nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬರಗಾಲದ ಆತಂಕ ಬೇಡ, ಕಾಂಗ್ರೆಸ್ ಸರ್ಕಾರ, ನಾವೂ ಇದ್ದೇವೆ: ಕೆ.ಎನ್. ರಾಜಣ್ಣ

    August 13, 2026

    ತುರುವೇಕೆರೆ: ಜಿ.ಪರಮೇಶ್ವರ್ ಅವರಿಂದ ಬರ ಅಧ್ಯಯನದ ಆತುರದ ವೀಕ್ಷಣೆ: ರೈತರಿಗೆ ನಿರಾಸೆ

    August 13, 2026

    ಆ.29: ಪಾವಗಡದಲ್ಲಿ ಉದ್ಯೋಗ ಮೇಳ

    August 13, 2026
    Facebook Twitter Instagram
    ಟ್ರೆಂಡಿಂಗ್
    • ಬರಗಾಲದ ಆತಂಕ ಬೇಡ, ಕಾಂಗ್ರೆಸ್ ಸರ್ಕಾರ, ನಾವೂ ಇದ್ದೇವೆ: ಕೆ.ಎನ್. ರಾಜಣ್ಣ
    • ತುರುವೇಕೆರೆ: ಜಿ.ಪರಮೇಶ್ವರ್ ಅವರಿಂದ ಬರ ಅಧ್ಯಯನದ ಆತುರದ ವೀಕ್ಷಣೆ: ರೈತರಿಗೆ ನಿರಾಸೆ
    • ಆ.29: ಪಾವಗಡದಲ್ಲಿ ಉದ್ಯೋಗ ಮೇಳ
    • ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್
    • ಮೇಕೆ ಮೇಲೆ ದಾಳಿ ಮಾಡಲು ಬಂದ ಚಿರತೆ ಸೆರೆ
    • ವಿಐಪಿ ಸೆಲ್ ನಿಂದ ಸಾಮಾನ್ಯ ಕೈದಿಗಳ ಸೆಲ್ ಗೆ ಪ್ರಜ್ವಲ್ ರೇವಣ್ಣ ಶಿಫ್ಟ್: ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆ!
    • ಸರಗೂರು: ತಳಮಟ್ಟದ ಕಾರ್ಯಕರ್ತರೇ ಪಕ್ಷದ ಶಕ್ತಿ – ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಎನ್. ಸುಬ್ಬಣ್ಣ ಕರೆ
    • ವಿದ್ಯಾರ್ಥಿಗಳಲ್ಲಿ ಪ್ರತಿಭೆಗೆ ಕೊರತೆಯಿಲ್ಲ, ಪ್ರಾಮಾಣಿಕತೆ ಬೆಳೆಸಿಕೊಳ್ಳುವುದು ಮುಖ್ಯ: ಸಾಹಿತಿ ರಿಜ್ವಾನ್ ಪಾಷಾ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಪರಿಸರ ಜಾಗೃತಿ, ಮಾಹಿತಿ ಶಿಬಿರ
    ತಿಪಟೂರು June 8, 2025

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಪರಿಸರ ಜಾಗೃತಿ, ಮಾಹಿತಿ ಶಿಬಿರ

    By adminJune 8, 2025No Comments2 Mins Read
    tipaturu

    ತಿಪಟೂರು: ತಾಲ್ಲೂಕಿನ ತಡಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತುಮಕೂರು–1 ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ರವರ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ತಾಲ್ಲೂಕಿನಾದ್ಯಂತ ಪರಿಸರ ಜಾಗೃತಿ ಮಾಹಿತಿ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸತೀಶ್ ಸುವರ್ಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪರಿಸರ ಸಂರಕ್ಷಣೆಗಾಗಿ ಇದುವರೆಗೂ ರಾಜ್ಯಾದ್ಯಂತ 73 ಕೋಟಿಗೂ ಅಧಿಕ ವಿವಿಧ ಸಸಿಗಳನ್ನು ನಾಟಿ ಮಾಡಿ ಪೋಷಿಸುತ್ತಿದ್ದು, ಗ್ರಾಮಾಭಿವೃದ್ಧಿ ಯೋಜನೆಯು ಪರಿಸರ ದಿನಾಚರಣೆ ನಿಮಿತ್ತ ಒಂದೆರಡು ಸಾರ್ವಜನಿಕ ಸ್ಥಳಗಳಲ್ಲಿ ಗಿಡನಾಟಿ ಮಾಡಿ ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಎಂದಿಗೂ ಮಾಡುವುದಿಲ್ಲ, ಬದಲಾಗಿ ಪರಿಸರ ಸಂರಕ್ಷಣೆಯ ಹೊಣೆಯನ್ನು ಹೊತ್ತು ರಾಜ್ಯಾದ್ಯಂತ ಅನೇಕ ಸರಕಾರಿ ಶಾಲೆಗಳಲ್ಲಿ, ಕೆರೆಯಂಗಳಗಳಲ್ಲಿ, ದೇವಸ್ಥಾನಗಳ ಬಳಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಳೀಯರ ಸಮ್ಮುಖದಲ್ಲಿ ವಿವಿಧ ಬಗೆಯ ಸಸಿಗಳನ್ನು ನಾಟಿ ಮಾಡಿ ಪೋಷಿಸುವ ಜವಾಬ್ದಾರಿಯನ್ನು ಸ್ಥಳೀಯ ಗ್ರಾಮಸ್ಥರಿಗೆ, ನಮ್ಮ ಪಾಲುದಾರರಿಗೆ, ವಿದ್ಯಾರ್ಥಿಗಳಿಗೆ ವಹಿಸಿಕೊಡಲಾಗುತ್ತದೆ ಎಂದು ತಿಳಿಸಿದರು.

    ತಡಸೂರು ಗ್ರಾ.ಪಂ.ಉಪಾಧ್ಯಕ್ಷರಾದ ಶೇಖರ್ ಮಾತನಾಡಿ, ಈ ನವಯುಗದಲ್ಲಿ ಪರಿಸರ ಮಾಲಿನ್ಯ ಅಧಿಕವಾಗಿದ್ದು, ಜೀವಕುಲ ಆರೋಗ್ಯವಾಗಿ ಉಳಿಯಬೇಕಾದರೆ ಪರಿಸರ ಸಂರಕ್ಷಣೆ ನಮ್ಮೆಲ್ಲರಿಗೂ ಅವಶ್ಯಕತೆಗಿಂತ ಅನಿವಾರ್ಯತೆಯೇ ಅಧಿಕವಾಗಿದೆಯಾದ್ದರಿಂದ ಪ್ರತಿಯೊಬ್ಬರು ಮನೆಗೊಂದು ಮರ ಊರಿಗೊಂದು ವನದಂತೆ ಯಾವುದಾದರೂ ಹಣ್ಣಿನ ಅಥವಾ ಕಾಡಿನ ಸಸಿಗಳನ್ನು ಬೆಳೆಯಲೇಬೇಕೆಂದು ತಿಳಿಸಿದರು.

    ತಡಸೂರು ಪ್ರೌಢಶಾಲೆಯ ವಿಜ್ಞಾನ ವಿಭಾಗದ ಸಹಶಿಕ್ಷಕಿ ಶುಭಕುಮಾರಿ ಮಾತನಾಡಿ, ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ನಾನ್ನುಡಿಯಂತೆ ಈಗಿನ ವಿದ್ಯಾರ್ಥಿ ಸಮೂಹ ವೃಕ್ಷೋ ರಕ್ಷತಿ ರಕ್ಷಿತಃ ಎನ್ನುವಂತೆ ನಾಟಿ ಮಾಡಿದ ಸಸಿಗಳನ್ನು ಪೋಷಿಸಬೇಕೆಂದು ತಿಳಿಸಿದರು.

    ಪರಿಸರ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವೂ ನೆರವೇರಿತು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ಆವರಣದಲ್ಲಿ ಹಲಸು, ಬೆಟ್ಟದ ನೆಲ್ಲಿ, ಬಿಲ್ವಪತ್ರೆ, ಮಹಾಗನಿ, ಬೀಟೆ ಈಗೆ ವಿವಿಧ ಬಗೆಯ 80 ಸಸಿಗಳನ್ನು ನಾಟಿ ಮಾಡಿದರು.

    ಕಾರ್ಯಕ್ರಮದಲ್ಲಿ ತಡಸೂರು ಗ್ರಾ.ಪಂ. ಸೆಕೆಂಡರಿ ವೇದಮೂರ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಿಪಟೂರು ತಾಲ್ಲೂಕು ಯೋಜನಾಧಿಕಾರಿ ಉದಯ್.ಕೆ, ತಾಲ್ಲೂಕು ಕೃಷಿ ಅಧಿಕಾರಿ ಪ್ರಮೋದ್ ಕುಮಾರ್, ಮೇಲ್ವಿಚಾರಕ ದಿನೇಶ್ ಕೆ., ತಡಸೂರು ಪ್ರೌಢ ಶಾಲಾ ಶಿಕ್ಷಕರಾದ ತ್ರಿಮೂರ್ತಿ, ಶಾಲಾ ಶಿಕ್ಷಕ ವೃಂದದವರು, ಸೇವಾಪ್ರತಿನಿಧಿಗಳಾದ ಪ್ರೀತಿ ಹಾಗೂ ದಿವ್ಯಾ, ಶಾಲಾ ವಿದ್ಯಾರ್ಥಿಗಳು ಹಾಗೂ ತಡಸೂರು ಗ್ರಾಮಸ್ಥರು ಭಾಗವಹಿಸಿದ್ದರು.

    ವರದಿ: ಆನಂದ್ ತಿಪಟೂರು


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ತಿಪಟೂರು: ಶಾಖಾ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ಮತ್ತು ಮಕ್ಕಳ ಜಾಗೃತಿ ಕಾರ್ಯಕ್ರಮ

    August 13, 2026

    ಸಾರ್ಥವಳ್ಳಿಯ ಗಂಗಾಧರ್ ಕುಟುಂಬಕ್ಕೆ ಆಸರೆಯಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

    August 10, 2026

    ಆಗಸ್ಟ್ 9ರಂದು ತಿಪಟೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಯೋಗ ಚಾಂಪಿಯನ್ಷಿಪ್ ಸ್ಪರ್ಧೆ

    August 8, 2026

    Comments are closed.

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಮಧುಗಿರಿ

    ಬರಗಾಲದ ಆತಂಕ ಬೇಡ, ಕಾಂಗ್ರೆಸ್ ಸರ್ಕಾರ, ನಾವೂ ಇದ್ದೇವೆ: ಕೆ.ಎನ್. ರಾಜಣ್ಣ

    August 13, 2026

    ಮಧುಗಿರಿ: ತಾಲೂಕಿನ ರೈತರು, ಕೂಲಿ ಕಾರ್ಮಿಕರು ಬರಗಾಲ ಬರುತ್ತದೆ ಎಂದು ಭಯ ಪಡುವ ಅಗತ್ಯವಿಲ್ಲ, ನಮ್ಮ ಕಾಂಗ್ರೆಸ್ ಸರ್ಕಾರ ಹಾಗೂ…

    ತುರುವೇಕೆರೆ: ಜಿ.ಪರಮೇಶ್ವರ್ ಅವರಿಂದ ಬರ ಅಧ್ಯಯನದ ಆತುರದ ವೀಕ್ಷಣೆ: ರೈತರಿಗೆ ನಿರಾಸೆ

    August 13, 2026

    ಆ.29: ಪಾವಗಡದಲ್ಲಿ ಉದ್ಯೋಗ ಮೇಳ

    August 13, 2026

    ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ನಿರ್ಧಾರ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್

    August 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.