ಹರಿಹರಪುರ: ಗುಡಿಸಲೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಎರಡು ಕುಟುಂಬ ಬೀದಿಗೆ ಬಿದ್ದ ಘಟನೆ ಪಾವಗಡ ತಾಲ್ಲೂಕಿನ ಹರಿಹರಪುರ ಗ್ರಾಮದಲ್ಲಿ ನಡೆದಿದೆ.
ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕಿನ ಹರಿಹರಪುರ ಗ್ರಾಮದಲ್ಲಿ ಬುಧವಾರ ಸಂಜೆ 4 ಗಂಟೆಯ ಸುಮಾರಿಗೆ ಸಂಭವಿಸಿದೆ. ಘಟನೆಯಿಂದ ಎರಡು ಕುಟುಂಬಗಳು ತಮ್ಮ ವಾಸ ಸ್ಥಳವನ್ನು ಕಳೆದುಕೊಂಡಿವೆ.
ದೊಡ್ಡಣ್ಣ (S/O ಸಣ್ಣ ಹನುಮಂತಪ್ಪ) ಎಂಬವರ ಗುಡಿಸಲು ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಬಿದ್ದ ತಕ್ಷಣವೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಕ್ರಿಸ್ಮಸ್ ರಜಾ ದಿನವಾಗಿರುವ ಹಿನ್ನೆಲೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ಸ್ಪಂದಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಇದೀಗ ಇಡೀ ಗುಡಿಸಲು ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ.
ಗುಡಿಸಲಿನೊಂದಿಗೆ ತಮ್ಮ ಅಗತ್ಯ ಸಾಮಗ್ರಿಗಳು ಕೂಡ ಸುಟ್ಟು ಭಸ್ಮವಾಗಿದೆ. ಇದೀಗ ನೊಂದ ಕುಟುಂಬಗಳು ಆಶ್ರಯಕ್ಕಾಗಿ ಪರದಾಡುತ್ತಿದೆ. ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಒದಗಿಸಬೇಕು ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಮನವಿ ಮಾಡಿದ್ದಾರೆ.
ನೊಂದ ಕುಟುಂಬಕ್ಕೆ ಸರಿಯಾದ ಆಹಾರ, ತಾತ್ಕಾಲಿಕ ವಾಸಕ್ಕೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮ ದೊಡ್ಡಣ್ಣ (60 ವರ್ಷ), ಭೂತಕ್ಕ (52 ವರ್ಷ), ಹನುಮಂತರಾಯ (50 ವರ್ಷ), ಲಕ್ಷ್ಮಮ್ಮ (35 ವರ್ಷ), ತಿಪ್ಪಮ್ಮ (20 ವರ್ಷ), ಆನಂದ (15 ವರ್ಷ), ಸ್ವಾತಿ (14 ವರ್ಷ), ಪಂಕಜ (8 ವರ್ಷ), ಲೇಖನ (5 ವರ್ಷ) ಎಂಬವರು ಆಶ್ರಯ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ತಾಲೂಕು ಆಡಳಿತ ಹಾಗೂ ಸ್ಥಳೀಯ ಶಾಸಕರು ದುರಂತ ಸ್ಥಳಕ್ಕೆ ಭೇಟಿ ನೀಡಿ ತುರ್ತು ಪರಿಹಾರ ನೀಡಬೇಕು ಎಂದು ಕುಟುಂಬಸ್ಥರು, ಸ್ಥಳೀಯರು ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx