ರಾಂಚಿ: ಲೀವ್ ಇನ್ ರಿಲೇಶನ್ ಶಿಪ್ ನಲ್ಲಿದ್ದವಳನ್ನು ಪ್ರಿಯಕರನೇ ಹತ್ಯೆ ಮಾಡಿ ಮೃತದೇಹವನ್ನು 50 ತುಂಡುಗಳಾಗಿ ಕತ್ತರಿಸಿ ಅರಣ್ಯ ಪ್ರದೇಶದಲ್ಲಿ ಎಸೆದ ಘೋರ ಘಟನೆ ಜಾರ್ಖಂಡ್ ನ ಕುಂತಿ ಜಿಲ್ಲೆಯಲ್ಲಿ ನಡೆದಿದೆ.
ನರೇಶ್ ಭೇಂಗಾ ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ. ಜೋರ್ಡಾಗ್ ಗ್ರಾಮದ ಗಂಗಿ ಕುಮಾರಿ ಹತ್ಯೆಗೀಡಾದ ಬಲಿಪಶುವಾಗಿದ್ದಾಳೆ.
ನರೇಶ್ ಗೆ ಮದುವೆಯಾಗಿದ್ದರೂ ಕೂಡ ಆತ ಗಂಗಿ ಜೊತೆಗೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ. ಈ ನಡುವೆ ನರೇಶ್ ಗೆ ವಿವಾಹವಾಗಿರುವುದು ಗಂಗಿ ಕುಮಾರಿಗೆ ತಿಳಿದಿದ್ದು, ಹೀಗಾಗಿ ಇಬ್ಬರ ನಡುವೆ ಬಿರುಕು ಮೂಡಿತ್ತು.
ನನ್ನನ್ನು ನಿನ್ನ ಜೊತೆ ಕರೆದುಕೊಂಡು ಹೋಗು, ಇಲ್ಲವಾದರೆ, ನಾನು ನಿನಗೆ ನೀಡಿದ ಹಣವನ್ನು ವಾಪಸ್ ಕೊಡು ಎಂದು ಗಂಗಿ ಕೇಳಿದ್ದಾಳೆ, ಇದರಿಂದ ನರೇಶ್ ಹತ್ಯೆಗೆ ಸಂಚು ಹಾಕಿದ್ದು, ಆಕೆಯನ್ನು ಮನೆಯ ಸಮೀಪವಿರುವ ಅರಣ್ಯಕ್ಕೆ ಕರೆದೊಯ್ದು, ದುಪ್ಪಟ್ಟಾದಿಂದ ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ 50 ತುಂಡುಗಳಾಗಿ ಕತ್ತರಿಸಿ ಕಾಡು ಪ್ರಾಣಿಗಳಿಗೆ ಎಸೆದಿದ್ದಾನೆ.
ನಾಯಿಯೊಂದು ಮೃತದೇಹದ ಭಾಗವನ್ನು ಕಚ್ಚಿಕೊಂಡು ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ. ಸದ್ಯ ಮೃತದೇಹದ ಅವಶೇಷಗಳನ್ನು ಅರಣ್ಯ ಪ್ರದೇಶದಿಂದ ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q