ಬೆಂಗಳೂರು: ಜೈನ ಧರ್ಮ ಪುರಾತನವಾದ ಧರ್ಮವಾಗಿದ್ದು, ಇದು ಕಡಿಮೆ ಜನಸಂಖ್ಯೆಯ ಧರ್ಮವಾಗಿದೆ, ಇದು ಸಂಸ್ಕೃತಿ , ಸಂಸ್ಕಾರ, ಶಾಂತಿ ಹಾಗೂ ಅಹಿಂಸಾ ಧರ್ಮವಾಗಿದ್ದು, ಇದರ ಮೌಲ್ಯಗಳು ಅಪಾರವಾಗಿವೆ, ಇದನ್ನು ಉಳಿಸಿ ,ಬೆಳೆಸಿ, ಮುಂದಿನ ಪೀಳಿಗೆಗೆ ಸಂರಕ್ಷಿಸುವ ಕಾರ್ಯವಾಗ ಬೇಕಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕರ್ನಾಟಕ ಜೈನ್ ಅಸೋಸಿಯೇಷನ್ ನ ನೂತನ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ತಿಳಿಸಿದರು.
ಅವರಿಂದು ಇಲ್ಲಿನ ಕರ್ನಾಟಕ ಜೈನ ಅಸೋಸಿಯೇಷನ್ ಭವನದಲ್ಲಿ 2024– 29 ರ ಅವಧಿಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಇದು ಚಾರಿತ್ರಿಕ ದಿನವಾಗಿದ್ದು ಚುನಾವಣಾಧಿಕಾರಿಗಳು ಯಾವುದೇ ಲೋಪವಾಗದೆ ಯಶಸ್ವಿಯಾಗಿ ಚುನಾವಣೆ ನಡೆಸಿದ್ದು ಸಂತಸ ತಂದಿದೆ ಎಂದರು.
ಕರ್ನಾಟಕ ಜೈನ್ ಅಸೋಸಿಯೇಷನ್ ಹಿಂದಿನ ಘಟನೆಗಳನ್ನು ಮೆಲುಕು ಹಾಕಿದ ಆವರು, 1918ರಲ್ಲಿ ಮೈಸೂರಿನಲ್ಲಿ ಆರಂಭವಾದ ಸಂಸ್ಥೆ ಹಲವು ಏಳು -ಬೀಳುಗಳ ನಡುವೆ ಹಂತ – ಹಂತವಾಗಿ ಯಶಸ್ಸು ಕಾಣುತ್ತಿದೆ, 1918 ರಲ್ಲಿ ಮಹಾವೀರ ವಿದ್ಯಾ ಸಂಘ ಮೈಸೂರಿನಲ್ಲಿ ಆರಂಭವಾಗಿ, 1920 ರಲ್ಲಿ ಜೈನ ಎಜುಕೇಶನ್ ಅಸೋಸಿಯೇಷನ್ ಆಯಿತು. ಈ ಮೈಸೂರು ಜೈನ್ ಅಸೋಸಿಯೇಷನ್ ನಲ್ಲಿ 1924– 25 ರಲ್ಲಿ ಒಂಬತ್ತು ಜಿಲ್ಲೆಗಳ ವ್ಯಾಪ್ತಿ ಹೊಂದಿತ್ತು, 1980ರಲ್ಲಿ ಕರ್ನಾಟಕ ಜೈನ ಅಸೋಸಿಯೇಷನ್ ಆಗಿ, ಬೈಲಾ ಪ್ರಕಾರ 2002 –03ರ ಉತ್ತರ ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳನ್ನು ಸೇರಿಸಿಕೊಂಡು ವಿಶಾಲ ಕರ್ನಾಟಕ ಜೈನ್ ಅಸೋಸಿಯೇಷನ್ ಆಗಿ , ಈಗ ಕರ್ನಾಟಕ ಜೈನ್ ಅಸೋಸಿಯೇಷನ್ ಆಗಿದೆ ಎಂದರು.
1918ರಲ್ಲಿ ಶ್ರವಣಬೆಳಗೊಳದ ಶ್ರೀ ಗಳು ಸಹಕಾರದಿಂದ ಜೈನ ಸಂಘ ಸ್ಥಾಪನೆಯಾಯಿತು. ಪರಮ ಸಂರಕ್ಷಕರಾಗಿರುವ ಡಿ.ವೀರೇಂದ್ರ ಹೆಗಡೆ ಹಾಗೂ ಧರ್ಮಸ್ಥಳ ಸುರೇಂದ್ರ ಕುಮಾರ್ ರವರ ಕೊಡುಗೆಯನ್ನು ಸ್ಮರಿಸಿದ ಅವರು, ಜೈನ ಪೀಠಗಳು ಹಾಗೂ ಜೈನ್ ಅಸೋಸಿಯೇಷನ್ ಒoದೇ ನಾಣ್ಯದ ಎರಡು ಮುಖಗಳoತಿವೆ ಎಂದರು.
ಈವರಿಗೆ ನಮ್ಮ ಐದು ಬಾರಿ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದು, ಇದೊಂದು ಸಣ್ಣ ಸಮಾಜ, ಯಾವುದಕ್ಕೂ ಒಗ್ಗಟು ಅಗತ್ಯ ,ಈ ಎಲ್ಲಾ ಕಾರ್ಯಗಳಿಗೆ ಎಲ್ಲರ ಸಹಕಾರ ಕೋರಿದ ಅವರು, ಎಲ್ಲರೂ ಸೇರಿ ಸಮಾಜ ಕಟ್ಟಿ ಬೆಳೆಸೋಣ ಎಂದರು.
ದೇಶದ ಪ್ರಮುಖ ಜೈನ ಕ್ಷೇತ್ರ ಜಾರ್ಖಂಡ್ ರಾಜ್ಯದ ಗಿರಿಧ್ ಜಿಲ್ಲೆಯ ಸಮ್ಮೆದ ಶಿಖರ್ಜಿಯಲ್ಲಿ ಕರ್ನಾಟಕ ಜೈನ ಭವನದ ನಿರ್ಮಿಸಲು ಉದ್ದೇಶಿಸಲಾಗಿದೆ, ಮೈಸೂರಿನಲ್ಲಿರುವ ನಿವೇಶನದಲ್ಲಿ ಹಾಸ್ಟೆಲ್ ನಿರ್ಮಿಸಲು ಹಾಗೂ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ ಇಂದ ಜೈನ ವಿದ್ಯಾರ್ಥಿ ನಿಲಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಸರ್ಕಾರದ ಜನಗಣತಿ ಹಾಗೂ ಶಾಲಾ ದಾಖಲೆಗಳಲ್ಲಿ “ಜೈನ “ಎಂದು ನಮೂದಿಸುವಂತೆ ಮನವಿ ಮಾಡಿದ ಅವರು, ಸರ್ಕಾರದಿಂದ ಬರುವ ಅನುದಾನದ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.ಖಾಲಿ ಇರುವ ಜಾಗಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಿ ಸಮಾಜ ಅಭಿವೃದ್ಧಿಗೆ ಶ್ರಮಿಸುವಂತೆ ಕರೆ ನೀಡಿದರು.
ನಿರ್ಗಮಿತ ಅಧ್ಯಕ್ಷ ಬಿ . ಪ್ರಸನ್ನಯ್ಯ ಮಾತನಾಡಿ, ನಮ್ಮ ತಾತ ಈ ಸಂಸ್ಥೆಯನ್ನ ಕಟ್ಟುವಲ್ಲಿ ಶ್ರಮಿಸಿದ್ದು, ನಾನು ಅಧ್ಯಕ್ಷನಾಗಿದ್ದು ಸಂತಸ ಹೊಂದಿದೆ ಜೈನ ಅಸೋಸಿಯೇಷನ್ ಇಂದ ಮಹಿಳಾ ವಸತಿ ನಿಲಯ ನಿರ್ಮಾಣಕ್ಕೆ ಸಹಕಾರ ನೀಡಿದ್ದು, ನೂತನ ಆಡಳಿತಕ್ಕೆ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪೀಠಾಧ್ಯಕ್ಷರಾದ ಸ್ವಸ್ತಿ ಶ್ರೀ ಅಭಿನವ ಚಾರುಕೀರ್ತಿ ಭಟ್ಟರಕ ಶ್ರೀ ಗಳು ಕಳುಹಿಸಿದ್ದ ಶ್ರೀ ಫಲವನ್ನು ನೂತನ ಅಧ್ಯಕ್ಷ ಜಿತೇಂದ್ರ ಕುಮಾರ್ ಗೆ ನೀಡುವುದರ ಮೂಲಕ ಅಧಿಕಾರ ಹಸ್ತಾoತರಿಸಿದರು .
