nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕ್ರೈಂ ಸುದ್ದಿಗಳು: ಮನೆ ಬೀಗ ಮುರಿದು ಚಿನ್ನಾಭರಣ ಕಳವು, ಕೇಬಲ್ ವೈರ್–ಪೈಪ್ ಕಳವು

    October 19, 2026

    ಕಾರ್ಪೆಂಟರ್ ಶಿವು ಕೊಲೆ ಪ್ರಕರಣ: ಆರೋಪಿಯ ಸೆರೆ,  ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

    October 19, 2026

    ಸಹಕಾರಿ ಕ್ಷೇತ್ರಗಳು ಅಶಕ್ತರಿಗೆ ನೆರವಾಗಲಿ: ಕೇಂದ್ರ ಸಚಿವ ವಿ. ಸೋಮಣ್ಣ

    October 19, 2026
    Facebook Twitter Instagram
    ಟ್ರೆಂಡಿಂಗ್
    • ಕ್ರೈಂ ಸುದ್ದಿಗಳು: ಮನೆ ಬೀಗ ಮುರಿದು ಚಿನ್ನಾಭರಣ ಕಳವು, ಕೇಬಲ್ ವೈರ್–ಪೈಪ್ ಕಳವು
    • ಕಾರ್ಪೆಂಟರ್ ಶಿವು ಕೊಲೆ ಪ್ರಕರಣ: ಆರೋಪಿಯ ಸೆರೆ,  ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
    • ಸಹಕಾರಿ ಕ್ಷೇತ್ರಗಳು ಅಶಕ್ತರಿಗೆ ನೆರವಾಗಲಿ: ಕೇಂದ್ರ ಸಚಿವ ವಿ. ಸೋಮಣ್ಣ
    • ಮಾಹಿತಿ ಹಕ್ಕು ಕಾಯ್ದೆಯಡಿ ತಪ್ಪು ದಾಖಲೆ ನೀಡಿದ ಆರೋಪ: ರೈತ ಸಂಘಟನೆಗಳಿಂದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
    • ಜರ್ನೋತ್ಸವ–2026: “ಪತ್ರಿಕೋದ್ಯಮಕ್ಕೆ ಭಾಷೆ, ಬರವಣಿಗೆಯೇ ಜೀವಾಳ”
    • ಜಿಯೋ ಗ್ರಾಹಕರಿಗೆ ಶಾಕ್! ಉಚಿತ ಹಾಟ್‌ ಸ್ಟಾರ್ ಸೌಲಭ್ಯ ಬಂದ್‌; OTT ಪ್ರಿಯರಿಗೆ ಇನ್ನು ಯಾವುದು ಬೆಸ್ಟ್‌ ಪ್ಲಾನ್?
    • ರೇಷನ್ ಕಾರ್ಡ್‌ದಾರರಿಗೆ ಗುಡ್‌ ನ್ಯೂಸ್‌! ಇ–ಕೆವೈಸಿ ಗಡುವು ವಿಸ್ತರಣೆ, ಎಲ್ಲಿಯವರೆಗೆ?
    • ತೆರಿಗೆದಾರರೇ ಗಮನಿಸಿ! ಟ್ಯಾಕ್ಸ್ ಆಡಿಟ್ ಸಲ್ಲಿಕೆಗೆ ಅಕ್ಟೋಬರ್ 21 ಕೊನೆಯ ದಿನ; ತಪ್ಪಿದರೆ ಎಷ್ಟು ಲಕ್ಷ ದಂಡ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಲೋಕಸಮರ: ಗೆಲ್ಲುವ ಅಭ್ಯರ್ಥಿಗಳ ಹುಡುಕಾಟ ಶುರು ಮಾಡಿದ ಕಾಂಗ್ರೆಸ್‌ !
    ರಾಜ್ಯ ಸುದ್ದಿ March 18, 2024

    ಲೋಕಸಮರ: ಗೆಲ್ಲುವ ಅಭ್ಯರ್ಥಿಗಳ ಹುಡುಕಾಟ ಶುರು ಮಾಡಿದ ಕಾಂಗ್ರೆಸ್‌ !

    By adminMarch 18, 2024No Comments2 Mins Read
    congress

    ಲೋಕಸಭಾ ಚುನಾವಣೆಗೆ ಬಿಜೆಪಿ ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಚುನಾವಣಾ ಪ್ರಚಾರ ಕೂಡ ಆರಂಭಿಸಿದೆ. ಆದರೆ ಕಾಂಗ್ರೆಸ್ ಮಾತ್ರ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿ ಸುಮ್ಮನಾಗಿದೆ.

    ಕೈ ಪಾಳಯದಲ್ಲಿ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳೇ ಸಿಗದಾಗಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ರಾಜ್ಯದ ಮಂತ್ರಿಗಳು ಕೂಡ ಲೋಕ ಸಮರದಲ್ಲಿ ಸೆಣೆಸಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್’ಗೆ ಅಭ್ಯರ್ಥಿಗಳದ್ದೇ ಕಗ್ಗಂಟಾಗಿದೆ.

    ಹೌದು, ರಾಜ್ಯದ ಬಹುಪಾಲು ಸ್ಥಾನಗಳಿಗೆ ಸ್ಪರ್ಧಿಗಳನ್ನು ಅಂತಿಮಗೊಳಿಸುವಲ್ಲಿ ಕಾಂಗ್ರೆಸ್ ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಕೆಲವು ಮಂತ್ರಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮೊದಲೇ ಯೋಚಿಸಿತ್ತು. ಈ ಬಗ್ಗೆ ಸಾಕಷ್ಟು ಅಂತಿಮ ನಿರ್ಧಾರಗಳೂ ಆಗಿದ್ದವು. ಆದರೀಗ ಕೊನೇ ಕ್ಷಣಕ್ಕೆ ಕೆಲವು ಸಚಿವರು ಮತ್ತು ಶಾಸಕರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ. ಇದು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದ್ದು, ‘ಗೆಲ್ಲುವ’ ಅಭ್ಯರ್ಥಿಗಳ ಹುಡುಕಾಟ ಮುಂದುವರಿದಿದೆ.

    ಅಂದಹಾಗೆ ಏಳರಿಂದ ಎಂಟು ಸಚಿವರನ್ನು ಕಣಕ್ಕಿಳಿಸಲು ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಗೃಹ ಸಚಿವ ಜಿ ಪರಮೇಶ್ವರ ಇತ್ತೀಚೆಗೆ ಹೇಳಿದ್ದರು. ಆದರೀಗ ಸಚಿವರಾದಿಯಾಗಿ ಕೆಲವು ಶಾಸಕರೂ ಕೂಡ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, ರಾಜ್ಯದ ಹಲವು ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟವು ಕಷ್ಟವಾಗಿದ್ದು, ಕಾಂಗ್ರೆಸ್ ನಾಯಕತ್ವವು ಕೆಲವು ಸಚಿವರು ಮತ್ತು ಶಾಸಕರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮನವೊಲಿಸಲು ಪ್ರಯತ್ನಿಸುತ್ತಿದೆ.

    ಇನ್ನು ಮೂಲಗಳ ಪ್ರಕಾರ, ಚಾಮರಾಜನಗರದಿಂದ ಎಚ್‌ಸಿ ಮಹದೇವಪ್ಪ, ಕೋಲಾರದಿಂದ ಕೆ.ಎಚ್.ಮುನಿಯಪ್ಪ, ಬಳ್ಳಾರಿಯಿಂದ ಬಿ.ನಾಗೇಂದ್ರ, ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ, ಬೀದರ್‌ನಿಂದ ಈಶ್ವರ್ ಖಂಡ್ರೆ, ಬೆಂಗಳೂರು ಉತ್ತರದಿಂದ ಕೃಷ್ಣ ಬೈರೇಗೌಡ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಉತ್ಸುಕವಾಗಿದೆ ಎನ್ನಲಾಗಿದೆ. ಆದರೆ ಕೆಲವು ನಾಯಕರು ತಮ್ಮ ಕುಟುಂಬದವರನ್ನು ಸ್ಪರ್ಧೆಗಿಳಿಸಲು ಉತ್ಸುಕತೆ ತೋರುತ್ತಿರುವುದು ಕಾಂಗ್ರೆಸ್ ಗೆ ದೊಡ್ಡ ತಲೆನೋವಾಗಿದೆಯಂತೆ.

