ನವದೆಹಲಿ: ಈ ದೇಶಕ್ಕಾಗಿ ಕಾಂಗ್ರೆಸ್ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿತ್ತು. ಕಾಂಗ್ರೆಸ್ ಜೊತೆ ಬಿಜೆಪಿ-ಆರ್ ಎಸ್ ಎಸ್ ನ್ನು ಹೋಲಿಕೆ ಮಾಡುವುದು ತಮಾಷೆ ವಿಷಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮೂರು ನಿಗದಿತ ಸಭೆಗಳಲ್ಲಿ ಮೊದಲನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಲಿಷ್ಠ ಕಾಂಗ್ರೆಸ್ ಸ್ಥಾಪನೆಗೆ ಮತ್ತು ನ್ಯಾಯಯುತ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕೆಂದು ಕರೆ ನೀಡಿದರು.
ನಮ್ಮ ಪಾತ್ರವಿಲ್ಲದೆ ಪಕ್ಷವು ಅಭಿವೃದ್ಧಿ ಹೊಂದಲು, ಯಶಸ್ವಿಯಾಗಲು ಸಾಧ್ಯವಿಲ್ಲ. ನಮ್ಮ ಹೋರಾಟವು ಆರ್ ಎಸ್ ಎಸ್–ಬಿಜೆಪಿ ವಿರುದ್ಧ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕ, ಪ್ರತಿಯೊಂದು ಸಮುದಾಯವು ಕನಸು ಕಾಣುವ ಮತ್ತು ಸಾಧಿಸುವ ಹಕ್ಕನ್ನು ಹೊಂದಿರುವ ಭಾರತಕ್ಕಾಗಿ ಇದೆ. ಒಟ್ಟಾಗಿ, ನಾವು ಬಲವಾದ ಕಾಂಗ್ರೆಸ್ ಮತ್ತು ನ್ಯಾಯಯುತ ಭಾರತವನ್ನು ನಿರ್ಮಿಸುತ್ತೇವೆ ಎಂದು ಸಭೆಯ ನಂತರ ವಾಟ್ಸಾಪ್ ಚಾನೆಲ್ ನಲ್ಲಿ ಮಾಡಿರುವ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4