nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅಪ್ರಾಪ್ತ ಗರ್ಭಿಣಿಯರಿಗೆ ಅಕ್ರಮ ಸ್ಕ್ಯಾನಿಂಗ್; ಮೂವರು ವೈದ್ಯರ ಬಂಧನ, 12 ಎಫ್‌ ಐಆರ್ ದಾಖಲು

    April 29, 2026

    ತುಮಕೂರು: ರಸ್ತೆ ದಾಟುವಾಗ ಕಾರು ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಗಾರೆ ಕಾರ್ಮಿಕ ಸಾವು

    April 29, 2026

    ತುಮಕೂರು: ಸರ್ಕಾರಿ ಉಪಕರಣಾಗಾರದಲ್ಲಿ ಡಿಪ್ಲೊಮಾ ಪ್ರವೇಶ: ಅರ್ಜಿ ಸಲ್ಲಿಸಿ

    April 29, 2026
    Facebook Twitter Instagram
    ಟ್ರೆಂಡಿಂಗ್
    • ಅಪ್ರಾಪ್ತ ಗರ್ಭಿಣಿಯರಿಗೆ ಅಕ್ರಮ ಸ್ಕ್ಯಾನಿಂಗ್; ಮೂವರು ವೈದ್ಯರ ಬಂಧನ, 12 ಎಫ್‌ ಐಆರ್ ದಾಖಲು
    • ತುಮಕೂರು: ರಸ್ತೆ ದಾಟುವಾಗ ಕಾರು ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಗಾರೆ ಕಾರ್ಮಿಕ ಸಾವು
    • ತುಮಕೂರು: ಸರ್ಕಾರಿ ಉಪಕರಣಾಗಾರದಲ್ಲಿ ಡಿಪ್ಲೊಮಾ ಪ್ರವೇಶ: ಅರ್ಜಿ ಸಲ್ಲಿಸಿ
    • ಧಾರವಾಡ: ಪೊಲೀಸರ ಕಿರುಕುಳಕ್ಕೆ ಬೇಸತ್ತು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ; ಮೂವರು ಸಿಬ್ಬಂದಿ ಅಮಾನತು
    • ಕುಡಿಯುವ ನೀರು: ಪ್ರತಿ ಕ್ಷೇತ್ರಕ್ಕೆ 10 ಕೋಟಿ ರೂ. ನೀಡಲು ಆರ್. ಅಶೋಕ ಆಗ್ರಹ
    • ಅಭಿಮಾನಿಗಳಿಗೆ ಶಾಕ್ ನೀಡಿದ ರಾಕಿಂಗ್ ಸ್ಟಾರ್: ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿಕೆ!
    • ಕಡೂರು: ಕೌಟುಂಬಿಕ ಕಲಹಕ್ಕೆ ಪಿಎಸ್‌ ಐ ಪತ್ನಿ ಬಲಿ: ನೇಣಿಗೆ ಶರಣಾದ ಯುವತಿ
    • ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಸದ್ಬಳಕೆಗೆ ಶಾಸಕ ಎಸ್.ಆರ್.ಶ್ರೀನಿವಾಸ್ ಮನವಿ
    ಗುಬ್ಬಿ April 17, 2022

    ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಸದ್ಬಳಕೆಗೆ ಶಾಸಕ ಎಸ್.ಆರ್.ಶ್ರೀನಿವಾಸ್ ಮನವಿ

    By adminApril 17, 2022No Comments2 Mins Read
    shreenivas

    ಗುಬ್ಬಿ: ಸಮಸ್ಯೆಗಳ ಅರ್ಜಿ ನೀಡುವ ಮುಗ್ದ ಜನರಿಗೆ ನಿಮ್ಮ ಹಂತದಲ್ಲಿ ಇತ್ಯರ್ಥವಾಗದ ಬಗ್ಗೆ ಮಾಹಿತಿ ನೀಡಿ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಈ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾಡಬೇಕು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.

    ತಾಲ್ಲೂಕಿನ ಕಸಬ ಹೋಬಳಿ ಎಸ್.ಕೊಡಗೀಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಹು ನಿರೀಕ್ಷೆಯ ಈ ಕಾರ್ಯಕ್ರಮ ಯಶಸ್ಸು ಕಾಣಲು ಮೊದಲು ರೈತರ ಅರ್ಜಿಗೆ ಸ್ಥಳದಲ್ಲೇ ಪರಿಹಾರ ಕೊಡಬೇಕು. ನಿಗದಿತ 30 ದಿನದಲ್ಲಿ ಸಾರ್ವಜನಿಕ ಕೆಲಸ ಮಾಡಲೇಬೇಕು ಎಂದರು.


    Provided by
    Provided by

    ಹಿಂದೆ ಸರ್ಕಾರಿ ಕಾರ್ಯಕ್ರಮ ಯಶಸ್ವಿ ಸಾಧಿಸುವಲ್ಲಿ ವಿಫಲವಾದ ನಿದರ್ಶನವಿದೆ. ಇಡೀ ತಾಲ್ಲೂಕು ಆಡಳಿತವೇ ಹಳ್ಳಿಯಲ್ಲಿ ವಾಸ್ತವ್ಯ ಹೂಡುವ ವೇದಿಕೆಯಲ್ಲಿ ಸಮಸ್ಯೆಗೆ ಉತ್ತರ ನೀಡಿ ತಾಂತ್ರಿಕ ಸಮಸ್ಯೆ ಇದ್ದಲ್ಲಿ ಬಗೆಹರಿಸುವ ಕೆಲಸ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಕಾರ್ಯಕ್ರಮ ಸದ್ಬಳಕೆ ಮಾಡಿಕೊಂಡು ಜನರು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕರೆ ನೀಡಿದ ಅವರು ಈ ಹಿಂದೆ ತಾಳೆಕೊಪ್ಪ ಗ್ರಾಮದಲ್ಲಿ ನಡೆದ ಇದೇ ಕಾರ್ಯಕ್ರಮದಲ್ಲಿ ಸೂಕ್ತವಾದ ಉತ್ತರ ಸಿಗದ ಜನರು ನನ್ನ ಬಳಿ ಬಂದಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಉತ್ತರ ನೀಡಿ ಹಿಂಬರಹ ನೀಡುವ ಕೆಲಸ ಮಾಡಲು ಸೂಚಿಸಿದರು.

    ಎಲ್ಲಾ ಇಲಾಖಾಧಿಕಾರಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಜನರ ಸಮಸ್ಯೆಗೆ ಉತ್ತರ ನೀಡಲಾಗುವುದು. ಬಂದ ಅರ್ಜಿಗೆ 30 ದಿನದಲ್ಲಿ ಸೂಕ್ತ ಪರಿಹಾರ ನೀಡಲಾಗುವುದು. ಈ ಜೊತೆಗೆ ಸಾರ್ವಜನಿಕ ಸಮಸ್ಯೆಗೂ ಅರ್ಜಿ ನೀಡಬಹುದು. ಸ್ಮಶಾನ, ಸರ್ಕಾರಿ ಜಾಗ ಒತ್ತುವರಿ ಸೇರಿದಂತೆ ಇನ್ನಿತರ ಅರ್ಜಿ ನೀಡಬಹುದು ಎಂದರು.

    ನಂತರ ಇಲಾಖಾವಾರು ಸಮಸ್ಯೆ ಆಲಿಸಲು ಅನುವು ಮಾಡಲಾಗಿ ಬೆಸ್ಕಾಂ ಇಲಾಖೆಯ ಬಗ್ಗೆ ಅತ್ಯಧಿಕ ದೂರುಗಳು ಕೇಳಿಬಂದಿತ್ತು. ರೈತ ಸಂಘವು ಈ ಇಲಾಖೆ ವಿರುದ್ಧ ಸಾಕಷ್ಟು ದೂರು ನೀಡಿದರು. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಅವರು ಸಮಸ್ಯೆ ವಿವರಿಸುತ್ತಿದ್ದರು.

    ಉಪವಿಭಾಗಾಧಿಕಾರಿ ಅಜಯ್ ಮಾತಿನ ಭರದಲ್ಲಿ ಪ್ರಚೋದನೆ ಮಾಡಬೇಡಿ ಎಂದು ಹೇಳಿದ ತಕ್ಷಣವೇ ಪ್ರತಿಕ್ರಿಯೆ ನೀಡಿದ ಗೋವಿಂದರಾಜು 40 ವರ್ಷದಿಂದ ರೈತಪರ ಹೋರಾಟ ಮಾಡಿದ ನಮ್ಮನ್ನು ಪ್ರಚೋದನೆ ಮಾಡುವವರು ಎಂದಿದ್ದು ತಪ್ಪು ಎಂದು ಕಿಡಿಕಾರಿದರು.

    ಕೂಡಲೇ ಉಪವಿಭಾಗಾಧಿಕಾರಿ ಅಜಯ್ ನನ್ನ ಮಾತಿನಿಂದ ನೋವು ಆಗಿದ್ದಲ್ಲಿ ಕ್ಷಮೆಯಿರಲಿ ಎಂದು ಪರಿಸ್ಥಿತಿ ತಿಳಿಗೊಳಿಸಿದರು.

    ನಂತರ ತಾಪಂ ವತಿಯೊಂದು ಉದ್ಯೋಗ ಖಾತ್ರಿ ಯೋಜನೆಯ ದುಡಿಯೋಣ ಬಾ ಅಭಿಯಾನ ಬಗ್ಗೆ ಪ್ರಚುರ ಪಡಿಸಲಾಯಿತು. ವೃದ್ಯಾಪ್ಯ ವೇತನ, ಅಂಗವಿಕಲರ ವೇತನ ಇನ್ನಿತರ ಯೋಜನೆಯ ಒಟ್ಟು 32 ಮಂದಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲಾಯಿತು. ಆರೋಗ್ಯ ಇಲಾಖೆ ಕೋವಿಡ್ ಬೂಸ್ಟರ್ ಡೋಸ್ ಮತ್ತು ಮಧುಮೇಹ, ರಕ್ತದೊತ್ತಡ ಪರೀಕ್ಷೆಯ ಶಿಬಿರವನ್ನು ಆಯೋಜಿಸಿತ್ತು.

    ವರದಿ: ಮಂಜುನಾಥ್, ಗುಬ್ಬಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಗುಬ್ಬಿ: ಅಂಬಾರಪುರದಲ್ಲಿ ಅರಣ್ಯ ಇಲಾಖೆ ಬೋನಿಗೆ ಬಿದ್ದ ಹೆಣ್ಣು ಚಿರತೆ; ಗ್ರಾಮಸ್ಥರು ನಿಟ್ಟುಸಿರು

    April 27, 2026

    ಗುಬ್ಬಿ: “ಕೆಲಸವೇ ದೇವರು ಎಂಬ ಬಸವಣ್ಣನವರ ತತ್ವ ಪಾಲಿಸಿ”: ಗೃಹ ಸಚಿವ ಡಾ.ಜಿ.ಪರಮೇಶ್ವರ್

    April 24, 2026

    ಗುಬ್ಬಿ ಬಳಿ ಸರ್ಕಾರಿ ಬಸ್ ಪಲ್ಟಿ: ಅಪಾಯದಿಂದ ಪಾರಾದ ಪ್ರಯಾಣಿಕರು

    April 22, 2026

    Leave A Reply Cancel Reply

    Our Picks

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಅಪ್ರಾಪ್ತ ಗರ್ಭಿಣಿಯರಿಗೆ ಅಕ್ರಮ ಸ್ಕ್ಯಾನಿಂಗ್; ಮೂವರು ವೈದ್ಯರ ಬಂಧನ, 12 ಎಫ್‌ ಐಆರ್ ದಾಖಲು

    April 29, 2026

    ಮಂಡ್ಯ: ಭ್ರೂಣಲಿಂಗ ಪತ್ತೆ ಮತ್ತು ಅಪ್ರಾಪ್ತ ಗರ್ಭಿಣಿಯರಿಗೆ ಕಾನೂನುಬಾಹಿರವಾಗಿ ಸ್ಕ್ಯಾನಿಂಗ್ ಮಾಡುತ್ತಿದ್ದ ಗಂಭೀರ ಆರೋಪದ ಮೇಲೆ ಮಂಡ್ಯ ಜಿಲ್ಲೆಯ ಕೆ.ಆರ್.…

    ತುಮಕೂರು: ರಸ್ತೆ ದಾಟುವಾಗ ಕಾರು ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಗಾರೆ ಕಾರ್ಮಿಕ ಸಾವು

    April 29, 2026

    ತುಮಕೂರು: ಸರ್ಕಾರಿ ಉಪಕರಣಾಗಾರದಲ್ಲಿ ಡಿಪ್ಲೊಮಾ ಪ್ರವೇಶ: ಅರ್ಜಿ ಸಲ್ಲಿಸಿ

    April 29, 2026

    ಧಾರವಾಡ: ಪೊಲೀಸರ ಕಿರುಕುಳಕ್ಕೆ ಬೇಸತ್ತು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ; ಮೂವರು ಸಿಬ್ಬಂದಿ ಅಮಾನತು

    April 29, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.