    ಇಷ್ಟೇ ಅಲ್ಲದೆ 2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಮುನಿಯಪ್ಪ ಸೇರಿದಂತೆ ಹಲವು ಪ್ರಮುಖ ನಾಯಕರು ಸೋಲು ಕಂಡಿದ್ದರಿಂದ ಅನೇಕ ಹಿರಿಯ ನಾಯಕರು ಸ್ಪರ್ಧೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ರೇಷನ್ ಕಾರ್ಡ್‌ದಾರರಿಗೆ ಗುಡ್‌ ನ್ಯೂಸ್‌! ಇ–ಕೆವೈಸಿ ಗಡುವು ವಿಸ್ತರಣೆ, ಎಲ್ಲಿಯವರೆಗೆ?

    October 19, 2026

    ಸ್ಟಿಂಗ್ ಆಪರೇಷನ್: ಸಿದ್ದರಾಮಯ್ಯ ಪರ ಯಡಿಯೂರಪ್ಪ ಬ್ಯಾಟಿಂಗ್, ಡಿಕೆಶಿ ಪದಚ್ಯುತಿ ಬಗ್ಗೆ ವಿಜಯೇಂದ್ರ ಹೇಳಿದ್ದೇನು?

    October 19, 2026

    ಆಯುರ್ವೇದ, ಹೋಮಿಯೋಪತಿ ಮೊದಲನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ: ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿ ಬಿಡುಗಡೆ

    October 19, 2026

    Comments are closed.

    Our Picks

    ಜಿಯೋ ಗ್ರಾಹಕರಿಗೆ ಶಾಕ್! ಉಚಿತ ಹಾಟ್‌ ಸ್ಟಾರ್ ಸೌಲಭ್ಯ ಬಂದ್‌; OTT ಪ್ರಿಯರಿಗೆ ಇನ್ನು ಯಾವುದು ಬೆಸ್ಟ್‌ ಪ್ಲಾನ್?

    October 19, 2026

    ತೆರಿಗೆದಾರರೇ ಗಮನಿಸಿ! ಟ್ಯಾಕ್ಸ್ ಆಡಿಟ್ ಸಲ್ಲಿಕೆಗೆ ಅಕ್ಟೋಬರ್ 21 ಕೊನೆಯ ದಿನ; ತಪ್ಪಿದರೆ ಎಷ್ಟು ಲಕ್ಷ ದಂಡ?

    October 19, 2026

    ಪಿಎಫ್ ಪಾವತಿ ಗಡುವು ವಿಸ್ತರಣೆ: ಉದ್ಯೋಗದಾತರು ಈ ದಿನಾಂಕವನ್ನು ಮರೆಯಬೇಡಿ!

    October 19, 2026

    ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ ನಲ್ಲೇ ನಕಲಿ ವಾಟ್ಸಾಪ್; 5 ಲಕ್ಷಕ್ಕೂ ಹೆಚ್ಚು ಡೌನ್‌ ಲೋಡ್, ನಿಮ್ಮ ಫೋನ್‌ ಗೂ ಅಪಾಯವೇ?

    October 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಕ್ರೈಂ ಸುದ್ದಿಗಳು: ಮನೆ ಬೀಗ ಮುರಿದು ಚಿನ್ನಾಭರಣ ಕಳವು, ಕೇಬಲ್ ವೈರ್–ಪೈಪ್ ಕಳವು

    October 19, 2026

    ಮನೆ ಬೀಗ ಮುರಿದು ಚಿನ್ನಾಭರಣ ಕಳವು ಮಿಡಿಗೇಶಿ: ಸಮೀಪದ ಎಮ್ಮೆತಿಮ್ಮನಹಳ್ಳಿ ಗ್ರಾಮದ ಬೀರಣ್ಣ ತನ್ನ ಹೆಂಡತಿಗೆ ಅನಾರೋಗ್ಯ ನಿಮಿತ್ತ ಹಿಂದೂಪುರ…

    ಕಾರ್ಪೆಂಟರ್ ಶಿವು ಕೊಲೆ ಪ್ರಕರಣ: ಆರೋಪಿಯ ಸೆರೆ,  ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

    October 19, 2026

    ಸಹಕಾರಿ ಕ್ಷೇತ್ರಗಳು ಅಶಕ್ತರಿಗೆ ನೆರವಾಗಲಿ: ಕೇಂದ್ರ ಸಚಿವ ವಿ. ಸೋಮಣ್ಣ

    October 19, 2026

    ಮಾಹಿತಿ ಹಕ್ಕು ಕಾಯ್ದೆಯಡಿ ತಪ್ಪು ದಾಖಲೆ ನೀಡಿದ ಆರೋಪ: ರೈತ ಸಂಘಟನೆಗಳಿಂದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

    October 19, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.