ಅಮೆರಿಕನ್ ಡಾಲರ್ ಎದುರು ಸದ್ಯ ವಿಶ್ವದ ಹಲವು ಕರೆನ್ಸಿಗಳು ಪಾತಾಳಕ್ಕೆ ಕುಸಿಯಲು ಆರಂಭವಾಗಿದ್ದು, ಇದಕ್ಕೆ ಭಾರತದ ರೂಪಾಯಿ ಕೂಡ ಹೊರತಾಗಿಲ್ಲ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕನ್ ಡಾಲರ್ ಎದುರು ಇಂದು ಭಾರತದ ರೂಪಾಯಿ ೮೦ರ ಗಡಿ ತಲುಪಿದ್ದು, ಸಹಜವಾಗಿಯೇ ಇದು ದೇಶದ ಆಮದಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ರೂಪಾಯಿ ಕುಸಿತದಿಂದ ಕೆಲವು ವಲಯಗಳಿಗೆ ಲಾಭ ಉಂಟಾಗಲಿದೆ.
ವಿದೇಶಿ ಹೂಡಿಕೆದಾರರು ಭಾರತೀಯ ಶೇರುಗಳು ಮತ್ತು ಇತರ ಸ್ವತ್ತುಗಳ ಮಾರಾಟದಲ್ಲಿ ತೊಡಗಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್‌ಗಳಲ್ಲಿ ವೌಲ್ಯ ಹೊಂದಿರುವ ಸ್ವತ್ತುಗಳತ್ತ ಸಾಗುತ್ತಿರುವುದು ಭಾರತೀಯ ರೂಪಾಯಿಗೆ ಹಾನಿಯನ್ನುಂಟು ಮಾಡಿದೆ. ಇದರ ಪರಿಣಾಮ ಸದ್ಯ ಡಾಲರ್ ಎದುರು ಭಾರತದ ರೂಪಾಯಿ ಕುಸಿದಿದೆ.
ಆದರೆ ರಫ್ತು ಮಾಡುವ ವಲಯಗಳಿಗೆ ಡಾಲರ್‌ಗಳಲ್ಲಿ ಪಾವತಿಸಲಾಗುತ್ತದೆ ಆದ್ದರಿಂದ ಆ ಕಂಪೆನಿಗಳಿಗೆ ಲಾಭವಾಗಲಿದೆ. ಅಲ್ಲದೆ ವಿದೇಶಗಳಿಂದ ಹಣ ಕಳುಹಿಸುವ ಭಾರತೀಯರಿಗೆ ಇದರಿಂದ ಲಾಭವಾಗಲಿದೆ. ರಶ್ಯಾ-ಉಕ್ರೇನ್ ನಡುವಿನ ಯುದ್ದ, ಆಹಾರ ಕೊರತೆ ಭೀತಿ, ತೈಲ ಬೆಲೆ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಂದಾಗಿ ಸದ್ಯ ರೂಪಾಯಿ ದರ ಕುಸಿಯುತ್ತಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy