ಸರಗೂರು: ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರ ಇದ್ದು ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ರಕ್ಷಣಾ ಸೇವಾ ಟ್ರಸ್ಟ್ ಅಧ್ಯಕ್ಷೆ ಚಂದ್ರಿಕಾ ದೊರೆಸ್ವಾಮಿ ತಿಳಿಸಿದರು.
ಸರಗೂರು ತಾಲ್ಲೂಕಿನ ಅಗತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಪೆನ್ನು ಪೆನ್ಸಿಲ್ ವಿತರಣೆ ಮಾಡಿ ಮಾತನಾಡಿದ ಅವರು, ನಮ್ಮ ಟ್ರಸ್ಟ್ ವತಿಯಿಂದ ಕೋವಿಡ್ ಸಂದರ್ಭದಲ್ಲಿ ಕಿಟ್ ಗಳನ್ನು ವಿತರಣೆ ಮಾಡಲಾಗಿತ್ತು. ಈಗ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಅನುಕೂಲವಾಗಲು ನೋಟ್ ಗಳನ್ನು ನೀಡುತ್ತಿದ್ದೇವೆ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದರೆ.ಮುಂದಿನ ಪೀಳಿಗೆಗೆ ಹಸನಾಗುತ್ತದೆ ಎಂದು ತಿಳಿಸಿದರು.
ನಿವೃತ್ತ ಎಎಸ್ ಐ ದೊರೆಸ್ವಾಮಿ ಮಾತನಾಡಿ, ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಸೇವೆ ಮಾಡಲು ನಿವೃತ್ತ ಪಡೆದು ಕೊಂಡಿದ್ದೇನೆ. ಪೊಲೀಸ್ ಇಲಾಖೆಯ ಕರ್ತವ್ಯದಲ್ಲಿ ಇದ್ದಾಗ ಸಮಾಜ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಕೊರೊನಾ ವಾರಿಯರ್ಸ್ ಎಂದು ಸನ್ಮಾನಿಸಿದರು.
ತಾಲ್ಲೂಕಿನ ಬಿದರಹಳ್ಳಿ, ಅಗತ್ತೂರು ಶಾಲೆಗಳಿಗೆ ನೋಟ್ ಪುಸ್ತಕಗಳನ್ನು ನೀಡಲಾಗುತ್ತದೆ. ಮುಳ್ಳೂರು ಸಾಗರೆ ಸರ್ಕಾರಿ ಶಾಲೆಗಳಿಗೂ ನೊಟ್ ಪುಸ್ತಕ ನೀಡುವುದಾಗಿ ತಿಳಿಸಿದರು.
ಸರಗೂರು ತಾಲ್ಲೂಕಿನ ಅಗತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ ಡಿ ಎಂಸಿ ಅಧ್ಯಕ್ಷ ಮಂಟೇಚಾರಿ, ಗ್ರಾಪಂ ಸದಸ್ಯ ಮಹದೇವನಾಯಕ, ಶಿಕ್ಷಕರು ಸಿದ್ದರಾಜು, ಬಂಗಾಲಯ್ಯ, ಗಣೇಶ್, ಲಕ್ಷ್ಮಿ, ಸಿಂಪಲ್ ಕುಮಾರಿ, ಶಿವಣ್ಣ ಅರುಣಾಕ್ಷಿ, ಕುಮಾರ ಮಂಜುನಾಥ್, ಕರಿಯಪ್ಪ, ಶಿವಣ್ಣ ಇದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5