ತುಮಕೂರು: ಬೆವಿಕಂ ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಜನವರಿ 9 ರಿಂದ 22ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಧ್ಯಂತರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಜನವರಿ 9ರಂದು ಸತ್ಯಮಂಗಲ, ಕೈಗಾರಿಕಾ ಪ್ರದೇಶ; ಜ.10 ಹಾಗೂ 15ರಂದು ಕೈಗಾರಿಕಾ ಪ್ರದೇಶ; ಜ.11ರಂದು ರಂಗಾಪುರ, ಲಿಂಗಾಪುರ, ಬಾಲಾಜಿ ಲೇಔಟ್, ಅಣ್ಣೇನಹಳ್ಳಿ, ತಿಮ್ಮಲಾಪುರ, ಕೋರಾ ಶಾಖೆ, ಹೆಬ್ಬಾಕಾ, ಊರುಕೆರೆ ಕರೇಕಲ್ಲು, ಕೆಎಐಡಿಬಿ ಕೈಗಾರಿಕಾ ಪ್ರದೇಶ ಹಾಗೂ ಕೈಗಾರಿಕಾ ಪ್ರದೇಶ; ಜ.12ರಂದು ಮಲ್ಲೇನಹಳ್ಳಿ, ಅರಕೆರೆ, ಅಜ್ಜಪ್ಪನಹಳ್ಳಿ, ಸ್ವಾಂದೇನಹಳ್ಳಿ, ಅಂತರಸನಹಳ್ಳಿ, ಸತ್ಯಸಾಯಿಲೇಔಟ್, ಸತ್ಯಮಂಗಲ, ಕೈಗಾರಿಕಾ ಪ್ರದೇಶ, ವಡ್ಡರಹಳ್ಳಿ, ನವಿಲಹಳ್ಳಿ ಕ್ರಾಸ್, ಮಾರುಕಟ್ಟೆ, ಮಹಾಲಕ್ಷಿö್ಮ ಲೇಔಟ್, ಸತ್ಯಮಂಗಲ; ಜ.17ರಂದು ವಡ್ಡರಹಳ್ಳಿ, ನವಿಲಹಳ್ಳಿ ಕ್ರಾಸ್, ಸತ್ಯಮಂಗಲ, ಕೈಗಾರಿಕಾ ಪ್ರದೇಶ; ಜ.18ರಂದು ಕೈಗಾರಿಕಾ ಪ್ರದೇಶ; ಜ.19ರಂದು ಕೆಎಐಡಿಬಿ ಕೈಗಾರಿಕಾ ಪ್ರದೇಶ ಹಾಗೂ ಕೈಗಾರಿಕಾ ಪ್ರದೇಶ; ಜ.20ರಂದು ಕೈಗಾರಿಕಾ ಪ್ರದೇಶ, ಮಾರುಕಟ್ಟೆ, ಮಹಾಲಕ್ಷ್ಮೀ ಲೇಔಟ್, ಜ.21ರಂದು ಕೈಗಾರಿಕಾ ಪ್ರದೇಶ; ಜ.22ರಂದು ವಡ್ಡರಹಳ್ಳಿ, ನವಿಲಹಳ್ಳಿ ಕ್ರಾಸ್, ಸತ್ಯಮಂಗಲ, ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx