ಸಿಎಂ ಡಿ.ಕೆ. ಶಿವಕುಮಾರ್
    • ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ
    • ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಫಲಾನುಭವಿಗಳ ಆಯ್ಕೆ: ಪಾರದರ್ಶಕ ಆಯ್ಕೆ ಪ್ರಕ್ರಿಯೆ
    • ಜುಲೈ 28ರಂದು ಭಾರತ–ಜಪಾನ್ ಸಾಂಸ್ಕೃತಿಕ ವಿನಿಮಯ ಕಾರ್ಯಾಗಾರ
    • ತಿಮ್ಮಮ್ಮನಹಳ್ಳಿ ಗುಂಪು ಘರ್ಷಣೆ: 7 ಮಂದಿ ಬಂಧನ
    • ಕಾಡಂಚಿನ ಗ್ರಾಮದ ಸಾಧಕ ಜಾಕಿ ಪ್ರತಾಪ್‌ ಗೆ ‘ಅಮ್ಮ ವಸುಂಧರೆ’ ಪ್ರಶಸ್ತಿ ಗೌರವ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    ಮಧುಗಿರಿ March 8, 2022

    ಶಾಲೆಯ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲು 

    By adminMarch 8, 2022No Comments1 Min Read
    bisi uta

    ಮಧುಗಿರಿ:  ಬಿಸಿಯೂಟ ತಿಂದ ವಿದ್ಯಾರ್ಥಿಗಳಿಗೆ ಹೊಟ್ಟೆನೋವು ಕಾಣಿಸಿಕೊಂಡು ವಾಂತಿಯಾಗಿ ಮಧುಗಿರಿ  ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲ್ಲೂಕಿನ ಹೊನ್ನಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

    ಮಧ್ಯಾಹ್ನದ ಊಟದ ಸಮಯದಲ್ಲಿ ತಟ್ಟೆಯಲ್ಲಿದ್ದ ಸಾರಿನಲ್ಲಿ ಹುಳಗಳು ಕಂಡುಬಂದಿದೆ. ಇದನ್ನು ವಿದ್ಯಾರ್ಥಿಗಳು ಶಿಕ್ಷಕರಿಗೆ ತೋರಿಸಿದ್ದಾರೆ.  ಇದೇ ಸಂದರ್ಭದಲ್ಲಿ ಊಟ ಮಾಡಿದ್ದವರಿಗೆ ಹೊಟ್ಟೆನೋವು, ವಾಂತಿಯಾಗಿದೆ. ತಕ್ಷಣವೇ ನೆರಳೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯರು ಬಂದು ಚಿಕಿತ್ಸೆ ನೀಡಿದ್ದಾರೆ. ಆಂಬ್ಯುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಸುಮಾರು ಹದಿನೈದು ವಿದ್ಯಾರ್ಥಿಗಳನ್ನು ದಾಖಲು ಮಾಡಲಾಗಿದೆ.

    ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಲವಲವಿಕೆಯಿಂದ ಇದ್ದರು. ಸ್ಥಳಕ್ಕೆ ಡಿಡಿಪಿಐ ಎಂ.ರೇವಣಸಿದ್ದಪ್ಪ, ಬಿಇಒ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ವಿ.ಹೆಚ್.ವೆಂಕಟೇಶಯ್ಯ, ಶಿಕ್ಷಣ ಇಲಾಖೆಯ ಅಧಿಕಾರಿಗಳು,ಶಾಲೆಯ ಶಿಕ್ಷಕರು ಮತ್ತು ಪೋಷಕರು ಇದ್ದರು.

    ವರದಿ: ಅಬಿದ್ ಮಧುಗಿರಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಬದುಕು ಉಜ್ವಲವಾಗಲು ಶಿಕ್ಷಣವೇ ಮುಖ್ಯ ಅಸ್ತ್ರ: ಶಾಸಕ ಕೆ.ಎನ್‌. ರಾಜಣ್ಣ ಕರೆ

    July 19, 2026

    ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ

    July 14, 2026

    ಮಧುಗಿರಿ: ಬೀದಿ ನಾಯಿಗಳ ದಾಳಿಗೆ 24 ಕುರಿ ಸಾವು

    July 10, 2026

    Leave A Reply Cancel Reply

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.