ಹೆಚ್.ಡಿ.ಕೋಟೆ: ತಾಲೂಕಿನ ಚಿಕ್ಕಕೆರೆಯೂರು ಗ್ರಾಮದ ಗಣೇಶ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಕಾರ್ಯಕ್ರಮವನ್ನು ಶುದ್ಧಗಂಗಾ ವಿಭಾಗದ ಯೋಜನಾ ಅಧಿಕಾರಿ ಯುವರಾಜ್ ಜೈನ್ ಕಸ ಗುಡಿಸುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಕ್ರಮ ಕುರಿತು ಮಾತನಾಡಿದ ಯುವರಾಜ್, ನಮಗೆ ಉತ್ತಮ ಆರೋಗ್ಯ ಲಭಿಸಬೇಕಾದರೆ ನಮ್ಮ ಸುತ್ತಲಿನ ಪರಿಸರವನ್ನು ನಾವು ಶುಚಿಯಾಗಿ ನೋಡಿಕೊಳ್ಳಬೇಕು, ಅದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶುದ್ಧಗಂಗಾ ವಿಭಾಗದ ಯೋಜನಾಧಿಕಾರಿ ಯುವರಾಜ್ ಜೈನ್, ತಾಲೂಕು ಯೋಜನಾಧಿಕಾರಿ ಭಾಸ್ಕರ್, ಮೇಲ್ವಿಚಾರಕಿ ಪವಿತ್ರ, ಸುನಿಲ್, ಸೇವಾ ಪ್ರತಿನಿಧಿ ರೇಖಾ, ಸಂಘದ ಮಹಿಳಾ ಸದಸ್ಯರು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx