nammatumakuru

    Subscribe to Updates

    Get the latest creative news from FooBar about art, design and business.

    What's Hot

    ನಾಲ್ಕು ದಶಕಗಳಿಂದ ರಸ್ತೆ ಅಭಿವೃದ್ಧಿ ಕಾಣದ ಬೆಟ್ಟಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಂಗನಾಥ್ ಚಾಲನೆ

    May 11, 2026

    ಕಳ್ಳಂಬೆಳ್ಳ ಪೊಲೀಸರಿಂದ ರಕ್ಷಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ

    May 11, 2026

    ಹರ್ತಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಸಚಿವ ಡಾ. ಜಿ. ಪರಮೇಶ್ವರ್ ಶಂಕುಸ್ಥಾಪನೆ

    May 11, 2026
    Facebook Twitter Instagram
    ಟ್ರೆಂಡಿಂಗ್
    • ನಾಲ್ಕು ದಶಕಗಳಿಂದ ರಸ್ತೆ ಅಭಿವೃದ್ಧಿ ಕಾಣದ ಬೆಟ್ಟಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಂಗನಾಥ್ ಚಾಲನೆ
    • ಕಳ್ಳಂಬೆಳ್ಳ ಪೊಲೀಸರಿಂದ ರಕ್ಷಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ
    • ಹರ್ತಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಸಚಿವ ಡಾ. ಜಿ. ಪರಮೇಶ್ವರ್ ಶಂಕುಸ್ಥಾಪನೆ
    • ಸಚಿವ ಡಿ.ಸುಧಾಕರ್ ಪಾರ್ಥಿವ ಶರೀರಕ್ಕೆ ನಮನ: ಭಾವುಕರಾದ ಕೆ.ಎನ್.ರಾಜಣ್ಣ, ಕಂಬನಿ ಮಿಡಿದ ಜಿ.ಪರಮೇಶ್ವರ್
    • ಸಚಿವ ಡಿ. ಸುಧಾಕರ್ ನಿಧನ: ಚಿತ್ರದುರ್ಗ ಜಿಲ್ಲೆಗೆ ನಾಳೆ ರಜೆ, ರಾಜ್ಯಾದ್ಯಂತ 3 ದಿನ ಶೋಕಾಚರಣೆ ಘೋಷಣೆ
    • ಭದ್ರಾವತಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಕೊಲೆ; ಪತ್ನಿ ಹಾಗೂ ಪ್ರಿಯಕರನಿಗೆ ಮರಣದಂಡನೆ ಶಿಕ್ಷೆ
    • 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಚಿವ ಡಿ.ಸುಧಾಕರ್ ಅವರ ರಾಜಕೀಯ ಹಾದಿ ಹೇಗಿತ್ತು?
    • ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರ್ತಾರೋ ಗೊತ್ತಿಲ್ಲ: ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ ಪಟ್ಟಣ ಪಂಚಾಯಿತಿಯ ಪಿಠೋಪಕರಣ ಜಪ್ತಿಗೆ ಮಧುಗಿರಿ ನ್ಯಾಯಾಲಯ ಆದೇಶ
    ಕೊರಟಗೆರೆ October 21, 2022

    ಕೊರಟಗೆರೆ ಪಟ್ಟಣ ಪಂಚಾಯಿತಿಯ ಪಿಠೋಪಕರಣ ಜಪ್ತಿಗೆ ಮಧುಗಿರಿ ನ್ಯಾಯಾಲಯ ಆದೇಶ

    By adminOctober 21, 2022No Comments2 Mins Read
    koratagere

    ಕೊರಟಗೆರೆ : ಹೇಮಾವತಿ ಕುಡಿಯುವ ನೀರಿನ ಶುದ್ದಿಕರಣ ಘಟಕ ನಿರ್ಮಾಣಕ್ಕಾಗಿ 2009-10 ರಲ್ಲಿ ಜೆಟ್ಟಿಅಗ್ರಹಾರ ರೈತರಿಂದ ಭೂಸ್ವಾಧೀನ ಪಡಿಸಿಕೊಂಡ ಜಮೀನಿನ ಭೂಪರಿಹಾರವನ್ನು 2018 ರಲ್ಲಿ ನ್ಯಾಯಾಲಯದ ಆದೇಶದ ನಂತರವು ನೀಡದಿರುವ ಪರಿಣಾಮ ಪಟ್ಟಣ ಪಂಚಾಯತ್ ನ ಪಿಠೋಪಕರಣ ವಶ ಪಡಿಸಿಕೊಳ್ಳುವಂತೆ ಮಧುಗಿರಿ ಅಧಿಕ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಮಾಡಿರುವ ಘಟನೆ ಗುರುವಾರ ನಡೆದಿದೆ.

    ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಮದ ರೈತರಾದ ಬಸವರಾಜು ಮತ್ತು ನಂದೀಶ್ ಎಂಬ ರೈತರ ಜಮೀನನ್ನು 2009 ರಲ್ಲೇ ಹೇಮಾವತಿ ಕುಡಿಯುವ ನೀರಿನ ಶುದ್ದಿಕರಣ ಘಟಕ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. 2018ರಲ್ಲೇ ಅಗ್ರಹಾರ ರೈತರಿಗೆ ತಕ್ಷಣ ಭೂಪರಿಹಾರ ನೀಡುವಂತೆ ಕೊರಟಗೆರೆ ಪ.ಪಂ.ಗೆ ಮಧುಗಿರಿ ಸಿವಿಲ್ ನ್ಯಾಯಾಲಯವು ಆದೇಶ ಮಾಡಿದೆ.


    Provided by
    Provided by

    ಈ ಸಂಬಂಧ ಜೆಟ್ಟಿಅಗ್ರಹಾರ ಗ್ರಾಮದ ರೈತ ಬಸವರಾಜು ಮಾತನಾಡಿ, ಹೇಮಾವತಿ ನೀರಿನ ಘಟಕ ನಿರ್ಮಾಣಕ್ಕಾಗಿ 2009ರಲ್ಲಿ ನಮ್ಮ ಜಮೀನು ಸ್ವಾಧೀನ ಮಾಡಿದ್ದಾರೆ. 2018ರಲ್ಲಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ಮಾಡಿದೆ. ನಮಗೇ ಇನ್ನೂ 48 ಲಕ್ಷಕ್ಕೂ ಅಧಿಕ ಭೂಪರಿಹಾರ ಬರಬೇಕಿದೆ. ನ್ಯಾಯಾಲಯದ ಆದೇಶವನ್ನು ಪ.ಪಂ.ಯು ಪಾಲನೆ ಮಾಡದಿರುವ ಹಿನ್ನಲೆ ಇಂದು ಪಿಠೋಪಕರಣ ಜಪ್ತಿಗೆ ಆದೇಶ ಮಾಡಲಾಗಿದೆ ಎಂದು ಜೆಟ್ಟಿಅಗ್ರಹಾರ ಗ್ರಾಮದ ರೈತ ಬಸವರಾಜು ತಿಳಿಸಿದ್ದಾರೆ.

    ಕೊರಟಗೆರೆ ಸಿವಿಲ್ ನ್ಯಾಯಾಲಯದ ಅಮೀನ್‌ರಾದ ಮಂಜುನಾಥ ಮಾತನಾಡಿ, ಜೆಟ್ಟಿಅಗ್ರಹಾರದ ಇಬ್ಬರು ರೈತರಿಗೆ 48 ಲಕ್ಷಕ್ಕೂ ಅಧಿಕ ಭೂಪರಿಹಾರ ನೀಡಲು ನ್ಯಾಯಾಲಯ 2018ರಲ್ಲೇ ಆದೇಶ ಮಾಡಿದೆ. ರೈತರಿಗೆ ಜಮೀನು ಸ್ವಾಧೀನದ ಪರಿಹಾರ ನೀಡುವಲ್ಲಿ ಕೊರಟಗೆರೆ ಪಟ್ಟಣ ಪಂಚಾಯಿತಿ ವಿಳಂಭ ಮಾಡಿದೆ. ಇಂದು ಮಧುಗಿರಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಕೊರಟಗೆರೆ ಪ.ಪಂ.ಯ ಪಿಠೋಪಕರಣವನ್ನು ಜಪ್ತಿ ಮಾಡಿದ್ದೇವೆ ಎಂದು ಕೊರಟಗೆರೆ ಸಿವಿಲ್ ಕೋರ್ಟ್ ಅಮೀನ್ ರಾದ ಮಂಜುನಾಥ ತಿಳಿಸಿದ್ದಾರೆ.

    ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ ನ್ಯಾಯಾಲಯದ ಆದೇಶವನ್ನು ಕಾರ್ಯಗತ ಮಾಡುವುದು ಪ.ಪಂ. ಅಧಿಕಾರಿಗಳ ಪ್ರಮುಖ ಜವಾಬ್ದಾರಿ. ಪಟ್ಟಣ ಪಂಚಾಯಿತಿಯು ಕೋರ್ಟ್ ಆದೇಶ ನಿರ್ಲಕ್ಷ ಮಾಡಿರುವ ಪರಿಣಾಮ ಈಗ ಸಮಸ್ಯೆ ಆಗಿದೆ. ನ್ಯಾಯಾಲಯ ಪಿಠೋಪಕರಣ ವಶಕ್ಕೆ ಪಡೆದಿರುವ ಬಗ್ಗೆ ನನಗೇ ಮಾಹಿತಿ ಇಲ್ಲ. ಸರಕಾರದ ಅನುಧಾನ ಮತ್ತು ಪಟ್ಟಣ ಪಂಚಾಯ್ತಿ ಯಿಂದ ತಕ್ಷಣ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುತ್ತೇನೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

    ಮಧುಗಿರಿಯ ಘನ ಸಿವಿಲ್ ನ್ಯಾಯಾಲಯವು 2018ರಲ್ಲೇ ಆದೇಶ ಮಾಡಿದೆ. ಕೊರಟಗೆರೆ ಪಪಂ ಮುಖ್ಯಾಧಿಕಾರಿಗೆ ಈ ಹಿಂದೆಯೇ ವಾರೆಂಟ್ ಜಾರಿಯಾಗಿದೆ. ನ್ಯಾಯಾಲಯದ ಆದೇಶವನ್ನು ನಿರ್ಲಕ್ಷ ಮಾಡಿರುವ ಪರಿಣಾಮ ಕೊರಟಗೆರೆ ಪ.ಪಂ.ಯ ಮುಖ್ಯಾಧಿಕಾರಿ, ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಕಚೇರಿಯ ಪಿಠೋಪಕರಣ ಜಪ್ತಿ ಮಾಡಿ ಮಧುಗಿರಿ ಸಿವಿಲ್ ನ್ಯಾಯಾಲಯವು ಆದೇಶ ಮಾಡಿದೆ.

    ಕೊರಟಗೆರೆ ಸಿವಿಲ್ ನ್ಯಾಯಾಲಯದ ಅಮೀನರಾದ ಮಂಜುನಾಥ ಮತ್ತು ಪರಮೇಶ್ವರಯ್ಯ ನೇತೃತ್ವದಲ್ಲಿ ಪಪಂ ಕಚೇರಿಯ ಪಿಠೋಪಕರಣವನ್ನು ವಶಕ್ಕೆ ಪಡೆಯಲಾಗಿದೆ. ಇದೇ ಸಂದರ್ಭದಲ್ಲಿ ಪಪಂಯ ಮುಖ್ಯಾಧಿಕಾರಿ ಭಾಗ್ಯ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂಧಿವರ್ಗ ಉಪಸ್ಥಿತರಿದ್ದರು.

    ವರದಿ:  ಮಂಜುಸ್ವಾಮಿ ಎಂ.ಎನ್., ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಕೊರಟಗೆರೆ: ವಡೇರಹಳ್ಳಿ ಬಳಿ ಬಫರ್ ಡ್ಯಾಂ ನಿರ್ಮಾಣಕ್ಕೆ ರೈತರ ವಿರೋಧ

    May 9, 2026

    ಪಟ್ಟಣ ಪಂಚಾಯತಿಯಿಂದ ಪುರಸಭೆಗೆ ಮೇಲ್ದರ್ಜೆ: ನಾಮಫಲಕ ಅನಾವರಣ, ಸೋಲಾರ್ ಪ್ಲಾಂಟ್ ಉದ್ಘಾಟನೆ

    May 1, 2026

    ಶಿಕ್ಷಣ ಜೀವನವನ್ನು ರೂಪಿಸುವ ಶಕ್ತಿ: ಶಿವರುದ್ರ ಮಹಾ ಸ್ವಾಮೀಜಿ

    April 26, 2026

    Comments are closed.

    Our Picks

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕುಣಿಗಲ್

    ನಾಲ್ಕು ದಶಕಗಳಿಂದ ರಸ್ತೆ ಅಭಿವೃದ್ಧಿ ಕಾಣದ ಬೆಟ್ಟಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಂಗನಾಥ್ ಚಾಲನೆ

    May 11, 2026

    ಕುಣಿಗಲ್: ಸುಮಾರು ನಾಲ್ಕು ದಶಕಗಳಿಂದ ರಸ್ತೆ ಅಭಿವೃದ್ಧಿ ಕಾಣದ ಕುಣಿಗಲ್ ತಾಲೂಕಿನ ಗಡಿ ಭಾಗ ಗ್ರಾಮಗಳ ಸಮಗ್ರ ರಸ್ತೆ ಅಭಿವೃದ್ಧಿಗೆ…

    ಕಳ್ಳಂಬೆಳ್ಳ ಪೊಲೀಸರಿಂದ ರಕ್ಷಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ

    May 11, 2026

    ಹರ್ತಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಸಚಿವ ಡಾ. ಜಿ. ಪರಮೇಶ್ವರ್ ಶಂಕುಸ್ಥಾಪನೆ

    May 11, 2026

    ಸಚಿವ ಡಿ.ಸುಧಾಕರ್ ಪಾರ್ಥಿವ ಶರೀರಕ್ಕೆ ನಮನ: ಭಾವುಕರಾದ ಕೆ.ಎನ್.ರಾಜಣ್ಣ, ಕಂಬನಿ ಮಿಡಿದ ಜಿ.ಪರಮೇಶ್ವರ್

    May 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.