nammatumakuru

    Subscribe to Updates

    Get the latest creative news from FooBar about art, design and business.

    What's Hot

    ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ

    April 19, 2026

    ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ: ಕಾಮಗಾರಿ ವೇಗ, ಅಧಿಕಾರಿಗಳಿಗೆ ಅಭಿನಂದನೆ

    April 19, 2026

    ವಿದ್ಯಾವಂತರಲ್ಲೇ ಹೆಚ್ಚುತ್ತಿರುವ ಜಾತಿ ಪ್ರಜ್ಞೆ: ಲೇಖಕಿ ಎಂ.ಸಿ.ಲಲಿತ ವಿಷಾದ

    April 19, 2026
    Facebook Twitter Instagram
    ಟ್ರೆಂಡಿಂಗ್
    • ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ
    • ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ: ಕಾಮಗಾರಿ ವೇಗ, ಅಧಿಕಾರಿಗಳಿಗೆ ಅಭಿನಂದನೆ
    • ವಿದ್ಯಾವಂತರಲ್ಲೇ ಹೆಚ್ಚುತ್ತಿರುವ ಜಾತಿ ಪ್ರಜ್ಞೆ: ಲೇಖಕಿ ಎಂ.ಸಿ.ಲಲಿತ ವಿಷಾದ
    • ತಿಪಟೂರು: ಬೆಡ್‌ ಶೀಟ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ; ಪಕ್ಕದ ಪೊರಕೆ ತಯಾರಿಕಾ ಘಟಕಕ್ಕೂ ಬೆಂಕಿ ಕೆನ್ನಾಲಿಗೆ
    • ಅವೈಜ್ಞಾನಿಕ ಅಂಡರ್‌ ಪಾಸ್; ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಜಯಂತಿ ಗ್ರಾಮಸ್ಥರಿಂದ ಧರಣಿ
    • ಸಿಂಗಾಪುರ ಗ್ರಾಮಕ್ಕೆ ಸರ್ಕಾರಿ ಬಸ್‌ ಸೌಲಭ್ಯ ಕಲ್ಪಿಸಲು ಮಹಿಳೆಯರ ಆಗ್ರಹ: ಕೆಎಸ್‌ ಆರ್‌ ಟಿಸಿ ಅಧಿಕಾರಿಗೆ ಮನವಿ
    • ಹುಳಿಯಾರಿನ ವಾರದ ತರಕಾರಿ ಸಂತೆ ಸ್ಥಳಾಂತರ: ಏಪ್ರಿಲ್ 23ರಿಂದ ಹೊಸ ವ್ಯವಸ್ಥೆ ಜಾರಿ
    • ಅಪಘಾತ ಸಂಭವಿಸುವ ಜಾಗಗಳನ್ನು ಗುರುತಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ದಲಿತ ಸಮುದಾಯದ ವ್ಯಕ್ತಿಯನ್ನು ಅಲೆದಾಡಿಸಿದ ತಹಶೀಲ್ದಾರ್‌, ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆಯಡಿ ಕ್ರಮಕ್ಕೆ ದೂರು
    ತುಮಕೂರು November 18, 2023

    ದಲಿತ ಸಮುದಾಯದ ವ್ಯಕ್ತಿಯನ್ನು ಅಲೆದಾಡಿಸಿದ ತಹಶೀಲ್ದಾರ್‌, ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆಯಡಿ ಕ್ರಮಕ್ಕೆ ದೂರು

    By adminNovember 18, 2023No Comments2 Mins Read
    tumakuru

    ತುಮಕೂರು: ತಹಶೀಲ್ದಾರ್‌ ಸಿದ್ದೇಶ್‌ ಅವರನ್ನೊಳಗೊಂಡಂತೆ ಗೂಳೂರು ಹೋಬಳಿ ರಾಜಸ್ವ ನಿರೀಕ್ಷಕರಾದ ಕುಮಾರ್‌, ರಮೇಶ್‌ ಕುಮಾರ್‌ ಹಾಗೂ ಕೌತ ಮಾರನಹಳ್ಳಿ ವೃತ್ತದ ಗ್ರಾಮಲೆಕ್ಕಿಗ ಭವ್ಯ ಅವರ ವಿರುದ್ಧ ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆಯಡಿ ಆದಿ ದ್ರಾವಿಡ ಸಮುದಾಯ(SC)ಕ್ಕೆ ಸೇರಿದ ಯಲ್ಲಪ್ಪ ಎಂಬವರು ಪೊಲೀಸ್‌ ಉಪಾಧೀಕ್ಷಕರಿಗೆ ದೂರು ನೀಡಿದ್ದಾರೆ.

    ಗೌರಿಪುರ ಸರ್ವೇ ನಂಬರ್‌ 5ರಲ್ಲಿ ಸರ್ಕಾರವು 1988ರಲ್ಲಿ ತನ್ನ ಹೆಸರಿಗೆ ಸಾಗುವಳಿ ಪತ್ರ ನೀಡಿ 1.16 ಎಕರೆ ಜಮೀನು ಮಂಜೂರು ಮಾಡಿತ್ತು. ಇದೇ ಸರ್ವೇ ನಂಬರ್‌ ನಲ್ಲಿ ಇತರೆ ಹಿಡುವಳಿದಾರರ ಹೆಸರು ಜಂಟಿ ಪಹಣಿಯಲ್ಲಿ ನಮೂದಾಗಿದ್ದು, ಇದುವರೆಗೂ ತನ್ನ ಜಮೀನು ದುರಸ್ತಿಯಾಗಿರುವುದಿಲ್ಲ. ಸರಿಪಡಿಸಿಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಯಾವುದೇ ಕ್ರಮಕೈಗೊಳ್ಳದ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಆದ್ದರಿಂದ ಆ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆಯಡಿ ದೂರು ಸಲ್ಲಿಸುತ್ತಿದ್ದೇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


    Provided by
    Provided by

    ಈ ಸಂಬಂಧ ಮಾತನಾಡಿದ ಸಾಮಾಜಿಕ ಹೋರಾಟಗಾರ ಹಂದ್ರಾಳ್‌ ನಾಗಭೂಷಣ್‌,  ಆದಿ ದ್ರಾವಿಡ ಜಾತಿಗೆ ಸೇರಿದ ಯಲ್ಲಪ್ಪ ಅವರಿಗೆ  ಸರ್ಕಾರ 1.16 ಎಕರೆ ಜಮೀನನನ್ನು ಮಂಜೂರು ಮಾಡಿತ್ತು.  ಅದರಂತೆ ಸಾಗುಳಿಯಂತೆ ಪಹಣಿ ಕೂಡ ಪ್ರತ್ಯೇಕವಾಗಿ ಬರ್ತಾ ಇರುತ್ತೆ.  ಅದಾದ ನಂತರ ಒಟ್ಟುಗೂಡಿಸ್ತಾರೆ. ಒಟ್ಟುಗೂಡಿಸಿದ ನಂತರ ಅವರಿಗೆ ಸಾಲ ಸೌಲಭ್ಯಗಳು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಮಕ್ಕಳ ಮದುವೆ ಮಾಡಲು ಆಗುವುದಿಲ್ಲ, ಜೀವನ ನಡೆಸಲು ಕಷ್ಟವಾಗಿತ್ತು. ವ್ಯವಸಾಯ ಮಾಡಲು ತುಂಬಾ ತೊಂದರೆ ಆಗಿದೆ. ಹಾಗಾಗಿ ಅವರು ನಮ್ಮ ಸಮಿತಿಯ ಬಳಿ ಬಂದಿದ್ದಾರೆ.  ಆಗ ನಾವು ಸರ್ವೇ ಇಲಾಖೆಗೆ ಯಲ್ಲಪ್ಪ ಮುಖಾಂತರ ಒಂದು ಪತ್ರ ಬರೆಸಿದೆವು. ಈ ಬಗ್ಗೆ ಕ್ರಮಕೈಗೊಳ್ಳುವಂತೆ ತುಮಕೂರು ಸರ್ವೇ ಇಲಾಖೆ ತಹಶೀಲ್ದಾರ್‌ ಗೆ  ಆದ್ರೆ ತುಮಕೂರು ತಹಶೀಲ್ದಾರ್‌ ಸಿದ್ದೇಶ್‌ ಅವರು, 10ರಿಂದ 11 ತಿಂಗಳು ಆದರೂ ಈವರೆಗೂ  ಅರ್ಜಿಯನ್ನು ಆಲಿಸದೇ, ಸರ್ಕಾರಿ ಸೌಲಭ್ಯ ಕೊಡದೇ ಕರ್ತವ್ಯ ಲೋಪ ಮಾಡಿದ್ದಾರೆ ಎಂದರು ತಿಳಿಸಿದರು.

    ಸಂವಿಧಾನದಡಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಸರ್ಕಾರಿ ಸೇವೆ ಕೊಡೋದಕ್ಕೆ ಯಾವ ಅಧಿಕಾರಿಗಳು ವಿಫಲರಾಗುತ್ತಾರೆ. ಅವರ ವಿರುದ್ಧವಾಗಿ ದೂರು ದಾಖಲಿಸುವ ಅವಕಾಶವಿದೆ. ಅದನ್ನು ಇಂದು ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನಾವು ಮಾಡಿದ್ದೇವೆ.  ಅಟ್ರಾಸಿಟಿಯನ್ನು ನಾವು ಎಲ್ಲೂ ದುರುಪಯೋಗ ಪಡಿಸಿಕೊಳ್ತಾ ಇಲ್ಲ,  ಸತ್ಯಾಸತ್ಯತೆಯನ್ನು ಕಂಡು ಪರಿಶೀಲಿಸಿ ಯಲ್ಲಪ್ಪ ಅವರ ಮೂಲಕ ಅರ್ಜಿಯನ್ನು ನೀಡಲಾಗಿದೆ. ಡಿವೈಎಸ್‌ ಪಿ ಅವರು ಅರ್ಜಿಯನ್ನು ಸ್ವೀಕಾರ ಮಾಡಿದ್ದಾರೆ.  ಸಂಜೆಯವರೆಗೆ ನಮಗೆ ಕಾಲಾವಕಾಶಕೊಡಿ ಎಂದು ಕೇಳಿದ್ದಾರೆ.  ಅವರು ಎಫ್‌ ಐಆರ್‌ ಮಾಡಿಲ್ಲವಾದರೆ, ಡಿವೈಎಸ್‌ ಪಿ ಅವರನ್ನು ಒಳಗೊಂಡಂತೆ, ತಹಶೀಲ್ದಾರ್‌ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುತ್ತೇವೆ ಎಂದು ಅವರು ತಿಳಿಸಿದರು.

    ತಹಶೀಲ್ದಾರ್‌ ಸಿದ್ದೇಶ್‌ ಅವರನ್ನೊಳಗೊಂಡಂತೆ ಗೂಳೂರು ಹೋಬಳಿ ರಾಜಸ್ವ ನಿರೀಕ್ಷಕರಾದ ಕುಮಾರ್‌, ರಮೇಶ್‌ ಕುಮಾರ್‌ ಹಾಗೂ ಕೌತ ಮಾರನಹಳ್ಳಿ ವೃತ್ತದ ಗ್ರಾಮಲೆಕ್ಕಿಗ ಭವ್ಯ ಅವರ ವಿರುದ್ಧ ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಲಾಗಿದೆ. ಆದರೆ ಈವರೆಗೆ ಎಫ್‌ ಐಆರ್‌ ದಾಖಲಾಗಿಲ್ಲ. ಕ್ರಮಕೈಗೊಳ್ಳುತ್ತಾರಾ ಎಂದು ಸೋಮವಾರದವರೆಗೆ ಕಾಯುತ್ತೇವೆ. ನಂತರ ಮುಂದಿನ ಕಾನೂನು ಹೆಜ್ಜೆ ಇಡುತ್ತೇವೆ.

    -ಹಂದ್ರಾಳ್‌ ನಾಗಭೂಷಣ್‌, ಸಾಮಾಜಿಕ ಹೋರಾಟಗಾರರು

    admin
    • Website

    Related Posts

    ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ

    April 19, 2026

    ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ: ಕಾಮಗಾರಿ ವೇಗ, ಅಧಿಕಾರಿಗಳಿಗೆ ಅಭಿನಂದನೆ

    April 19, 2026

    ವಿದ್ಯಾವಂತರಲ್ಲೇ ಹೆಚ್ಚುತ್ತಿರುವ ಜಾತಿ ಪ್ರಜ್ಞೆ: ಲೇಖಕಿ ಎಂ.ಸಿ.ಲಲಿತ ವಿಷಾದ

    April 19, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ

    April 19, 2026

    ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತುಮಕೂರು ಮಹಾನಗರ ಪಾಲಿಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು…

    ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ: ಕಾಮಗಾರಿ ವೇಗ, ಅಧಿಕಾರಿಗಳಿಗೆ ಅಭಿನಂದನೆ

    April 19, 2026

    ವಿದ್ಯಾವಂತರಲ್ಲೇ ಹೆಚ್ಚುತ್ತಿರುವ ಜಾತಿ ಪ್ರಜ್ಞೆ: ಲೇಖಕಿ ಎಂ.ಸಿ.ಲಲಿತ ವಿಷಾದ

    April 19, 2026

    ತಿಪಟೂರು: ಬೆಡ್‌ ಶೀಟ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ; ಪಕ್ಕದ ಪೊರಕೆ ತಯಾರಿಕಾ ಘಟಕಕ್ಕೂ ಬೆಂಕಿ ಕೆನ್ನಾಲಿಗೆ

    April 18, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.