ಸರಗೂರು: ತಾಲೂಕಿನ ಪಟ್ಟಣದ ಅಖಿಲ ಭಾರತ ವೀರಶೈವ ಮಹಾಸಭಾ ಕಚೇರಿಯಲ್ಲಿ ಮಂಗಳವಾರದಂದು ನಡೆದ ಸಭೆಯಲ್ಲಿ ತಾಲೂಕು ಘಟಕದ ನೂತನ ನಿರ್ದೇಶಕರು, (ಅಜೀವ ಸದಸ್ಯತ್ವ ) ಸಿದ್ದಪ್ಪ ಬಾಡಿಗೆ, ಜಯಕುಮಾರ್ ಶಿವಪುರ, ಶಿವಕುಮಾರ್ ಚಾಮಲಾಪುರ, ಶಿವಾನಂದಮೂರ್ತಿ ದಡದಹಳ್ಳಿ, ಕೆ.ಎಂ.ಸತೀಶ್ ತೆರಣೆಮುಂಟಿರವರನ್ನು ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಮಂಡಳಿರವರು ಸನ್ಮಾನಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಅಧ್ಯಕ್ಷ ವೀರಭದ್ರಪ್ಪ ( ನಟರಾಜ್ ) ಮಾತನಾಡಿ, ಎಲ್ಲರೂ ಜೊತೆಗೂಡಿ ಸಮಾಜ ಕಟ್ಟುವ ಕಡೆ ಹೆಜ್ಜೆ ಇಡೋಣ, ಎಲ್ಲಾ ಗ್ರಾಮದ ಯಜಮಾನರು ಹಾಗೂ ಮುಖಂಡರು ಮತ್ತು ಯುವಕರನ್ನು ಜೊತೆಗೂಡಿಸಿಕೊಂಡು ಸಮಾಜ ಏಳಿಗೆಗಾಗಿ ದುಡಿಯೋಣ ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಹಾಜರಿದ್ದ ಕಾರ್ಯಾಧ್ಯಕ್ಷರಾದ ಸಿ.ಕೆ.ಗಿರೀಶ್, ಕೋಶ ಅಧ್ಯಕ್ಷ ಎಸ್.ಎನ್. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ, ಉಪಾಧ್ಯಕ್ಷ ಸಿದ್ದಪ್ಪ, ಬಸವ ಬಳಗ ಸಮಿತಿ ಅಧ್ಯಕ್ಷ ಹಂಚೀಪುರ ಗಣಪತಿ,ಕಾರ್ಯದರ್ಶಿ ಬಸವರಾಜು, ನಿರ್ದೇಶಕರುಗಳಾದ ಬಾಡಗ ಮಾದಪ್ಪ, ಮಂಜು, ಶ್ರೀಕಂಠಪ್ಪ, ಸುರೇಶ್, ವಿಕೇಶ್, ಸಿದ್ದಪ್ಪ, ಮಹದೇವಪ್ಪ, ಯುವ ಸಮಿತಿ ಅಧ್ಯಕ್ಷ ನಂದೀಶ್, ಸಮಾಜದ ಮುಖಂಡರು ಭಾಗವಹಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296