nammatumakuru

    Subscribe to Updates

    Get the latest creative news from FooBar about art, design and business.

    What's Hot

    ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಹೈಲೈಟ್ಸ್ ಇಲ್ಲಿದೆ

    June 21, 2025

    ತುಮಕೂರಿನಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

    June 21, 2025

    ಅಪಾಯಕಾರಿ ಮರಗಳು ಮತ್ತು ಕೊಂಬೆಗಳನ್ನು ತೆರವುಗೊಳಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ

    June 21, 2025
    Facebook Twitter Instagram
    ಟ್ರೆಂಡಿಂಗ್
    • ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಹೈಲೈಟ್ಸ್ ಇಲ್ಲಿದೆ
    • ತುಮಕೂರಿನಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
    • ಅಪಾಯಕಾರಿ ಮರಗಳು ಮತ್ತು ಕೊಂಬೆಗಳನ್ನು ತೆರವುಗೊಳಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ
    • ಯುವ ನಟನಿಗೆ 22 ಲಕ್ಷ ರೂಪಾಯಿ ವಂಚನೆ: ನಿರ್ದೇಶಕ ನಂದ ಕಿಶೋರ್‌ ವಿರುದ್ಧ ಗಂಭೀರ ಆರೋಪ
    • ಗರ್ಭಿಣಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ!
    • ದನ ಮೇಯಿಸಲು ಹೋಗಿದ್ದ ಮಹಿಳೆ ಹುಲಿ ದಾಳಿಗೆ ಬಲಿ
    • ನನ್ನಲ್ಲಿರುವ ಮಾಹಿತಿ ಬಹಿರಂಗ ಪಡಿಸಿದರೆ ಸರ್ಕಾರದ ಅಡಿಪಾಯ ಅಲುತ್ತದೆ: ಬಿ.ಆರ್. ಪಾಟೀಲ್ ಆಡಿಯೋ ವೈರಲ್
    • ನಂಬರ್ ಪ್ಲೇಟ್ ನ್ನೂ ಬಿಡದೇ ಕೆಎಸ್ ಆರ್ ಟಿಸಿ ಮೇಲೆ ಆವರಿಸಿದ ವಿಮಲ್!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅತ್ತ ಚಿರತೆ ದಾಳಿಗೆ ನಾಲ್ವರು ಗಂಭೀರ: ಇತ್ತ ಕೈಕೊಟ್ಟ ಆ್ಯಂಬುಲೆನ್ಸ್ ಸೇವೆ
    ಕೊರಟಗೆರೆ December 11, 2022

    ಅತ್ತ ಚಿರತೆ ದಾಳಿಗೆ ನಾಲ್ವರು ಗಂಭೀರ: ಇತ್ತ ಕೈಕೊಟ್ಟ ಆ್ಯಂಬುಲೆನ್ಸ್ ಸೇವೆ

    By adminDecember 11, 2022No Comments2 Mins Read
    koratagere

    ಕೊರಟಗೆರೆ : ಬಡಜನರ ತುರ್ತು ಸೇವೆಗಾಗಿ ಸರಕಾರ ನೀಡಿರುವ ತುರ್ತುವಾಹನದ ನಿರ್ವಹಣೆ ವಿಫಲವಾಗಿದೆ. ಆರೋಗ್ಯ ಸಚಿವರು ತಕ್ಷಣ ತುರ್ತುವಾಹನದ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ರಾಜ್ಯ ಸರಕಾರ ಗ್ರಾಮೀಣ ಪ್ರದೇಶದ ಬಡಜನರ ಆರೋಗ್ಯಕ್ಕೆ ತಕ್ಷಣ ರಕ್ಷಣೆ ನೀಡಬೇಕಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಆಗ್ರಹಿಸಿದ್ದಾರೆ.

    ಶನಿವಾರ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿರತೆ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಯೋವೃದ್ದ ರೈತ ಮತ್ತು ಇಬ್ಬರು ಮಕ್ಕಳ ಆರೋಗ್ಯ ವಿಚಾರಿಸಿದ ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ನಂತರ ಚರ್ಚಿಸಿ ಮಾತನಾಡಿದರು.


    Provided by

    ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 3 ತುರ್ತುವಾಹನ, ತೋವಿನಕೆರೆ ಮತ್ತು ಕೋಳಾಲದಲ್ಲಿ ತಲಾ ಒಂದು ತುರ್ತುವಾಹನದ ಸೌಲಭ್ಯವಿದೆ. ತುರ್ತುವಾಹನ ಲಭ್ಯವಿದ್ದರೂ ಸಹ ಅಧಿಕಾರಿಗಳ ನಿರ್ವಹಣೆ ವಿಫಲತೆಯಿಂದ ಬಡಜನರಿಗೆ ಸಮಸ್ಯೆ ಸೃಷ್ಟಿಯಾಗಿದೆ. ಆರೋಗ್ಯ ಸಚಿವರು ತಕ್ಷಣ ತುರ್ತುಸೇವೆಯ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯ ಮಾಡಿದರು.

    ಅಪಘಾತ ಆದಾಗ ತುರ್ತುವಾಹನ ಬರೋದಿಲ್ಲ. ಗರ್ಭೀಣಿಯರ ಹೆರಿಗೆ ವೇಳೆಯು ಸಹಾಯಕ್ಕೆ ತುರ್ತಾಗಿ ವಾಹನ ಸೀಗೋದಿಲ್ಲ. ಈಗ ಚಿರತೆ ದಾಳಿ ಆದಾಗಲೂ ತುರ್ತುವಾಹನ ಸೀಗದೇ ಖಾಸಗಿ ವಾಹನದಲ್ಲಿ ರೈತರು ಮತ್ತು ಮಕ್ಕಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಯ ಮೌನವು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪ ಮಾಡಿದರು.

    ಚಿರತೆ ದಾಳಿಯಿಂದ 4 ಜನರಿಗೆ ಗಾಯ..

    ಐ.ಕೆ.ಕಾಲೋನಿಯ ಬಳಿಯ ಬಸ್‌ ನಿಲ್ದಾಣದ ಸಮೀಪ ಶ್ರೀನಿವಾಸ್(60), ರಾಜು(47) ಮೇಲೆ ಚಿರತೆ ದಾಳಿ ನಡೆಸಿದೆ. ನಂತರ ದನದ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದ ಧನುಷ್(13), ಚೇತನ್(15) ಎಂಬುವರ ಮೇಲೆ ಚಿರತೆ ದಾಳಿ ನಡೆಸಿದೆ. ಕಳೆದ ವಾರದಿಂದ  ನಾಲ್ಕೈದು ಬಾರಿ ಚಿರತೆಯು ಕಾಣಿಸಿಕೊಂಡು ರೈತರನ್ನು ಭಯಗೊಳಿಸಿದೆ.

    ತಹಶೀಲ್ದಾರ್ ನಾಹೀದಾ ಆಸ್ಪತ್ರೆಗೆ ಭೇಟಿ ನೀಡಿ ಚಿರತೆ ದಾಳಿಯಿಂದ ಗಾಯಗೊಂಡಿದ್ದ  ನಾಲ್ಕು ಜನರ  ಆರೋಗ್ಯವನ್ನು ವಿಚಾರಿಸಿ  ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸುತ್ತೇನೆ ಎಂದರು..

    ಸ್ಥಳಕ್ಕೆ ಅರಣ್ಯ ಇಲಾಖೆಯ ಸುರೇಶ್, ಆರೋಗ್ಯ ಇಲಾಖೆಯ ಮುಖ್ಯಾಧಿಕಾರಿ ಪುಪ್ಪಲತಾ ಸೇರಿದಂತೆ ಇತರರು ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

    ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಇದು ಕಾರ್ಯಕರ್ತರ ಪಕ್ಷ: ನಿಖಿಲ್ ಕುಮಾರಸ್ವಾಮಿ

    June 19, 2025

    ಆಟೋ ವ್ಹೀಲಿಂಗ್ ಮಾಡುತ್ತಿದ್ದ ಚಾಲಕನ ಬಂಧನ: ಆಟೋ ವಶ

    June 18, 2025

    ಪರಿಸರ ದಿನಾಚರಣೆ: ಕನ್ನಿಕಾ ವಿದ್ಯಾಪೀಠದಿಂದ ಬೀಜದ ಉಂಡೆಗಳ ವಿತರಣೆಯಿಂದ ಸಾರ್ಥಕ ಆಚರಣೆ

    June 16, 2025
    Our Picks

    ಬೆಂಗಳೂರಿಗೆ ಆಗಮಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ

    June 20, 2025

    `ಥಗ್ ಲೈಫ್’ ಬಿಡುಗಡೆಗೆ ಬೆದರಿಕೆ ಹಾಕಿದವರ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ: ಸುಪ್ರೀಂ ಕೋರ್ಟ್ ತರಾಟೆ

    June 19, 2025

    ಸಾಲ ಮರುಪಾವತಿಸಲಿಲ್ಲ ಎಂದು ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ!

    June 17, 2025

    ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತರ ಪೈಕಿ 18 ಮಂದಿಯ ಗುರುತು ಪತ್ತೆಯಾಗಿಲ್ಲ!

    June 16, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಹೈಲೈಟ್ಸ್ ಇಲ್ಲಿದೆ

    June 21, 2025

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ವಿವಿಧ ಅಂಶಗಳ ಬಗ್ಗೆ ಚರ್ಚೆ…

    ತುಮಕೂರಿನಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

    June 21, 2025

    ಅಪಾಯಕಾರಿ ಮರಗಳು ಮತ್ತು ಕೊಂಬೆಗಳನ್ನು ತೆರವುಗೊಳಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ

    June 21, 2025

    ಯುವ ನಟನಿಗೆ 22 ಲಕ್ಷ ರೂಪಾಯಿ ವಂಚನೆ: ನಿರ್ದೇಶಕ ನಂದ ಕಿಶೋರ್‌ ವಿರುದ್ಧ ಗಂಭೀರ ಆರೋಪ

    June 20, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.