ಸರಗೂರು: ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಗಂಧ ಮರದ ಚೇಗಿನ ತುಂಡುಗಳನ್ನು ಅರಣ್ಯಧಿಕಾರಿಗಳು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಇಲ್ಲಿನ ಕಲ್ಲಹಳ್ಳ ಗ್ರಾಮದ ಬಳಿ ನಡೆಸಿದೆ.
ರಾಜು(40) ಹಾಗೂ ರಮೇಶ್(37) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಈ ಪ್ರಕರಣದ ಇನ್ನಿತರ ಮೂವರು ಆರೋಪಿಗಳಾದ ದಾಸ(28), ಕುಮಾರ(30) ಶಿವು(25 ವರ್ಷ ತಲೆ ಮರೆಸಿಕೊಂಡ ಆರೋಪಿಗಳಾಗಿದ್ದಾರೆ.
ಶ್ರೀಗಂಧದ ಮರದ ಚೇಗಿನ ತುಂಡುಗಳನ್ನು ಸಾಗಿಸಲಾಗುತ್ತಿರುವ ಬಗ್ಗೆ ಖಚಿತ ಮಾಹಿತಿಮೇರೆಗೆ ವಿಶೇಷ ಹುಲಿ ಸಂರಕ್ಷಣಾ ದಳ ಪ್ಲಟೂನ್-02 ಹ್ಯಾಂಡ್ ಪೋಸ್ಟ್ ಪ್ರಭಾರ ವಲಯ ಅರಣ್ಯಧಿಕಾರಿಗಳಾದ ನವೀನ್ ಕುಮಾರ್ ಅಶೋಕ ಚಿಕ್ಕಗಡೆ ರವರ ನೇತೃತ್ವದಲ್ಲಿ, ಕಲ್ಲಹಳ್ಳ ಗ್ರಾಮದ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಮರ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳೆಲ್ಲರೂ ಕಾಂತನ ಹಾಡಿ ಸರಗೂರು ತಾಲೂಕಿನವರಾಗಿರುತ್ತಾರೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳು ಹಾಗೂ ಜಪ್ತಿ ಮಾಲಿನ ಸಮೇತ ಮೊಳೆಯೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿಗಳ ರವರ ಕಚೇರಿಗೆ ಹಸ್ತಾಂತರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಕಾರ್ಯಾಚರಣೆಯಲ್ಲಿ ವಿಶೇಷ ಹುಲಿ ಸಂರಕ್ಷಣಾ ದಳ ಪ್ಲಟೂನ್ 02 ರ ಹ್ಯಾಂಡ್ ಪೋಸ್ಟ್ ಸಿಬ್ಬಂದಿಗಳಾದ ಶ್ರೀಕಾಂತ್, ಉಮೇಶ್, ಸೋಮೇಶ್, ಬಿ ಸಿ ಕಾಳ, ದಿನೇಶ್ ವಾಹನ ಚಾಲಕ ಹಾಗೂ ಮುಂತಾದ ಸಿಬ್ಬಂದಿ ಭಾಗವಹಿಸಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5