ತುಮಕೂರು: ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಮಹಿಳೆಯರ ಸುರಕ್ಷತೆ, ಶಿಕ್ಷಣ ಮತ್ತು ಮೊಬೈಲ್ ತಂತ್ರಜ್ಞಾನದಲ್ಲಿ ಸಾಧಿಸಿರುವ ಅಸಾಧಾರಣ ಸಾಧನೆಗಳನ್ನು ಇತ್ತೀಚಿನ ಬೆಂಗಳೂರಿನ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್(IIMB) ತನ್ನ ವರದಿಯಲ್ಲಿ ಪ್ರಮುಖವಾದ 3 ನವೀನ ವಿಧಾನಗಳ ಅಳವಡಿಕೆ ಕುರಿತು ದಾಖಲಿಸಿದೆ.
ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಅಳವಡಿಸಿಕೊಳ್ಳುತ್ತಿರುವ ನೂತನ ಉಪಕ್ರಮಗಳನ್ನು ದಾಖಲಿಸುವ ಮತ್ತು ಅವುಗಳ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ 2022ರಲ್ಲಿ ಪ್ರಾರಂಭಿಸಿರುವ ‘SAAR'(Smart Cities &Academic Research) ಸಂಶೋಧನಾ ಅಧ್ಯಯನದಲ್ಲಿ ಈ ಅಂಶಗಳನ್ನು ಗುರುತಿಸಲಾಗಿದೆ.
ಮಹಿಳಾ ಸುರಕ್ಷತೆ:
ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರಿನ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್(ICCC) ಮೂಲಕ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ 70 ಆಯಕಟ್ಟಿನ ಸ್ಥಳಗಳಲ್ಲಿ 400ಕ್ಕೂ ಹೆಚ್ಚು ಅಅಖಿಗಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ 24/7 ಮೇಲ್ವಿಚಾರಣೆ ಮತ್ತು ಘಟನೆಗಳಿಗೆ ತ್ವರಿತ ಪ್ರತಿಕ್ರಿಯೆ, ಸಾರ್ವಜನಿಕ ಪ್ರಕಟಣೆ ವ್ಯವಸ್ಥೆಗಳೊಂದಿಗೆ 41 ತುರ್ತು ಕರೆ ಬಾಕ್ಸ್ ಗಳ ಸ್ಥಾಪಿಸುವ ಮೂಲಕ ಮಹಿಳಾ ಸುರಕ್ಷತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಾಗಿದೆ. ಪರಿಣಾಮಕಾರಿ ಕಣ್ಗಾವಲು ವ್ಯವಸ್ಥೆಯಿಂದ ಮಹಿಳೆಯರ ವಿರುದ್ಧದ ಅಪರಾಧಗಳು, ನಿರ್ಧಿಷ್ಟವಾಗಿ ಚೈನ್–ಸ್ನ್ಯಾಚಿಂಗ್ ಮತ್ತು ಆಕ್ರಮಣಗಳ ಸಂಖ್ಯೆ ಕಡಿಮೆಯಾಗಿರುವ ಬಗ್ಗೆ ವರದಿಯಲ್ಲಿ ದಾಖಲಿಸಲಾಗಿದೆ. ವರದಿಯನ್ನು ವೆಬ್ ಲಿಂಕ್ https://www.iimb.ac.in/node/13673 ನಿಂದ ಡೌನ್ ಲೋಡ್ ಮಾಡಬಹುದು.
ಶೈಕ್ಷಣಿಕ ಸುಧಾರಣೆ :
ತುಮಕೂರಿನ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡ ಶಿಕ್ಷಣ ಉಪಕ್ರಮಗಳು ಕಲಿಕೆಯ ಪರಿಸರದಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಈ ಯೋಜನೆಯಡಿ 17 ಸರ್ಕಾರಿ ಶಾಲೆಗಳು ಮತ್ತು 2 ಪಿಯು ಕಾಲೇಜುಗಳಲ್ಲಿ ಅಳವಡಿಸಲಾಗಿರುವ ಸ್ಮಾರ್ಟ್ ಕ್ಲಾಸ್ ರೂಮ್, ಐಸಿಟಿ ಲ್ಯಾಬ್ ಮತ್ತು ಲ್ಯಾಂಗ್ವೇಜ್ ಲ್ಯಾಬ್ಗಳು ಸೇರಿದಂತೆ ಡಿಜಿಟಲ್ ಕಲಿಕಾ ಸಾಧನೆಗಳಿಂದ ಶೇ.22ರಷ್ಟು ದಾಖಲಾತಿಯನ್ನು ಹೆಚ್ಚಿಸುವುದರೊಂದಿಗೆ ಶೈಕ್ಷಣಿಕ ಫಲಿತಾಂಶಗಳ ಸುಧಾರಣೆಯಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಮತ್ತು ಇಂಟರ್ನೆಟ್ ಸೌಲಭ್ಯಗಳೊಂದಿಗೆ ಸಕ್ರಿಯಗೊಳಿಸಲಾದ 20 ಡೆಸ್ಕ್ಟಾಪ್ ವ್ಯವಸ್ಥೆಗಳಲ್ಲಿ ಸಾಮಾನ್ಯ ಕಲಿಕೆ ಮತ್ತು ಅಂಧರಿಗಾಗಿ ಉಚಿತವಾಗಿ ಲಭ್ಯವಿರುವ ಬ್ರೆöÊಲ್ ಲೈಬ್ರರಿಯೊಂದಿಗೆ ತುಮಕೂರು ಡಿಜಿಟಲ್ ಶಿಕ್ಷಣದ ಕೇಂದ್ರವಾಗಿ ಡಿಜಿಟಲ್ ಗ್ರಂಥಾಲಯವನ್ನು ಅನುಷ್ಠಾನಗೊಳಿಸಲಾಗಿದೆ. ಈ ಡಿಜಿಟಲ್ ಗ್ರಂಥಾಲಯದ ಮಾಹಿತಿಗಾಗಿ ಜಾಲತಾಣ https://www.iimb.ac.in/node/13672 ನಿಂದ ಡೌನ್ ಲೋಡ್ ಮಾಡುವ ಮೂಲಕ ವೀಕ್ಷಿಸಬಹುದು.
ನಾಗರಿಕ ಸೇವೆಗಳಿಗಾಗಿ ಮೊಬೈಲ್ ಅಪ್ಲಿಕೇಶನ್ ಗಳು:
ನಗರದ ಆಡಳಿತ ಮತ್ತು ನಾಗರಿಕರ ಅನುಕೂಲತೆಯನ್ನು ಹೆಚ್ಚಿಸಲು ತುಮಕೂರು ಸ್ಮಾರ್ಟ್ ಸಿಟಿ ಮೊಬೈಲ್ ಅಪ್ಲಿಕೇಶನ್(SCMA)ನಡಿ ಒಂದೇ ವೇದಿಕೆಯಲ್ಲಿ ತೆರಿಗೆ ಪಾವತಿ, ಪ್ರಮಾಣಪತ್ರ ನೀಡುವಿಕೆ ಮತ್ತು ಕುಂದು ಕೊರತೆ ಪರಿಹಾರ ಸೇರಿದಂತೆ ಸ್ವಯಂಚಾಲಿತ ಪ್ರಕ್ರಿಯೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು ಹಾಗೂ ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಈ ಮೊಬೈಲ್ ಅಪ್ಲಿಕೇಷನ್ಗಳು ನಗರ ವಾಸಿಗಳಿಗೆ ಸಮಾನ ಅನುಕೂಲವನ್ನು ಕಲ್ಪಿಸಿದೆ. ಮೊಬೈಲ್ ಅಪ್ಲಿಕೇಷನ್ ಗಳ ಮಾಹಿತಿಯನ್ನು ವೆಬ್ಲಿಂಕ್ https://www.iimb.ac.in/node/13691 ನಿಂದ ಡೌನ್ಲೋಡ್ ಮಾಡಬಹುದು.
ಒಟ್ಟಾರೆ, ಮಹಿಳಾ ಸುರಕ್ಷತೆ, ಶಿಕ್ಷಣ ಮತ್ತು ಮೊಬೈಲ್ ಅಪ್ಲಿಕೇಶನ್ಗಳಲ್ಲಿ ತುಮಕೂರಿನ ಸಾಧನೆಗಳು ಸುರಕ್ಷಿತವಾಗಿದ್ದು, ನಗರಾಭಿವೃದ್ಧಿಗೆ ಮಾನದಂಡವಾಗಿ ತುಮಕೂರು ತಂತ್ರಜ್ಞಾನ-ಚಾಲಿತ ಆಡಳಿತದ ಪರಿವರ್ತಕ ಸಾಮರ್ಥ್ಯಗಳು ನಗರದ ಬೆಳವಣಿಗೆಗೆ ಹಿಡಿದ ಕೈಗನ್ನಡಿಯಾಗಿದೆ.
ಸ್ಮಾರ್ಟ್ ಸಿಟಿಯ ಈ ಸಾಧನೆಗಳು ಕೇವಲ ಮೈಲಿಗಲ್ಲುಗಳಲ್ಲ. ನಗರದ ಪ್ರಗತಿ ಹಾದಿಯಲ್ಲಿ ವಿಶ್ವಾಸ ತೋರಿರುವ ತುಮಕೂರಿನ ನಾಗರಿಕರಿಗೆ ಸ್ಮಾರ್ಟ್ ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿಜ ಬಿ.ವಿ. ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯ ಹೆಚ್ಚಿನ ವಿವರಗಳಿಗಾಗಿ ತುಮಕೂರು Iಅಅಅ ಅಥವಾ 0816-2273400 / 155304 / 7304975519(WhatsApp)ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx