ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ವತಿಯಿಂದ ಜಿಲ್ಲೆಯ ವಿಕಲಚೇತನ ಫಲಾನುಭವಿಗಳಿಗೆ ಜನವರಿ 1 ರಿಂದ ರಿಯಾಯಿತಿ ದರದಲ್ಲಿ ಬಸ್‌ಪಾಸುಗಳನ್ನು ವಿತರಣೆ ಮಾಡುತ್ತಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.
ಹೊಸದಾಗಿ ಬಸ್ ಪಾಸ್ ಪಡೆಯುವ ಫಲಾನುಭವಿಗಳು ಕೆಎಸ್ ಆರ್ ಟಿಸಿ ವಿಭಾಗೀಯ ಕಚೇರಿ ಸಂಚಾರಿ ಶಾಖೆಯಲ್ಲಿ ಪಡೆಯಬಹುದಾಗಿದೆ ಹಾಗೂ 2024ನೇ ಸಾಲಿನಲ್ಲಿ ಪಡೆದಿರುವ ಪಾಸುಗಳ ನವೀಕರಣ ಕಾರ್ಯವು ಆಯಾ ತಾಲ್ಲೂಕು ಮಟ್ಟದ ಘಟಕಗಳಲ್ಲಿ ನವೀಕರಣ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಡಿಸೆಂಬರ್ 2024ರವರೆಗೆ ಮಾನ್ಯ ಮಾಡಿರುವ ಪಾಸುಗಳನ್ನು 2025ರ ಫೆಬ್ರವರಿ 28ರವರೆಗೆ ಮಾನ್ಯತೆಗೆ ಅವಕಾಶವನ್ನು ನೀಡಿದ್ದು, ನೂತನ ಪಾಸುಗಳಿಗೆ ಕಾಲಮಿತಿ ಇರುವುದಿಲ್ಲ.
ಅರ್ಹ ಫಲಾನುಭವಿಗಳು ವಿಕಲಚೇತನ ರಿಯಾಯಿತಿ ಬಸ್‌ಪಾಸುಗಳನ್ನು ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in/buspassservices ಮೂಲಕ ಅರ್ಜಿ ಸಲ್ಲಿಸಿ ಪಾಸುಗಳನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx