nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಣ್ಣಲ್ಲಿ ಮಣ್ಣಾದ ಅಭಿನಯ ಸರಸ್ವತಿ ಇನ್ನೂ ನೆನಪು ಮಾತ್ರ

    July 15, 2025

    ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿದ ಪಾಪಿ!

    July 15, 2025

    KSRTC ನೌಕರ ಹೃದಯಾಘಾತದಿಂದ ಸಾವು

    July 15, 2025
    Facebook Twitter Instagram
    ಟ್ರೆಂಡಿಂಗ್
    • ಮಣ್ಣಲ್ಲಿ ಮಣ್ಣಾದ ಅಭಿನಯ ಸರಸ್ವತಿ ಇನ್ನೂ ನೆನಪು ಮಾತ್ರ
    • ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿದ ಪಾಪಿ!
    • KSRTC ನೌಕರ ಹೃದಯಾಘಾತದಿಂದ ಸಾವು
    • ಕರ್ನಾಟಕದ ಬೆಳವಣಿಗೆಗೆ ಹೊಸ ರಸ್ತೆಗಳ ಅಭಿವೃದ್ಧಿ: ನಿತಿನ್ ಗಡ್ಕರಿ
    • ಅಪಘಾತದಲ್ಲಿ ಪತ್ನಿ ಮಗ ಸಾವಿನ ಖಿನ್ನತೆಯಲ್ಲಿರುವಾಗಲೇ  ಹಿರಿಯ ಮ್ಯಾರಥಾನ್‌ ಓಟಗಾರ ಅಪಘಾತಕ್ಕೆ ಬಲಿ
    • ಹೃದಯಾಘಾತ: ಸ್ನೇಹಿತನ ಮನೆಗೆ ಊಟಕ್ಕೆ ಹೋಗಿ ವಾಪಸ್ ಬರುತ್ತಿದ್ದ ಯುವಕ ಸಾವು
    • ಮಗಳ ಆತ್ಮಹತ್ಯೆ ಕಣ್ಣಾರೆ ಕಂಡು ನೊಂದ ತಾಯಿಯಿಂದಲೂ ದುಡುಕಿನ ನಿರ್ಧಾರ!
    • ಸಂತೆಯಿಂದ ಮನೆಗೆ ಹೊರಟ ವ್ಯಕ್ತಿ ಕುಸಿದು ಬಿದ್ದ ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಲ್ಪತರು ನಾಡಿನಲ್ಲಿ ನಡೆಯುವ ಪತ್ರಕರ್ತರ ಸಮ್ಮೇಳನ ಅರ್ಥಗರ್ಭಿತವಾಗಿರಲಿ: ಶಿವಾನಂದ ತಗಡೂರು
    ತುಮಕೂರು January 12, 2025

    ಕಲ್ಪತರು ನಾಡಿನಲ್ಲಿ ನಡೆಯುವ ಪತ್ರಕರ್ತರ ಸಮ್ಮೇಳನ ಅರ್ಥಗರ್ಭಿತವಾಗಿರಲಿ: ಶಿವಾನಂದ ತಗಡೂರು

    By adminJanuary 12, 2025No Comments2 Mins Read
    journalists

    ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ತುಮಕೂರು ಇವರ ವತಿಯಿಂದ ಚೊಚ್ಚಲ ಬಾರಿಗೆ ಕಲ್ಪತರು ನಗರಿ ತುಮಕೂರಿನಲ್ಲಿ ರಾಜ್ಯಮಟ್ಟದ 39ನೇ ಪತ್ರಕರ್ತರ ಸಮ್ಮೇಳನವನ್ನು ನಡೆಸಲು ನಿಶ್ಚಯಿಸಿದ್ದು, ಈಗಾಗಲೇ ನಿರೀಕ್ಷೆಗೂ ಮೀರಿದ ಸಿದ್ಧತೆಗಳನ್ನ ಕೈಗೊಳ್ಳಲಾಗಿದ್ದು ಕಲ್ಪತರು ನಾಡಿನಲ್ಲಿ ನಡೆಯುವರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಅರ್ಥಗರ್ಭಿತವಾಗಿ ನಡೆಯಬೇಕಿದೆ ಎಂದುಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

    ನಗರದಎಸ್‌ ಎಸ್‌ ಐಟಿಕಾಲೇಜುಕ್ಯಾಂಪಸ್‌ ಆವರಣದ ಸ್ಟೇಪ್ ಬಿಲ್ಡಿಂಗ್ ಸಭಾಂಗಣದಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಕುರಿತಾಗಿತುಮಕೂರು ಜಿಲ್ಲಾ ಘಟಕದ ವಿವಿಧ ಉಪ ಸಮಿತಿಗಳ ಸಿದ್ಧತೆ ಮತ್ತು ಕಾರ್ಯವೈಕರಿಗಳ ಬಗ್ಗೆ ಚರ್ಚೆ ನಡೆಸಲು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು ಶ್ರೇಷ್ಠತೆಗಳಲ್ಲಿ ವಿಶೇಷತೆ ಎನಿಸಿರುವ ತುಮಕೂರು ಜಿಲ್ಲೆಯು ಶೈಕ್ಷಣಿಕ, ಕಲೆ, ಸಾಹಿತ್ಯ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಸಾಧನೆಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಅದೇ ನಿಟ್ಟಿನಲ್ಲಿ ಈ ಬಾರಿ ಇಲ್ಲಿ ನಡೆಯುವ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವೂ ಕೂಡ ಇತಿಹಾಸದ ಮೈಲಿಗಲ್ಲು ಆಗಲಿದ್ದು ಅದಕ್ಕೆ ತಕ್ಕಂತಹ ಸಿದ್ಧತೆಗಳನ್ನು ಜಿಲ್ಲಾ ಸಂಘಟನೆಕೈಗೊಳ್ಳಬೇಕಿದೆ ಎಂದು ತಿಳಿಸಿದರು.


    Provided by
    Provided by

    ಉಪಸಮಿತಿಗಳ ಕಾರ್ಯ ಚಟುವಟಿಕೆಗಳು ತೃಪ್ತಿತರುವಂತೆ ಇರಬೇಕು ಕಳೆದ ಬಾರಿ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಸಮ್ಮೇಳನಕ್ಕೂ ಮೀರಿದ ವಿಶೇಷತೆಗಳನ್ನ ಈ ಬಾರಿ ಕಾಣಲಿದ್ದೇವೆ ಇದಕ್ಕೆಅಧ್ಯಕ್ಷರು ಸೇರಿದಂತೆ ಸಂಘದ ಪದಾಧಿಕಾರಿಗಳು ನಿರೀಕ್ಷೆ ಮೀರಿ ಶ್ರಮ ಪಡುತ್ತಿದ್ದಾರೆ. ಡಾ.ಜಿ.ಪರಮೇಶ್ವರ್‌ ಅವರ ಆಶಯದಂತೆ ಅವರ ಮಾರ್ಗದರ್ಶನದಲ್ಲಿಎಸ್‌ ಎಸ್ ಐ ಟಿ ಕ್ಯಾಂಪಸ್‌ಆವರಣದಲ್ಲಿಎರಡು ದಿನಗಳ ಕಾಲ ಸಂಭ್ರಮದ ವಾತಾವರಣ ಸೃಷ್ಟಿಸಲಿದ್ದಾರೆ.  ಈ ಸಮ್ಮೇಳನ ಅನೇಕ ಚರ್ಚೆಗಳಿಗೆ ಕಾರಣವಾಗಲಿದೆ, ವಿವಿಧ ಗೋಷ್ಠಿಗಳು ಗಮನ ಸೆಳೆಯಲಿವೆ ಮುಖ್ಯವಾಗಿ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ವೈಶಿಷ್ಟತೆಯಿಂದ ಕೂಡಿವೆ. ಈ ಬಾರಿ ತುಮಕೂರು ಬ್ರಾಂಡ್ ಹೆಸರಿನಲ್ಲಿ ಸಾಧನೆಗೈದ ವಿವಿಧ ಸಾಧಕರಿಗಳಿಗೆ ಪ್ರಶಸ್ತಿ ಸನ್ಮಾನ ಮಾಡಲಾಗುತ್ತದೆ. ಪತ್ರಕರ್ತರಕ್ರೀಡಾಕೂಟವನ್ನು ಯಶಸ್ವಿಗೊಳಿಸಿದ ಜಿಲ್ಲಾ ಸಂಘಟನೆ ಸಮ್ಮೇಳನವನ್ನ ವಿಶೇಷವಾಗಿ ನಡೆಸಿಕೊಡಲಿದೆ ಎಂದು ಭಾವಿಸಿದ್ದೇನೆ ಎಂದು ತಿಳಿಸಿದರು.

    ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚೀನಿ ಪುರುಷೋತ್ತಮ್‌ ಅವರು ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಯುವ ಐತಿಹಾಸಿಕ 39ನೇ ಸಮ್ಮೇಳನದ ಯಶಸ್ವಿಗೆ ಉಪ ಸಮಿತಿಯ ಅಧ್ಯಕ್ಷರು ಸದಸ್ಯರು ಪದಾಧಿಕಾರಿಗಳು ಕಾರಣರಾಗಿದ್ದು ನಮ್ಮರಾಜ್ಯಾಧ್ಯಕ್ಷರ ಅಪೇಕ್ಷೆಯಂತೆ ಈಗಾಗಲೇ ನಿರೀಕ್ಷೆಗೂ ಮೀರಿದ ಸಿದ್ಧತೆಗಳನ್ನ ಕೈಗೊಳ್ಳಲಾಗಿದೆ ಈ ಬಾರಿಕೈಗಾರಿಕೆ ಕೃಷಿ ಪತ್ರಿಕೋದ್ಯಮ ಸಮಾಜ ಸೇವೆ ಸೇರಿದಂತೆ ವಿವಿಧ ಹಂತಗಳಲ್ಲಿ ಸಾಧನೆಗೈದ ಸಾಧಕರುಗಳಿಗೆ ಕಲ್ಪತರುರತ್ನ ಎಂಬ ಪ್ರಶಸ್ತಿಯನ್ನು ಸಮ್ಮೇಳನದ ಭಾಗವಾಗಿ ನೀಡಲಾಗುತ್ತದೆ, ರಾಜ್ಯದ ಮೂಲೆ ಮೂಲೆಗಳಿಂದ ಬರುವ ಪತ್ರಕರ್ತರುಗಳಿಗೆ ಮತ್ತು ಸಾರ್ವಜನಿಕರುಗಳಿಗೆ ಊಟ ವಸತಿ ಮನರಂಜನೆ ಚರ್ಚಾಗೋಷ್ಠಿ, ಸೇರಿದಂತೆ ಇತರೆ ವಿಚಾರಗಳಲ್ಲಿ ಯಾವುದೇ ರೀತಿಯ ಗೊಂದಲವಾಗದಂತೆ ನಮ್ಮ ಜಿಲ್ಲಾ ಸಂಘದ ಸದಸ್ಯರುಗಳು ಅವರ ಸೇವೆ ಮಾಡಲು ಕಟಿಬದ್ಧರಾಗಿ ನಿಂತಿದ್ದಾರೆ. ಟೌನ್ ಹಾಲ್ ವೃತ್ತದಿಂದ ಎಸ್‌ ಎಸ್ ಐ ಟಿ ಕ್ಯಾಂಪಸ್‌ ಅವರಣಕ್ಕೆಆಗಮಿಸಲಿರುವ ಮೆರವಣಿಗೆ ವಿಶೇಷತೆಯಿಂದಕೂಡಿದೆ. ಜನವರಿ 18 ಶನಿವಾರದ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯದೆ ಸೆಳೆಯಲಿದೆ, ಖ್ಯಾತ ಗಾಯಕಿ ಶಮಿತಾ ಮಲ್ನಾಡ್‌ ಅವರಿಂದ, ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮ ನಡೆಯಲಿದ್ದು, ಇದೇ ರೀತಿಯಾಗಿ ವಿವಿಧ ಕಾರ್ಯಕ್ರಮಗಳು ವಸ್ತು ಪ್ರದರ್ಶನ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಲಿವೆ ಎಂದು ತಿಳಿಸಿದರು.

    ಸಂದರ್ಭದಲ್ಲಿ ವಸತಿ, ಊಟ, ಸಾರಿಗೆ, ಪ್ರಚಾರ, ಸ್ವಯಂ ಸೇವೆ, ಸಾಂಸ್ಕೃತಿಕ, ನೋಂದಣಿ ಸೇರಿದಂತೆ ವಿವಿಧ ಉಪಸಮಿತಿಗಳ ಅಧ್ಯಕ್ಷರುಗಳು ತಾವು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಸಭೆಗೆ ತಿಳಿಸಿಕೊಟ್ಟರು, ಈ ವೇಳೆ ಕರ್ನಾಟಕ ರಾಜ್ಯಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಭವಾನಿಸಿಂಗ್, ಪುಂಡಲಿಕ ಬಾಳೋಜಿ, ಪ್ರಧಾನ ಕಾರ್ಯದರ್ಶಿಗಳಾದ ಜಿ.ಸಿ.ಲೋಕೇಶ್, ರಾಜ್ಯಛಾಯಾಗ್ರಾಹಕ ಶರಣ ಪ್ರಕಾಶ್, ಕಲ್ಬುರ್ಗಿ ಸಂಘದ ಉಪಾಧ್ಯಕ್ಷ ದೇವೇಂದ್ರಪ್ಪ, ತುಮಕೂರು ಕಾನಿಪ ಉಪಾಧ್ಯಕ್ಷರಾದಚಿಕ್ಕಿರಪ್ಪ, ತಿಪಟೂರುಕೃಷ್ಣ, ಪ್ರಧಾನ ಕಾರ್ಯದರ್ಶಿ ರಘುರಾಮ್, ರಾಷ್ಟ್ರೀಯ ಮಂಡಳಿ ಸದಸ್ಯರುಗಳಾದ ಸಿದ್ದಲಿಂಗಪ್ಪ, ಅನ್ನು ಫೋಟೋ ಫ್ಲಾಶ್ ಶಾಂತರಾಜು, ಟಿ.ಎನ್.ಮಧುಕರ್‌ ಜಿಲ್ಲಾಘಟಕದ ಪದಾಧಿಕಾರಿಗಳು ವಿವಿಧ ಉಪ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ತುಮಕೂರಿಗೆ ಹೆಮ್ಮೆ: ಗೊಲನ ಎಂಟರ್‌ ಪ್ರೈಸಸ್‌ ಗೆ ಕೇಂದ್ರ ಸರ್ಕಾರದ ಮಾನ್ಯತೆ

    July 12, 2025

    ಅಕ್ರಮ ಭೂಕಬಳಿಕೆ ಆರೋಪ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಗೆ ಸನ್ಮಾನಿಸಲು ಯತ್ನಿಸಿದ KRS ಪಕ್ಷದ ಕಾರ್ಯಕರ್ತರು ಪೊಲೀಸ್ ವಶಕ್ಕೆ

    July 11, 2025

    ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ: ಮಾಜಿ ಸಚಿವ ಹೇಳಿಕೆ

    July 9, 2025
    Our Picks

    ಕರ್ನಾಟಕದ ಬೆಳವಣಿಗೆಗೆ ಹೊಸ ರಸ್ತೆಗಳ ಅಭಿವೃದ್ಧಿ: ನಿತಿನ್ ಗಡ್ಕರಿ

    July 15, 2025

    ಅಪಘಾತದಲ್ಲಿ ಪತ್ನಿ ಮಗ ಸಾವಿನ ಖಿನ್ನತೆಯಲ್ಲಿರುವಾಗಲೇ  ಹಿರಿಯ ಮ್ಯಾರಥಾನ್‌ ಓಟಗಾರ ಅಪಘಾತಕ್ಕೆ ಬಲಿ

    July 15, 2025

    ಮಾವಿನ ಹಣ್ಣು ಸಾಗಿಸುತ್ತಿದ್ದ ಲಾರಿ ಪಲ್ಟಿ: 9 ಕಾರ್ಮಿಕರು ಸಾವು, 10 ಮಂದಿಯ ಸ್ಥಿತಿ ಗಂಭೀರ

    July 14, 2025

    ಮಹಾತ್ಮ ಗಾಂಧಿಯವರ ಪ್ರತಿಮೆ ಅಪವಿತ್ರಗೊಳಿಸಲು ಯತ್ನ: ಆರೋಪಿಯ ಬಂಧನ

    July 8, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಮಣ್ಣಲ್ಲಿ ಮಣ್ಣಾದ ಅಭಿನಯ ಸರಸ್ವತಿ ಇನ್ನೂ ನೆನಪು ಮಾತ್ರ

    July 15, 2025

    ಬೆಂಗಳೂರು: ಸೋಮವಾರ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾದೇವಿ ಅವರು ಮಂಗಳವಾರ ತಮ್ಮ ಹುಟ್ಟೂರು ಚನ್ನಪಟ್ಟಣದ ದಶಾವರದ ಮಣ್ಣಲ್ಲಿ…

    ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿದ ಪಾಪಿ!

    July 15, 2025

    KSRTC ನೌಕರ ಹೃದಯಾಘಾತದಿಂದ ಸಾವು

    July 15, 2025

    ಕರ್ನಾಟಕದ ಬೆಳವಣಿಗೆಗೆ ಹೊಸ ರಸ್ತೆಗಳ ಅಭಿವೃದ್ಧಿ: ನಿತಿನ್ ಗಡ್ಕರಿ

    July 15, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.