ತುಮಕೂರು: ದನಗಳನ್ನು ಖರೀದಿ ಮಾಡುವ ವೇಳೆ ಅದರ ಮಾಲೀಕನೊಂದಿಗೆ ಖರೀದಿದಾರನು ತೆಗೆದುಕೊಂಡಿದ್ದ ಪೋಟೋದಿಂದ ದನಗಳ್ಳತನದ ಆರೋಪಿ ಪತ್ತೆಯಾಗಿರೋ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಬಳಿಯ ಕಂಪ್ಲಾಪುರದಲ್ಲಿ ನಡೆದಿದೆ.
ದನಗಳ್ಳತನದ ಆರೋಪಿಯೆಂದು ತಿಳಿಯದೆ, ಮಾಲೀಕ ಎಂದು ತಿಳಿದು ದನಗಳನ್ನು ಬಾಷಾ ಎಂಬುವರು ಕೆ.ಜಿ. ಟೆಂಪಲ್ ನಲ್ಲಿ ಖರೀದಿ ಮಾಡಿದ್ದರು. ಅಲ್ಲದೆ ಈ ವೇಳೆ ದನಗಳನ್ನು ಮಾರಾಟ ಮಾಡಿದ್ದ ಪುಟ್ಟರಾಜು ಎಂಬ ವ್ಯಕ್ತಿ ಜೊತೆ ಪೋಟೋ ತೆಗೆದುಕೊಂಡಿದ್ದರು. ಆದ್ರೆ ಅದು ಕಳ್ಳತನ ಮಾಡಿರುವ ದನಗಳೆಂದು ತಿಳಿದಿರಲಿಲ್ಲ.
ಕುಣಿಗಲ್ ತಾಲೂಕಿನ ಕಂಪ್ಲಾಪುರ ಗ್ರಾಮದ ಚನ್ನೆಗೌಡ ಎಂಬುವವರಿಗೆ ಸೇರಿದ ಸುಮಾರು 70 ಸಾವಿರ ಬೆಲೆ ಬಾಳುವ ದನಗಳನ್ನು , ರಾತ್ರಿ ವೇಳೆ ಪಕ್ಕದ ಮನೆಯ ವಾಸಿ ಪುಟ್ಟರಾಜು ಕಳ್ಳತನ ಮಾಡಿದ್ದನು. ಅಲ್ಲದೆ ರಾತ್ರೋ ರಾತ್ರಿ ಅದನ್ನು ಗುಬ್ಬಿ ತಾಲ್ಲೂಕಿನ ಕೆ.ಜಿ.ಟೆಂಪಲ್ ಬಳಿ ದನಗಳ ಸಂತೆಗೆ ಸಾಗಿಸಿದ್ದನು. ಸಂತೆಯಲ್ಲಿ ಅದನ್ನು ಬಾಷಾ ಎಂಬುವರಿಗೆ 43 ಸಾವಿರ ರೂ. ಗೆ ಮಾರಾಟ ಮಾಡಿದ್ದನು.
ದನಗಳು ಕಳ್ಳತನವಾಗಿರುವ ವಿಚಾರ ತಿಳಿಯುತ್ತಿದ್ದಂತೆ ಚನ್ನೇಗೌಡ ಸುತ್ತಮುತ್ತ ನಡೆಯುವ ದನಗಳ ಸಂತೆಗೆ ತೆರಳಿ ಹುಡುಕಾಟ ನಡೆಸಿದ್ದರು. ಈ ವೇಳೆ ಕಳ್ಳತನವಾಗಿದ್ದ ದನಗಳು ಕೆ.ಜಿ. ಟೆಂಪಲ್ ಬಳಿ ನಡೆಯುವ ದನಗಳ ಸಂತೆಯಲ್ಲಿ ಪತ್ತೆಯಾಗಿದ್ದವು. ದನಗಳನ್ನ ಖರೀದಿ ಮಾಡಿದ್ದ ಮಾಲೀಕನ ಬಳಿ ತೆರಳಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ದನಗಳನ್ನ ಖರೀದಿಸುವುದಕ್ಕೂ ಮೊದಲು ಪೋಟೋ ತೆಗೆದುಕೊಂಡಿದ್ದ ಖರೀದಿ ಮಾಡಿದ್ದ ಬಾಷಾ ಅವರ ಬಳಿ ಪೋಟೋ ನೋಡಿದಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಅಲ್ಲದೆ ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಹುಲಿಯೂರುದುರ್ಗ ಪೊಲೀಸರಿಂದ ಕಳ್ಳತನ ಮಾಡಿದ್ದ ಪುಟ್ಟರಾಜು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನ ವಶಕ್ಕೆ ಪಡೆಯಲಾಗಿದೆ. ಕಳ್ಳತನ ಮಾಡಿದ್ದ ದನಗಳನ್ನ ಮಾಲೀಕನಿಗೆ ಪೊಲೀಸರು ಹಿಂದಿರುಗಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx