nammatumakuru

    Subscribe to Updates

    Get the latest creative news from FooBar about art, design and business.

    What's Hot

    ‘ಆಸ್ಕರ್’ ಅಂಗಳಕ್ಕೆ ರಣಬೀರ್ ಕಪೂರ್, ಯಶ್ ಅಭಿನಯದ ‘ರಾಮಾಯಣ’! ಯಾವ ವಿಭಾಗಗಳಲ್ಲಿ ಸ್ಪರ್ಧಿಸಲಿದೆ ಸಿನಿಮಾ?

    November 12, 2026

    ಅಮೆರಿಕದ ಆರಂಭಿಕ ಅಧ್ಯಕ್ಷರು ಪ್ಯಾಂಟ್ ಧರಿಸುತ್ತಿರಲಿಲ್ಲವೇ? ಬ್ರೀಚಸ್‌ ನಿಂದ ಆಧುನಿಕ ಪ್ಯಾಂಟ್‌ ವರೆಗಿನ ಕುತೂಹಲಕಾರಿ ಇತಿಹಾಸ ಇಲ್ಲಿದೆ!

    November 12, 2026

    ಫೆಡರಲ್ ಬ್ಯಾಂಕ್ ನೇಮಕಾತಿ: ಬೆಂಗಳೂರಿನಲ್ಲಿ ನ. 14, 15 ರಂದು ಬೃಹತ್ ನೇರ ಸಂದರ್ಶನ; ವಾರ್ಷಿಕ ₹11.04 ಲಕ್ಷದವರೆಗೆ ವೇತನ!

    November 12, 2026
    Facebook Twitter Instagram
    ಟ್ರೆಂಡಿಂಗ್
    • ‘ಆಸ್ಕರ್’ ಅಂಗಳಕ್ಕೆ ರಣಬೀರ್ ಕಪೂರ್, ಯಶ್ ಅಭಿನಯದ ‘ರಾಮಾಯಣ’! ಯಾವ ವಿಭಾಗಗಳಲ್ಲಿ ಸ್ಪರ್ಧಿಸಲಿದೆ ಸಿನಿಮಾ?
    • ಅಮೆರಿಕದ ಆರಂಭಿಕ ಅಧ್ಯಕ್ಷರು ಪ್ಯಾಂಟ್ ಧರಿಸುತ್ತಿರಲಿಲ್ಲವೇ? ಬ್ರೀಚಸ್‌ ನಿಂದ ಆಧುನಿಕ ಪ್ಯಾಂಟ್‌ ವರೆಗಿನ ಕುತೂಹಲಕಾರಿ ಇತಿಹಾಸ ಇಲ್ಲಿದೆ!
    • ಫೆಡರಲ್ ಬ್ಯಾಂಕ್ ನೇಮಕಾತಿ: ಬೆಂಗಳೂರಿನಲ್ಲಿ ನ. 14, 15 ರಂದು ಬೃಹತ್ ನೇರ ಸಂದರ್ಶನ; ವಾರ್ಷಿಕ ₹11.04 ಲಕ್ಷದವರೆಗೆ ವೇತನ!
    • ಮನೆಮನೆಗೆ ಮೇರಾ ದೀಪ.. ತಾಂಡಗಳಲ್ಲಿ ಸಂಸ್ಕೃತಿಯ ಸಡಗರ | ಲಂಬಾಣಿ ಸಮುದಾಯದ ಮೂರು ದಿನಗಳ ದವಾಳಿ ಸಂಭ್ರಮ
    • ಮದ್ಯದ ಅಮಲಿನಲ್ಲಿ ಹೇಳುವ ಮಾತೆಲ್ಲ ಸತ್ಯವೇ? ಮನೋವಿಜ್ಞಾನ ಹೇಳುವುದೇನು?
    • ಶಬರಿಮಲೆ ಯಾತ್ರಿಕರಿಗೆ ಮಹತ್ವದ ಮಾಹಿತಿ; ಕೊಠಡಿ ಬುಕ್ಕಿಂಗ್‌ ಗೆ ದಿನಾಂಕ ನಿಗದಿ; ಬುಕ್ಕಿಂಗ್ ವಿಧಾನ ಇಲ್ಲಿದೆ
    • ಎಲ್ಲೆಂದರಲ್ಲಿ ಆಧಾರ್ ಕಾರ್ಡ್ ಜೆರಾಕ್ಸ್ ಕೊಡುತ್ತಿದ್ದೀರಾ? ಸುಪ್ರೀಂ ಕೋರ್ಟ್ ತೀರ್ಪು ತಿಳಿಯಿರಿ, ಈ ತಪ್ಪು ಮಾಡಬೇಡಿ!
    • ಮುದುಡಿ ಕೋಟೆ ಮಾರಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ₹1.5 ಲಕ್ಷ ಅನುದಾನ ಹಸ್ತಾಂತರ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ ಪಟ್ಟಣದಲ್ಲಿ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಹುಟ್ಟುಹಬ್ಬ ಆಚರಣೆ: ಹರಿದು ಬಂದ ಜನಸಾಗರ
    ಕೊರಟಗೆರೆ August 19, 2022

    ಕೊರಟಗೆರೆ ಪಟ್ಟಣದಲ್ಲಿ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಹುಟ್ಟುಹಬ್ಬ ಆಚರಣೆ: ಹರಿದು ಬಂದ ಜನಸಾಗರ

    By adminAugust 19, 2022No Comments2 Mins Read
    koratagere

    ಕೊರಟಗೆರೆ: ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿ ದೇವರುಗಳ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಸದಾ ಚಿರಾಋಣಿ. ನಿಮ್ಮೇಲ್ಲರ ಆರ್ಶಿವಾದ ಮತ್ತು ಹಾರೈಕೆ ಸದಾ ನನ್ನ ಮೇಲಿರಲಿ ಅಷ್ಟು ಸಾಕು ಎಂದು ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಹೇಳಿದರು.

    55ನೇ ಹುಟ್ಟು ಹಬ್ಬವನ್ನು ಕಾರ್ಯಕರ್ತರ ಜೊತೆಗೆ ಆಚರಿಸಿಕೊಂಡ ಸುಧಾಕರಲಾಲ್, ಈ ವೇಳೆ ಮಾತನಾಡಿ, ಕೊರಟಗೆರೆ ಕ್ಷೇತ್ರದ ಮನೆಮಗನಾಗಿ 15 ವರ್ಷ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು 5 ವರ್ಷ ಶಾಸಕನಾಗಿ 20 ವರ್ಷ ಹಗಲುರಾತ್ರಿ ಎನ್ನದೇ ಸಾಮಾನ್ಯನಂತೆ ಜನತೆಯ ಸೇವೆ ಸಲ್ಲಿಸಿದ್ದೇನೆ. 2018ರಲ್ಲಿ ನಾನು ಸೋತರು ಸಹ ಕೊರಟಗೆರೆ ಕ್ಷೇತ್ರದ ಜನತೆಯ ಒಡನಾಡಿಯಾಗಿ ಕೆಲಸ ಮಾಡುತ್ತಿದ್ದೇನೆ. 2023ರ ಕೊರಟಗೆರೆ ಕ್ಷೇತ್ರದ ವಿಧಾನಸಭಾ ಚುನಾವಣೆಗೆ ನಿಮ್ಮೆಲ್ಲರ ಆರ್ಶಿವಾದ ನನ್ನ ಮೇಲಿರಲಿ ಎಂದು ಮನವಿ ಮಾಡಿದರು.

    ತುಮಕೂರು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಮಾತನಾಡಿ, ಸ್ನೇಹಜೀವಿಯ ಹುಟ್ಟುಹಬ್ಬದ ಸಂಭ್ರಮವು ಸಾಮಾಜಿಕ ಕಾರ್ಯಕ್ರಮವಾಗಿ ಕೊರಟಗೆರೆ ಕ್ಷೇತ್ರದಲ್ಲಿ ನಡೆಯುತ್ತಿದೆ. ಕೊರಟಗೆರೆ ಕ್ಷೇತ್ರದ ಪ್ರತಿ ಮನೆಯಲ್ಲಿ ಸುಧಾಕರಲಾಲ್ ಹುಟ್ಟುಹಬ್ಬದ ಸಂಭ್ರಮ ಮನೆಮಾಡಿದೆ. 5 ವರ್ಷ ಶಾಸಕರಾಗಿ ಮಾಡಿದ ಕೆಲಸಗಳೇ ಈಗ ಫಲ ನೀಡಲು ಪ್ರಾರಂಭಿಸಿವೆ. ಕೊರಟಗೆರೆ ಕ್ಷೇತ್ರದಲ್ಲಿ 2023ಕ್ಕೆ ಮತ್ತೆ ಸುಧಾಕರ ಪರ್ವ ಆರಂಭ ಆಗಲಿದೆ ಎಂದರು.

    ಕೊರಟಗೆರೆ ಪಟ್ಟಣದ ಕನಕ ವೃತ್ತದಿಂದ ಆರಂಭವಾದ ಬೃಹತ್ ಮೆರವಣಿಗೆ. ಸರಕಾರಿ ಬಸ್ ನಿಲ್ದಾಣದ ಮುಖ್ಯರಸ್ತೆಯವರೆಗೆ ಸಾಗಿತು. ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕುಣಿದು ಕುಪ್ಪಳಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.

    ಇದೇ ವೇಳೆ ಕೊರಟಗೆರೆ ಪಟ್ಟಣದ ಇರ್ಷಾದ್, ಬಾಬಣ್ಣ, ಇದಾಯತ್, ನವೀನ್, ಮಹೇಶ್, ರಾಜಶೇಖರ ಮತ್ತು ನೀಲಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷೆ ಲಿಂಗಮ್ಮರಂಗನಾಥ ಸೇರಿದಂತೆ ನೂರಾರು ಜನ ಯುವ ಕಾರ್ಯಕರ್ತರು ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕರಾದ ಪಿ.ಆರ್.ಸುಧಾಕರಲಾಲ್ ಸಮ್ಮುಖದಲ್ಲಿ ವೇದಿಕೆಯಲ್ಲಿ ಸೇರ್ಪಡೆಯಾದರು.

    ಸುಧಾಕರಲಾಲ್ ಹುಟ್ಟುಹಬ್ಬದ ಕೊರಟಗೆರೆ ಪಟ್ಟಣ ಪಂಚಾಯತ್ ಮುಂಭಾಗ ಏರ್ಪಡಿಸಲಾಗಿದ್ದ ಬೃಹತ್ ಆರೋಗ್ಯ, ರಕ್ತದಾನ ಶಿಬಿರ ಮತ್ತು ಕಣ್ಣಿನ ತಪಾಸಣಾ ಕಾರ್ಯಕ್ರಮವು ಯಶಸ್ವಿಯಾಯಿತು. ಇದೇ ವೇಳೆ ವಿಶೇಷ ಚೇತನರಿಗೆ ಸಮಾವಸ್ತ್ರವ ವಿತರಣೆ ಮಾಡಲಾಯಿತು. ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಹಾಲು-ಹಣ್ಣು ವಿತರಣೆ ಮಾಡಿದರು.

    ವರದಿ : ಮಂಜುಸ್ವಾಮಿ ಎಂ ಎನ್ ಕೊರಟಗೆರೆ

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಮನೆಮನೆಗೆ ಮೇರಾ ದೀಪ.. ತಾಂಡಗಳಲ್ಲಿ ಸಂಸ್ಕೃತಿಯ ಸಡಗರ | ಲಂಬಾಣಿ ಸಮುದಾಯದ ಮೂರು ದಿನಗಳ ದವಾಳಿ ಸಂಭ್ರಮ

    November 12, 2026

    ಅರಸಪುರದಲ್ಲಿ ಪ್ರಜಾಸೇವಾ ಅಭಿಯಾನ: 101 ಅರ್ಜಿ ಸಲ್ಲಿಕೆ | 20 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ; ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ತಾಲೂಕು ಆಡಳಿತ

    November 8, 2026

    ಜೆಜೆಎಂನಲ್ಲಿ ತುಮಕೂರು ಕ್ಷೇತ್ರಕ್ಕೆ 5ನೇ ಸ್ಥಾನ:  20ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಪ್ರಗತಿ; ತುಮಕೂರು–ಬೆಂಗಳೂರು ರೈಲು ಮಾರ್ಗಕ್ಕೂ ಡಿಪಿಆರ್ ಸಿದ್ಧ

    November 8, 2026

    Comments are closed.

    Our Picks

    ‘ಆಸ್ಕರ್’ ಅಂಗಳಕ್ಕೆ ರಣಬೀರ್ ಕಪೂರ್, ಯಶ್ ಅಭಿನಯದ ‘ರಾಮಾಯಣ’! ಯಾವ ವಿಭಾಗಗಳಲ್ಲಿ ಸ್ಪರ್ಧಿಸಲಿದೆ ಸಿನಿಮಾ?

    November 12, 2026

    ಶಬರಿಮಲೆ ಯಾತ್ರಿಕರಿಗೆ ಮಹತ್ವದ ಮಾಹಿತಿ; ಕೊಠಡಿ ಬುಕ್ಕಿಂಗ್‌ ಗೆ ದಿನಾಂಕ ನಿಗದಿ; ಬುಕ್ಕಿಂಗ್ ವಿಧಾನ ಇಲ್ಲಿದೆ

    November 12, 2026

    Gmail ಸ್ಟೋರೇಜ್ ಫುಲ್ ಆಗಿದೆಯೇ? ಉಚಿತ 15 GB ಜಾಗ ಖಾಲಿ ಮಾಡಲು ಇಲ್ಲಿವೆ 4 ಸರಳ ವಿಧಾನಗಳು!

    November 11, 2026

    ಅನ್ನಾ  ಜೊತೆಗಿನ ವೈವಾಹಿಕ ಸಂಬಂಧಕ್ಕೆ ಅಂತ್ಯ ಹಾಡಿದ ಪವನ್ ಕಲ್ಯಾಣ್ : 4ನೇ ಮದುವೆ ಆಗ್ತಾರಾ? ಜ್ಯೋತಿಷಿಗಳ ಭವಿಷ್ಯ ಏನು?

    November 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ‘ಆಸ್ಕರ್’ ಅಂಗಳಕ್ಕೆ ರಣಬೀರ್ ಕಪೂರ್, ಯಶ್ ಅಭಿನಯದ ‘ರಾಮಾಯಣ’! ಯಾವ ವಿಭಾಗಗಳಲ್ಲಿ ಸ್ಪರ್ಧಿಸಲಿದೆ ಸಿನಿಮಾ?

    November 12, 2026

    ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಇದೀಗ ಜಾಗತಿಕ ಮಟ್ಟದಲ್ಲಿ…

    ಅಮೆರಿಕದ ಆರಂಭಿಕ ಅಧ್ಯಕ್ಷರು ಪ್ಯಾಂಟ್ ಧರಿಸುತ್ತಿರಲಿಲ್ಲವೇ? ಬ್ರೀಚಸ್‌ ನಿಂದ ಆಧುನಿಕ ಪ್ಯಾಂಟ್‌ ವರೆಗಿನ ಕುತೂಹಲಕಾರಿ ಇತಿಹಾಸ ಇಲ್ಲಿದೆ!

    November 12, 2026

    ಫೆಡರಲ್ ಬ್ಯಾಂಕ್ ನೇಮಕಾತಿ: ಬೆಂಗಳೂರಿನಲ್ಲಿ ನ. 14, 15 ರಂದು ಬೃಹತ್ ನೇರ ಸಂದರ್ಶನ; ವಾರ್ಷಿಕ ₹11.04 ಲಕ್ಷದವರೆಗೆ ವೇತನ!

    November 12, 2026

    ಮನೆಮನೆಗೆ ಮೇರಾ ದೀಪ.. ತಾಂಡಗಳಲ್ಲಿ ಸಂಸ್ಕೃತಿಯ ಸಡಗರ | ಲಂಬಾಣಿ ಸಮುದಾಯದ ಮೂರು ದಿನಗಳ ದವಾಳಿ ಸಂಭ್ರಮ

    November 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.