nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅದ್ದೂರಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ: ಈ ಬಾರಿ ಬಾಗಿಲು ಮುಚ್ಚುವಾಗ ತಡವಾಗಿದ್ದೇಕೆ?

    November 11, 2026

    ದೀಪಾವಳಿಯ ಆಕಾಶ ಬುಟ್ಟಿ ಬಿದ್ದು 7 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ: ರೈತನ ಬಾಳಲ್ಲಿ ಕತ್ತಲು!

    November 11, 2026

    ಪಡಿತರ ಚೀಟಿ ಮರು ಇ-ಕೆವೈಸಿ ಗಡುವು ವಿಸ್ತರಣೆ: ನವೆಂಬರ್ 30ರೊಳಗೆ ಪೂರ್ಣಗೊಳಿಸದಿದ್ದರೆ ರದ್ದಾಗಲಿವೆ ಸೌಲಭ್ಯಗಳು!

    November 11, 2026
    Facebook Twitter Instagram
    ಟ್ರೆಂಡಿಂಗ್
    • ಅದ್ದೂರಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ: ಈ ಬಾರಿ ಬಾಗಿಲು ಮುಚ್ಚುವಾಗ ತಡವಾಗಿದ್ದೇಕೆ?
    • ದೀಪಾವಳಿಯ ಆಕಾಶ ಬುಟ್ಟಿ ಬಿದ್ದು 7 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ: ರೈತನ ಬಾಳಲ್ಲಿ ಕತ್ತಲು!
    • ಪಡಿತರ ಚೀಟಿ ಮರು ಇ-ಕೆವೈಸಿ ಗಡುವು ವಿಸ್ತರಣೆ: ನವೆಂಬರ್ 30ರೊಳಗೆ ಪೂರ್ಣಗೊಳಿಸದಿದ್ದರೆ ರದ್ದಾಗಲಿವೆ ಸೌಲಭ್ಯಗಳು!
    • ಟಿವಿ ನೋಡುತ್ತಿರುವಾಗಲೇ ಮನೆಗೆ ನುಗ್ಗಿತು ಚಿರತೆ!: 6 ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆ ಸೆರೆ
    • ಅಂಗವಿಕಲನಂತೆ ನಟಿಸುತ್ತೀಯಾ?: ಭಿಕ್ಷುಕನಿಗೆ ಹಲ್ಲೆ ನಡೆಸಿ, ಪೊಲೀಸರಿಗೆ ಒಪ್ಪಿಸಿದ ಗುಂಪು!
    • ವಿಧವಾ ವೇತನ: ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ!
    • Gmail ಸ್ಟೋರೇಜ್ ಫುಲ್ ಆಗಿದೆಯೇ? ಉಚಿತ 15 GB ಜಾಗ ಖಾಲಿ ಮಾಡಲು ಇಲ್ಲಿವೆ 4 ಸರಳ ವಿಧಾನಗಳು!
    • ಅನ್ನಾ  ಜೊತೆಗಿನ ವೈವಾಹಿಕ ಸಂಬಂಧಕ್ಕೆ ಅಂತ್ಯ ಹಾಡಿದ ಪವನ್ ಕಲ್ಯಾಣ್ : 4ನೇ ಮದುವೆ ಆಗ್ತಾರಾ? ಜ್ಯೋತಿಷಿಗಳ ಭವಿಷ್ಯ ಏನು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನೈಸರ್ಗಿಕ ಕೃಷಿಗೆ ಪ್ರೋತ್ಸಾಹ: 50 ಕೃಷಿಕರಿಗೆ ಒಂದು ನಾಟಿ ಹಸು ಮತ್ತು ಹೋರಿ ಕರು ದಾನ: ರೈತ ಮುಖಂಡ ಎಸ್.ಶಿವಪ್ರಸಾದ್
    ತುಮಕೂರು October 1, 2023

    ನೈಸರ್ಗಿಕ ಕೃಷಿಗೆ ಪ್ರೋತ್ಸಾಹ: 50 ಕೃಷಿಕರಿಗೆ ಒಂದು ನಾಟಿ ಹಸು ಮತ್ತು ಹೋರಿ ಕರು ದಾನ: ರೈತ ಮುಖಂಡ ಎಸ್.ಶಿವಪ್ರಸಾದ್

    By adminOctober 1, 2023No Comments2 Mins Read
    tumakuru

    ತುಮಕೂರು: ನೈಸರ್ಗಿಕ ಕೃಷಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಅತಿ ಅಗತ್ಯವಾಗಿರುವಂತಹ  ನಾಟಿ ಹಸುವಿನ ಸಗಣಿ ಮತ್ತು ಗಂಜಲ ಬಳಕೆ ಮಾಡಿಕೊಳ್ಳಲು ಸಹಕಾರಿಯಾಗಲೆಂದು ಆಯ್ದ 50 ಜನ ಕೃಷಿಕರಿಗೆ ಒಂದು ನಾಟಿ ಹಸು ಮತ್ತು ಹೋರಿ ಕರುವನ್ನು ದಾನವಾಗಿ ನೀಡಲಾಗುತ್ತಿದೆ ಎಂದು ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ತಿಳಿಸಿದ್ದಾರೆ.

    ತುಮಕೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯವಾಗಿ ವಿಷಮುಕ್ತವಾಗಿಸುವ ನಿಟ್ಟಿನಲ್ಲಿ ಸುಭಾಷ್ ಪಾಳೆಕಾರ್ ಅವರ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರ ಹಾಗೂ ಗೋ ದಾನ ಕಾರ್ಯಕ್ರಮವನ್ನು ಸಿದ್ದಗಂಗಾ ಮಠದ ಶ್ರೀಗೋಸಲ ಸಿದ್ದೇಶ್ವರ ಸಮುದಾಯಭವನದಲ್ಲಿ ಅಕ್ಟೋಬರ್ 3ರಂದು ಆಯೋಜಿಸಲಾಗಿದೆ ಎಂದರು.

    ಬಿಜೆಪಿ ರೈತಮೋರ್ಚಾ ವತಿಯಿಂದ ಈ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ಈ ವೇಳೆ ರೈತ ಸಮುದಾಯವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಗೋವುಗಳನ್ನು ದಾನವಾಗಿ ನೀಡಿ ನೈಸರ್ಗಿಕ ಕೃಷಿಗೆ ಪ್ರೋತ್ಸಾಹ ನೀಡುವಂತಹ ಚಿಂತನೆ ಗೊಂದಲಾಗಿದೆ ಎಂದು ಹೇಳಿದರು.

    ರೈತರ ಆದಾಯ ದ್ವಿಗುಣಗೊಳ್ಳಬೇಕು. ರೈತರ ಅರ್ಥಿಕ ಸ್ಥಿತಿ ಸುಧಾರಣೆ ಯಾಗುವುದರ ಜೊತೆಗೆ, ಜನತೆಗೆ ವಿಷಮುಕ್ತ ಆಹಾರ ದೊರೆಯಬೇಕೆಂಬ ನಿಟ್ಟಿನಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

    ರೈತರ ಅದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ತೆಗೆದುಕೊಂಡಿರುವ ನಿರ್ಧಾರದಲ್ಲಿ ಈ ನೈಸರ್ಗಿಕ ಖುಷಿ ಕೂಡ ಪ್ರಮುಖವಾದು ದಾಗಿದೆ ಈ ಮೂಲಕ ರೈತ ಸಮುದಾಯದ ಬದುಕು ಸಮೃದ್ಧಿಯಾಗಬೇಕು ಆರ್ಥಿಕವಾಗಿ ಸದೃಢವಾಗಬೇಕು ಎಂಬ ನಿಲುವು ಹೊಂದಲಾಗಿದೆ ಎಂದು ಹೇಳಿದರು. ದೇಶದ ಜಿಡಿಪೀಗೆ ಕೃಷಿಯ ಪಾಲು ಹೆಚ್ಚಾಗಬೇಕು ಎಂಬ ನಿಟ್ಟಿನಲ್ಲಿ ಕೃಷಿ ಬಂಡವಾಳವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ರೈತ ಉತ್ಪಾಧಕ ಸಂಘಗಳ ರಚನೆ ಮಾಡುವುದು,ಆ ಮೂಲಕ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಮತ್ತು ಮಾರಾಟದ ಮೂಲಕ ರೈತನನ್ನು ಅರ್ಥಿಕ ಸಂಕಷ್ಟದಿಂದ ಪಾರು ಮಾಡುವುದು ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

    ಹಾಗಾಗಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ, ಸಾವಯವ ಕೃಷಿ ಸೇರಿದಂತೆ ಹಲವಾರು ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳನ್ನು ರೈತರಿಗೆ ಪುನರ್ ಮನನ  ಮಾಡುವಂತಹ ಕೆಲಸವನ್ನು ಬಿಜೆಪಿ ರೈತ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

    ಸಿದ್ದಗಂಗಾ ಮಠದ ಶ್ರೀಗೋಸಲ ಸಿದ್ದೇಶ್ವರರ ಸಭಾಭವನದಲ್ಲಿ ಆಯೋಜಿಸಲಾಗುತ್ತಿರೋ ‘ಸುಭಾಷ್ ಪಾಳೇಕಾರ್ ಶೂನ್ಯ ಬಂಡವಾಳ ಕೃಷಿ ಪದ್ದತಿ’ ಕಾರ್ಯಾಗಾರವನ್ನು ಸಿದ್ದಗಂಗಾ ಮಠಾಧ್ಯಕ್ಷ  ಶ್ರೀಸಿದ್ದಲಿಂಗಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಬಿ.ಸುರೇಶಗೌಡ, ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಓಬಿಸಿ ಕಾರ್ಯಕಾರಿಣಿಯ ಸದಸ್ಯ ಎಸ್.ಪಿ.ಚಿದಾನಂದ್,  ಭಾರತೀಯ ಕೃಷಿ ಪದ್ದತಿಯಲ್ಲಿ ಗೋವುಗಳಿಗೆ ಹೆಚ್ಚಿನ ಪ್ರಾಧ್ಯಾನತೆ ಇದೆ.ಆದರೆ ಆಧುನಿಕ ಕೃಷಿ ಪದ್ದತಿಯ ಹೆಸರಿನಲ್ಲಿ ಗೋ ಆಧಾರಿತ ಕೃಷಿ ಮರೆತಿದ್ದರ ಪರಿಣಾಮ ಇಂದು ಕೃಷಿ ಲಾಭದಾಯಕವಲ್ಲ ಎಂಬ ಪರಿಸ್ಥಿತಿಗೆ ತಲುಪಿದ್ದಾರೆ.ಮರಳಿ ಜನರನ್ನು ಗೋ ಆಧಾರಿತ ಕೃಷಿಗೆ ತರುವ ಮೂಲಕ ಕೃಷಿಯ ಬಂಡವಾಳವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಶೂನ್ಯ ಬಂಡವಾಳ ಕೃಷಿ ಪದ್ದತಿಯನ್ನು ಅಳವಡಿಸಿ ಕೊಳ್ಳಲು ಪ್ರೇರೆಪಿಸಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಆಸಕ್ತರಿಗೆ ಒಂದು ನಾಟಿ ಹಸು ಮತ್ತು ಹೊರಿಯನ್ನು ದಾನವಾಗಿ ನೀಡಿ, ಅದರ ಸಗಣಿ ಮತ್ತು ಗಂಜಲವನ್ನು ಬಳಸಿಕೊಂಡು ಜೀವಾಮೃತವನ್ನು ತಯಾರಿಸುವುದು,ಅದರ ಉಪಯೋಗ ಕುರಿತಂತೆ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಆಂದೋಲನ ವೇದಿಕೆಯ ರಾಜ್ಯ ಸಂಚಾಲಕ ಪ್ರಸನ್ನಮೂರ್ತಿ.ಟಿ.ಆರ್.ಅವರು ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ರೈತರು ಪಾಲ್ಗೊಂಡು ಉಪಯೋಗ ಪಡೆಯಬೇಕೆಂದರು.

    ಕಾರ್ಯಕ್ರಮ ಆಯೋಜಕರಾದ ಬಿಜೆಪಿ ರೈತಮೋರ್ಚಾದ ವಿದ್ಯಾ.ವಿ.ಎಂ.ಮಾತನಾಡಿ, ರಾಸಾಯನಿಕ ಮುಕ್ತ ಆಹಾರ ಜನರಿಗೆ ದೊರೆಯಬೇಕು.ಆ ಮೂಲಕ ರೋಗ ರಹಿತ ಜೀವನ ಕ್ರಮ ನಮ್ಮದಾಗಬೇಕೆಂಬ ಆಶಯದೊಂದಿಗೆ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಸುಭಾಷ್ ಪಾಳೇಕಾರ್ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಆಂದೋಲನದ ರಾಜ್ಯ ಸಂಚಾಲಕ ಪ್ರಸನ್ನಮೂರ್ತಿ ಟಿ.ಆರ್.ಉಪಸ್ಥಿತರಿದ್ದರು.

    admin
    • Website

    Related Posts

    ಅಂಗವಿಕಲನಂತೆ ನಟಿಸುತ್ತೀಯಾ?: ಭಿಕ್ಷುಕನಿಗೆ ಹಲ್ಲೆ ನಡೆಸಿ, ಪೊಲೀಸರಿಗೆ ಒಪ್ಪಿಸಿದ ಗುಂಪು!

    November 11, 2026

    ತುಮಕೂರು ನಗರಕ್ಕೆ ಶೀಘ್ರದಲ್ಲೇ 50 ಹೊಸ ಇ–ಬಸ್‌ ಗಳ ಭಾಗ್ಯ; ಪ್ರಯಾಣಿಕರ ಪರದಾಟಕ್ಕೆ ಸಿಗಲಿದೆ ಮುಕ್ತಿ!

    November 11, 2026

    ಕೆಪಿಎಸ್ ಮ್ಯಾಗ್ನೆಟ್ ಯೋಜನೆ ನಾಡಿನ ಜನತೆಗೆ ಎಸಗಿದ ದ್ರೋಹ: AIDSO ತುಮಕೂರು

    November 8, 2026

    Comments are closed.

    Our Picks

    Gmail ಸ್ಟೋರೇಜ್ ಫುಲ್ ಆಗಿದೆಯೇ? ಉಚಿತ 15 GB ಜಾಗ ಖಾಲಿ ಮಾಡಲು ಇಲ್ಲಿವೆ 4 ಸರಳ ವಿಧಾನಗಳು!

    November 11, 2026

    ಅನ್ನಾ  ಜೊತೆಗಿನ ವೈವಾಹಿಕ ಸಂಬಂಧಕ್ಕೆ ಅಂತ್ಯ ಹಾಡಿದ ಪವನ್ ಕಲ್ಯಾಣ್ : 4ನೇ ಮದುವೆ ಆಗ್ತಾರಾ? ಜ್ಯೋತಿಷಿಗಳ ಭವಿಷ್ಯ ಏನು?

    November 11, 2026

    ರೈಲು ಬೋಗಿಗಳ ಆಯಸ್ಸು ಮುಗಿದ ಬಳಿಕ ಏನಾಗುತ್ತೆ? ರೈಲ್ವೆಯ ಈ ಮರುಬಳಕೆ ತಂತ್ರ ಗೊತ್ತೇ?

    November 10, 2026

    ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?

    November 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಅದ್ದೂರಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ: ಈ ಬಾರಿ ಬಾಗಿಲು ಮುಚ್ಚುವಾಗ ತಡವಾಗಿದ್ದೇಕೆ?

    November 11, 2026

    ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ಹಾಸನದ ವಿಶ್ವಪ್ರಸಿದ್ಧ ಹಾಸನಾಂಬಾ ದೇವಿಯ ಗರ್ಭಗುಡಿ ಬಾಗಿಲನ್ನು ಇಂದು (ನವೆಂಬರ್…

    ದೀಪಾವಳಿಯ ಆಕಾಶ ಬುಟ್ಟಿ ಬಿದ್ದು 7 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ: ರೈತನ ಬಾಳಲ್ಲಿ ಕತ್ತಲು!

    November 11, 2026

    ಪಡಿತರ ಚೀಟಿ ಮರು ಇ-ಕೆವೈಸಿ ಗಡುವು ವಿಸ್ತರಣೆ: ನವೆಂಬರ್ 30ರೊಳಗೆ ಪೂರ್ಣಗೊಳಿಸದಿದ್ದರೆ ರದ್ದಾಗಲಿವೆ ಸೌಲಭ್ಯಗಳು!

    November 11, 2026

    ಟಿವಿ ನೋಡುತ್ತಿರುವಾಗಲೇ ಮನೆಗೆ ನುಗ್ಗಿತು ಚಿರತೆ!: 6 ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆ ಸೆರೆ

    November 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.