ಚುನಾವಣಾ ಅಧಿಕಾರಿ ರಮೇಶ್ ಚೌಗಲೆ ಮಾತನಾಡಿ. ಸಮಾರಂಭದಲ್ಲಿ ಈ ಮಟ್ಟದಲ್ಲಿ ಜನ ಸೇರಿರುವುದು ಹೆಮ್ಮೆಯ ಸಂಗತಿ. ಸಂಸ್ಥೆ ಏಳಿಗೆಗೆ ಶ್ರಮಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಶ್ರೀ ಕ್ಷೇತ್ರ ಕನಕಗಿರಿಯ ಸ್ವಸ್ತಿ ಶ್ರೀ ಭುವನಕಿರ್ತಿ ಭಟ್ಟರಕ ಶ್ರೀಗಳು ಶುಭ ಸಂದೇಶವನ್ನು ಮೈಸೂರಿನ ಎಂ. ಆರ್ .ಸುನಿಲ್ ಕುಮಾರ್ ಹಾಗೂ ಹೊಂಬುಜ ಶ್ರೀ ಕ್ಷೇತ್ರದ ಡಾ. ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳವರ ಶುಭ ಸಂದೇಶವನ್ನು ಶಿವಮೊಗ್ಗದ ಯಶೋಧರ ಹೆಗಡೆ ವಾಚಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯ ಕಾರಿ ಸಮಿತಿಯ ಸದಸ್ಯರುಗಳು “ತೀರ್ಥಂಕರ ಭಗವಾನ್” ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಸಾಮೂಹಿಕವಾಗಿ ಪ್ರಮಾಣವಚನ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಜೈನ ಅಸೋಸಿಯೇಷನ್ ಮಾಜಿ ಪ್ರಧಾದಿಕಾರಿಗಳಾದ ಪಿ. ವೈ.ರಾಜೇಂದ್ರಕುಮಾರ್ ,ಇಸ್ರೋ ಅಜಿತ್ ಕುಮಾರ್, ತ್ಯಾಗಿ ಸೇವಾ ಸಮಿತಿಯ ಕೆ. ಮಂಜುನಾಥ್ ಪರಾಜಿತ ಅಭ್ಯರ್ಥಿಗಳು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ರಾಜ ಕೀರ್ತಿ ಕಲಾ ಗೌಡ ಭುಜ ಗೌಡ ಪಾಟೀಲ್, ಡಾ. ನೀರಜಾ ನಾಗೇಂದ್ರ ಕುಮಾರ್, ವಿ. ಪ್ರಶಾಂತ್ ,ಕೋಶಾಧಿಕಾರಿಯ ಮಹಾವೀರ ಜೈನ್, ಕಾರ್ಯದರ್ಶಿ ಆಶಾ ಪ್ರಭು, ಖಜಾಂಚಿ ಎ.ಸಿ.ಧರಣಿಂದ್ರಯ್ಯ, ಮಹಿಳಾ ಸದಸ್ಯರುಗಳಾದ ಕೋಮಲ ಬ್ರಹ್ಮದೇವ್, ಪದ್ಮಶ್ರೀ,
ಬೆಂಗಳೂರು ನಗರದ ನಿರ್ದೇಶಕರುಗಳಾದ ಬಿ .ಆರ್ . ಶೀತಲ್ ಕುಮಾರ್ , ಮಾಳ ಹರ್ಷೇಂದ್ರ ಜೈನ್,ವಿ .ಜೆ. ಬ್ರಹ್ಮಯ್ಯ , ಚಿತ್ತ. ಎಂ. ಜಿನೇಂದ್ರ , ಕೆ.ಬಿ .ಅಶೋಕ್ ಕುಮಾರ್ , ಪಿ.ಸಿ. ರಾಜೇಶ್, ಪಿ.ವಿ .ಜಿನೇಂದ್ರ ಕುಮಾರ್, ಜಿ .ಬಿ ಸ್ವರೂಪ್ ಜೈನ್ ಜೆ .ಪ್ರಕಾಶ್, ಪದ್ಮಿನಿ ಕುಮಾರ್, ಅನಿಲ್ ಕುಮಾರ್, ಭಾಗವಹಿಸಿದ್ದರು .
ರಾಜ್ಯದ ವಿವಿಧ ಭಾಗಗಳ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಬೆಳಗಾವಿ ಜಿಲ್ಲೆಯ ಬೆಳಗಾವಿಯ ಪುಷ್ಪಕ್ ಹನುಮಣ್ಣನವರ್, ಗೋಕಾಕ್ ಅಶೋಕ್ ಜೈನ್, ಹುಕ್ಕೇರಿಯ ರಾಜು ಕೇಮಲಾಪುರಿ ದೇಶಪತ್ತಪ್ಪ, ಚಿಕ್ಕೋಡಿಯ ಉತ್ತಮ ಅಣ್ಣ ಪಾಟೀಲ್, ರಾಯಭಾಗ ದ ಬಾಹುಬಲಿ ನಿಂಗಪ್ಪ ಪರಮಗೊಂಡ , ಅಥಣಿಯ ಕಲಾ ಭುಜಗೌಡ ( ಶೀತಲ್ ) ಪಾಟೀಲ್ ತುಮಕೂರಿನ ಎಸ್. ಜೆ .ನಾಗರಾಜ್ ,ವಿಜಯಪುರದ ಜಂಬು ಕುಮಾರ್ ಬಾಗೇವಾಡಿ ,ದಾವಣಗೆರೆಯ ಬಿ.ಎಸ್. ಅಜಿತ್ ಕುಮಾರ್ ಬೇತೂರು, ಶಿವಮೊಗ್ಗದ ಕೆ.ಯಶೋಧರ ಜೈನ್, ರಾಯಚೂರಿನ ಮಹಾವೀರ ರಾಸನೆ ,ಕಲಬುರ್ಗಿಯ ದೀಪಕ್ ಅಣ್ಣಾರಾವ್ ಪಂಡಿತ್, ಹಾವೇರಿ -ಗದಗ- ಉತ್ತರ ಕನ್ನಡದ ಎಸ್. ಎ .ವಜ್ರಕುಮಾರ್, ಧಾರವಾಡದ ರತ್ನಾಕರ್ ತಿರುಕಪ್ಪ ಅಣ್ಣಿಗೇರಿ ,ಚಿತ್ರದುರ್ಗದ ಸುಮತಿ ಕುಮಾರ್, ತೆರೆದಾಳದ ಸುಕುಮಾರ ತಾತ್ಯಾ ಪಾಟೀಲ್, ಚಿಕ್ಕಬಳ್ಳಾಪುರದ ಎಂ.ಎಸ್ .ದೇವರಾಜು, ವಿಜಯನಗರ– — ಕೊಪ್ಪಳ –ಬಳ್ಳಾರಿ ಯ ಸಂತೋಷ್ ಕುಮಾರ್, ಬೀದರ ನ ದಿಲೀಪ್ ಕುಮಾರ್ ಕಿವುಡೆ ,ಬಾಗಲಕೋಟೆಯ ಬಾಹುಬಲಿ ಭೀಮಪ್ಪ ಕಡಕೋಳ ,ಮಂಡ್ಯದ ಡಾ.ರತ್ನರಾಜು ,ಮೈಸೂರಿನ ಎಂ. ಆರ್. ಸುನಿಲ್ ಕುಮಾರ್ ಜೈನ್ ,ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಮೂಹಿಕವಾಗಿ ಅಧಿಕಾರದ ಪ್ರಮಾಣವಚನ ಸ್ವೀಕರಿಸಿದರು.
ಕರ್ನಾಟಕ ಜೈನ ಅಸೋಸಿಯೇಷನ್ ಉಪಾಧ್ಯಕ್ಷ ರಾಜ ಕೀರ್ತಿ ಸ್ವಾಗತಿಸಿದರು. ಪುರೋಹಿತ್ ದಿವ್ಯ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಜೈನ ಅಸೋಸಿಯೇಷನ್ ಕಾರ್ಯದರ್ಶಿ ಆಶಾ ಪ್ರಭು ವಂದಿಸಿದರು.
ವರದಿ: ಜೆ.ರಂಗನಾಥ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx