ಚಾಮರಾಜನಗರ: ಇವಿಎಂ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿದ್ದ ಗ್ರಾಮಸ್ಥರು ಪೊಲೀಸರ ಭಯದಿಂದ ತಲೆಮರೆಸಿಕೊಂಡಿದ್ದಾರೆ. ಗ್ರಾಮಸ್ಥರು ಮನೆಗಳಿಗೆ ಬೀಗ ಹಾಕಿ ಹೋಗಿದ್ದರಿಂದ ಕಟ್ಟಿ ಹಾಕಿದ ಎರಡು ಎಮ್ಮೆಗಳು ಸ್ಥಳದಲ್ಲೇ ಸಾವಪ್ಪಿದ್ದು, ನೀರು ಹಾಗೂ ಮೇವು ಕೊಡುವವರು ಇಲ್ಲದೆ ಎಮ್ಮೆಗಳು ಧಾರುಣವಾಗಿ ಮೃತಪಟ್ಟಿವೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ದಿನದಿಂದ ಮೇವು, ನೀರಿಲ್ಲದೆ ಕಟ್ಟಿ ಹಾಕಿದ ಸ್ಥಳದಲ್ಲೇ ಮೂಕ ಪ್ರಾಣಿಗಳು ಪ್ರಾಣ ಬಿಟ್ಟಿವೆ. ಇರುವ ಬೆರಳೆಣಿಕೆಯಷ್ಟು ಜನರೂ ಕೂಡ ಊಟಕ್ಕೂ ಪರದಾಟ ನಡೆಸುತ್ತಿದ್ದಾರೆ. ಈಗಾಗಲೇ 200ಕ್ಕೂ ಹೆಚ್ಚು ಜನರ ವಿರುದ್ದ ವಿವಿಧ ಪ್ರಕರಣಗಳು ದಾಖಲಾಗಿವೆ. ಈ ವರೆಗೆ 33 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296