ತುಮಕೂರು: ಪಾವಗಡದಲ್ಲಿ ಪತ್ರಕರ್ತ ರಾಮಾಂಜೀನಪ್ಪ ಮೇಲೆ ಹಲ್ಲೆ ನಡೆಸಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ನಾರಾಯಣರೆಡ್ಡಿ, ರೂಪ, ಲಕ್ಷ್ಮೀದೇವಿ, ಆದಿಲಕ್ಷ್ಮಿ ಬಂಧಿತರಾಗಿದ್ದಾರೆ. ಆರೋಪಿತರನ್ನು ಪಾವಗಡ ಪಿ.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.
ಆರೋಪಿತರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ವಿ. ಮರಿಯಪ್ಪ, ಹಾಗೂ ಅಬ್ದುಲ್ ಖಾದರ್ ಮತ್ತು ಶೇಖರ್, ಡಿ.ವೈ.ಎಸ್.ಪಿ ಮಧುಗಿರಿ(ಪ್ರಭಾರ) ಇವರುಗಳ ಮಾರ್ಗದರ್ಶನದಲ್ಲಿ ಸುರೇಶ ಎಂ.ಆ ಪೊಲೀಸ್ ಇನ್ಸ್ಪೆಕ್ಟರ್ ರವರ ನೇತೃತ್ವದಲ್ಲಿ ಗುರುನಾಥ್ ಪಿ.ಎಸ್.ಐ-2, ಸಿಬ್ಬಂದಿರವರುಗಳನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ. ಐ.ಪಿ.ಎಸ್ ರವರು ಶ್ಲಾಘಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx