ಗಾಜಿಯಾಬಾದ್: ಮಸೀದಿಯಲ್ಲಿ ನಮಾಜ್ ಮಾಡುವ ವೇಳೆ ವೃದ್ಧರೊಬ್ಬರು ಹೃದಯಾಘಾತಕ್ಕೆ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಬೆಳಕಿಗೆ ಬಂದಿದೆ. ಮುರಾದ್ ನಗರದ ಮಸೀದಿಯಲ್ಲಿ ನಮಾಜ್ ಮಾಡುವ ವೇಳೆ ಈ ಘಟನೆ ನಡೆದಿದೆ. ವೃದ್ಧರೊಬ್ಬರು ದೇವರಿಗೆ ಪ್ರಾರ್ಥನೆ ಸಲಿಸುತ್ತಿದ್ದಾಗ ಹೃದಯಾಘಾತವಾಗಿದೆ. ಅಲ್ಲೇ ವೃದ್ಧ ಸಾವನ್ನಪ್ಪಿದ್ದಾರೆ. ಇನ್ನು ಈ ಆಘಾತಕಾರಿ ದೃಶ್ಯ ಮಸೀದಿ ಒಳಗೆ ಅಳವಡಿಸಿದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ಹರಿದಾಡುತ್ತಿದೆ.
ವೃದ್ಧನಿಗೆ ಹೃದಯಾಘಾತವಾಗುವ ದೃಶ್ಯ ಕಂಡು ಮಸೀದಿಯಲ್ಲಿದ್ದವರು ಅವರ ಸಹಾಯಕ್ಕೆ ಬಂದರು. ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಇನ್ನು ದೃಶ್ಯದಲ್ಲಿ ಕಂಡುಬಂದತೆ ವೃದ್ಧ ಕುಳಿತು ನಮಾಜ್ ಮಾಡುವ ವೇಳೆ ಹಿಮ್ಮುಖವಾಗಿ ಬೀಳುತ್ತಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA